• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • MD Pallavi Film: ಗಾಯಕಿ ಎಂ ಡಿ ಪಲ್ಲವಿ ಚಿತ್ರಕ್ಕೆ A ಪ್ರಮಾಣ ಪತ್ರ; ಟೈಟಲ್ ಭಿನ್ನ-ಡೈರೆಕ್ಟರ್ ಹೇಳೋದು ವಿಭಿನ್ನ!

MD Pallavi Film: ಗಾಯಕಿ ಎಂ ಡಿ ಪಲ್ಲವಿ ಚಿತ್ರಕ್ಕೆ A ಪ್ರಮಾಣ ಪತ್ರ; ಟೈಟಲ್ ಭಿನ್ನ-ಡೈರೆಕ್ಟರ್ ಹೇಳೋದು ವಿಭಿನ್ನ!

ಅಮ್ಮನ ಪಾತ್ರದಲ್ಲಿ ಗಾಯಕಿ ಎಂ.ಡಿ.ಪಲ್ಲವಿ ನಟನೆ

ಅಮ್ಮನ ಪಾತ್ರದಲ್ಲಿ ಗಾಯಕಿ ಎಂ.ಡಿ.ಪಲ್ಲವಿ ನಟನೆ

ನಮ್ಮ ಚಿತ್ರದಲ್ಲಿ ಹಾರ್ಡ್ ರಿಯಾಲಿಟಿ ಇವೆ. ಅದರ ಇಂಪ್ಯಾಕ್ಟ್ ತುಂಬಾನೇ ಆಗುತ್ತದೆ. ಸೆನ್ಸಾರ್ ಮಂಡಳಿ ಇದನ್ನ ಹೇಳಿಯೇ ನಮ್ಮ ಚಿತ್ರಕ್ಕೆ A ಪ್ರಮಾಣ ಪತ್ರ ನೀಡಿದೆ ಎಂದು ನ್ಯೂಸ್​-18 ಕನ್ನಡ ಡಿಜಿಟಲ್​ಗೆ ಡೈರೆಕ್ಟರ್ ಮಂಸೋರೆ ತಿಳಿಸಿದ್ದಾರೆ.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

ಕನ್ನಡದ ಗಾಯಕಿ ಮತ್ತು ನಟಿ (Singer M D Pallavi Movie) ಎಂ.ಡಿ.ಪಲ್ಲವಿ ಅವರು ಒಂದು ವಿಶೇಷ ಸಿನಿಮಾ ಮಾಡಿದ್ದಾರೆ. ಈ ಚಿತ್ರ ಒಂದೇ ಜಾನರ್​ಗೆ ಸೇರಿದ್ದಲ್ಲವೇ ಅಲ್ಲ. ಕಲಾತ್ಮಕ ಸ್ಪರ್ಶ ಈ ಚಿತ್ರಕ್ಕಿದೆ. ಕಮರ್ಷಿಯಲ್ (Director Mansore Movie) ಎಲಿಮೆಂಟ್ಸ್ ಕೂಡ ಇಲ್ಲಿರೋದು ವಿಶೇಷ. ಚಿತ್ರದಲ್ಲಿ ವಿಷಯ ಕೂಡ ಇದೆ. ಮಾಹಿತಿ ಬೇಕೋ? ಅದು ಕೂಡ ಈ ಒಂದು ಚಿತ್ರದಲ್ಲಿದೆ. ಇದರ ಹೆಸರು ಕೂಡ ನಿಜಕ್ಕೂ ವಿಶೇಷವಾಗಿಯೇ ಇದೆ. ಅದರ ಅರ್ಥ ಏನೂ (M D Pallavi New Movie) ಅಂತಲೇ ಕೇಳಿದ್ರೆ, ಅದುವೇ ಸಸ್ಪೆನ್ಸ್ ಅನ್ನೋದು ಸದ್ಯದ ಮಾಹಿತಿ. ಇದರ ಹೊರತಾಗಿ ಸೆನ್ಸಾರ್ ಮಂಡಳಿ ಈ ಚಿತ್ರಕ್ಕೆ A ಪ್ರಮಾಣ ಪತ್ರ ಕೊಟ್ಟಿದೆ.


ಚಿತ್ರಕ್ಕೆ  A ಪ್ರಮಾಣ ಪತ್ರ ಯಾಕೆ ಅನ್ನೋ  ಪ್ರಶ್ನೆಗೆ ಡೈರೆಕ್ಟರ್ (Mansore New Film) ಮಂಸೋರೆ ತುಂಬಾ ರಿಯಲಿಸ್ಟಿಕ್ ಉತ್ತರವನ್ನೆ ಕೊಡ್ತಾರೆ. ಹಾಗೇನೆ ತಮ್ಮ ಈ ಚಿತ್ರದ ಬಗ್ಗೆ ನ್ಯೂಸ್-18 ಕನ್ನಡ ಡಿಜಿಟಲ್​ ಜೊತೆಗೂ ಒಂದಷ್ಟು ಇಂಟ್ರಸ್ಟಿಂಗ್ ವಿಷಯವನ್ನ ಕೂಡ ಹಂಚಿಕೊಂಡಿದ್ದಾರೆ.


Kannada Singer M D Pallavi New Movie Latest Updates
19.20.21 ಇದು ಮಂಸೋರೆ ಸಿನಿಮಾ ಟೈಟಲ್


ನಾತಿಚರಾಮಿ ಚಿತ್ರದ ಡೈರೆಕ್ಟರ್ ಹೊಸ ಸಿನಿಮಾ
ಕನ್ನಡದ ಡೈರೆಕ್ಟರ್ ಮಂಸೋರೆ ಒಳ್ಳೆ ಸಿನಿಮಾಗಳನ್ನೆ ಮಾಡಿದ್ದಾರೆ. ತಮ್ಮ ಚಿತ್ರ ಜೀವನದಲ್ಲಿ ಆಯ್ದುಕೊಂಡ ಸಿನಿಮಾಗಳ ಕಥೆ ನಿಜಕ್ಕೂ ಜನರ ಮನಸಿಗೆ ತಟ್ಟಿವೆ. ಹರಿವು ಕೂಡ ವಿಶೇಷ ಚಿತ್ರವೇ ಆಗಿತ್ತು. ಇದಕ್ಕೂ ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿಗಳ ಮನ್ನಣೆ ಸಿಕ್ಕಿದೆ.




ಮಂಸೋರೆ ಅವರ ನಾತಿಚರಾಮಿ ಚಿತ್ರಕ್ಕೂ ಒಳ್ಳೆ ಪ್ರಶಂಸೆ ಬಂತು. ಈ ಚಿತ್ರಕ್ಕೂ ರಾಷ್ಟ್ರೀಯ ಮನ್ನಣೆ ಸಿಕ್ಕಿತ್ತು. ಇದಾದ್ಮೇಲೆ ಮಂಸೋರೆ ಆ್ಯಕ್ಟ್ 1978 ಚಿತ್ರವೂ ವಿಶೇಷವಾಗಿಯೇ ಇತ್ತು. ಸತ್ಯದ ಮೇಲೆ ಇದು ಬೆಳಕು ಚೆಲ್ಲವು ಕೆಲಸ ಮಾಡಿತ್ತು.


19.20.21 ಇದು ಮಂಸೋರೆ ಸಿನಿಮಾ ಟೈಟಲ್
ಡೈರೆಕ್ಟರ್ ಮಂಸೋರೆ ಮತ್ತೊಂದು ವಿಶೇಷ ಚಿತ್ರ ಮಾಡಿದ್ದಾರೆ. ಈ ಚಿತ್ರಕ್ಕೆ 19.20.21 ಅಂತಲೇ ಶೀರ್ಷಿಕೆ ಇಟ್ಟಿದ್ದಾರೆ. ಆದರೆ ಇದರ ಮೀನಿಂಗ್ ಏನೂ ಅಂತ ಕೇಳಿದ್ರೆ ಸಾಕು, ಇದುವೇ ಈ ಚಿತ್ರದ ಸಸ್ಪೆನ್ಸ್ ಅಂತಲೇ ಮಂಸೋರೆ ಹೇಳುತ್ತಾರೆ.


ಮಂಸೋರೆ ಅವರೇ ಹೇಳುವಂತೆ, ಈ ಚಿತ್ರದಲ್ಲಿ ಎಲ್ಲವೂ ಇದೆ. ಕಮರ್ಷಿಯಲ್ ಚಿತ್ರಕ್ಕೆ ಬೇಕಾಗೋ ಎಲಿಮೆಂಟ್ಸ್​ ಇದೆ. ಕಂಟೆಂಟ್ ನಮಗೆ ಬೇಕು ಅನ್ನೋರಿಗೂ ಇಲ್ಲಿ ಅದು ಸಿಗುತ್ತದೆ. ಮಾಹಿತಿ ಕೂಡ ಇರಬೇಕು ಅಂತಲೇ ಬಂದ್ರೂ ಸರಿಯೇ, ಅದು ಕೂಡ ಇಲ್ಲಿ ಸಿಗೋದು ಗ್ಯಾರಂಟಿ ಅಂತಲೇ ಮಂಸೋರೆ ವಿವರಿಸುತ್ತಾರೆ.


ಮಂಸೋರೆ ಚಿತ್ರದಲ್ಲಿ ಗಾಯಕಿ ಎಂ.ಡಿ.ಪಲ್ಲವಿ ಅಭಿನಯ
ಮಂಸೋರೆ ಅವರ ಚಿತ್ರದಲ್ಲಿ ಒಳ್ಳೆ ಕಲಾವಿದರೇ ಇರುತ್ತಾರೆ. ಪಾತ್ರಕ್ಕೆ ಬೇಕಾಗೋ ರೀತಿಯಲ್ಲಿಯೇ ಕಲಾವಿದರನ್ನ ಆಯ್ಕೆ ಮಾಡಿಕೊಳ್ಳುತ್ತಾರೆ. ಅದೇ ರೀತಿನೇ ತಮ್ಮ ಈ ಚಿತ್ರದಲ್ಲೂ ಎಂ.ಡಿ.ಪಲ್ಲವಿ ಅವರಂತಹ ಕಲಾವಿದರನ್ನೇ ಮಂಸೋರೆ ಆಯ್ಕೆ ಮಾಡಿಕೊಂಡಿದ್ದಾರೆ.


ಅಮ್ಮನ ಪಾತ್ರದಲ್ಲಿ ಗಾಯಕಿ ಎಂ.ಡಿ.ಪಲ್ಲವಿ ನಟನೆ
19.20.21 ಚಿತ್ರದಲ್ಲಿ ಎಂ.ಡಿ.ಪಲ್ಲವಿ ಅವರು ತಾಯಿ ಪಾತ್ರವನ್ನೆ ಮಾಡಿದ್ದಾರೆ. ತಾಯಿ ಪಾತ್ರದಲ್ಲಿಯೇ ಬದುಕಿನ ಹಾರ್ಡ್ ರಿಯಾಲಿಟಿಗಳನ್ನೆ ಹೇಳುತ್ತಿದ್ದಾರೆ. ಅಷ್ಟು ರಿಯಲಿಸ್ಟಿಕ್ ಆಗಿರೋ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಕೊಟ್ಟ ಪ್ರಮಾಣ ಪತ್ರ ಯಾವುದು ಗೊತ್ತೇ? ಅದರ ಬಗ್ಗೆ ಡೈರೆಕ್ಟರ್ ಮಂಸೋರೆ ಹೀಗೆ ಹೇಳಿದ್ದಾರೆ ನೋಡಿ.


Kannada Singer M D Pallavi New Movie Latest Updates
ನಾತಿಚರಾಮಿ ಚಿತ್ರದ ಡೈರೆಕ್ಟರ್ ಹೊಸ ಸಿನಿಮಾ


ನಮ್ಮ ಚಿತ್ರದಲ್ಲಿ ಹಾರ್ಡ್ ರಿಯಾಲಿಟಿ ಇವೆ. ಅದರ ಇಂಪ್ಯಾಕ್ಟ್ ತುಂಬಾನೇ ಆಗುತ್ತದೆ. ಸೆನ್ಸಾರ್ ಮಂಡಳಿ ಇದನ್ನ ಹೇಳಿಯೇ ನಮ್ಮ ಚಿತ್ರಕ್ಕೆ A ಪ್ರಮಾಣ ಪತ್ರ ನೀಡಿದೆ ಎಂದು ನ್ಯೂಸ್​-18 ಕನ್ನಡ ಡಿಜಿಟಲ್​ಗೆ ಡೈರೆಕ್ಟರ್ ಮಂಸೋರೆ ತಿಳಿಸಿದ್ದಾರೆ.


ಫೆಬ್ರವರಿ ತಿಂಗಳಲ್ಲಿ 19.20.21 ಸಿನಿಮಾ ರಿಲೀಸ್ ಪ್ಲಾನ್
ಮಂಸೋರೆ ತಮ್ಮ ಈ ಚಿತ್ರದ ಎಲ್ಲ ಕೆಲಸ ಮುಗಿಸಿದ್ದಾರೆ. ಇದೇ ತಿಂಗಳ 27 ರಂದು ಪ್ರೆಸ್ ಮೀಟ್ ಮಾಡೋ ಮೂಲಕ ಚಿತ್ರದ ಇತರ ಮಾಹಿತಿಯನ್ನೂ ಕೊಡಲಿದ್ದಾರೆ.


ಇದನ್ನೂ ಓದಿ:  Prashanth Neel: ನೀಲ್ 6ನೇ ಸಿನಿಮಾ ಕೂಡಾ ತೆಲುಗಿನಲ್ಲಿಯೇ! ಹಾಗಾದ್ರೆ KGF 3 ಕಥೆ ಏನು?


ಚಿತ್ರ ವಿತರಕರ ಜೊತೆಗೂ ಈ ಚಿತ್ರದ ರಿಲೀಸ್ ದಿನವನ್ನ ಕೂಡ ಚರ್ಚೆ ಮಾಡುತ್ತಿದ್ದಾರೆ. ಫೆಬ್ರವರಿ ತಿಂಗಳಲ್ಲಿಯೇ ಸಿನಿಮಾ ರಿಲೀಸ್ ಆಗೋ ಸಾಧ್ಯತೆ ಇದೆ. ಅದೇ ನಿಟ್ಟಿನಲ್ಲಿಯೇ ಪ್ಲಾನಿಂಗ್ ನಡೀತಿದೆ ಎಂದು ಡೈರೆಕ್ಟರ್ ಮಂಸೋರೆ ತಿಳಿಸಿದ್ದಾರೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು