ಕನ್ನಡದ ಹೆಸರಾಂತ ಕ್ಯಾಮರಾಮನ್ (Repairy Ramanna) ಸತ್ಯ ಹೆಗಡೆ ಒಳ್ಳೆ ಅಭಿರುಚಿ ಇರೋ ಕ್ಯಾಮರಾಮೆನ್ ಅಂದ್ರೆ ಯಾರೂ ಬೇಸರ ಮಾಡಿಕೊಳ್ಳೋದಿಲ್ಲ. ಯಾಕೆಂದ್ರೆ ಸತ್ಯ (Satya Hegde) ಹೆಗಡೆ ಎಲ್ಲರೂ ಒಪ್ಪಿಕೊಳ್ಳುವ ಕೆಲಸವನ್ನೆ ಸಿನಿಮಾಗಳಿಗಾಗಿಯೇ ಮಾಡ್ತಾರೆ. ಇದರ ಹೊರತಾಗಿ ಸತ್ಯ ಹೆಗಡೆ ತಮ್ಮದೇ ಒಂದು ಯುಟ್ಯೂಬ್ ಚಾನೆಲ್ ಮಾಡಿಕೊಂಡಿದ್ದಾರೆ. ಸತ್ಯ ಹೆಗಡೆ (Satya Hegde Studios) ಸ್ಟುಡಿಯೋಸ್ ಅನ್ನೋ ಈ ಯುಟ್ಯೂಬ್ ಚಾನೆಲ್ ನಲ್ಲಿ ಸುಮ್ನೆ ಏನೋ ಒಂದು ಕಂಟೆಂಟ್ ಅಪ್ಲೋಡ್ ಮಾಡೋದಿಲ್ಲ. ವೃತ್ತಿಪರ ಪ್ರೀತಿಯಿಂದಲೇ ಮಾಡಿರೋ ಸ್ವಂತ ಕಥೆಗಳ (Repairy Ramanna Kannada Short Film) ಪುಟ್ಟ ಸಿನಿಮಾಗಳನ್ನೆ ಪೋಸ್ಟ್ ಮಾಡುತ್ತಾರೆ. ಈ ಮೂಲಕ ತಮ್ಮ ಈ ಸತ್ಯ ಹೆಗಡೆ ಸ್ಟುಡಿಯೋಸ್ ನಲ್ಲಿ ಪ್ರತಿಭಾವಂತ ಕಲಾವಿದರಿಗೆ, ನಿರ್ದೇಶಕರಿಗೆ, ಕಥೆಗಾರರಿಗೆ ಅವಕಾಶ ಮಾಡಿಕೊಡ್ತಿದ್ದಾರೆ.
ಅದೇ ಒಂದು ನಿಟ್ಟಿನಲ್ಲಿಯೇ ಬಂದ ಸಿನಿಮಾನೇ ರಿಪೇರಿ ರಾಮಣ್ಣ ಸಿನಿಮಾ. ಈ ಪುಟ್ಟ ಸಿನಿಮಾದ ಇಂಪ್ಯಾಕ್ಟ್ ದೊಡ್ಡಮಟ್ಟದಲ್ಲಿಯೇ ಇದೆ. ಅದರ ಇತರ ಡಿಟೈಲ್ಸ್ ಇಲ್ಲಿದೆ ಓದಿ.
ರಿಪೇರಿ ರಾಮಣ್ಣ-ಇದು ಟೇಪ್ ರೆಕಾರ್ಡರ್ ಲವ್ ಸ್ಟೋರಿ
ರಿಪೇರಿ ರಾಮಣ್ಣ ಒಂದು ಪುಟ್ಟ ಸಿನಿಮಾ. ಇದನ್ನ ದೊಡ್ಡ ಸಿನಿಮಾದ ಕ್ವಾಲಿಟಿಯಲ್ಲಿಯೇ ತೆಗೆಯಲಾಗಿದೆ. ಇದನ್ನ ಯಾರೇ ನೋಡಿದ್ರೂ ಸರಿಯೇ. ಒಂದೊಮ್ಮೆ ಟೇಪ್ ರೆಕಾರ್ಡ್ ಕಾಲದ ಆ ದಿನಗಳಲ್ಲಿಗೆ ಜಾರೋದು ಗ್ಯಾರಂಟಿನೇ ನೋಡಿ.
ರಿಪೇರಿ ರಾಮಣ್ಣ ಸಿನಿಮಾದಲ್ಲಿ ಒಂದು ಅದ್ಭುತ ಲವ್ ಸ್ಟೋರಿ ಇದೆ. ಇದು ಟೇಪ್ ರೆಕಾರ್ಡ್ ನಿಂದಲೇ ಶುರು ಆಗುತ್ತದೆ ಅನ್ನೋದೆ ಕಥೆ. ಈ ಕಥೆಯ ಕಥಾನಾಯಕ ನಿಜಕ್ಕೂ ವಿಶೇಷವಾಗಿಯೇ ಇದ್ದಾರೆ. ಇದನ್ನ ಯೋಗರಾಜ್ ಭಟ್ಟರ ಮಾವ ದಿವಂಗತ ಸತ್ಯಣ್ಣ ಇಲ್ಲಿ ರಾಮಣ್ಣನ ಪಾತ್ರವನ್ನ ನಿರ್ವಹಿಸಿದ್ದಾರೆ.
ರಿಪೇರಿ ರಾಮಣ್ಣನ 1988 ರ ಲವ್ ಸ್ಟೋರಿ
ರಾಮಣ್ಣನ ಲವ್ ಸ್ಟೋರಿ ನಿಜಕ್ಕೂ ಮಜವಾಗಿಯೇ ಇದೆ. 1988 ರಲ್ಲಿ ಟೇಪ್ ರೆಕಾರ್ಡರ್ ಬಳಕೆ ಪೀಕ್ ನಲ್ಲಿಯೇ ಇತ್ತು. ಟೇಪ್ ರೆಕಾರ್ಡರ್ ಮತ್ತು ಕ್ಯಾಸೆಟ್ನ ಕಾಲವೂ ಇದಾಗಿತ್ತು. ಆಗಲೇ ಈ ಚಿತ್ರದ ಕಥಾನಾಯಕ ಒಂದು ಟೇಪ್ ರೆಕಾರ್ಡರ್ ಮತ್ತು ಕ್ಯಾಸೆಟ್ ಅಂಗಡಿ ಇಟ್ಟಿರುತ್ತಾನೆ. ಆಗಲೇ ನೋಡಿ ಅಲ್ಲಿಗೆ ಒಬ್ಬಳು ಸುಂದರಿ ಇಲ್ಲಿಗೆ ಬರೋದು. ಬಂದೋಳೆ ಕಿಶೋರ್ ಕುಮಾರ್ ಹಾಡುಗಳ ಕ್ಯಾಸೆಟ್ ಕೇಳೋದು.
ಹೀಗೆ ರಾಮಣ್ಣನ ಹುಡುಗಿ ಇಲ್ಲಿಯೇ ಸಿಗುತ್ತಾಳೆ. ಈಕೆ ಜೊತೆಗೆ ಲವ್ ಹೇಗೆ ಡೆವೆಲಪ್ ಆಗುತ್ತದೆ ಅನ್ನೋದೇ ವಿಶೇಷ. ಮುಂದೇ ಟೇಪ್ ರೆಕಾರ್ಡರ್ ಔಟ್ ಡೇಟೆಡ್ ಆಗೋ ಸಮಯದಲ್ಲಿ ರಾಮಣ್ಣ ಏನ್ ಮಾಡ್ತಾನೆ. ತನ್ನ ಲವ್ ಉಳಿಸಿಕೊಳ್ತಾನಾ? ಇಲ್ವಾ ಅನ್ನೋದೇ ಕುತೂಹಲ. ಇದನ್ನ ಹೇಳೋದಕ್ಕಿಂತಲೂ ನೋಡಿಯೇ ತಿಳಿದುಕೊಳ್ಳಬಹುದು.
ರಾಮಣ್ಣನ ಲವ್ ಸ್ಟೋರಿಯಲ್ಲಿ ಇನ್ನು ಏನೆಲ್ಲ ಇದೆ?
ರಿಪೇರಿ ರಾಮಣ್ಣನ ಸಿನಿಮಾದಲ್ಲಿ ಯುವಕ ರಾಮಣ್ಣನಾಗಿ ಪ್ರಶಾಂತ್ ಹಾಗೂ ಲವರ್ ಆಗಿ ವಿನುತಾ ಅಭಿನಯಿಸಿದ್ದಾರೆ. ಇವರ ಲವ್ ಸ್ಟೋರಿಯಲ್ಲಿ ಬೇಜಾನ್ ಟ್ವಿಸ್ಟ್ಗಳೇನೂ ಇಲ್ಲ. ನೀಟ್ ಆಗಿಯೇ ನಿಮ್ಮನ್ನ ಈ ಸಿನಿಮಾ 1988ರ ಕಾಲಕ್ಕೆ ಕರೆದುಕೊಂಡು ಹೋಗುತ್ತದೆ.
ಟೇಪ್ ರೆಕಾರ್ಡರ್ ಮತ್ತು ಕ್ಯಾಸೆಟ್ ಕಾಲದಲ್ಲಿ ನೀವು ಬಳಕೆ ಮಾಡಿದ ಆ ಕ್ಯಾಸೆಟ್ಗಳನ್ನೂ ಇದು ನೆನಪಿಸುವಂತೇನೆ ಇದೆ. ಲವ್ ಸ್ಟೋರಿಗಳು ಅಂದು ಕ್ಯಾಸೆಟ್ನಿಂದಲೇ ಶುರು ಆಗುತ್ತಿದ್ದವು. ಅಲ್ಲಿಯೇ ಮುಗಿದು ಹೋಗ್ತಿದ್ದವು ಅನ್ನೋ ಸತ್ಯವನ್ನೂ ಈ ಸಿನಿಮಾ ಹೇಳುವ ಕೆಲಸ ಕೂಡ ಮಾಡುತ್ತವೆ.
ರಿಪೇರಿ ರಾಮಣ್ಣ ಚಿತ್ರದ ಸ್ಟ್ರಾಂಗ್ ಡೈರೆಕ್ಷನ್ ವಿಭಾಗ
ರಿಪೇರಿ ರಾಮಣ್ಣ ಸಿನಿಮಾದ ಹಿಂದೆ ಅದ್ಭುತ ಡೈರೆಕ್ಷನ್ ವಿಭಾಗ ಇದೆ. ಈ ವಿಭಾಗದಲ್ಲಿ ಗಣೇಶ್ ಎಸ್.ವಾಲಿ, ಹಿತೇಶ್, ತಿಲಕ್ ಕುಮಾರ್ ಇದ್ದಾರೆ. ಇವರ ಕೆಲಸ ಇಲ್ಲಿ ಎದ್ದು ಕಾಣುತ್ತದೆ. ಇಡೀ ಚಿತ್ರದಲ್ಲಿ ರಿಪೇರಿ ರಾಮಣ್ಣನ ಕಥೆಯನ್ನ ಡೈರೆಕ್ಷನ್ ವಿಭಾಗ ಚೆನ್ನಾಗಿಯೇ ತೆರೆ ಮೇಲೆ ತಂದಿದೆ.
ಇದನ್ನೂ ಓದಿ: Keerthy Suresh: ಮಹಾ ನಟಿಯ ಫಿಟ್ನೆಸ್ ಮಂತ್ರ; ಕೀರ್ತಿ ಸುರೇಶ್ ಮನೆಯಲ್ಲೇ ಮಾಡ್ತಾರೆ ಮಸ್ತ್ ಯೋಗ!
ರಿಪೇರಿ ರಾಮಣ್ಣ ಸಿನಿಮಾದ ಕ್ಯಾಮೆರಾ ವರ್ಕ್ ಕೂಡ ಚೆನ್ನಾಗಿಯೇ ಆಗಿದೆ. ಸತ್ಯ ಹೆಗಡೆ ಕೂಡ ಒಬ್ಬ ನುರಿತ ಕ್ಯಾಮರಾಮನ್ ಅಲ್ವೇ? ಅದಕ್ಕೇನೆ ತಮ್ಮ ಚಿತ್ರದಲ್ಲಿ ಒಳ್ಳೆ ದೃಶ್ಯಗಳು ಬೇಕು ಅಂತಲೇ ನಿರೀಕ್ಷೆ ಮಾಡ್ತಾರೆ. ಅದೇ ರೀತಿನೋ ಏನೋ, ಈ ಚಿತ್ರಕ್ಕೆ ಅಚ್ಯುತ್ ಬಿ.ಎಸ್.ಮೂಲಕ ಒಳ್ಳೆ ದೃಶ್ಯಗಳನ್ನೆ ಬರೋ ಹಾಗೇನೆ ನೋಡಿಕೊಂಡಂತಿದೆ.
ಇನ್ನುಳಿದಂತೆ ಸಿನಿಮಾ ಈಗಾಗಲೇ ಯುಟ್ಯೂಬ್ನಲ್ಲಿ ರಿಲೀಸ್ ಆಗಿದೆ. ಜನ ಕೂಡ ಇದನ್ನ ಒಪ್ಪಿಕೊಂಡಿದ್ದಾರೆ. ಹಾಗಾಗಿಯೇ ಚಿತ್ರಕ್ಕೆ ಒಳ್ಳೆ ವೀವ್ಸ್ ಕೂಡ ಬಂದಿವೆ. ಹಾಗೇನೆ ಈ ಸಿನಿಮಾ ಒಂದು ಹೊಸ ರೀತಿಯ ಕಥೆನೆ ಆಗಿದ್ದು, ನೋಡುಗರಿಗೆ ಹಳೆ ದಿನಗಳನ್ನ ನೆನಪಿಸುವಂತೇನೆ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ