ಸ್ಯಾಂಡಲ್‌ವುಡ್ ಚೆಲುವೆ ಸಂಗೀತಾ ಶೃಂಗೇರಿ (Shivaji Surathkal-2 Movie) ಮೊಟ್ಟ ಮೊದಲ ಬಾರಿಗೆ ಒಂದು ಕಲರ್ ಫುಲ್ ಸ್ಪೆಷಲ್ ಸಾಂಗ್ ಮಾಡಿದ್ದಾರೆ. ಶಿವಾಜಿ ಸುರತ್ಕಲ್ ಚಿತ್ರದಲ್ಲಿ ಈ ಒಂದು ಸ್ಪೆಷಲ್ ಸಾಂಗ್ ಇರೋದು. ನಿರ್ದೇಶಕ ಆಕಾಶ್ ಶ್ರೀವತ್ಸ ಮೊದಲೇ (Ramesh Aravind New Movie) ಪ್ಲಾನ್ ಮಾಡಿದಂತೆ, ಮಾರ್ಚ್-15 ರಂದು ಸಂಜೆ 6 ಗಂಟೆಗೆ ಈ ಒಂದು ವಿಶೇಷ ಸಾಂಗ್ ರಿಲೀಸ್ ಆಗಿದೆ. ಟ್ವಿಂಕಲ್ ಟ್ವಿಂಕಲ್ (Sangeetha Sringeri Latest Updates) ಅಂತಲೇ ಸಾಗೋ ಈ ಹಾಡು ಮಜವಾಗಿದೆ. ಇದನ್ನ ಕೇಳಿದ್ರೆ ಆ ದಿನಗಳ ಕ್ಲಬ್ ಡ್ಯಾನ್ಸ್ ನೋಡಿದಂತೆ ಆಗುತ್ತದೆ. ಕೋರಿಯೋಗ್ರಾಫರ್ ಧನಂಜಯ್ ನೃತ್ಯ ನಿರ್ದೇಶನದಲ್ಲಿ (Shivaji Surathkal-2 Song Release) ಈ ಗೀತೆ ಮೂಡಿ ಬಂದಿದೆ. ವಿಷ್ಯೂಲಿ ಸಖತ್ ಕಲರ್‌ಫುಲ್ ಅನಿಸೋ ಈ ಗೀತೆ ವಿಶ್ಲೇಷಣೆ ಇಲ್ಲಿದೆ ಓದಿ.
ಟ್ವಿಂಕಲ್ ಟ್ವಿಂಕಲ್ ಸಖತ್ ಸಂಗೀತಾ ಶೃಂಗೇರಿ ಕಿಕ್
ಶಿವಾಜಿ ಸುರತ್ಕಲ್ ಸಿನಿಮಾ ಎರಡನೇ ಭಾಗ ರಿಲೀಸ್ ಆಗುತ್ತಿದೆ. ಏಪ್ರಿಲ್-14 ರಂದು ಚಿತ್ರವನ್ನ ರಿಲೀಸ್ ಮಾಡೋಕೆ ಸಿನಿಮಾ ಟೀಮ್ ಪ್ಲಾನ್ ಮಾಡಿದೆ. ಇದರ ಬೆನ್ನಲ್ಲಿಯೇ ಈಗ ಶಿವಾಜಿ ಸುರತ್ಕಲ್-2 ಸಿನಿಮಾದ ಸ್ಪೆಷಲ್ ಸಾಂಗ್ ರಿಲೀಸ್ ಆಗಿದೆ.
ಟ್ವಿಂಕಲ್ ಟ್ವಿಂಕಲ್ ಅಂತಲೇ ಸಾಗೋ ಈ ಗೀತೆಯಲ್ಲಿ ಚಾರ್ಲಿ ಬೆಡಗಿ ಸಂಗೀತಾ ಶೃಂಗೇರಿ ಕಾಣಿಸಿಕೊಂಡಿದ್ದಾರೆ. ಇಡೀ ಹಾಡಲ್ಲಿ ಸಂಗೀತ ಮತ್ತು ಸಹ ನೃತ್ಯಗಾರರು ಕಾಣಿಸುತ್ತಾರೆ. ಕಲರ್ ಫುಲ್ ಆಗಿರೋ ಈ ಗೀತೆ ರೆಟ್ರೋ ಫೀಲ್ ಅಲ್ಲಿಯೇ ಇದೆ. ಆ ದಿನಗಳಲ್ಲಿ ಕ್ಲಬ್ ಡ್ಯಾನ್ಸ್ ಹೇಗಿರುತ್ತದೆಯೋ ಹಾಗೇನೆ ಈ ಒಂದು ಹಾಡು ನಿಮಗೆ ಫೀಲ್ ಕೊಡುತ್ತದೆ.
ಚಾರ್ಲಿ ಬೆಡಗಿ ಸಂಗೀತಾ ಶೃಂಗೇರಿ ಸಖತ್ ಟ್ವಿಂಕಲ್ ಕಿಕ್
ಟ್ವಿಂಕಲ್ ಟ್ವಿಂಕಲ್ ಯಾಕೋ ನನ್ನ ಸ್ಟಾರ್ ಬಂದಿಲ್ಲ. ಸಿಂಗಲ್ ಸಿಂಗಲ್ ಆಗಿ ಹೋಯಿತು ನನ್ನ ಜೀವನ ಅಂತಲೇ ಪಲ್ಲವಿ ಸಾಗುತ್ತದೆ. ಜುಡಾ ಸ್ಯಾಂಡಿ ಸಂಗೀತದ ಈ ಗೀತೆ ಹೊಸ ರೀತಿ ಫೀಲ್ ಕೊಡುತ್ತದೆ. ಇದನ್ನ ಕೇಳಿದರೆ ಕಿಕ್ಕು ಇದೆ. ಇನ್ನೂ ಒಂದು ಕಡೆಗೆ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ಬರುವ ಹಾಡಿನಂತೇನೂ ನಿಮಗೆ ಇದು ಫೀಲ್ ಆಗುತ್ತದೆ.
ಚಿತ್ರದ ಈ ಸ್ಪೆಷಲ್ ಸಾಂಗ್ ನಲ್ಲಿ ರಮೇಶ್ ಅರವಿಂದ್ ಕೂಡ ಇದ್ದಾರೆ. ಆದರೆ ಅವರ ಪಾತ್ರ ಇಲ್ಲಿ ಬೇರೆ ರೀತಿನೆ ಎಂಟ್ರಿ ಕೊಡುತ್ತದೆ. ಅದಕ್ಕೂ ಮೊದಲು ಸಂಗೀತಾ ಶೃಂಗೇರಿ ಅವರ ನೃತ್ಯವನ್ನ ವಿನಾಯಕ್ ಜೋಶಿ ಅವರ ಪಾತ್ರ ಎಂಜಾಯ್ ಮಾಡುತ್ತಿರುತ್ತದೆ.
ಚಿತ್ರದ ಡೈರೆಕ್ಟರ್ ಆಕಾಶ್ ಶ್ರೀವತ್ಸ ಬರೆದ ಸ್ಪೆಷಲ್ ಸಾಂಗ್
ತುಂಬಾ ವಿಶೇಷ ಅನಿಸೋ ಈ ಹಾಡನ್ನ ಚಿತ್ರದ ನಿರ್ದೇಶಕ ಆಕಾಶ್ ಶ್ರೀವತ್ಸ ಬರೆದಿದ್ದಾರೆ. ಇಷಾ ಸುಚಿ ಈ ಒಂದು ಗೀತೆಯನ್ನ ಹಾಡಿದ್ದಾರೆ. ಜುಡಾ ಸ್ಯಾಂಡಿ ಕೂಡ ಕೊನೆಯಲ್ಲಿ ಈ ಹಾಡನ್ನ ಹಾಡಿದ್ದಾರೆ. ತುಂಬಾ ಇಂಟ್ರಸ್ಟಿಂಗ್ ಅನಿಸೋ ಈ ಹಾಡು ಎಲ್ಲರೂ ಕೇಳುವಂತೆ ಕೂಡ ಇದೆ.
ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಹಾಡಿಗೆ ಇಲ್ಲಿ ಬೇರೆ ರೂಪವೇ ಸಿಕ್ಕಿದೆ. ಚಿತ್ರದ ಒಟ್ಟು ಓಟದಲ್ಲಿ ಒಂದು ಸಣ್ಣ ಜಾಗ ಸಿಕ್ಕಿದೆ. ಇಲ್ಲಿ ಹಾಡನ್ನ ಹಾಕಿದ್ರೆ ಮಜವಾಗಿರುತ್ತದೆ ಅನ್ನುವ ಅಭಿಪ್ರಾಯ ಬಂದಿದೆ. ಈ ಹಿನ್ನೆಲೆಯಲ್ಲಿ ಡೈರೆಕ್ಟರ್ ಆಕಾಶ್ ಶ್ರೀವತ್ಸ ಮತ್ತು ಸಂಗೀತ ನಿರ್ದೇಶಕ ಜುಡಾ ಸ್ಯಾಂಡಿ ಈ ಹಾಡನ್ನ ಪ್ಲಾನ್ ಮಾಡಿದ್ದರು.
ಟ್ವಿಂಕಲ್ ಟ್ವಿಂಕಲ್ ಹಾಡಲ್ಲಿ ರಮೇಶ್ ಅರವಿಂದ್ ಸಖತ್ ಎಂಟ್ರಿ!
ಪ್ಲಾನ್ ಮಾಡಿದಂತೆ ಚಿತ್ರದ ಈ ಒಂದು ಗೀತೆಯನ್ನ ರೆಡಿ ಮಾಡಿಕೊಂಡಿದ್ದರು. ಚಿತ್ರದ ನಿರ್ಮಾಪಕರಾದ ಅನೂಪ್ ಗೌಡರ ರೆಸಾರ್ಟ್‌ನಲ್ಲಿಯೇ ಎರಡು ದಿನದವರೆಗೂ ಈ ಗೀತೆಯನ್ನ ಚಿತ್ರೀಕರಿಸಿದ್ದಾರೆ. ವಿಶೇಷವೆಂದ್ರೆ ಹಾಡಿನ ಕೊನೆಯಲ್ಲಿ ರಮೇಶ್ ಅರವಿಂದ್ ಅವರ ಎಂಟ್ರಿ ಕೂಡ ಆಗುತ್ತದೆ. ಅದು ಮಜವಾಗಿದೆ ಅಂತಲೇ ಹೇಳಬಹುದು.
ಇದನ್ನೂ ಓದಿ: Priyanka Chopra: ಶಾರುಖ್ ಖಾನ್ಗೆ ಟಾಂಗ್ ಕೊಟ್ಟ ದೇಸಿ ಗರ್ಲ್
ಈ ಮೂಲಕ ಶಿವಾಜಿ ಸುರತ್ಕಲ್-2 ಸಿನಿಮಾ ತನ್ನ ಪ್ರಚಾರವನ್ನ ಆರಂಭಿಸಿದೆ. ಸಿನಿಮಾದ ಬಗ್ಗೆ ಇಲ್ಲಿವರೆಗೂ ಇದ್ದ ಒಂದು ಕುತೂಹಲಕ್ಕೆ ಈ ಹಾಡು ಕಲರ್‌ಫುಲ್ ಕಿಕ್ ಕೊಡುವಂತಿದೆ ಅಂತಲೇ ಹೇಳಬಹುದು. ಹಾಡಿನ ವಿಡಿಯೋವನ್ನ ಸಿನಿಮಾ ತಂಡ ಈಗ ರಿಲೀಸ್ ಮಾಡಿದೆ. ಇನ್ನುಳಿದಂತೆ ಚಿತ್ರ ಏಪ್ರಿಲ್-14 ರಂದು ರಿಲೀಸ್ ಆಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ