ಯಾರ ಮನೆಗೆ ಹೋದರೂ ಅದೇ ಸೀರಿಯಲ್(Serial)ಗಳ ಸದ್ದು. ಸಿನಿಮಾ(Movie) ನಮ್ಮ ಜೀವನಕ್ಕೆ ಅಷ್ಟು ಹತ್ತಿರವಾಗುವುದಿಲ್ಲ. ಧಾರಾವಾಹಿಗಳು ನಮ್ಮ ನಿಮ್ಮ ನಡುವೆ ನಡೆಯುವ ಕಥೆ(Story)ಗಳನ್ನು ಆಯ್ಕೆಮಾಡಿರಲಾಗುತ್ತೆ. ಹೀಗಾಗಿ ಬೇಗನೇ ಜನರಿಗೆ ಹತ್ತಿರವಾಗಿರುತ್ತೆ. ಕೊರೋನಾ(Corona) ಕಾಲದಲ್ಲಿ ರಿಪೀಟ್(Repeat) ಧಾರಾವಾಹಿಗಳನ್ನೇ ಜನರು ಮಿಸ್ ಮಾಡದೇ ನೋಡಿದ್ದಾರೆ. ಕನ್ನಡದಲ್ಲಿ ಅದೆಷ್ಟೋ ಸೀರಿಯಲ್ಗಳು ಜನಪ್ರಿಯತೆ ಪಡದುಕೊಂಡಿವೆ. ಮಧ್ಯಾಹ್ನದಿಂದ ರಾತ್ರಿಯವರೆಗೂ ಸೀರಿಯಲ್ಗಳದ್ದೇ ಹಾವಳಿ. ಎಲ್ಲೆ ಇದ್ದರೂ, ಏನೇ ಮಾಡುತ್ತಿದ್ದರು, ಅವರ ನೆಚ್ಚಿನ ಸೀರಿಯಲ್(Favorite Serial) ಶುರುವಾಗುತ್ತೆ ಅಂದರೆ, ಎಲ್ಲ ಕೆಲಸವನ್ನೂ ಅರ್ಧಕ್ಕೆ ಬಿಟ್ಟು ಬಂದು ಟಿವಿ(TV) ಮುಂದೆ ಕೂರುತ್ತಾರೆ. ಆದರೆ ಇತ್ತ ಧಾರಾವಾಹಿ ನಿರ್ದೇಶಕರು(Director) ಮಾತ್ರ ಕಂಗಾಲಾಗಿದ್ದಾರೆ. ಯಾಕೆ ಅವರಿಗೆ ಏನಾಯ್ತು ಅಂತ ಕೇಳ್ಬೇಡಿ. ಕೊರೋನಾ ಮುಗಿದ ಮೇಲೆ ಅದೆಷ್ಟೋ ನಿರ್ದೇಶಕರು ಹೊಸ ಹೊಸ ಸೀರಿಯಲ್ಗಳನ್ನು ತೆಗೆಯಬೇಕು ಅಂದುಕೊಂಡಿದ್ದರು. ಆದರೆ ನಾಯಕ(Hero), ನಾಯಕಿ(Heroin), ಕಲಾವಿದರು ಸಿಗದೇ ಎಲ್ಲವೂ ಅರ್ಧಕ್ಕೆ ನಿಂತಿದೆ. ಹಳೆ ಕಲಾವಿದರನ್ನು ನೋಡಿ, ನೋಡಿ ನಮ್ಮ ಜನಕ್ಕೆ ಬೋರ್(Bore) ಆಗಿದೆ. ಹೀಗಾಗಿ ಹೊಸ ಕಲಾವಿದರನ್ನು ಕಿರುತರೆಗೆ ಪರಿಚಯಿಸುವ ಟೆನ್ಶನ್(Tension)ನಲ್ಲಿ ಧಾರಾವಾಹಿ ನಿರ್ದೇಶಕರಿದ್ದಾರೆ.
ಹೊಸ ಮುಖಗಳಿಗಾಗಿ ಹುಡುಕಾಟ!
ಹೌದು, ನೀವು ನಮಗೆ ಯಾರು ಚಾನ್ಸ್ ಕೊಡುತ್ತಾರೆ ಅಂತ ಅಂದುಕೊಂಡು ಸುಮ್ಮನಾಗಿ ಬಿಡ್ತೀರಾ. ಆದರೆ ಅತ್ತ ಕೊರೋನಾ ಮುಗಿದ ಬಳಿಕ ಹೊಸ ಮುಖಗಳು ಸಿಗದೇ, ನಟ, ನಟಿಯರು ಸಿಗದೇ 7 ಟಿವಿ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ. ಇದು ನಿಜ, ಧಾರಾವಾಹಿಯಲ್ಲಿ ನಟಿಸಲು ಹೀರೋ, ಹೀರೋಯಿನ್ಗಳಿಲ್ಲದೇ 7 ಟಿವಿ ಕಾರ್ಯಕ್ರಮಗಳ ಲಾಂಚ್ ಅನ್ನು ಮುಂದೂಡಲಾಗಿದೆ. ಜನರಿಗೆ ಹಳೇ ಮುಖಗಳನ್ನ ನೋಡಿ ನೋಡಿ ಬೋರ್ ಆಗಿದೆ. ಹೊಸಬರ ಧಾರಾವಾಹಿಗಳ ಕಡೆ ಒಲವು ಹೆಚ್ಚಾಗಿದೆ. ಹೀಗಾಗಿ ಧಾರಾವಾಹಿ ನಿರ್ದೇಶಕರು ಕಂಗಾಲಾಗಿದ್ದಾರೆ. ಇತ್ತ ನೀವು ನಮಗೆಲ್ಲಾ ಯಾರು ಚಾನ್ಸ್ ಕೊಡ್ತಾರೆ ಅಂದುಕೊಂಡು ಸುಮ್ಮನಾದರೆ, ಅತ್ತ ಸಿರಿಯಸ್ ಆಗಿ ಚಾನ್ಸ್ ಕೊಡ್ತೀನಿ ಅಂದರು ನಟ, ನಟಿಯರು ಸಿಗುತ್ತಿಲ್ಲವಂತೆ.
ಇದನ್ನು ಓದಿ : ನೀವು ಧಾರಾವಾಹಿಗಳಲ್ಲಿ ಆಕ್ಟ್ ಮಾಡಬೇಕಾ? ಕಲಾವಿದರಿಗೆ ಇಲ್ಲಿದೆ ಸುವರ್ಣ ಅವಕಾಶ!
ನಟ-ನಟಿಯರನ್ನು ಹುಡುಕುತ್ತಿದೆ ಪ್ರೊಡಕ್ಷನ್ ಟೀಂ
ನಿಮಗೆ ನಟನೆಯಲ್ಲಿ ಆಸಕ್ತಿ ಇದ್ರೆ ಸಾಕು ಸೀರಿಯಲ್ಗಳ ಪ್ರೊಡಕ್ಷನ್ ಟೀಂನವರೇ ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ. ಹಳೆ ನಾಯಕರನ್ನು ನೋಡಿ ಜನ ಬೋರ್ ಆಗಿದ್ದಾರೆ. ಹೀಗಾಗಿ ಹೆಸರಾಂತ ಚಾನೆಲ್ಗಳ ಪ್ರೊಡಕ್ಷನ್ ಟೀಂ ಹೊಸ ಮುಖಗಳನ್ನು ಕಿರುತೆರೆ ಮೇಲೆ ಕರೆತರಲು ಸಿದ್ಧತೆ ಮಾಡಿಕೊಂಡಿದ್ಯಂತೆ.
ಕನ್ನಡದ ಕಿರುತೆರೆ ನಟ, ನಟಿಯರಿಗೆ ತಮಿಳಿನಲ್ಲಿ ಬೇಡಿಕೆ
ಹೌದು, ಈ ಅಂಶವನ್ನು ಎಲ್ಲರೂ ಗಮನಿಸಿರುತ್ತಿರ. ತಮಿಳು ಧಾರಾವಾಹಿಗಳಲ್ಲಿ ಹೆಚ್ಚಿನದರಲ್ಲಿ ನಮ್ಮ ಕನ್ನಡ ಕಿರುತರೆಯ ನಟ, ನಟಿಯರೇ ಹೆಚ್ಚು ಕಾಣಿಸುತ್ತಿದ್ದಾರೆ. ನಮ್ಮ ಕನ್ನಡ ಕಿರುತರೆಯ ನಟ, ನಟಿಯರು ನೋಡಲು ಸುಂದರವಾಗಿರುತ್ತಾರೆ, ನಟನೆಗೆ ಸೈ, ಚೆಂದಕ್ಕೂ ಸೈ ಅನ್ನುವ ಕಾರಣಕ್ಕೆ ಅಲ್ಲಿಂದ ಇಲ್ಲಿಗೆ ಬಂದು ನಮ್ಮ ಕಿರುತರೆಯ ತಾರೆಗಳನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಹೀಗಾಗಿ ಕನ್ನಡ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಕಲಾವಿದರ ಸಂಖ್ಯೆ ಕಡಿಮೆಯಾಗುತ್ತಿದೆ.
ಇದನ್ನು ಓದಿ : ಅನು ಸಿರಿಮನೆ ಪಾತ್ರಧಾರಿ ಚೇಂಜ್? ಸೀರಿಯಲ್ ಬಿಟ್ಟು ಸಿನಿಮಾ ಕಡೆ ಹೊರಟಿದ್ರಂತೆ ಮೇಘಾ ಶೆಟ್ಟಿ!
ನಿಮಗೂ ಧಾರಾವಾಹಿಯಲ್ಲಿ ನಟಿಸುವ ಆಸೆ ಇದ್ಯಾ?
ನಿಮಗೂ ಧಾರಾವಾಹಿಯಲ್ಲಿ ನಟಿಸಬೇಕು ಅನ್ನುವ ಆಸೆ ಇದ್ಯಾ. ಆದರೆ ಸೇರುವ ದಾರಿ ಗೊತ್ತಿಲ್ವಾ? ಇಲ್ಲಿದೆ ನೋಡಿ. ನಿಮ್ಮ ಬಯೋಡೇಟಾವನ್ನು ರೆಡಿ ಮಾಡಿಕೊಳ್ಳಿ. ತುಂಬಾ ದೊಡ್ಡದಾಗಿರದೇ, ಚಿಕ್ಕದಾಗಿದ್ದರೆ ಉತ್ತಮ. ನಿಮ್ಮ ಬಯೋಡೇಟಾವನ್ನು ಕನ್ನಡ ಚಾನೆಲ್ಗಳ ಅಧಿಕೃತ ಖಾತೆಗಳಿಗೆ ಪರ್ಸನಲ್ ಮೆಸೇಜ್ ಮಾಡಿ. ಅದನ್ನು ಅವರು ಪರಿಶೀಲಿಸಿ, ಒಂದು ವೇಳೆ ಅವರಿಗೆ ಇಷ್ಟವಾದರೆ, ನೀವುರುವಲ್ಲಿಯೇ ಬಂದು ನಿಮ್ಮನ್ನು ಕರೆದುಕೊಂಡು ಹೋಗುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ