Ramesh Aravind: ಶಿವಾಜಿ ಸುರತ್ಕಲ್ ರಿಲೀಸ್ ಡೇಟ್ ಫಿಕ್ಸ್! ಇಲ್ಲಿದೆ ಫುಲ್ ಡೀಟೆಲ್ಸ್

ಸೋಷಿಯಲ್ ಮೀಡಿಯಾ ಮೂಲಕ ಚಿತ್ರದ ರಿಲೀಸ್ ದಿನ ಪ್ರಕಟ

ಸೋಷಿಯಲ್ ಮೀಡಿಯಾ ಮೂಲಕ ಚಿತ್ರದ ರಿಲೀಸ್ ದಿನ ಪ್ರಕಟ

ಸೋಷಿಯಲ್ ಮೀಡಿಯಾದ ತಮ್ಮ ಪೇಜ್ ಮೂಲಕವೇ ಶಿವಾಜಿ ಸುರತ್ಕಲ್-2 ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ. ಚಿತ್ರದ ರಿಲೀಸ್ ಡೇಟ್ ಅನ್ನ ಶೀಘ್ರದಲ್ಲಯೇ ಅನೌನ್ಸ್ ಮಾಡುತ್ತೇವೆ ಅನ್ನೋ ಅರ್ಥದಲ್ಲಿಯೇ ಆಕಾಶ್ ಶ್ರೀವತ್ಸ ಈ ಹಿಂದೇನೆ ನ್ಯೂಸ್-18 ಕನ್ನಡ ಡಿಜಿಟಲ್‌ಗೆ ತಿಳಿಸಿದ್ದರು.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ಕನ್ನಡ ಚಿತ್ರರಂಗ ತ್ಯಾಗರಾಜ್ ಎಂದೇ (Shivaji Surathkal Movie Updates) ಕರೆಸಿಕೊಳ್ತಿದ್ದ ನಟ-ನಿರ್ದೇಶಕ ರಮೇಶ್ ಅರವಿಂದ್ ಅವರು ಹೊಸ ರೀತಿಯ ಚಿತ್ರಗಳಿಗೆ ತೆರೆದುಕೊಳ್ತಾರೆ. ಶಿವಾಜಿ ಸುರತ್ಕಲ್ ಆ ಸಾಲಿನ ಒಂದು ಅದ್ಭುತ (Ramesh Aravind Movie) ಚಿತ್ರವೇ ಆಗಿದೆ. ಬೇರೆ ರೀತಿಯ ಸಿನಿಮಾಗಳನ್ನ ಜನ ಸ್ವೀಕರಿಸುತ್ತಾರೆ ಅನ್ನುವ ವಿಷಯ ರಮೇಶ್ ಅರವಿಂದ್ ಅವರಿಗೆ ಈಗಾಗಲೇ ತಿಳಿದಿದೆ. ಶಿವಾಜಿ ಪಾತ್ರದಲ್ಲಿ ಶಿವಾಜಿ ಸುರತ್ಕಲ್ (Shivaji Surathkal Film Updates) ಚಿತ್ರದಲ್ಲಿ ಎಲ್ಲರ ಮನವನ್ನ ಗೆದ್ದಿರೋ ರಮೇಶ್ ಅರವಿಂದ್ ಅವರು, ತಮ್ಮ ಈ ಸರಣಿ ಚಿತ್ರದಲ್ಲಿ ವಿಭಿನ್ನವಾಗಿಯೇ ಕಾಣಿಸಿಕೊಂಡಿದ್ದಾರೆ. ಚಿತ್ರದ ಮೂಲಕ ಒಬ್ಬ ಡಿಟೆಕ್ಟಿವ್ ಆಗಿಯೂ ಕಂಗೊಳಿಸಿದ್ದಾರೆ. ಶಿವಾಜಿ ಸುರತ್ಕಲ್ ಚಿತ್ರದಲ್ಲಿ ರಮೇಶ್ ಅರವಿಂದ್ (Shivaji Surathkal-2 Cinema) ಅಭಿನಯ ಸೂಪರ್ ಆಗಿದೆ.


ಜನ ಈ ಚಿತ್ರವನ್ನ ದೊಡ್ಡ ಪರದೆ ಮೇಲೂ ನೋಡಿದ್ದಾರೆ. ಚಿಕ್ಕಪರದೆ ಮೇಲೂ ನೋಡಿ ಖುಷಿ ಪಟ್ಟಿದ್ದಾರೆ. ಈಗ ಶಿವಾಜಿ ಸುರತ್ಕಲ್-2 ಸಿನಿಮಾದ ಸರದಿ ಬಂದಿದೆ.


Kannada Shivaji Surathkal-2 Cinema Release Date Announced
ಏಪ್ರಿಲ್-14 ರಂದು ಶಿವಾಜಿ ಸುರತ್ಕಲ್-2 ಸಿನಿಮಾ ರಿಲೀಸ್!


ಶಿವಾಜಿ ಸುರತ್ಕಲ್-2 ಸಿನಿಮಾ ಸ್ಪೆಷಲ್ ಆಗಿಯೇ ಇದೆ. ಈ ಚಿತ್ರದಲ್ಲಿ ಪೊಲೀಸ್ ಆಫೀಸರ್ ಶಿವಾಜಿ 103 ಕೇಸ್ ಹಿಂದೆ ಬಿದ್ದಿದ್ದಾರೆ. ಈ ಕೇಸ್ ಬಗೆಹರಿಸೋದೇ ಈ ಸಿನಿಮಾದ ಒಟ್ಟು ತಿರುಳಾಗಿದೆ. ಅದನ್ನ ಅದ್ಭುತವಾದ ಬ್ಯಾಗ್ರೌಂಡ್ ಸ್ಕೋರ್ ಮೂಲಕ ಇಲ್ಲಿ ತೋರಲಾಗುತ್ತಿದೆ.




ಸೋಷಿಯಲ್ ಮೀಡಿಯಾ ಮೂಲಕ ಚಿತ್ರದ ರಿಲೀಸ್ ದಿನ ಪ್ರಕಟ


ಡೈರೆಕ್ಟರ್ ಆಕಾಶ್ ಶ್ರೀವತ್ಸ ಈ ಚಿತ್ರದಲ್ಲಿ ಕಥೆಯನ್ನ ವಿಭಿನ್ನವಾಗಿ ಹೇಳುತ್ತಿದ್ದಾರೆ. ಟೆಕ್ನಿಕಲಿ ತುಂಬಾ ಸ್ಟ್ರಾಂಗ್ ಆಗಿಯೇ ಈ ಸಲ ಶಿವಾಜಿಯ ಕಥೆಯನ್ನ ಬೆಳ್ಳಿತೆರೆಗೆ ತರುತ್ತಿದ್ದಾರೆ. ಆಕಾಶ್ ಶ್ರೀವತ್ಸ ಅವರ ಕನಸಿಗೆ ಸಂಗೀತ ನಿರ್ದೇಶಕ ಜುಡಾ ಸ್ಯಾಂಡಿ ಸಾಥ್ ಕೊಟ್ಟಿದ್ದಾರೆ.


ಜುಡಾ ಸ್ಯಾಂಡಿ ಮತ್ತು ಆಕಾಶ್ ಜೊತೆಗೂಡಿ ಚಿತ್ರಕ್ಕೆ ಒಂದು ಹಾಡನ್ನ ಪ್ಲಾನ್ ಮಾಡಿದ್ದರು. ಸಂಗೀತಾ ಶೃಂಗೇರಿ ಅಭಿನಯದ ಈ ಸ್ಪೆಷಲ್ ಹಾಡನ್ನ ಸ್ವತಃ ಆಕಾಶ್ ಶ್ರೀವತ್ಸ ಬರೆದಿದ್ದಾರೆ. ಎರಡು ದಿನಗಳ ಕಾಲ ಈ ಹಾಡನ್ನ ಕೋರಿಯೋಗ್ರಾಫರ್ ಧನಂಜಯ್ ಚಿತ್ರಿಕರಿಸಿಕೊಟ್ಟಿದ್ದಾರೆ.


ಶಿವಾಜಿ ಸುರತ್ಕಲ್-2 ಸಿನಿಮಾ ರಿಲೀಸ್ ಡೇಟ್ ಅನೌನ್ಸ್


ಶಿವಾಜಿ ಸುರತ್ಕಲ್-2 ಚಿತ್ರದಲ್ಲಿ ಈ ಒಂದು ಸ್ಪೆಷಲ್ ಸಾಂಗ್ ವಿಶೇಷವಾಗಿಯೇ ಗಮನ ಸೆಳೆಯಲಿದೆ. ಇದನ್ನ ಒಂದ್ ಒಳ್ಳೆ ಜಾಗದಲ್ಲಿಯೇ ಚಿತ್ರದಲ್ಲಿ ಪ್ಲೇಸ್ ಮಾಡಲಾಗುತ್ತಿದೆ. ಚಿತ್ರದ ಬಹುತೇಕ ಕೆಲಸವನ್ನ ಪೂರ್ಣಗೊಳಿಸಿರೋ ಡೈರೆಕ್ಟರ್ ಆಕಾಶ್ ಶ್ರೀವತ್ಸ, ಈಗ ರಿಲೀಸ್ ಡೇಟ್ ಅನ್ನ ಕೂಡ ಅನೌನ್ಸ್ ಮಾಡಿದ್ದಾರೆ.


ಸೋಷಿಯಲ್ ಮೀಡಿಯಾದ ತಮ್ಮ ಪೇಜ್ ಮೂಲಕವೇ ಶಿವಾಜಿ ಸುರತ್ಕಲ್-2 ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ. ಚಿತ್ರದ ರಿಲೀಸ್ ಡೇಟ್‌ನ್ನ ಶೀಘ್ರದಲ್ಲಿಯೇ ಅನೌನ್ಸ್ ಮಾಡುತ್ತೇವೆ ಅನ್ನೋ ಅರ್ಥದಲ್ಲಿಯೇ ಆಕಾಶ್ ಶ್ರೀವತ್ಸ ಈ ಹಿಂದೇನೆ ನ್ಯೂಸ್-18 ಕನ್ನಡ ಡಿಜಿಟಲ್‌ಗೆ ತಿಳಿಸಿದ್ದರು.


ಏಪ್ರಿಲ್-14 ರಂದು ಶಿವಾಜಿ ಸುರತ್ಕಲ್-2 ಸಿನಿಮಾ ರಿಲೀಸ್!


ಶಿವಾಜಿ ಸುರತ್ಕಲ್-2 ಸಿನಿಮಾವನ್ನ ಇದೇ ವರ್ಷ ರಿಲೀಸ್ ಮಾಡೋಕೆ ಪ್ಲಾನ್ ಮಾಡಲಾಗಿದೆ. ಆದರೆ ಅದು ಈಗಲೇ ಅಲ್ಲ ಅನ್ನೋದು ಕೂಡ ಅಷ್ಟೇ ಸತ್ಯವಾದ ಮಾತಾಗಿದೆ. ಹಾಗಾಗಿಯೇ ಮುಂದಿನ ತಿಂಗಳು ಏಪ್ರಿಲ್-14 ರಂದು ಶಿವಾಜಿ ಸುರತ್ಕಲ್ ಚಿತ್ರವನ್ನ ರಿಲೀಸ್ ಮಾಡೋಕೆ ಪ್ಲಾನ್ ಮಾಡಲಾಗಿದೆ.


Kannada Shivaji Surathkal-2 Cinema Release Date Announced
ರಮೇಶ್ ಅರವಿಂದ್ ಅವರಿಗೆ ಏಪ್ರಿಲ್-14 ಯಾಕೆ ಸ್ಪೆಷಲ್ ಗೊತ್ತೇ


ಶಿವಾಜಿ ಸುರತ್ಕಲ್-2 ಚಿತ್ರವನ್ನ ರಾಜ್ಯಾದ್ಯಂತ ರಿಲೀಸ್ ಮಾಡೋ ಪ್ಲಾನ್ ಆಗಿದೆ. ಏಪ್ರಿಲ್-14 ರಂದು ತೆರೆಗೆ ಬರ್ತಿರೋ ಈ ಚಿತ್ರದ ಬಗ್ಗೆ ನಿರೀಕ್ಷೆ ಇದೆ. ಈ ಹಿಂದೆ ಶಿವಾಜಿ ಸುರತ್ಕಲ್ ಸಿನಿಮಾ ಜನರ ಮನಸನ್ನ ಕದ್ದಿದೆ.


ಇದನ್ನೂ ಓದಿ: Yuva Movie: 'ಯುವ' ರಾಜನನ್ನು ಕಣ್ಣಲ್ಲೇ ಕೊಲ್ತಿದ್ದಾರೆ ಸಪ್ತಮಿ ಗೌಡ; ಇಬ್ಬರ ಸಖತ್ ಫೋಟೋಸ್ ವೈರಲ್


ಈ ಹಿನ್ನೆಲೆಯಲ್ಲಿ ಶಿವಾಜಿ ಸುರತ್ಕಲ್-2 ಸಿನಿಮಾದ ಕುರಿತು ಇನ್ನಿಲ್ಲದಂತಹ ನಿರೀಕ್ಷೆ ಹುಟ್ಟಿದೆ. ಇದರ ಜೊತೆಗೆ ಈ ಸಲದ ಪಾತ್ರಧಾರಿಗಳ ಅಭಿನಯ ಹೇಗಿರುತ್ತದೆ ಅನ್ನುವ ಕುತೂಹಲ ಕೂಡ ಇದೆ.


ಮೇಘನಾ ಗಾಂವ್ಕರ್ ಚಿತ್ರದಲ್ಲಿ ಪೊಲೀಸ್ ಆಫೀಸರ್ ಆಗಿದ್ದಾರೆ. ನಾಸರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಗೀತ ಶೃಂಗೇರಿ ಅವರ ಸ್ಪೆಷಲ್ ಸಾಂಗ್ ಹೇಗಿರುತ್ತದೆ ಅನ್ನುವ ಕುತೂಹಲವು ಇದೆ.

First published: