• Home
  • »
  • News
  • »
  • entertainment
  • »
  • Shivaji Surathkal: ಒಂದೇ ಸಿನಿಮಾ 4 ನಾಮಿನೇಷನ್! ಫಿಲ್ಮ್ ಫೇರ್ ಪ್ರಶಸ್ತಿಗೆ ಹೆಚ್ಚಿದ ಶಿವಾಜಿ ಸುರತ್ಕಲ್ ನಿರೀಕ್ಷೆ

Shivaji Surathkal: ಒಂದೇ ಸಿನಿಮಾ 4 ನಾಮಿನೇಷನ್! ಫಿಲ್ಮ್ ಫೇರ್ ಪ್ರಶಸ್ತಿಗೆ ಹೆಚ್ಚಿದ ಶಿವಾಜಿ ಸುರತ್ಕಲ್ ನಿರೀಕ್ಷೆ

ಫಿಲ್ಮ್ ಫೇರ್ ಪ್ರಶಸ್ತಿಗೆ ಹೆಚ್ಚಿದ ಶಿವಾಜಿ ಸುರತ್ಕಲ್ ನಿರೀಕ್ಷೆ

ಫಿಲ್ಮ್ ಫೇರ್ ಪ್ರಶಸ್ತಿಗೆ ಹೆಚ್ಚಿದ ಶಿವಾಜಿ ಸುರತ್ಕಲ್ ನಿರೀಕ್ಷೆ

ಶಿವಾಜಿ ಸುರತ್ಕಲ್ ಚಿತ್ರಕ್ಕೆ ಯಾವ ವಿಭಾಗದಲ್ಲಿ ಪ್ರಶಸ್ತಿ ಬಂದ್ರು ಖುಷಿನೇ. ಅದರಲ್ಲೂ ರಮೇಶ್ ಸರ್​ಗೆ ಅತ್ಯುತ್ತಮ ನಟ ಪ್ರಶಸ್ತಿ ಬಂದ್ರೆ, ಇಡೀ ತಂಡಕ್ಕೆ ಡಬಲ್ ಟ್ರಿಪಲ್ ಖುಷಿ ಆಗುತ್ತದೆ ಎಂದಿದ್ದಾರೆ ನಿರ್ದೇಶಕ ಆಕಾಶ್ ಶ್ರೀವತ್ಸ.

  • Share this:

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ (Bangalore) ಹೆಚ್ಚಿದ ಫಿಲ್ಮಂ ಫೇರ್ (Film Fair Award) ಪ್ರಶಸ್ತಿಯ ಕಲರವ. 2020-2021 ರ ಸಾಲಿನ ಪ್ರಶಸ್ತಿಗೆ ಸಜ್ಜಾಯಿತು ಬೃಹತ್ ವೇದಿಕೆ. ಹೌದು, ಬೆಂಗಳೂರು ಈಗ ಮುಂಬೈ ರೀತಿ ಪ್ರಶಸ್ತಿಗಳ ಸಡಗರಕ್ಕೆ ಸಾಕ್ಷಿ ಆಗುತ್ತಿದೆ. ಮೊನ್ನೆ ಸೈಮಾ (SIIMA) ಅವಾರ್ಡ್ ಇದೇ ಬೆಂಗಳೂರಿನಲ್ಲಿಯೇ ನಡೆಯಿತು. ಈಗ ಫಿಲ್ಮಂ ಫೇರ್ ಪ್ರಶಸ್ತಿಯ ಸಡಗರ ಶುರು ಆಗಿದೆ. ತುಮಕೂರು ರಸ್ತೆಯ ಅಂತಾರಾಷ್ಟ್ರೀಯ ಎಕ್ಸಿಬಿಷನ್ ಕೇಂದ್ರದಲ್ಲಿಯೇ ನಡೆಯುತ್ತಿದೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹೀಗೆ ದಕ್ಷಿಣದ ಅಷ್ಟೂ ಭಾಷೆಯ ಸಿನಿಮಾಗಳು ಇಲ್ಲಿ ಪ್ರಶಸ್ತಿಗೆ (Nomination) ನಾಮಿನೇಷನ್ ಆಗಿವೆ. ಇದರಲ್ಲಿ ಕನ್ನಡದ ಶಿವಾಜಿ ಸುರತ್ಕಲ್ ಸಿನಿಮಾನೂ ಇದೆ. ರಮೇಶ್ ಅರವಿಂದ್ ಚಿತ್ರ ಜೀವನದ ಈ ವಿಶೇಷ ಸಿನಿಮಾ ಬರೋಬ್ಬರಿ ನಾಲ್ಕು ವಿಭಾಗದಲ್ಲಿ ನಾಮಿನೇಷನ್ ಆಗಿದೆ. ಈ ಬಗ್ಗೆ ಚಿತ್ರದ ಡೈರೆಕ್ಟರ್ ಆಕಾಶ್ ಶ್ರೀವತ್ಸ ನ್ಯೂಸ್ 18 ಕನ್ನಡ ಜೊತೆಗೆ ನಾಮಿನೇಷನ್ ಆಗಿರೋ ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ.


ಕನ್ನಡದ ಶಿವಾಜಿ ಸುರತ್ಕಲ್ ಕನ್ನಡದ ಮಟ್ಟಿಗೆ ಒಂದು ವಿಶೇಷ ಸಿನಿಮಾ. ಚಿತ್ರದ ನಾಯಕ ನಟ ರಮೇಶ್ ಅರವಿಂದ್ ಚಿತ್ರ ಜೀವನದಲ್ಲಿ ಇದು ಅಷ್ಟೇ ಮಹತ್ವದ ಚಿತ್ರವೂ ಆಗಿದೆ. ಚಿತ್ರದ ವಿಭಿನ್ನ ಪಾತ್ರದ ಮೂಲಕ ಕನ್ನಡಗರ ಹೃದಯವನ್ನ ಹೀಗೂ ಗೆಲ್ಲಬಹುದು ಅಂತಲೇ ರಮೇಶ್ ಅರವಿಂದ್ ಇಲ್ಲಿ ತೋರಿಸಿಕೊಟ್ಟಿದ್ದಾರೆ.


ಶಿವಾಜಿ ಸುರತ್ಕಲ್ ಚಿತ್ರದಲ್ಲಿ ಸಾಕಷ್ಟು ಹೊಸ ವಿಚಾರಗಳು ಇವೆ. ಯುವ ನಿರ್ದೇಶಕ ಆಕಾಶ್ ಶ್ರೀವತ್ಸ ತಮ್ಮ ಈ ಚಿತ್ರವನ್ನ ಅಷ್ಟೇ ಅದ್ಭುತವಾಗಿಯೇ ತೆರೆಗೆ ತಂದಿದ್ದರು. ಈ ಬಗ್ಗೆ ಸ್ವತಃ ರಮೇಶ್ ಅರವಿಂದ್ ಕೂಡ ಹೇಳಿಕೊಂಡಿದ್ದರು.


Kannada Shivaji Suratkal Film Nominated for Film Fair in 4 Category
ಫಿಲ್ಮ್ ಫೇರ್ ನಾಲ್ಕು ವಿಭಾಗದಲ್ಲಿ ಸಿನಿಮಾ ನಾಮಿನೇಟ್


ಅಂತಹ ಈ ಚಿತ್ರ ಕಳೆದ 2 ವರ್ಷ ಹಿಂದೆ 2020 ಫೆಬ್ರವರಿ 21 ರಂದು ರಿಲೀಸ್ ಆಗಿತ್ತು. ತುಂಬಾ ಒಳ್ಳೆ ರೆಸ್ಪಾನ್ಸ್ ಕೂಡ ಪಡೆದಿತ್ತು. ಸೈಮಾ ಅವಾರ್ಡ್ಸ್ ನಲ್ಲೂ ಈ ಚಿತ್ರಕ್ಕೆ ಒಳ್ಳೆ ಪ್ರತಿಕ್ರಿಯೆ ಸಿಕ್ಕಿದೆ. ಅತ್ಯುತ್ತಮ ಡೆಬ್ಯೂ ಪ್ರೋಡ್ಯೂಸರ್ ಪ್ರಶಸ್ತಿನೂ ಈ ಚಿತ್ರಕ್ಕೆ ಬಂದಿದೆ.


ಶಿವಾಜಿ ಸುರತ್ಕಲ್ ಚಿತ್ರಕ್ಕೆ ಪ್ರಶಂಸೆ ಮತ್ತು ಪ್ರಶಸ್ತಿ ಸುರಿಮಳೆ
ಬೆಂಗಳೂರು ಇಂಟರ್​ನ್ಯಾಷನಲ್ ಫಿಲ್ಮಂ ಫೆಸ್ಟಿವಲ್ ನಲ್ಲೂ ಎರಡನೇಯ ಅತ್ಯುತ್ತಮ ಸಿನಿಮಾ ಎಂಬ ಪ್ರಶಸ್ತಿನೂ ಬಂದಿದೆ. ಪತ್ರಕರ್ತರೆ ಕೊಡುವ ಚಂದನವನ ಕ್ರಿಟಿಕ್ ಅವಾರ್ಡ್ಸ್ ಕೂಡ ಬಂದಿದೆ. ಹೀಗೆ ಪ್ರಶಸ್ತಿ ಮತ್ತು ಪ್ರಶಂಸೆಯನ್ನ ಪಡೆದ ಈ ಚಿತ್ರ ಈಗ ಫಿಲ್ಮ್ ಫೇರ್ ಪ್ರಶಸ್ತಿಗೂ ನಾಮಿನೇಟ್ ಆಗಿದೆ.


ಇದನ್ನೂ ಓದಿ: Big Boss Anupama Gowda: ಪ್ರ್ಯಾಂಕ್ ರಾಣಿ ಅನುಪಮಾ ಗೌಡ - ಇದು ಸೀಕ್ರೆಟ್ ಟಾಸ್ಕಾ ಇಲ್ಲ ಇದೂ ನಕಲಿಯಾ?


ಫಿಲ್ಮಂ ಫೇರ್ ನಾಲ್ಕು ವಿಭಾಗದಲ್ಲಿ ಶಿವಾಜಿ ಸುರತ್ಕಲ್ ನಾಮಿನೇಟ್
ಶಿವಾಜಿ ಸುರತ್ಕಲ್ ಸಿನಿಮಾ 2020-21 ನೇ ಸಾಲಿನ ಪ್ರಶಸ್ತಿಗೆ ನಾಮಿನೇಟ್ ಆಗಿದೆ. ಅತ್ಯುತ್ತಮ ಸಿನಿಮಾ, ಅತ್ಯುತ್ತಮ ಡೈರೆಕ್ಟರ್, ಅತ್ಯುತ್ತಮ ನಾಯಕ ನಟ, ಅತ್ಯುತ್ತಮ ಪೋಷಕ ನಟಿ. ಹೀಗೆ ನಾಲ್ಕು ಕೆಟಗರಿಗೆ ಶಿವಾಜಿ ಸುರತ್ಕಲ್ ನಾಮಿನೇಟ್ ಆಗಿದೆ.


Kannada Shivaji Suratkal Film Nominated for Film Fair in 4 Category
ಫಿಲ್ಮ್ ಫೇರ್ ಪ್ರಶಸ್ತಿಗೆ ಹೆಚ್ಚಿದ ಶಿವಾಜಿ ಸುರತ್ಕಲ್ ನಿರೀಕ್ಷೆ


ನಾಮಿನೇಷನ್ ಬಗ್ಗೆ ಏನ್​ ಅಂತಾರೆ ಡೈರೆಕ್ಟರ್ ಆಕಾಶ್ ಶ್ರೀವತ್ಸ
ಶಿವಾಜಿ ಸುರತ್ಕಲ್ ಚಿತ್ರ ಫಿಲ್ಮ್ ಫೇರ್ ಗೆ ನಾಮಿನೇಷನ್ ಆಗಿರೋದು ಖುಷಿ ತಂದಿದೆ. ಒಬ್ಬ ನಿರ್ದೇಶಕನಾಗಿ ಫಿಲ್ಮ್ ಫೇರ್ ಪ್ರಶಸ್ತಿ ನಾಮಿನೇಷನ್ ಇದೇ ಮೊದಲಾಗಿದೆ. ಸಿನಿಮಾ ನಾಮಿನೇಷನ್ ಆಗಿರೋದೇ ದೊಡ್ಡ ಸಂತೋಷ ತಂದಿದೆ ಅಂತಲೇ ಆಕಾಶ್ ಶ್ರೀವತ್ಸ ತಿಳಿಸಿದ್ದಾರೆ.


ನಿಮ್ಮ ಚಿತ್ರಕ್ಕೆ ಯಾವ ಕೆಟಗರಿಯಲ್ಲಿ ಪ್ರಶಸ್ತಿ ಬರಬಹುದು?
ಶಿವಾಜಿ ಸುರತ್ಕಲ್ ಚಿತ್ರಕ್ಕೆ ಯಾವ ವಿಭಾಗದಲ್ಲಿ ಪ್ರಶಸ್ತಿ ಬಂದ್ರು ಖುಷಿನೇ. ಅದರಲ್ಲೂ ರಮೇಶ್ ಸರ್​ಗೆ ಅತ್ಯುತ್ತಮ ನಟ ಪ್ರಶಸ್ತಿ ಬಂದ್ರೆ ಇಡೀ ತಂಡಕ್ಕೆ ಡಬಲ್ ಟ್ರಿಪಲ್ ಖುಷಿ ಅಂತಲೇ ಆಕಾಶ್ ಶ್ರೀವತ್ಸ ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: Kantara Movie: ರಿಷಬ್ ಸಿನಿಮಾಗಳಲ್ಲಿ ಶೆಟ್ಟಿಗಳಿಗೆ ಮಾತ್ರ ಅವಕಾಶ? ನಟ ಏನಂದ್ರು?


ಭಾನುವಾರ ನಾಳೆ ಸಂಜೆ ಫಿಲ್ಮಂ ಫೇರ್ ಪ್ರಶಸ್ತಿ ಸಮಾರಂಭ
ನಾಳೆ ಸಂಜೆ ಫಿಲ್ಮಂ ಫೇರ್ ಪ್ರಶಸ್ತಿ ಸಮಾರಂಭ ಇದೆ. ನಮ್ಮ ಸಿನಿಮಾ ನಾಲ್ಕು ವಿಭಾಗದಲ್ಲಿ ನಾಮಿನೇಟ್ ಆಗಿದೆ ಅನ್ನೋ ವಿಷಯ ಇಂದು ಬೆಳಗ್ಗೆ ತಿಳಿಯಿತು. ತುಂಬಾ ಖುಷಿಯಲ್ಲಿಯೇ ಇದ್ದೇನೆ ಎಂದು ಡೈರೆಕ್ಟರ್ ಆಕಾಶ್ ಶ್ರೀವತ್ಸ ಹೇಳಿದರು.


ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಮೊದಲ ಬಾರಿಗೆ ನಾಮಿನೇಟ್ ಆಗಿದ್ದು, ಪ್ರಶಸ್ತಿ ಒಂದು ನಿರೀಕ್ಷೆಯಲ್ಲಿಯೇ ಈಗ ನಮ್ಮ ಜೊತೆಗೆ ತಮ್ಮ ಅಭಿಪ್ರಾಯವನ್ನ ಹಂಚಿಕೊಂಡಿದ್ದಾರೆ.

First published: