SP Balasubramaniam: ಬೇಗ ಗುಣಮುಖರಾಗಿ ಎಸ್.ಪಿ.ಬಿ.; ಒಂದೇ ಧ್ವನಿಯಲ್ಲಿ ಪ್ರಾರ್ಥಿಸುತ್ತಿದೆ ಸಂಗೀತ ಕ್ಷೇತ್ರ!

ಎಸ್.ಪಿ.ಬಿ ಅವರ ಗಾಯನದಿಂದಲೇ ಸ್ಪೂರ್ತಿಗೊಂಡು ಅವರ ಸಾಧನೆಯ ಹಾದಿಯನ್ನೇ ಹಿಂಬಾಲಿಸಿ ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಜನ ಗುರುತಿಸಿಕೊಂಡಿದ್ದಾರೆ. ಅಂತಹ ಗಾಯಕ ಗಾಯಕಿಯರು ಗಾನಗಾರುಡಿಗ ಶೀಘ್ರ ಗುಣಮುಖರಾಗಲು ಪ್ರಾರ್ಥಿಸಿದ್ದಾರೆ.

ಎಸ್. ಪಿ. ಬಾಲಸುಬ್ರಹ್ಮಣ್ಯಂ.

ಎಸ್. ಪಿ. ಬಾಲಸುಬ್ರಹ್ಮಣ್ಯಂ.

  • Share this:
ಗಾನ ಗಾರುಡಿಗ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಕೊರೋನಾ ಸೋಂಕು ತಗುಲಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು ಅವರ ಸ್ಥಿತಿ ಗಂಭೀರ ಎನ್ನುವಂತಾಗಿತ್ತು. ಇದರಿಂದ ಲಕ್ಷಾಂತರ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿತ್ತು.

ತಮ್ಮ ಅದ್ಭುತ ಗಾಯನದ ಮೂಲಕ ರಂಜಿಸಿರುಬ ಎಸ್.ಪಿ.ಬಿ ಆದಷ್ಟು ಬೇಗ ಗುಣಮುಖರಾಗಲಿ ಎಂದು ಅವರ ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ #getwellsoonspb ಎಂಬ ಹ್ಯಾಷ್ ಟ್ಯಾಗ್ ಮೂಲಕ ಶುಭಾಶಯ ಕೋರುತ್ತಿದ್ದಾರೆ.ಇನ್ನು ಎಸ್.ಪಿ.ಬಿ ಅವರ ಗಾಯನದಿಂದಲೇ ಸ್ಪೂರ್ತಿಗೊಂಡು ಅವರ ಸಾಧನೆಯ ಹಾದಿಯನ್ನೇ ಹಿಂಬಾಲಿಸಿ ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಜನ ಗುರುತಿಸಿಕೊಂಡಿದ್ದಾರೆ. ಅಂತಹ ಗಾಯಕ ಗಾಯಕಿಯರು ಗಾನಗಾರುಡಿಗ ಶೀಘ್ರ ಗುಣಮುಖರಾಗಲು ಪ್ರಾರ್ಥಿಸಿದ್ದಾರೆ.ಕನ್ನಡದ ಗಾಯಕಿಯರಾದ, ಮಂಜುಳಾ ಗುರುರಾಜ್ ಸಂಗೀತ ಕಟ್ಟಿ, ಶ್ರೀ ರಕ್ಷಾ ಅರವಿಂದ್, ಶ್ವೇತಾ ಪ್ರಭು,  ಆಕಾಂಕ್ಷಾ ಬಾದಾಮಿ, ಅಲೋಕ್, ಶರ್ಮಿತಾ ಮಲ್ನಾಡ್, ಗಣೇಶ್ ನಾರಾಯಣ್, ವಿದ್ಯಾ ವಿರ್ಷ್, ಸಂಗೀತ ನಿರ್ದೇಶಕರಾದ ವೀರ್ ಸಮರ್ಥ್, ಅಜನೀಶ್ ಲೋಕನಾಥ್, ಸಿ.ಆರ್.ಬಾಬ್ಬಿ, ನ್ಯೂಸ್ 18 ಕನ್ನಡದ ಮೂಲಕ ಎಸ್.ಪಿ.ಬಿ ಚೇತರಿಕೆಗಾಗಿ ಹಾರೈಸಿದ್ದಾರೆ.
Published by:Vinay Bhat
First published: