• Home
  • »
  • News
  • »
  • entertainment
  • »
  • Raghu Dixit: ಕನ್ನಡದ ವಿಶೇಷ ಕಂಠಸಿರಿಯ ಗಾಯಕನಿಗೆ ಅತ್ಯುತ್ತಮ ಹಿನ್ನೆಲೆ ಗಾಯಕ ಫಿಲ್ಮ್ ಫೇರ್ ಗೌರವ

Raghu Dixit: ಕನ್ನಡದ ವಿಶೇಷ ಕಂಠಸಿರಿಯ ಗಾಯಕನಿಗೆ ಅತ್ಯುತ್ತಮ ಹಿನ್ನೆಲೆ ಗಾಯಕ ಫಿಲ್ಮ್ ಫೇರ್ ಗೌರವ

ಅತ್ಯುತ್ತಮ ಹಿನ್ನೆಲೆ ಗಾಯಕನಿಗೆ ಫಿಲ್ಮ್ ಫೇರ್ ಗೌರವ

ಅತ್ಯುತ್ತಮ ಹಿನ್ನೆಲೆ ಗಾಯಕನಿಗೆ ಫಿಲ್ಮ್ ಫೇರ್ ಗೌರವ

ಎಲ್ಲದಕ್ಕೂ ಸರಿಯಾದ ಟೈಮ್ ಬರಬೇಕು. ಆ ಟೈಮ್ ಬಂದಾಗ ಸಿಗಬೇಕಾದದ್ದು ಸಿಕ್ಕೇ ಸಿಗುತ್ತದೆ. ಅತ್ಯುತ್ತಮ ಹಿನ್ನೆಲೆ ಗಾಯನಕ್ಕೆ ಈಗ ಫಿಲ್ಮಂ ಫೇರ್ ಪ್ರಶಸ್ತಿ ಬಂದಿದೆ. ಇದು ನನಗೆ ತುಂಬಾ ಖುಷಿ ತಂದಿದೆ ಎಂದು ರಘು ದೀಕ್ಷಿತ್ ಹೇಳಿದ್ದಾರೆ.

  • Share this:

ಕನ್ನಡದ ವಿಶೇಷ ಕಂಠಸಿರಿಯ ಗಾಯಕ ರಘು ದೀಕ್ಷಿತ್ (Raghu Dixit) ಅವರ ಗಾಯನಕ್ಕೆ ಮನಸೋಲದವ್ರೇ ಇಲ್ಲ. ವಿಶೇಷ ಉಡುಗೆ-ವಿಶೇಷ ಶೈಲಿಯ ಗಾಯನದ ಮೂಲಕ ಕನ್ನಡಿಗರ ಹೃದಯ ಗೆಲ್ಲುತ್ತಲೇ ಇದ್ದಾರೆ. ಈಗ ಕನ್ನಡದ ಈ ಗಾಯಕನಿಗೆ 2021 ರಲ್ಲಿ ರಿಲೀಸ್ ಆದ ನಿನ್ನ ಸನಿಹಕೆ ಚಿತ್ರದ (Ninna Sanihake) "ಮಳೆ ಮಳೆ" ಹಾಡಿಗೆ ಅತ್ಯುತ್ತಮ ಹಿನ್ನೆಲೆಯ ಗಾಯಕ ಫಿಲ್ಮ್ ಫೇರ್  ಸೌತ್  ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕಳೆದ 20 ವರ್ಷದಲ್ಲಿ 100 ಪ್ಲಸ್ ಹಾಡುಗಳ ಮೂಲಕ ಜರನ್ನ ವಿಶೇಷವಾಗಿಯೇ ರಂಜಿಸಿದ ಗಾಯಕ-ಸಂಗೀತ ನಿರ್ದೇಶಕ ರಘು ದೀಕ್ಷಿತ್ ಅವರಿಗೆ ಈಗ ಫಿಲ್ಮ್ ಫೇರ್ (FilmFair) ಪ್ರಶಸ್ತಿ ಬಂದಿದೆ. ಆ ಖುಷಿಯನ್ನ ನ್ಯೂಸ್-18 ಕನ್ನಡ ಡಿಜಿಟಿಲ್ ಜೊತೆಗೆ ರಘು ದಿಕ್ಷಿತ್ ಹಂಚಿಕೊಂಡಿದ್ದಾರೆ.


ಕನ್ನಡದ ವಿಶೇಷ ಕಂಠಸಿರಿಯ ವಿಶೇಷ ಗಾಯಕ
ರಘು ದೀಕ್ಷಿತ್ ಗಾಯನ ಸುಧೆ ವಿಶೇಷವಾಗಿಯೇ ಇದೆ. ಅವರ ಹಾಡುಗಾರಿಕೆಯಲ್ಲಿ ಒಂದು ಎನರ್ಜಿ ಇದೆ. ರಘು ದೀಕ್ಷಿತ್ ಹಾಡಲು ಆರಂಭಿಸಿದ್ರೆ, ಕೇಳುಗರಲ್ಲಿ ಒಂದು ಎನರ್ಜಿ ಪಾಸ್ ಆಗುತ್ತದೆ. ಹೊಸ ಉತ್ಸಾಹವೂ ಮೂಡಿಯೇ ಬಿಡುತ್ತದೆ.


ಇದನ್ನೂ South filmfare awards 2022: ಕನ್ನಡ ಸಿನಿಮಾಗಳ ಬಗ್ಗೆ ಹೊಗಳಿದ ತೆಲುಗು ನಟ ನಾನಿ, ಎಲ್ಲೆಡೆ 'ಕಾಂತಾರ'ದ್ದೇ ಹವಾ


ರಘು ದೀಕ್ಷಿತ್ ಗಾಯನದಲ್ಲಿ ಒಂದು ಸೆಳೆತ ಇದ್ದೇ ಇರುತ್ತದೆ. ಸಂಗೀತ ಸಂಯೋಜನೆಯಲ್ಲೂ ಒಂದು ವಿಶೇಷ ಫೀಲ್ ಇರುತ್ತದೆ. ಜಸ್ಟ್ ಮಾತ್ ಮಾತಲ್ಲಿ​ ಚಿತ್ರದ ಹಾಡುಗಳನ್ನ ಕೇಳ್ತಾ ಹೋಗಿ, ಈಗಲೂ ಒಂದು ತಾಜಾ ಅನುಭವ ಖಂಡಿತಾ ಆಗುತ್ತದೆ.


Kannada Singer-composer Raghu Dixit Awarded FilmFair For Ninna Sanihake Play Back Sinning
ಕನ್ನಡದ ವಿಶೇಷ ಕಂಠಸಿರಿಯ ಗಾಯಕ


ರಘು ದೀಕ್ಷಿತ್ ಲವ್ ಮಾಕ್​ಟೇಲ್ ಹಾಡು ಸೂಪರ್
ರಘು ದೀಕ್ಷಿತ್ ಲವ್ ಮಾಕ್​ಟೇಲ್ ಸಂಗೀತದಲ್ಲೂ ಒಂದು ಸೆಳೆತ ಇತ್ತು. ಚಿತ್ರದ ಈ ಹಾಡುಗಳನ್ನು ಜನ ಮೆಚ್ಚಿದರು. ಸಿನಿಮಾ ಕೂಡ ಹಿಟ್ ಆಗಿರೋದು ಗೊತ್ತೇ ಇದೆ. ಹೀಗೆ ವಿಶೇಷ ಸಂಗೀತದ ಮೂಲಕ ವಿಶೇಷ ಗಾಯನದ ಮೂಲಕ ರಘು ದೀಕ್ಷಿತ್ ಪ್ರೇಕ್ಷಕರ ಹೃದಯದಲ್ಲಿ ಜಾಗ ಮಾಡಿಕೊಂಡಿದ್ದಾರೆ.


ನಿನ್ನ ಸನಿಹಕೆ ಅತ್ಯುತ್ತಮ ಗಾಯಕ ಫಿಲ್ಮ್ ಫೇರ್ ಪ್ರಶಸ್ತಿ
ರಘು ದೀಕ್ಷಿತ್ ಅವರಿಗೆ ಈಗ ಫಿಲ್ಮ್ ಫೇರ್ ಸೌತ್ ಪ್ರಶಸ್ತಿ ಬಂದಿದೆ. ಕಳೆದ 20 ವರ್ಷದಲ್ಲಿ ರಘು ದೀಕ್ಷಿತ್ ಅನೇಕ ಸಿನಿಮಾಗಳಿಗೆ ಅತ್ಯುತ್ತಮ ಹಾಡುಗಳನ್ನ ಹಾಡಿದ್ದಾರೆ.
ಅತ್ಯುತ್ತಮ ಸಂಗೀತವನ್ನೂ ಕೊಟ್ಟಿದ್ದಾರೆ. ಆದರೆ ಫಿಲ್ಮಂ ಫೇರ್  ಸೌತ್ ಪ್ರಶಸ್ತಿ ಈಗ ಬಂದಿರೋದೇ ವಿಶೇಷ. ವಾಸುಕಿ ವೈಭವ್ ಬರೆದ "ಮಳೆ ಮಳೆ" ಹಾಡಿಗೆ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ ಬಂದಿದೆ.


ಇದನ್ನೂ ಓದಿ: Filmfare awards South 2022: 67ನೇ ಪಾರ್ಲೆ ಫಿಲ್ಮ್ ಫೇರ್ ಅವಾರ್ಡ್ಸ್​ ಸೌಥ್ 2022; ಅತ್ಯುತ್ತಮ ನಟ ಧನಂಜಯ್, ಅಪ್ಪು​ಗೆ ಜೀವಮಾನದ ಸಾಧನೆ ಪ್ರಶಸ್ತಿ


ಫಿಲ್ಮಂ ಫೇರ್ ಸೌತ್ ಪ್ರಶಸ್ತಿ ಬಂದ ಖುಷಿಯಲ್ಲಿಯೇ ರಘು ದೀಕ್ಷಿತ್ ತಮ್ಮ ಖುಷಿ ನಮ್ಮೊಟ್ಟಿಗೆ ಹಂಚಿಕೊಂಡಿದ್ದಾರೆ. ಅವರು ರಿಯಾಕ್ಟ್ ಮಾಡಿರೋ ಇಂಗ್ಲೀಷ್​ ಸಾಲುಗಳ ಹೀಗಿವೆ ಓದಿ.


ನನ್ನ ಮೇಲೆ ಜನರು ತೋರಿದ ಪ್ರೀತಿಗೆ ನಾನು ಧನ್ಯನಾಗಿದ್ದೇನೆ. ಅವರ ಪ್ರೀತಿಯಿಂದಲೇ ನಾನು ಎಲ್ಲವನ್ನೂ ಪಡೆಯಲು ಸಾಧ್ಯವಾಯಿತು. ನನ್ನ ಮೇಲೆ ಜನರ ಪ್ರೀತಿಯ ಆಶೀರ್ವಾದ ಇದೆ. ಅವರ ತುಂಬು ಹೃದಯದ ಪ್ರೀತಿಯಿಂದಲೇ ಫಿಲ್ಮ್ ಫೇರ್ ಪ್ರಶಸ್ತಿ ಪಡೆಯಲು ಸಾಧ್ಯವಾಯಿತು. ಫಿಲ್ಮ್ ಫೇರ್ ಪ್ರಶಸ್ತಿ ಈಗ ನನ್ನ ಸಿನಿ ಪಯಣದಲ್ಲಿ ಇನ್ನಷ್ಟು ಸಂತೋಷ ತುಂಬಿದೆ. ವೇದಿಕೆ ಮೇಲೆ ಬಂದು ಫಿಲ್ಮ್ ಪೇರ್ ತೆಗೆದುಕೊಂಡಿರೋದು ನಿಜಕ್ಕೂ ಅದ್ಭುತ ಅನುಭವವೇ ಆಗಿದೆ. ಸಮಯ ಬಂದಾಗ ನಮಗೆ ಸಿಗಬೇಕಾಗಿರೋದು ಸಿಗುತ್ತದೆ. ಆಗ ಯಾರೂ ಆ ಬಗ್ಗೆ ಪ್ರಶ್ನೆ ಮಾಡೋಕೆ ಆಗೋದಿಲ್ಲ. ಅನುಮಾನ ಕೂಡ ಪಡೋಕೆ ಸಾಧ್ಯವೇ ಇಲ್ಲ ಎಂದು ರಘು ದೀಕ್ಷಿತ್ ಹೇಳಿದ್ದಾರೆ.


ಗಾಯಕ ರಘು ದೀಕ್ಷಿತ್ ಸಂಗೀತದ ಪಯಣದಲ್ಲಿ ಫಿಲ್ಮ್ ಫೇರ್  ಸೌತ್ ಪ್ರಶಸ್ತಿ ಒಂದು ಹೊಸ ಖುಷಿಯನ್ನೆ ತಂದಿದೆ. ಜನರ ಪ್ರೀತಿಯಿಂದಲೇ ಇದು ಸಾಧ್ಯವಾಗಿದೆ ಅಂತಲೂ ರಘು ದೀಕ್ಷಿತ್ ಹೇಳಿಕೊಂಡಿದ್ದಾರೆ.


Kannada Singer-composer Raghu Dixit Awarded FilmFair For Ninna Sanihake Play Back Sinning
ಅತ್ಯುತ್ತಮ ಹಿನ್ನೆಲೆ ಗಾಯನಕ್ಕೆ ಈಗ
ಫಿಲ್ಮಂ ಫೇರ್  ಸೌತ್ ಪ್ರಶಸ್ತಿ


ಪ್ರಶಸ್ತಿ-ಮನ್ನಣೆ-ಗೌರವಕ್ಕೆ ಸರಿಯಾದ ಟೈಮ್ ಬರಬೇಕು
ಹೌದು, ಎಲ್ಲದಕ್ಕೂ ಸರಿಯಾದ ಟೈಮ್ ಬರಬೇಕು. ಆ ಟೈಮ್ ಬಂದಾಗ ಸಿಗಬೇಕಾದದ್ದು ಸಿಕ್ಕೇ ಸಿಗುತ್ತದೆ ಎಂದು ಹೇಳುವ ರಘು ದೀಕ್ಷಿತ್, ತಮಗೆ ಬಂದಿರೋ ಫಿಲ್ಮಂ ಫೇರ್  ಸೌತ್ ಪ್ರಶಸ್ತಿ ತುಂಬಾ ಸಂತೋಷ ತಂದಿದೆ ಅಂತಲೂ ಹೇಳಿದ್ದಾರೆ.

First published: