ಕನ್ನಡದ ಗಾಯಕಿ ವಾಣಿ ಹರಿಕೃಷ್ಣ (Vani harikrishna) ಯಾರಿಗೆ ಗೊತ್ತಿಲ್ಲ ಹೇಳಿ? ಇವರ ಗಾಯನಕ್ಕೆ ಮನಸೋಲದವ್ರೇ ಇಲ್ಲ. ಮಧುರ ಕಂಠಸಿರಿಯ ವಾಣಿ ಅವರ ಹಾಡುಗಳು ಕೇಳುಗರನ್ನ ಬೇರೆ ಲೋಕಕ್ಕೆ ಕರೆದುಕೊಂಡು ಹೋಗುತ್ತವೆ. ವಾಣಿ ಹರಿಕೃಷ್ಣ ಅವರ (Special Voice) ಕಂಠಸಿರಿಯಲ್ಲಿ ಆ ಶಕ್ತಿ ಇದೆ. ಅದೇ ಶಕ್ತಿ ಹತ್ತು ಹಲವು ಸಿನಿಮಾಗಳಲ್ಲಿ ಹಾಡಾಗಿ ಹೊರ ಹೊಮ್ಮಿದೆ. ಗಾಯನ ಪ್ರಿಯರಿಗೆ ವಾಣಿ ಸಂಗೀತ ಪ್ರತಿಭೆಯ ಪರಿಚಯ ಇದೆ. ಸಿನಿಮಾ ಪ್ರೇಮಿಗಳಿಗೆ ಇವರ ಕಂಠ ಸಿರಿಯ ಅದ್ಭುತ (Melodious Voice) ಹಾಡುಗಳ ಪರಿಚಯ ಇದ್ದೇ ಇರುತ್ತದೆ. ವಾಣಿ ಹರಿಕೃಷ್ಣ ಸೋಷಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್ ಆಗಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ (Video) ವೀಡಿಯೋಗಳನ್ನ ಕೂಡ ಅಪ್ಲೋಡ್ ಮಾಡ್ತಾರೆ. ಹಾಗೆ ಆ ವೀಡಿಯೋಗಳಲ್ಲಿ ಹತ್ತು ಹಲವು ವಿಶೇಷತೆಗಳೂ ಇರುತ್ತೆ. ಅದರ ಸುತ್ತ ಇಲ್ಲೊಂದು ಇಂಟ್ರಸ್ಟಿಂಗ್ ವಿಷಯ ಇದೆ ಓದಿ.
ವಾಣಿ ಹರಿಕೃಷ್ಣ ಗಾಯನ-ಸುಮಧುರ ಭಾವಗಳ ಅನಾವರಣ
ಗಾಯಕಿ ವಾಣಿ ಹರಿಕೃಷ್ಣ ವಿಶೇಷ ಗಾಯನದ ವೀಡಿಯೋ ವೈರಲ್ ಆಗುತ್ತಿದೆ. ವಾಣಿ ಹರಿಕೃಷ್ಣ ಕೇವಲ ಒಬ್ಬ ಗಾಯಕಿ ಆದವರಲ್ಲ. ಇವರ ಸಂಗೀತ ನಿರ್ದೇಶನದಲ್ಲಿ ಸಿನಿಮಾಗಳೂ ಬಂದಿವೆ. ಆ ಲೆಕ್ಕದಲ್ಲಿ ಲೂಸ್ಗಳು ಸಿನಿಮಾಕ್ಕೆ ವಾಣಿ ಹರಿಕೃಷ್ಣ ಸಂಗೀತ ಕೊಟ್ಟಿದ್ದಾರೆ.
ಇಲ್ಲಿಂದ ಶುರುವಾದ ಇವರ ಸಂಗೀತ ನಿರ್ದೇಶನದ ಪಯಣ ರಿಂಗ್ ರೋಡ್ ಮತ್ತು ಮೀನಾಕ್ಷಿ ಚಿತ್ರದವರೆಗೂ ಸಾಗಿ ಬಂದಿದೆ.ಇದರ ಜೊತೆಗೆ ಬೇರೆ ಬೇರೆ ಚಿತ್ರಗಳಿಗೂ ವಾಣಿ ಹರಿಕೃಷ್ಣ ಹಾಡುತ್ತಾರೆ. ಹಾಗೆ ಹಾಡಿರೋ ಹಾಡುಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಪರಮಾತ್ಮ ಚಿತ್ರದ ಗೀತೆ ಕೂಡ ಸ್ಪೆಷಲ್ ಆಗಿಯೆ ಇದೆ.
"ಹೆಸರು ಪೂರ್ತಿ ಹೇಳದೇ" ಹಾಡು ಸೂಪರ್ ಹಿಟ್
ವಾಣಿ ಹರಿಕೃಷ್ಣ ಅವರ ಪರಮಾತ್ಮ ಚಿತ್ರದ ಹೆಸರು ಪೂರ್ತಿ ಹೇಳದೇ ಸೂಪರ್ ಹಿಟ್ ಆಗಿದೆ. ಇವರ ಧ್ವನಿಗೆ ಅದು ಸೂಕ್ತ ಅನ್ನೋಮಟ್ಟಿಗೆ ಈಗಲೂ ಫೀಲ್ ಆಗುತ್ತಿದೆ. ಅಂತಹ ಈ ಗಾಯಕಿ ಇಂತಿ ನಿನ್ನ ಪ್ರೀತಿಯ ಚಿತ್ರದಲ್ಲಿ "ಮಧುವನ ಕರೆದರೆ" ಅನ್ನೋ ಹಾಡನ್ನ ಹಾಡಿದ್ದರು. ಇದು ಕೂಡ ಸ್ಪೆಷಲ್ ಆಗಿಯೇ ಇತ್ತು.
View this post on Instagram
ತಾತನ ಕಸ್ತೂರಿ ನಿವಾಸ ಹಾಡು ನುಡಿಸಿದ ವಾಣಿ ಹರಿಕೃಷ್ಣ
ಡಾಕ್ಟರ್ ರಾಜ್ ಕುಮಾರ್ ಅಭಿನಯದ ಕಸ್ತೂರಿ ನಿವಾಸ ಸಿನಿಮಾದ ಹಾಡುಗಳು ವಿಶೇಷವಾಗಿಯೇ ಇವೆ. ಜಿ.ಕೆ.ವೆಂಕಟೇಶ್ ಸಂಗೀತದಲ್ಲಿ ಬಂದಿರೋ ಈ ಗೀತೆಗಳೆಲ್ಲ ಸೂಪರ್ ಹಿಟ್ ಆಗಿವೆ. ಅದರಂತೆ ಆಡಿಸಿ ನೋಡು ಈಗಲೂ ಪ್ರಸ್ತುತ ಅನಿಸುತ್ತದೆ. ಅಂತಹ ಈ ಗೀತೆಯನ್ನ ಈಗ ವಾಣಿ ಹರಿಕೃಷ್ಣ ವಿಶೇಷ ಸಂಗೀತ ಸಾಧನದಲ್ಲಿ ನುಡಿಸಿದ್ದಾರೆ.
Kazoo ಎಂಬ ವಿಶೇಷ ಸಂಗೀತ ಸಾಧನ ನುಡಿಸಿದ ವಾಣಿ
ಹೌದು, Kazoo ಎಂದು ಕರೆಯುವ ಸಂಗೀತ ಸಾಧನವನ್ನ ವಾಣಿ ಅಷ್ಟೇ ಅದ್ಭುತವಾಗಿಯೇ ನುಡಿಸುತ್ತಾರೆ. ನೋಡಲು ಇದು ಪುಟ್ಟ ಮಕ್ಕಳ Toy ರೀತಿನೇ ಕಾಣುತ್ತದೆ. ಆದರೆ ಇದು ಮಕ್ಕಳ ಆಟಿಕೆಯ ವಸ್ತು ಅಲ್ಲವೇ ಅಲ್ಲ. ಇದರಲ್ಲಿ ಅದ್ಭುತವಾಗಿಯೇ ಸಂಗೀತ ನುಡಿಸಬಹುದು. ಅದರಂತೆ ವಾಣಿ ಹರಿಕೃಷ್ಣ ಈಗ ಕಸ್ತೂರಿ ನಿವಾಸ ಚಿತ್ರದ ಆಡಿಸಿ ನೋಡು ಹಾಡನ್ನ ನುಡಿಸಿದ್ದಾರೆ.
ಇದನ್ನೂ ಓದಿ: Kichcha Sudeepa Dog Love: ಕಿಚ್ಚನ ಶ್ವಾನ ಪ್ರೀತಿ-ಕ್ರಿಕೆಟ್ ಮೈದಾನದಲ್ಲೇ ಬೀದಿ ನಾಯಿಗೆ ಊಟ ಹಾಕಿದ ಸುದೀಪ್!
ವಾಣಿ ಹರಿಕೃಷ್ಣ ತಮ್ಮ ತಾತನ ಈ ಹಾಡು ನುಡಿಸಿರೋ ಖುಷಿಯಲ್ಲಿಯೇ ಇದ್ದಾರೆ. ಆಗಾಗ ಇಂತಹ ಓಲ್ಡ್ ಹಾಡುಗಳನ್ನ ಹಾಡಿಯೋ ಇಲ್ಲವೇ ನುಡಿಸಿಯೊ ವಾಣಿ ಹರಿಕೃಷ್ಣ ಸಂತೋಷ ಪಡ್ತಾರೆ. ಹಾಗಾಗಿಯೆ ಈಗ ಸೋಷಿಯಲ್ ಮೀಡಿಯಾದಲ್ಲೂ ತಮ್ಮ ವಿಶೇಷ ಆಸಕ್ತಿಯ ವೀಡಿಯೋವನ್ನ ಕೂಡ ಹಂಚಿಕೊಂಡು ಖುಷಿ ಪಡ್ತಾನೇ ಇರ್ತಾರೆ.
ಇನ್ನುಳಿದಂತೆ ವಾಣಿ ಹರಿಕೃಷ್ಣ ಅವರ ಮಧುರ ಕಂಠದಿಂದ ಬಂದ ಹಾಡುಗಳು ಈಗಲೂ ನಮ್ಮನ್ನ ಕಾಡುತ್ತಲೇ ಇರುತ್ತವೆ. ಅದ್ದೂರಿ ಚಿತ್ರದ ಮುಸಂಜೆ ವೇಳೆಯಲಿ ಹಾಡು ಲವರ್ಸ್ ಫೇವರಿಟ್ ಹಾಡು ಕೂಡ ಆಗಿದೆ. ಇಂತಹ ಹಾಡುಗಳನ್ನ ಹಾಡಿದ ವಾಣಿ ಹರಿಕೃಷ್ಣ ಅವರಿಂದ ಇನ್ನಷ್ಟು ಮತ್ತಷ್ಟು ಹಾಡುಗಳು ಬರಲಿ ಅಲ್ವೇ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ