• Home
  • »
  • News
  • »
  • entertainment
  • »
  • Subhamangala Film Review: ಮದುವೆ ಮನೆಯ ಶುಭಮಂಗಳ ಚಿತ್ರಕ್ಕೆ ಇದುವೇ ಜೀವಾಳ

Subhamangala Film Review: ಮದುವೆ ಮನೆಯ ಶುಭಮಂಗಳ ಚಿತ್ರಕ್ಕೆ ಇದುವೇ ಜೀವಾಳ

ಸಿನಿಮಾ ರಿಲೀಸ್ ಮುಂಚೇನೆ ರಿವ್ಯೂ-ಇದು ಶುಭಮಂಗಳ ವಿಶೇಷ

ಸಿನಿಮಾ ರಿಲೀಸ್ ಮುಂಚೇನೆ ರಿವ್ಯೂ-ಇದು ಶುಭಮಂಗಳ ವಿಶೇಷ

ತುಂಬಾ ನೀಟ್​ ಆಗಿಯೇ ಇಡೀ ಸಿನಿಮಾ ಇದೆ. ಎಲ್ಲೂ ಬೋರ್ ಹೊಡೆಸೋದಿಲ್ಲ. ಒಂದು ಮದುವೆ ಮನೆಯಲ್ಲಿ ಎರಡು ದಿನ ಇದ್ದು ಬರುವ ಫೀಲ್ ಇದೇ ಅಲ್ವೇ.? ಆ ಒಂದು ಅನುಭವ ಸಿನಿಮಾದಲ್ಲಿ ಆಗುತ್ತದೆ.

  • Share this:

ಕನ್ನಡದಲ್ಲಿ ಒಂದು ಸಿನಿಮಾ (Kannada Cinema) ರೆಡಿ ಆಗಿದೆ. ಈ ಚಿತ್ರದ ಟೈಟಲ್ ಪುಟ್ಟಣ್ಣ (Puttanna Kanagal) ಕಣಗಾಲರ ಚಿತ್ರವನ್ನೆ ನೆನಪಿಸುತ್ತದೆ. ಆದರೆ ಇದು ಬೇರೆನೆ ಕಥೆ ಇರೋ ಚಿತ್ರ. ಇಡೀ ಚಿತ್ರ ಒಂದೇ ಮದುವೆ ಮನೆಯಲ್ಲಿಯೇ ನಡೆಯುತ್ತದೆ. ಹಾಗಂತ ಇಲ್ಲಿ ಒಂದೇ ಮದುವೆ ಕಥೆ ಇಲ್ಲ. ಐದೈದು (Five Love Stories) ಪ್ರೀತಿ-ಪ್ರೇಮದ ಕಥೆಗಳಿವೆ. ಒಟ್ಟೊಟ್ಟಿಗೇನೆ ಕಥೆಗಳ ಸಾಗುತ್ತವೆ. ಒಟ್ಟೊಟ್ಟಿಗೇನೆ ಕೊನೆಗಳುತ್ತವೆ. ಆದರೆ ಪ್ರತಿ ಕಥೆಗೂ ಬೇರೆ ಎಂಡ್ ಇರೋದು (Special End) ವಿಶೇಷ. ಅಂತಹ ವಿಶೇಷ ಕಥೆಗೆ ಶುಭಮಂಗಳ ಟೈಟಲ್ ತುಂಬಾ ಸೂಕ್ತವಾಗಿಯೇ ಇದೆ. ಇಷ್ಟು ಸೆಷಲ್ ಅನಿಸೋ ಸಿನಿಮಾ ನಮಗೆ ಹಲವು ವಿಚಾರಕ್ಕೆ ಕಾಡಿಸುತ್ತದೆ. ಇನ್ನೂ ಹಲವು ವಿಷಯಕ್ಕೆ ಹೃದಯ ಟಚ್ ಮಾಡುತ್ತದೆ.


ಶುಭಮಂಗಳ ಸಿನಿಮಾ ತುಂಬಾ ಒಳ್ಳೆ ಪ್ರಯೋಗದ ಸಿನಿಮಾನೇ ಆಗಿದೆ. ಒಂದು ಕಥೆಯನ್ನ ಒಂದೇ ಜಾಗದಲ್ಲಿ ಹೇಳುವುದು ಅಷ್ಟು ಸುಲಭದ ಮಾತು ಅಲ್ಲವೇ ಅಲ್ಲ. ಆದರೆ ನಿರ್ದೇಶಕ ಸಂತೋಷ್ ಗೋಪಾಲ್ ಆ ವಿಷಯದಲ್ಲಿ ಗ್ರೇಟ್ ಅನಿಸಿ ಬಿಡ್ತಾರೆ.


ಶುಭಮಂಗಳ ಚಿತ್ರಕ್ಕೆ ಮದುವೆ ಮನೆಯ ವಿಷಯವೇ ಜೀವಾಳ
ಹೌದು, ಶುಭಮಂಗಳ ಚಿತ್ರದಲ್ಲಿ ಒಂದು ಮದುವೆ ನಡೆಯುತ್ತದೆ. ಈ ಮದುವೆ ಮನೆಯಲ್ಲಿ ಹಲವು ಪ್ರೇಮ ಕಥೆಗಳು ತೆರೆದುಕೊಳ್ಳುತ್ತವೆ. ಸಾಮಾನ್ಯವಾಗಿ ಮದುವೆ ಮನೆಯಲ್ಲಿ ನಡೆಯೋ ನೈಜ ಕಥೆಗಳೇ ಈ ಚಿತ್ರಕ್ಕೆ ಜೀವಾಳ ಆಗಿವೆ.


Kannada Shubhamangala Cinema Review Story
ಶುಭಮಂಗಳ ಸಿನಿಮಾ ರಿವ್ಯೂ


ನಿರ್ದೇಶಕರು ಅದನ್ನ ತುಂಬಾ ಇಂಟ್ರಸ್ಟಿಂಗ್​ ಆಗಿಯೇ ತೆರೆ ಮೇಲೆ ತಂದಿದ್ದಾರೆ. ಸಿನಿಮಾ ನೋಡ್ತಾ ಹೋದ ಹಾಗೆ ನಿಮಗೆ ಎಲ್ಲೂ ಬೋರ್ ಹೊಡೆಯೋದಿಲ್ಲ. ಯಾಕಪ್ಪ ಈ ಚಿತ್ರಕ್ಕೆ ಬಂದೆ ಅನ್ನೋ ಫೀಲ್ ಕೂಡ ಬರೋದಿಲ್ಲ.


ಮದುವೆ ಮನೆಯಲ್ಲಿ ಅರಳುವ ಪ್ರೇಮ ಕಥೆಗಳ ಸಿನಿಮಾ
ಮದುವೆ ಮನೆಯಲ್ಲಿ ಟೀನೇಜ್ ಲವ್ ಸ್ಟೋರಿ ಓಪನ್ ಆಗುತ್ತಿದೆ. ಇದು ನಿಜಕ್ಕೂ ಎಲ್ಲರ ಜೀವನದ ಆ ದಿನಗಳನ್ನ ನೆಪಿಸುತ್ತದೆ. ಕಾಲೇಜಿನಲ್ಲಿ ಇಷ್ಟಪಟ್ಟು ಲವ್ ಲೆಟರ್ ಕೊಟ್ಟ ಹುಡುಗಿನೇ ಕಣ್ಮುಂದೆ ಬಂದಾಗ ಆಗೋ ಖುಷಿ ಇಲ್ಲಿ ಎರಡು ವಯಸ್ಕ ಜೋಡಿಗಳ ಮೂಲಕ ಹತ್ತಿರ ಆಗುತ್ತದೆ.


ಇದನ್ನೂ ಓದಿ: BBK9 Saik Nawaz: ಬಿಗ್ ಬಾಸ್ ಮನೆಯಿಂದ ಹೊರ ಬಂದ ಸೈಕ್ ನವಾಜ್ ಮುಂದೇನ್ ಮಾಡ್ತಾರೆ?


ಮದುವೆ ಆಗುವ ಹುಡುಗನ ಗೆಳೆಯರ ಎಣ್ಣೆ ಏಟಿನ ಸದ್ದು-ಗದ್ದಲ್ಲ ಇಲ್ಲಿ ನಿಮ್ಮ ನಿಮ್ಮ ಸ್ನೇಹಿರನ್ನ ನೆನಪಿಸುತ್ತದೆ. ಮಗನಿಗೆ ಹುಡುಗಿಯನ್ನ ಹುಡುಕು ಅಮ್ಮ ಇಲ್ಲಲಿ ಸಿಗ್ತಾಳೆ. ಮದುವೆ ಮನೆಯಲ್ಲಿ ಫ್ಲರ್ಟ್ ಮಾಡೋ ಫೋಟೋಗ್ರಾಫರ್​ ಕೂಡ ನಿಮಗೆ ಇಲ್ಲಿ ಕಚಡಾ ವಿಲನ್ ರೀತಿ ಕಾಣಿಸುತ್ತಾನೆ.


ಶುಭಮಂಗಳದ ಆರಂಭ ಮತ್ತು ಕೊನೆ ಎರಡೂ ಸೂಪರ್
ಮದುವೆಗಾಗಿ ಹುಡುಗಿ ಹುಡುಕುವ ಬ್ಯಾಚೂಲರ್ ಹ್ಯಾಂಡ್ಸಮ್ ಮ್ಯಾನ್ ಕೂಡ ಇದೇ ಶುಭಮಂಗಳದ ಮದುವೆಯಲ್ಲಿ ಕಾಣಿಸುತ್ತಾನೆ. ಇಷ್ಟೆಲ್ಲದರ ಮಧ್ಯ ಪ್ರೀತಿಸಿದ ಹುಡುಗನ ಮದುವೆಗೆ ಪ್ರೇಯಸಿ ಬಂದಿರೋದು ಇಡೀ ಕಥೆಯ ಟರ್ನ್ ಮತ್ತು ಟ್ವಿಸ್ಟ್ ಅಂತಲೇ ಹೇಳಬಹುದು. ಇದನ್ನ ಥಿಯೇಟರ್​ನಲ್ಲಿಯೇ ಹೋಗಿ ನೋಡಿ.


Kannada Shubhamangala Cinema Review Story
ಶುಭಮಂಗಳ  ಸಿನಿಮಾ ತುಂಬಾ ನೀಟ್​ ಆಗಿಯೇ ಬಂದಿದೆ


ಮೇಘನಾ ಗಾಂವ್ಕರ್, ಹಿತಾ ಚಂದ್ರಶೇಖರ್, ರಾಕೇಶ್ ಮಯ್ಯ, ಸಿದ್ಧಾರ್ಥ್ ಎಲ್ಲರೂ ಶುಭಮಂಗಳದ ಮದುವೆಯಲ್ಲಿ ಇದ್ದಾರೆ. ಕೊನೆಯಲ್ಲಿ ಯಾರು ಯಾರನ್ನ ಮದುವೆ ಆಗ್ತಾರೆ ಅನ್ನೋದೇ ಇಂಟ್ರಸ್ಟಿಂಗ್ ಟ್ವಿಸ್ಟ್ ಅಂತಲೇ ಹೇಳಬಹುದು.


ಶುಭಮಂಗಳ ತುಂಬಾ ನೀಟ್ ಸಿನಿಮಾ-ಬೋರ್ ಹೊಡೆಸೋದಿಲ್ಲ
ತುಂಬಾ ನೀಟ್​ ಆಗಿಯೇ ಇಡೀ ಸಿನಿಮಾ ಇದೆ. ಎಲ್ಲೂ ಬೋರ್ ಹೊಡೆಸೋದಿಲ್ಲ. ಒಂದು ಮದುವೆ ಮನೆಯಲ್ಲಿ ಎರಡು ದಿನ ಇದ್ದು ಬರುವ ಫೀಲ್ ಇದೇ ಅಲ್ವೇ.?


ಇದನ್ನೂ ಓದಿ: Bollywood Actress: ಒಂದು ಕಾಲದ ಟಾಪ್ ಹೀರೋಯಿನ್, ಈಗ ಗುರುತೇ ಸಿಗದಂತೆ ಆಗಿದ್ದಾರೆ! ಏನಾಯ್ತು ಈ ನಟಿಗೆ?


ಆ ಒಂದು ಅನುಭವ ಸಿನಿಮಾದಲ್ಲಿ ಆಗುತ್ತದೆ. ಇದೇ ತಿಂಗಳ ಅಕ್ಟೋಬರ್-14 ರಂದು ಚಿತ್ರ ರಿಲೀಸ್ ಆಗುತ್ತದೆ. ಥಿಯೇಟರ್​ಗೆ ಹೋಗಿ ನೋಡಬಹುದಾದ ಸಿನಿಮಾಗಳಲ್ಲಿ ಇದು ಕೂಡ ಒಂದು ಅಂತ ಈಗಲೇ ಹೇಳಬಹುದು.

First published: