• Home
  • »
  • News
  • »
  • entertainment
  • »
  • Shubhamangala Premier: ಪ್ರಚಾರದ ಹೊಸ ತಂತ್ರ! ಜನರಿಗೆ ಒಂದು ದಿನ ಶುಭಮಂಗಳ ಚಿತ್ರದ ಉಚಿತ ಪ್ರದರ್ಶನ

Shubhamangala Premier: ಪ್ರಚಾರದ ಹೊಸ ತಂತ್ರ! ಜನರಿಗೆ ಒಂದು ದಿನ ಶುಭಮಂಗಳ ಚಿತ್ರದ ಉಚಿತ ಪ್ರದರ್ಶನ

ಇದೇ 14 ರಂದು ಶುಭಮಂಗಳ ಸಿನಿಮಾ ರಿಲೀಸ್

ಇದೇ 14 ರಂದು ಶುಭಮಂಗಳ ಸಿನಿಮಾ ರಿಲೀಸ್

ಶುಭಮಂಗಳ ಸಿನಿಮಾದ ಪ್ರಚಾರ ತಂತ್ರ ಚೆನ್ನಾಗಿದೆ. ಜನ ಒಂದು ದಿನ ಪ್ರಿಮಿಯರ್ ಶೋದಲ್ಲಿ ಉಚಿತವಾಗಿಯೇ ಸಿನಿಮಾ ನೋಡಬಹುದು. ರಾಜ್ಯದ ಪ್ರಮುಖ ನಗರದಲ್ಲಿ ಈ ಒಂದು ಪ್ರಯೋಗ ಸಕ್ಸಸ್ ಆಗಿದೆ. ಚಿತ್ರ ವೀಕ್ಷಿಸಿದ ಜನ ಒಳ್ಳೆ ರೆಸ್ಪಾನ್ಸ್ ಕೂಡ ಕೊಟ್ಟು ಹೋಗಿದ್ದಾರೆ.

  • News18 Kannada
  • Last Updated :
  • Hubli-Dharwad (Hubli), India
  • Share this:

    ಕನ್ನಡ ಚಿತ್ರರಂಗ (Kannada Industry) ಕೊರೊನಾದಿಂದ ನಲುಗಿದೆ. ಈಗಷ್ಟೇ ಚೇತರಿಸಿಕೊಳ್ಳುತ್ತಿದೆ. ಸಿನಿಮಾ (Film Promotion) ಪ್ರಚಾರಕ್ಕೂ ಹೆಚ್ಚು ಸೋಷಿಯಲ್ (social media) ಮೀಡಿಯಾಗಳನ್ನೆ ಈಗ ಅವಲಂಭಿಸಿವೆ ಫೇಸ್ ಬುಕ್, ಟ್ವಿಟರ್, ಯುಟ್ಯೂಬರ್ ಹಿಂಗೆ ಇಲ್ಲಿ ಎಲ್ಲ ಚಿತ್ರಗಳ ಎಲ್ಲ ಸ್ಟಾರ್​ಗಳು (Stars On social media) ಕಾಣಿಸುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಕನ್ನಡದ ಶುಭಮಂಗಳ ಸಿನಿಮಾ ಒಂದ್ ಹೊಸ ಐಡಿಯಾ ಮಾಡಿದೆ. ರಾಜ್ಯದ ಆಯಾ ಊರುಗಳಲ್ಲಿ ಪ್ರಿಮಿಯರ್ ಶೋ ಮಾಡುವುದೇ ಈ ಹೊಸ ಐಡಿಯಾದ ಹೊಸ ಹೆಜ್ಜೆ ಆಗಿದೆ. ಜನರಿಗೆ ಸಿನಿಮಾ ರೀಚ್ ಮಾಡಲು ಒಂದು ದಿನ ಸಿನಿಮಾ ತೋರಿಸೋದೇ ಈ ಐಡಿಯಾದ ವಿಸ್ತಾರವಾದ ವಿವರಣೆ ಆಗಿದೆ. ಉಚಿತವಾಗಿಯೇ ಒಂದೇ ಒಂದು ದಿನ ಚಿತ್ರ ವೀಕ್ಷಿಸಿದ ಜನರಿಂದಲೇ ಅದು ಪ್ರಚಾರ ಪಡೀತಾ ಹೋಗುತ್ತದೆ ಅನ್ನೋದು ಒಟ್ಟು ನಂಬಿಕೆ.


    ಆ ನಂಬಿಕೆಯ ಆ ನಂಬಿಕೆ ಮೇಲೇನೆ ಹುಬ್ಬಳ್ಳಿಯ ರೂಪಂ ಥಿಯೇಟರ್​​ನಲ್ಲಿ ಪ್ರಿಮಿಯರ್ ಶೋ ಇತ್ತು. ಇಲ್ಲಿ ಸಿನಿಮಾದ ಕಲಾವಿದರು ಜನರ ಜೊತೆಗೆ ಕುಳಿತು ಚಿತ್ರ ವೀಕ್ಷಿಸಿದರು.


    ಶುಭಮಂಗಳ ಚಿತ್ರದ ಪ್ರಚಾರದ ಹೊಸ ಐಡಿಯಾ
    ಶುಭಮಂಗಳ ಸಿನಿಮಾದ ಪ್ರಚಾರ ತಂತ್ರ ಚೆನ್ನಾಗಿದೆ. ಜನ ಒಂದು ದಿನ ಪ್ರಿಮಿಯರ್ ಶೋದಲ್ಲಿ ಉಚಿತವಾಗಿಯೇ ಸಿನಿಮಾ ನೋಡಬಹುದು. ರಾಜ್ಯದ ಪ್ರಮುಖ ನಗರದಲ್ಲಿ ಈ ಒಂದು ಪ್ರಯೋಗ ಸಕ್ಸಸ್ ಆಗಿದೆ. ಚಿತ್ರ ವೀಕ್ಷಿಸಿದ ಜನ ಒಳ್ಳೆ ರೆಸ್ಪಾನ್ಸ್ ಕೂಡ ಕೊಟ್ಟು ಹೋಗಿದ್ದಾರೆ.


    Kannada Shubhamangala Cinema Free Premier Show at Hubballi
    ಶುಭಮಂಗಳ ಸಿನಿಮಾದ ಸ್ಟಿಲ್ಸ್


    ಹುಬ್ಬಳ್ಳಿಯ ರೂಪಂ ಥಿಯೇಟರ್​ನಲ್ಲಿ ಪ್ರಿಮಿಯರ್ ಶೋ
    ಹುಬ್ಬಳ್ಳಿಯ ರೂಪಂ ಥಿಯೇಟರ್​​ನಲ್ಲೂ ಶುಭಮಂಗಳ ಚಿತ್ರದ ಉಚಿತ ಪ್ರಿಮಿಯರ್ ಶೋ ಇತ್ತು. ಇಲ್ಲಿ ಮಹಿಳೆಯರು ಮತ್ತು ಮಕ್ಕಳ ಸಂಖ್ಯೆ ಜಾಸ್ತಿನೇ ಇತ್ತು. ಹೆಚ್ಚು ಕಡಿಮೆ ಎರಡೂವರೆ ಗಂಟೆಯ ಶುಭಮಂಗಳ ಜನರನ್ನ ತನ್ನದೇ ರೀತಿಯಲ್ಲಿ ರಂಜಿಸಿದೆ.


    ಇದನ್ನೂ ಓದಿ: Kanatara Movie: ಹೆಕ್ಕ ತಿಂಬಾಳೆ, ಕುಪ್ಪಳ ಮಂಜಿ! ರಿಷಬ್​ಗೆ ಹೊಸ ಹೆಸರಿಟ್ರು ಅಚ್ಯುತ್ ಕುಮಾರ್


    ಹುಬ್ಬಳ್ಳಿಯ ಪ್ರಿಮಿಯರ್ ಶೋಗೆ ಬಂದ ಸ್ಟಾರ್ಸ್
    ದೂರದ ಬೆಂಗಳೂರಿನಿಂದ ಹುಬ್ಬಳ್ಳಿಗೆ ಪ್ರಚಾರ ಪ್ರಿಮಿಯರ್ ಶೋಗೆ ಚಿತ್ರದ ಕಲಾವಿದರು ಆಗಮಿಸಿದ್ದರು. ತಮ್ಮ ಎಂದಿನ ಪ್ರಚಾರ ಕೆಲಸ ಮುಗಿಸಿದ್ದ ನಟರು-ನಟಿಯರು ತುಂಬಾ ಖುಷಿಯಲ್ಲಿಯೇ ಇದ್ದರು. ಸಿನಿಮಾ ಆರಂಭವಾಗೋ ಮುನ್ನವೇ ನ್ಯೂಸ್ 18 ಕನ್ನಡ ಡಿಜಿಟಲ್​ಗೂ ಮಾತನಾಡಿದರು.




    ಜನರ ಜೊತೆಗೆ ಚಿತ್ರ ವೀಕ್ಷಿಸಿದ ಶುಭಮಂಗಳ ಟೀಮ್
    ನಟಿಯರಾದ ಮೇಘನಾ ಗಾಂವ್ಕರ್, ಹಿತಾ ಚಂದ್ರಶೇಖರ್, ರಾಕೇಶ್ ಮಯ್ಯ, ನಿರ್ದೇಶಕ ಸಂತೋಷ್ ಗೋಪಾಲ್ ಎಲ್ಲರೂ ಈ ಒಂದು ಶೋದಲ್ಲಿದ್ದರು. ಜನರ ಜೊತೆಗೆ ಸಿನಿಮಾ ನೋಡಿದರು.




    ಪ್ರಿಮಿಯರ್ ಶೋ ಅನ್ನೋದು ಒಂದು ವಿಶೇಷವಾದ ಅರೇಂಜ್​ಮೆಂಟ್ ಆಗಿದೆ. ಆದರೆ ಇತ್ತೀಚಿಗೆ ಫ್ಯಾನ್ಸ್ ಶೋ ಗಳೂ ಆರಂಭಗೊಂಡಿವೆ. ಸಿನಿಮಾ ಬರುವ ಹಿಂದಿನ ದಿನ ಪೇಡ್ ಪ್ರಿಮಿಯರ್ ಶೋ ಅಂತಲೂ ಈಗೀಗ ಪ್ಲಾನ್ ಮಾಡಲಾಗುತ್ತಿದೆ.


    ಜನರಿಗಾಗಿಯೇ ಉಚಿತ ಪ್ರಿಮಿಯರ್ ಶೋ
    ತಮ್ಮ ನೆಚ್ಚಿನ ನಾಯಕನ ಸಿನಿಮಾವನ್ನ ರಿಲೀಸ್​ಗೂ ಒಂದು ದಿನ ಮುಂಚೇನೆ ಪೇಡ್​ ಪ್ರಿಮಿಯರ್​​ನಲ್ಲಿ ನೋಡಬಹುದಾಗಿದೆ. ಹೀಗಿರೋವಾಗ ಶುಭಮಂಗಳ ಸಿನಿಮಾ ತಂಡ ಜನರಿಗಾಗಿಯೇ ಉಚಿತ ಪ್ರಿಮಿಯರ್ ಶೋ ನಡೆಸಿತು. ಇದರಲ್ಲಿ ಚಿತ್ರ ವೀಕ್ಷಿಸಿದ ಜನ ಒಳ್ಳೆ ರೆಸ್ಪಾನ್ಸ್ ಕೊಟ್ಟು ಹೋಗಿದ್ದಾರೆ.


    ಇದನ್ನೂ ಓದಿ: Amulya Gowda: ಬಿಗ್ ಬಾಸ್ ಸೀಸನ್ 09 ರಲ್ಲಿ ಅಮೂಲ್ಯ ಗೌಡ ಮಿಂಚಿಂಗೋ ಮಿಂಚಿಂಗ್, ವಾವ್ ಎಂದ ಅಭಿಮಾನಿಗಳು


    ಇದೇ 14 ರಂದು ಶುಭಮಂಗಳ ಸಿನಿಮಾ ರಿಲೀಸ್
    ಶುಭಮಂಗಳ ಸಿನಿಮಾ ಇದೇ ತಿಂಗಳು 14 ರಂದು ರಿಲೀಸ್ ಆಗುತ್ತಿದೆ. ಸಿನಿಮಾ ಪ್ರೇಮಿಗಳು ಈ ಚಿತ್ರವನ್ನ ಮಲ್ಟಿಪ್ಲೆಕ್ಸ್ ನಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ನೋಡಬಹುದಾಗಿದೆ. ಅಲ್ಲಿಯೇ ಶುಭಮಂಗಳ ಚಿತ್ರವನ್ನ ಸಿನಿಮಾ ಟೀಮ್ ರಿಲೀಸ್ ಮಾಡೋ ಪ್ಲಾನ್ ಮಾಡಿದೆ.




    ಮಲ್ಟಿ ಪ್ಲೆಕ್ಸ್​ನಲ್ಲಿಯೆ ಶುಭಮಂಗಳ ರಿಲೀಸ್
    ಇನ್ನುಳಿದಂತೆ ಈಗಾಗಲೇ ಸಿನಿಮಾಕ್ಕೆ ಜನ ಒಳ್ಳೆ ಅಭಿಪ್ರಾಯ ಕೊಟ್ಟು ಹೋಗಿದ್ದಾರೆ. ಇನ್ನು ಮಲ್ಟಿಪ್ಲೆಕ್ಸ್​​ನಲ್ಲಿ ಚಿತ್ರವೀಕ್ಷಿಸೋ ಜನ ಹೇಗೆ ರಿಪೋರ್ಟ್ ಕೊಡ್ತಾರೆ ಅನ್ನೋ ಕುತೂಹಲ ಕೂಡ ಈಗ ಹೆಚ್ಚಾಗಿದೆ.

    First published: