Sathya serial: 6 ತಿಂಗಳಲ್ಲಿ ಸತ್ಯಾ-ಕಾರ್ತಿಕ್‍ಗೆ ಡಿವೋರ್ಸ್ ಆಗುತ್ತಾ? ಲೇಡಿ ರಾಮಾಚಾರಿಗೆ ನೂರೆಂಟು ಸಂಕಷ್ಟ!

ಸತ್ಯ ಎಲ್ಲವನ್ನು ಕಲಿತು ಬದಲಾಗುವ ಸಮಯದಲ್ಲಿ ಅತ್ತೆ ಸೀತಾ ಡಿವೋರ್ಸ್ ಪೇಪರ್ ಮುಂದಿಟ್ಟಿದ್ದಾಳೆ. ಕೋಟೆ ಮನೆಗೆ ಕರೆಯದೇ ಬಂದ ಅತಿಥಿ ನೀನು. ನನ್ನ ಮಗನ ಭವಿಷ್ಯಕ್ಕಾಗಿ, ಕುಟುಂಬದ ಸಂತೋಷಕ್ಕೆ ಡಿವೋರ್ಸ್ ಕೊಟ್ಟು, 6 ತಿಂಗಳಲ್ಲಿ ಮನೆ ಬಿಟ್ಟು ಹೋಗು ಎನ್ನುತ್ತಿದ್ದಾಳೆ.

ಸತ್ಯ

ಸತ್ಯ

 • Share this:
  ಸತ್ಯ (Sathya), ಧಾರಾವಾಹಿ (Serial) ಬೇರೆ ಎಲ್ಲಾ ಧಾರಾವಾಹಿಗಳಿಗಿಂತ ವಿಭಿನ್ನವಾದ ಧಾರಾವಾಹಿ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ನಟಿ ಅಂದ್ರೆ ಎಮೋಷನಲ್ (Emotional) ಪಾತ್ರ ಅಂತ ಎಂದುಕೊಂಡಿದ್ದ ಎಲ್ಲರಿಗೂ ಬೇರೇಯದ್ದೇ ರೀತಿ ನಿರೀಕ್ಷೆ ಹುಟ್ಟಿಸಿದ್ದ ಸೀರಿಯಲ್. ಯಾವನೋ ಅಲ್ಲ, ಯಾವಳೋ ಅನ್ನೋ ಮೂಲಕ ಕನ್ನಡಿಗರ ಮನಗೆದ್ದ ಧಾರಾವಾಹಿ. ರಫ್ ಅಂಡ್ ಟಫ್ ಮೂಲಕ ಹೆಣ್ಣು ಮಕ್ಕಳು ಈ ತರನೂ ಇರಬಹುದ ಎಂದು ತೋರಿಸಿಕೊಟ್ಟ ಹೊಸ ಕಲ್ಪನೆ. ಹೆಣ್ಣು ಮಕ್ಕಳ ಗಟ್ಟಿತನವನ್ನು ಅನಾವರಣಗೊಳಿಸುವಲ್ಲಿ ನಿರ್ದೇಶಕಿ ಸ್ಪಪ್ನ ಕೃಷ್ಣ ಯಶಸ್ವಿಯಾಗಿದ್ದಾರೆ. ಸತ್ಯ-ಕಾರ್ತಿಕ್‍ಗೆ (Karthik) ಇಷ್ಟ ಅಂದ್ರೂ ಮದುವೆಯಾಗಿದೆ. ಅದಕ್ಕೆ ಸತ್ಯ ಕೂಡ ತನ್ನ ವೇಷವನ್ನು ಬದಲಿಸಿಕೊಂಡು, ಆ ಮನೆಗೆ ಹೊಂದಿಕೊಳ್ಳಬೇಕು ಎಂದು ಪರದಾಡುತ್ತಿದ್ದಾಳೆ. ಆದ್ರೆ ಅತ್ತೆ ಸೀತಮ್ಮ ಇಬ್ಬರನ್ನು ದೂರ ಮಾಡಲು ಡಿವೋರ್ಸ್ (Divorce) ಅಸ್ತ್ರ ಉಪಯೋಗಿಸುತ್ತಿದ್ದಾಳೆ.

  ಗಂಡನ ಮನೆಯವರಿಗಾಗಿ ಬದಲಾಗುತ್ತಿರುವ ಸತ್ಯ

  ಸತ್ಯ ಮದುವೆಗೂ ಮುಂಚೆ, ತನ್ನ ಕುಟುಂಬಕ್ಕೆ ಅಪ್ಪನ ಸ್ಥಾನದಲ್ಲಿ ನಿಂತುಕೊಂಡು ಗ್ಯಾರೇಜ್ ನಡೆಸುತ್ತಿದ್ದ ಹುಡುಗಿ. ಅವಳು ಇದ್ದಿದ್ದು ಸಹ ಹುಡುಗನ ರೀತಿಯಲ್ಲಿ, ಬಾಯ್ ಹೇರ್ ಕಟ್, ಪ್ಯಾಂಟ್, ಶರ್ಟ್ ಹಾಕುತ್ತಿದ್ದು, ಸ್ಲಂನಲ್ಲಿ ಬೆಳೆದು ಹುಡುಗಿ ಮಾತು ಹೊರಟು. ಯಾವ ಸಂಪ್ರದಾಯದ ಬಗ್ಗೆಯೂ ಗೊತ್ತಿಲ್ಲ.

  Zee Kannada Serial Sathya Karthiks father Ramachandra supporting sathya
  ಸತ್ಯ


  ಆದ್ರೆ ಅಚಾನಕ್ಕಾಗಿ ಕಾರ್ತಿಕ್‍ನನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ. ಮದುವೆ ಆದಗಿನಿಂದ ಸೀರೆ ಉಡುತ್ತಿದ್ದಾಳೆ. ಮನೆಗೆ ಹೊಂದಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾಳೆ. ಗಂಡನ ಮನೆಯವರಿಗಾಗಿ ಒಂದೊಂದೆ ಆಚರಣೆ ಕಲಿತು ಬದಲಾಗುತ್ತಿದ್ದಾಳೆ.

  ಸತ್ಯಾಗೆ ಡಿವೋರ್ಸ್ ಕೊಡುವಂತೆ ಹೇಳಿದ ಅತ್ತೆ!

  ಸತ್ಯ ಎಲ್ಲವನ್ನು ಕಲಿತು ಬದಲಾಗುವ ಸಮಯದಲ್ಲಿ ಅತ್ತೆ ಸೀತಾ ಡಿವೋರ್ಸ್ ಪೇಪರ್ ಮುಂದಿಟ್ಟಿದ್ದಾಳೆ. ಕೋಟೆ ಮನೆಗೆ ಕರೆಯದೇ ಬಂದ ಅತಿಥಿ ನೀನು. ನನ್ನ ಮಗನ ಭವಿಷ್ಯಕ್ಕಾಗಿ, ಕುಟುಂಬದ ಸಂತೋಷಕ್ಕೆ ಡಿವೋರ್ಸ್ ಕೊಟ್ಟು, 6 ತಿಂಗಳಲ್ಲಿ ಮನೆ ಬಿಟ್ಟು ಹೋಗು ಎನ್ನುತ್ತಿದ್ದಾಳೆ. ಕಣ್ಣೀರು ಹಾಕುತ್ತಲೇ ಸತ್ಯ ಡಿವೋರ್ಸ್ ಪೇಪರ್‍ಗೆ ಸಹಿ ಹಾಕಿದ್ದಾಳೆ.

  6 ತಿಂಗಳಲ್ಲಿ ಬದಲಾಗಿ ಸೊಸೆ ಅನ್ನಿಸಿಕೊಳ್ತಾಳ ಸತ್ಯ?

  ಡಿವೋರ್ಸ್ ಪೇಪರ್ ಸಹಿ ಹಾಕಿದ್ರೂ, ಸತ್ಯ ಆತ್ಮ ವಿಶ್ವಾಸ ಕಡಿಮೆ ಆಗಿಲ್ಲ. ಇನ್ನು 6 ತಿಂಗಳು ಟೈಂ ಇದೆ. ಅಷ್ಟರಲ್ಲಿ ನಿಮ್ಮೆಲ್ಲೆರ ಮನಸ್ಸು ಗೆದ್ದು ಬಾಯ್ತುಂಬ ಸೊಸೆ ಎನ್ನಿಸಿಕೊಳ್ತಿನಿ ಎಂದು ಲೇಡಿ ರಾಮಾಚಾರಿ, ತನಗೆ ತಾನೇ ಸವಾಲು ಹಾಕಿಕೊಂಡಿದ್ದಾಳೆ. ಅದೇ ರೀತಿ ಮಾಡುವ ತವಕದಲ್ಲಿದ್ದಾಳೆ.

  ಇದನ್ನೂ ಓದಿ: Olavina Nildana: ಸಂಕಷ್ಟದಿಂದ ಪಾರಾದ ತಾರಿಣಿ, ಮಾವ ಪಾಲಾಕ್ಷನ ಕುತಂತ್ರ ಮನೆಯವರ ಮುಂದೆ ಬಯಲಾಗುತ್ತಾ?

  ಕಾರ್ತಿಕ್ ಮನಸ್ಸು ಬದಲಾಗುತ್ತಾ?

  ಕಾರ್ತಿಕ್, ಸತ್ಯ ಮೊದಲು ಒಳ್ಳೆಯ ಸ್ನೇಹಿತರು. ಸತ್ಯ ಅಕ್ಕ ದಿವ್ಯಾಳನ್ನು ಕಾರ್ತಿಕ್ ಮದುವೆ ಆಗಬೇಕಿತ್ತು. ಆದ್ರೆ ಮದುವೆ ದಿನ ದಿವ್ಯಾ ಬೇರೆಯವರ ಜೊತೆ ಓಡಿ ಹೋದ ಕಾರಣ ಸತ್ಯ ಮದುವೆಯಾಗುತ್ತಾಳೆ. ಆದ್ರೆ ಕಾರ್ತಿಕ್, ಸತ್ಯಾನೇ ಇದೆಲ್ಲಾ ಮಾಡಿರೋದು ಎಂದು ಕೋಪ ಮಾಡಿಕೊಂಡಿದ್ದಾನೆ. ಅದಕ್ಕೆ ಸತ್ಯ ಕಂಡ್ರೆ ಕಾರ್ತಿಕ್‍ಗೆ ಆಗಲ್ಲ. ಅವಳನ್ನು ನೋಡಿದ್ರೆ ಮುಳ್ಳು ಚುಚ್ಚಿದವನ ರೀತಿ ಆಡ್ತಾನೆ. ಕಾರ್ತಿಕ್ ಮನಸ್ಸು ಸಹ ಸತ್ಯ ಬದಲಿಸುತ್ತಾಳಾ, ಕಾದು ನೋಡಬೇಕಿದೆ.

  kannada-serial-zee-kannada-sathya-serial-karthik-sathya-fair-divorce-situation-in-six-months-time-svl mrq
  ಸಾಂದರ್ಭಿಕ ಚಿತ್ರ


  ಇದನ್ನೂ ಓದಿ: Paaru Twist: ಅರುಂಧತಿ ಬಲೆಯಲ್ಲಿ ಸಿಲುಕಿದ ಅಖಿಲಾಂಡೇಶ್ವರಿ ಪುತ್ರ; ಪ್ರೀತು ರಾಸಲೀಲೆ ವಿಡಿಯೋ ಟಿವಿಯಲ್ಲಿ!

  ಸದ್ಯ ಈಗ ಈ ಪ್ರೋಮೋವನ್ನು ಬಿಟ್ಟಿದ್ದು, ಸತ್ಯ ಯಾವ ರೀತಿ ಬದಲಾಗುತ್ತಾಳೆ. 6 ತಿಂಗಳಲ್ಲಿ ಗಂಡನ ಮನೆಯವರ ಪ್ರೀತಿ ಗಳಿಸುತ್ತಾಳಾ, ಅತ್ತೆಗೆ ತಕ್ಕ ಸೊಸೆಯಾಗುತ್ತಾಳಾ?, ಕಾರ್ತಿಕ್ ಮನಸ್ಸು ಮೆಚ್ಚುವ ಮಡದಿಯಾಗುತ್ತಾಳಾ, ಡಿವೋರ್ಸ್ ಪೇಪರ್‍ಗೆ ಯಾಕೆ ಸೈನ್ ಹಾಕಿದ್ಲು. ಸತ್ಯ ಸಗಿಯನ್ನೇ ಮುಂದಿಟ್ಟುಕೊಂಡು ಅತ್ತೆ ಸೀತಾ, ಕಾರ್ತಿಕ್‍ಗೆ ಬೇರೆ ಮದುವೆ ಮಾಡಿಸುತ್ತಾಳಾ, ಎಲ್ಲವೂ ಕುತೂಹಲ ಮೂಡಿಸಿದೆ. ಎಲ್ಲವನ್ನು ನೋಡೋಕೆ ಸತ್ಯ ಧಾರಾವಾಹಿಯ ಸಂಚಿಕೆಗಳನ್ನು ನೋಡಬೇಕು.
  Published by:Savitha Savitha
  First published: