Actress Archana Jois: ಶಿವಣ್ಣನ ಜೊತೆ ನಟಿಸುತ್ತಿದ್ದಾರೆ 'ಕೆಜಿಎಫ್‌ ರಾಕಿ ಭಾಯ್‌' ಅಮ್ಮ!

ಶಿವಣ್ಣನ ಚಿತ್ರದಲ್ಲಿ ಅರ್ಚನಾ

ಶಿವಣ್ಣನ ಚಿತ್ರದಲ್ಲಿ ಅರ್ಚನಾ

ಘೋಸ್ಟ್ ಚಿತ್ರದಲ್ಲಿ ಅರ್ಚನಾ ಪತ್ರಕರ್ತೆಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇಡೀ ಚಿತ್ರದಲ್ಲಿ ಅರ್ಚನಾ ಇರುತ್ತಾರೆ ಅನ್ನೋ ಮಾಹಿತಿ ಕೂಡ ಇದೆ. ಈಗಾಗಲೇ ಅರ್ಚನಾ ತಮ್ಮ ಪಾತ್ರದ ಚಿತ್ರೀಕರಣವನ್ನ ಕೂಡ ಪೂರ್ಣಗೊಳಿಸಿದ್ದಾರೆ ಅನ್ನೋ ವಿಷಯ ಕೂಡ ಈಗ ಹರಿದಾಡುತ್ತಿದೆ.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್ (Shiva Rajkumar) ಅಭಿನಯದ ಘೋಸ್ಟ್ (Ghost Movie Updates) ಚಿತ್ರದ ಹೊಸ ವಿಷಯ ಹೊರ ಬಿದ್ದಿದೆ. ಈ ಹೊಸ ವಿಷಯ ಅಷ್ಟೇ ವಿಶೇಷವಾಗಿಯೇ ಇದೆ. ಚಿತ್ರದಲ್ಲಿ ಹಲವು ಪಾತ್ರ ಇರೋದು ಗೊತ್ತೇ ಇದೆ. ಚಿತ್ರದ ಮೊದಲ ಶೆಡ್ಯೂಲ್​​ನಲ್ಲಿ ಮಲೆಯಾಳಂ ನಟ ಜಯರಾಮ್ ಬಂದು ಅಭಿನಯಿಸಿ ಹೋಗಿದ್ದಾರೆ. ಚಿತ್ರದ ಎರಡನೇ ಶೆಡ್ಯೂಲ್​​ ಕೂಡ ಡೈರೆಕ್ಟರ್ ಶ್ರೀನಿ (Director Srini Movie) ಈಗಾಗಲೇ ಪೂರ್ಣಗೊಳಿಸಿದ್ದಾರೆ. ಮೂರನೇ ಶೆಡ್ಯೂಲ್​ನಲ್ಲಿ ಡೈರೆಕ್ಟರ್ ಶ್ರೀನಿ ಅನುಪಮ್ ಖೇರ್ ಅವರ ಪಾತ್ರದ ಚಿತ್ರೀಕರಣ ಮಾಡಲಿದ್ದಾರೆ. ಆದರೆ ಅದರ ಮಧ್ಯ ಈಗ ಇನ್ನೂ ಒಂದು ಸುದ್ದಿ (Viral News About Movie) ಹೊರ ಬಿದ್ದಿದೆ. ಅದರ ಸುತ್ತ ಇಲ್ಲೊಂದಿಷ್ಟು ಮಾಹಿತಿ ಇದೆ ಓದಿ.


ಘೋಸ್ಟ್ ಸಿನಿಮಾದಲ್ಲಿ ಕೆಜಿಎಫ್​ ನಟಿಯ ಅಭಿನಯ
ಘೋಸ್ಟ್ ಚಿತ್ರದಲ್ಲಿ ಹಲವು ಪಾತ್ರಗಳು ಇವೆ. ಆದರೆ ಯಾವೆಲ್ಲ ಪಾತ್ರಗಳು ಇವೆ ಅನ್ನೋದು ಇನ್ನೂ ರಿವೀಲ್ ಆಗಿಲ್ಲ. ಆ ಪೈಕಿ ಚಿತ್ರದಲ್ಲಿ ಮಲೆಯಾಳಂ ನಟ ಜಯರಾಮ್ ಅಭಿನಯಿಸಿರೋದು ಗೊತ್ತೇ ಇದೆ.


Kannada Shiva Rajkumar Ghost Movie Latest updates
ಫೆಬ್ರವರಿ-10 ರಿಂದ ಘೋಸ್ಟ್ ಸಿನಿಮಾ ಶೂಟಿಂಗ್ ಶುರು


ಇದರ ನಡುವೆ ಈ ಚಿತ್ರದಲ್ಲಿ ಅನುಪಮ್ ಖೇರ್ ಅಭಿನಯಿಸ್ತಾರೆ ಅನ್ನೋ ಸುದ್ದಿ ಕೂಡ ಈಗಾಗಲೇ ಗೊತ್ತಾಗಿ ಹೋಗಿದೆ. ಅದರ ಚಿತ್ರೀಕರಣದ ಡಿಟೈಲ್ಸ್ ಇನ್ನಷ್ಟೇ ಹೊರಗೆ ಬೀಳಬೇಕಿದೆ.




ಘೋಸ್ಟ್ ಚಿತ್ರದಲ್ಲಿ ಅರ್ಚನಾ ಜೋಯಿಸ್ ನಟನೆ
ಕೆಜಿಎಫ್ ಚಿತ್ರದಲ್ಲಿ ರಾಕಿ ಭಾಯ್ ಅಮ್ಮನ ರೋಲ್ ಅನ್ನುನ್ನ ನಟಿ ಅರ್ಚನಾ ಜೋಯಿಸ್ ನಿರ್ವಹಿಸಿದ್ದರು. ಚಿಕ್ಕ ವಯಸ್ಸಿನ ನಟಿಯಾಗಿದ್ದರೂ ರಾಕಿ ಭಾಯ್ ಅಮ್ಮನ ರೋಲ್​ ಮಾಡಿ ಭೇಷ್ ಎನಿಸಿಕೊಂಡರು.


ಅರ್ಚನಾ ಜೋಯಿಸ್ ಈಗಾಗಲೇ ಕನ್ನಡದ ಯುವ ನಟರ 'ಹೊಂದಿಸಿ ಬರೆಯಿರಿ' ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಅರ್ಚನಾ ಜೋಯಿಸ್ ವಿಭಿನ್ನ ರೋಲ್ ಮಾಡಿದ್ದಾರೆ. ಆದರೆ ಕನ್ನಡದ 'ಘೋಸ್ಟ್' ಚಿತ್ರದಲ್ಲಿ ಇವರ ಪಾತ್ರ ಸ್ಪೆಷಲ್ ಆಗಿಯೇ ಇದೆ.


ಪತ್ರಕರ್ತೆ ಪಾತ್ರದಲ್ಲಿ ಅರ್ಚನಾ ಜೋಯಿಸ್ ಅಭಿನಯ
ಘೋಸ್ಟ್ ಚಿತ್ರದಲ್ಲಿ ಅರ್ಚನಾ ಪತ್ರಕರ್ತೆಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇಡೀ ಚಿತ್ರದಲ್ಲಿ ಅರ್ಚನಾ ಇರುತ್ತಾರೆ ಅನ್ನೋ ಮಾಹಿತಿ ಕೂಡ ಇದೆ. ಈಗಾಗಲೇ ಅರ್ಚನಾ ತಮ್ಮ ಪಾತ್ರದ ಚಿತ್ರೀಕರಣವನ್ನ ಕೂಡ ಪೂರ್ಣಗೊಳಿಸಿದ್ದಾರೆ ಅನ್ನೋ ವಿಷಯ ಕೂಡ ಈಗ ಹರಿದಾಡುತ್ತಿದೆ.


ಫೆಬ್ರವರಿ-10 ರಿಂದ ಘೋಸ್ಟ್ ಸಿನಿಮಾ ಶೂಟಿಂಗ್ ಶುರು
ಘೋಸ್ಟ್ ಚಿತ್ರದ ಮೂರನೇ ಮತ್ತು ಕೊನೆಯ ಹಂತದ ಚಿತ್ರೀಕರಣ ಕೂಡ ಪ್ಲಾನ್ ಆಗುತ್ತಿದೆ. ಫೆಬ್ರವರಿ 10 ರಂದು ಘೋಸ್ಟ್ ಚಿತ್ರದ ಶೂಟಿಂಗ್ ಮತ್ತೆ ಆರಂಭಗೊಳ್ಳಲಿದೆ.
ಘೋಸ್ಟ್ ಸಿನಿಮಾದಲ್ಲಿ ಹಲವು ವಿಷಯಗಳು ಇವೆ. ಇವುಗಳಲ್ಲಿ ಸಿನಿಮಾ ತಂಡ ಇನ್ನು ಯಾವುದನ್ನ ಬಿಟ್ಟುಕೊಟ್ಟಿಲ್ಲ.


ಆದರೆ ಅನುಪಮ್ ಖೇರ್ ಈ ಮೂಲಕ ಕನ್ನಡಕ್ಕೆ ಬರ್ತಿರೋ ಸುದ್ದಿ ವೈರಲ್ ಆಗಿದೆ. ಚಿತ್ರದ ನಿರ್ದೇಶಕ ಶ್ರೀನಿ ಈ ವಿಷಯವನ್ನ ನ್ಯೂಸ್-18 ಕನ್ನಡ ಡಿಜಿಟಲ್​ಗೂ ಖಚಿತಪಡಿಸಿದ್ದಾರೆ.
ಘೋಸ್ಟ್ ಚಿತ್ರದಲ್ಲಿ ಯಂಗ್ ಗ್ಯಾಂಗಸ್ಟರ್ ಶಿವರಾಜ್​ಕುಮಾರ್ ಕನ್ನಡದ ಘೋಸ್ಟ್ ಚಿತ್ರದಲ್ಲಿ ಒಂದು ವಿಶೇಷ ಇದೆ. ಈ ವಿಶೇಷ ಏನಂದ್ರೆ, ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್ ಈ ಚಿತ್ರದಲ್ಲಿ ಯಂಗ್​ ಗ್ಯಾಂಗಸ್ಟರ್ ಪಾತ್ರವನ್ನು ಮಾಡುತ್ತಿದ್ದಾರೆ.


ಇದರ ಫಸ್ಟ್ ಲುಕ್ ತುಂಬಾ ಗಮನ ಸೆಳೆದಿದೆ. ಇಲ್ಲಿವರೆಗಿನ ಶಿವಣ್ಣನ ಈ ರೀತಿಯ ಲುಕ್ ಯಾರು ಮಾಡಿರಲೇ ಇಲ್ಲ. ಆದರೆ ಈ ಲುಕ್ ಸಾಕಷ್ಟು ಗಮನ ಸೆಳೆಯುತ್ತಿದೆ. ವೈರಲ್ ಕೂಡ ಆಗುತ್ತಿದೆ.


Kannada Shiva Rajkumar Ghost Movie Latest updates
ಘೋಸ್ಟ್ ಚಿತ್ರದಲ್ಲಿ ಯಂಗ್ ಗ್ಯಾಂಗಸ್ಟರ್ ಶಿವರಾಜ್​ಕುಮಾರ್


ಘೋಸ್ಟ್ ಚಿತ್ರಕ್ಕೆ ಹಾಲಿವುಡ್ ಟೆಕ್ನಿಷನ್​ಗಳ ಟಚ್?
ಹೌದು, ಈ ಒಂದು ಮಾತು ಕೂಡ ಸ್ವತಃ ಶ್ರೀನಿ ನ್ಯೂಸ್-18 ಕನ್ನಡ ಡಿಜಿಟಲ್​ ಜೊತೆಗೆ ಶೇರ್ ಮಾಡಿಕೊಂಡಿದ್ದಾರೆ. ಚಿತ್ರದಲ್ಲಿ ಶಿವಣ್ಣನ ಯಂಗ್ ಲುಕ್ ಪೋಸ್ಟರ್​ಗೆ ಒಳ್ಳೆ ರೆಸ್ಪಾನ್ಸ್ ಬಂದಿದೆ. ಈ ಲುಕ್​ನ್ನ ತೆರೆ ಮೇಲೆ ತರಲು ಬೇಕಾಗೋ ಎಲ್ಲ ಸಿದ್ಧತೆಗಳು ನಡೆಯುತ್ತಿವೆ.


ಶಿವಣ್ಣನ ಈ ಒಂದು ಲುಕ್​​ನ್ನ ಬೆಳ್ಳಿ ತೆರೆ ಮೇಲೆ ತರಲು ಒಂದಷ್ಟು ಕಂಪನಿಗಳ ಜೊತೆಗೂ ಮಾತುಕತೆ ನಡೆಯುತ್ತಿದೆ. ಹಾಲಿವುಡ್ ಟೆಕ್ನಿಷನ್​ಗಳನ್ನ ಸಂಪರ್ಕಿಸೋ ಸಾಧ್ಯತೆನೂ ಇದೆ ಅಂತಲೇ ಶ್ರೀನಿ ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: Shubha Poonja: ನಟಿ ಶುಭ ಪೂಂಜಾ ಕುಟುಂಬದ ಜೊತೆ ಮಂಜು ಪಾವಗಡ ಪ್ರವಾಸ


ಒಟ್ಟಾರೆ, ಘೋಸ್ಟ್ ಸಿನಿಮಾ ಒಂದಿಲ್ಲ ಒಂದು ವಿಷಯಕ್ಕೆ ಸದ್ದು ಮಾಡುತ್ತಲೇ ಇದೆ. ಈಗ ಮೂರನೇ ಹಂತದ ಚಿತ್ರೀಕರಣಕ್ಕೂ ಸಜ್ಜಾಗುತ್ತಿದೆ. ಮಾರ್ಚ್ ತಿಂಗಳಲ್ಲಿ ಚಿತ್ರೀಕರಣ ಪೂರ್ಣಗೊಳಿಸೋ ಪ್ಲಾನ್ ಕೂಡ ಹಾಕಿಕೊಳ್ಳಲಾಗಿದೆ.


ಅರ್ಜುನ್ ಜನ್ಯ ಸಂಗೀತದ ಈ ಚಿತ್ರಕ್ಕೆ ಮಹೇಂದ್ರ ಸಿಂಹ ಛಾಯಾಗ್ರಹಣ ಮಾಡುತ್ತಿದ್ದಾರೆ. ಶಿವಣ್ಣನ ಪಾತ್ರದ ಲುಕ್ ಕೂಡ ಈಗಾಗಲೇ ವೈರಲ್ ಆಗಿದೆ. ಸಿನಿಮಾ ಬಗ್ಗೆ ಒಂದು ನಿರೀಕ್ಷೆ ಕೂಡ ಇದೆ ಅಂತಲೇ ಹೇಳಬಹುದು.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು