Sathya: ಕಾರ್ತಿಕ್‍ಗೆ ಡಿವೋರ್ಸ್ ಕೊಡಲು ಒಂದೇ ಒಂದು ದಿನ ಮಾತ್ರ ಸತ್ಯಾಗೆ ಟೈಂ! ಏನ್ ಮಾಡ್ತಾಳೆ ಲೇಡಿ ರಾಮಾಚಾರಿ?

ಸತ್ಯ ಎಲ್ಲವನ್ನು ಕಲಿತು ಬದಲಾಗುವ ಸಮಯದಲ್ಲಿ ಅತ್ತೆ ಸೀತಾ ಡಿವೋರ್ಸ್ ಪೇಪರ್ ಮುಂದಿಟ್ಟಿದ್ದಾಳೆ. ನನ್ನ ಮಗನ ಭವಿಷ್ಯಕ್ಕಾಗಿ, ಕುಟುಂಬದ ಸಂತೋಷಕ್ಕೆ ಡಿವೋರ್ಸ್ ಕೊಡು ಎನ್ನುತ್ತಿದ್ದಾಳೆ. ಸತ್ಯಾಗೆ ಏನೂ ಮಾಡಬೇಕೆಂದು ತಿಳಿಯುತ್ತಾನೆ ಇಲ್ಲ ಶಾಕ್ ಆಗಿ, ಸಹಿ ಮಾಡಲು ಒಂದು ದಿನ ಸಮಯ ಕೇಳಿದ್ದಾಳೆ.

ಸತ್ಯ ಧಾರಾವಾಹಿ

ಸತ್ಯ ಧಾರಾವಾಹಿ

 • Share this:
  ಸತ್ಯ (Sathya), ಧಾರಾವಾಹಿ (Serial) ಬೇರೆ ಎಲ್ಲಾ ಧಾರಾವಾಹಿಗಳಿಗಿಂತ ವಿಭಿನ್ನವಾದ ಧಾರಾವಾಹಿ. ಜೀ ಕನ್ನಡದಲ್ಲಿ (Zee Kannada)ಪ್ರಸಾರವಾಗುತ್ತಿದೆ. ನಟಿ ಅಂದ್ರೆ ಎಮೋಷನಲ್ (Emotional) ಪಾತ್ರ ಅಂತ ಎಂದುಕೊಂಡಿದ್ದ ಎಲ್ಲರಿಗೂ ಬೇರೇಯದ್ದೇ ರೀತಿ ನಿರೀಕ್ಷೆ ಹುಟ್ಟಿಸಿದ್ದ ಸೀರಿಯಲ್. ಯಾವನೋ ಅಲ್ಲ, ಯಾವಳೋ ಅನ್ನೋ ಮೂಲಕ ಕನ್ನಡಿಗರ ಮನಗೆದ್ದ ಧಾರಾವಾಹಿ. ರಫ್ ಅಂಡ್ ಟಫ್ ಮೂಲಕ ಹೆಣ್ಣು ಮಕ್ಕಳು ಈ ತರನೂ ಇರಬಹುದ ಎಂದು ತೋರಿಸಿಕೊಟ್ಟ ಹೊಸ ಕಲ್ಪನೆ. ಈ ಧಾರಾವಾಹಿಯೂ ನಟಿಯ ಪಾತ್ರವನ್ನು ಎತ್ತಿ ತೋರಿಸುವ ಕಥೆಯಾಗಿದೆ. ನಾಯಕಿ ಸತ್ಯ-ಕಾರ್ತಿಕ್‍ಗೆ ಇಷ್ಟ ಇಲ್ಲ ಅಂದ್ರೂ ಮದುವೆಯಾಗಿದೆ. ಅದಕ್ಕೆ ಸತ್ಯ ಕೂಡ ತನ್ನ ವೇಷವನ್ನು ಬದಲಿಸಿಕೊಂಡು, ಆ ಮನೆಗೆ ಹೊಂದಿಕೊಳ್ಳಬೇಕು ಎಂದು ಪರದಾಡುತ್ತಿದ್ದಾಳೆ. ಆದ್ರೆ ಅತ್ತೆ ಸೀತಮ್ಮ ಇಬ್ಬರನ್ನು ದೂರ ಮಾಡಲು ಡಿವೋರ್ಸ್ (Divorce) ಪೇಪರ್ ಮುಂದಿಟ್ಟಿದ್ದಾಳೆ.

  ಗಂಡನ ಮನೆಯವರಿಗಾಗಿ ಬದಲಾಗುತ್ತಿರುವ ಸತ್ಯ

  ಸತ್ಯ ಮದುವೆಗೂ ಮುಂಚೆ, ತನ್ನ ಕುಟುಂಬಕ್ಕೆ ಅಪ್ಪನ ಸ್ಥಾನದಲ್ಲಿ ನಿಂತುಕೊಂಡು ಗ್ಯಾರೇಜ್ ನಡೆಸುತ್ತಿದ್ದ ಹುಡುಗಿ. ಅವಳು ಇದ್ದಿದ್ದು ಸಹ ಹುಡುಗನ ರೀತಿಯಲ್ಲಿ, ಬಾಯ್ ಹೇರ್ ಕಟ್, ಪ್ಯಾಂಟ್, ಶರ್ಟ್ ಹಾಕುತ್ತಿದ್ದು, ಸ್ಲಂನಲ್ಲಿ ಬೆಳೆದು ಹುಡುಗಿ ಮಾತು ಹೊರಟು. ಯಾವ ಸಂಪ್ರದಾಯದ ಬಗ್ಗೆಯೂ ಗೊತ್ತಿಲ್ಲ. ಆದ್ರೆ ಅಚಾನಕ್ಕಾಗಿ ಕಾರ್ತಿಕ್‍ನನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ. ಮದುವೆ ಆದಗಿನಿಂದ ಸೀರೆ ಉಡುತ್ತಿದ್ದಾಳೆ. ಮನೆಗೆ ಹೊಂದಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾಳೆ. ಗಂಡನ ಮನೆಯವರಿಗಾಗಿ ಒಂದೊಂದೇ ಆಚರಣೆ ಕಲಿತು ಬದಲಾಗುತ್ತಿದ್ದಾಳೆ.

  ಬದಲಾಗುತ್ತಿರುವ ಸತ್ಯಾಗೆ ಡಿವೋರ್ಸ್ ಕೊಡುವಂತೆ ಹೇಳಿದ ಅತ್ತೆ!

  ಸತ್ಯ ಎಲ್ಲವನ್ನು ಕಲಿತು ಬದಲಾಗುವ ಸಮಯದಲ್ಲಿ ಅತ್ತೆ ಸೀತಾ ಡಿವೋರ್ಸ್ ಪೇಪರ್ ಮುಂದಿಟ್ಟಿದ್ದಾಳೆ. ನನ್ನ ಮಗನ ಭವಿಷ್ಯಕ್ಕಾಗಿ, ಕುಟುಂಬದ ಸಂತೋಷಕ್ಕೆ ಡಿವೋರ್ಸ್ ಕೊಡು ಎನ್ನುತ್ತಿದ್ದಾಳೆ. ಸತ್ಯಾಗೆ ಏನೂ ಮಾಡಬೇಕೆಂದು ತಿಳಿಯುತ್ತಾನೆ ಇಲ್ಲ ಶಾಕ್ ಆಗಿ, ಸಹಿ ಮಾಡಲು ಒಂದು ದಿನ ಸಮಯ ಕೇಳಿದ್ದಾಳೆ.

  Zee Kannada serial, Kannada serial, Satya Kannada serial, Sathya serial Kannada cast, Divorce episode today, ಸತ್ಯ ಧಾರಾವಾಹಿ, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
  ಅತ್ತೆ ಸೀತಾ


  ಹಾಗಾದ್ರೆ ಡಿವೋರ್ಸ್ ಪೇಪರ್ ಗೆ ಸಹಿ ಮಾಡ್ತಾಳಾ ಸತ್ಯ?

  ಸತ್ಯ ತನ್ನ ತವರು ಮನೆಯವರಿಗೆ, ಗಂಡನ ಮನೆಯಲ್ಲಿ ಹೊಂದಿಕೊಳ್ಳುತ್ತೇನೆ. ಕಾರ್ತಿಕ್ ಜೊತೆ ಸಂಸಾರ ಮಾಡುತ್ತೇನೆ ಎಂದು ಪ್ರಮಾಣ ಮಾಡಿರುತ್ತಾಳೆ. ಆದ್ರೆ ಇಲ್ಲಿ ನೋಡಿದ್ರೆ ಅತ್ತೆ ಸೀತಾ ಡಿವೋರ್ಸ್ ಪೇಪರ್ ಗೆ  ಸಹಿ ಹಾಕು ಎಂದು ಕೂತಿದ್ದಾಳೆ. ಸತ್ಯಗೆ ಏನು ಮಾಡಬೇಕೆಂದು ತೋಚುತ್ತಿಲ್ಲ. ಒಂದು ದಿನ ಯೋಚನೆ ಮಾಡಿ ವಿಚ್ಛೇದನ ಪತ್ರಕ್ಕೆ ಸಹಿ ಹಾಕಿ ಬಿಡ್ತಾಳಾ. ಕೋಟೆ ಮನೆಯನ್ನು ಬಿಟ್ಟು ಹೋಗುತ್ತಾಳಾ ನೋಡಬೇಕು.

  ಇದನ್ನೂ ಓದಿ: Kannadathi: ಅಮ್ಮಮ್ಮ ತೋರಿಸಿದ ವಿಡಿಯೋ ನೋಡಿ ಸಾನಿಯಾ ಶಾಕ್! ಬದುಕಿ ಬಂದ ರತ್ನಮಾಲಾರಿಂದ ಟಾಂಗ್ 

  ಕಾರ್ತಿಕ್ ಮನಸ್ಸು ಬದಲಾಗುತ್ತಾ?

  ಕಾರ್ತಿಕ್, ಸತ್ಯ ಮೊದಲು ಒಳ್ಳೆಯ ಸ್ನೇಹಿತರು. ಸತ್ಯ ಅಕ್ಕ ದಿವ್ಯಾಳನ್ನು ಕಾರ್ತಿಕ್ ಮದುವೆ ಆಗಬೇಕಿತ್ತು. ಆದ್ರೆ ಮದುವೆ ದಿನ ದಿವ್ಯಾ ಬೇರೆಯವರ ಜೊತೆ ಓಡಿ ಹೋದ ಕಾರಣ ಸತ್ಯ ಮದುವೆಯಾಗುತ್ತಾಳೆ. ಆದ್ರೆ ಕಾರ್ತಿಕ್, ಸತ್ಯಾನೇ ಇದೆಲ್ಲಾ ಮಾಡಿರೋದು ಎಂದು ಕೋಪ ಮಾಡಿಕೊಂಡಿದ್ದಾನೆ. ಅದಕ್ಕೆ ಸತ್ಯ ಕಂಡ್ರೆ ಕಾರ್ತಿಕ್‍ಗೆ ಆಗಲ್ಲ. ಅವಳನ್ನು ನೋಡಿದ್ರೆ ಮುಳ್ಳು ಚುಚ್ಚಿದವನ ರೀತಿ ಆಡ್ತಾನೆ. ಕಾರ್ತಿಕ್ ಮನಸ್ಸು ಸಹ ಸತ್ಯ ಬದಲಿಸುತ್ತಾಳಾ, ಡಿವೋರ್ಸ್ ವಿಷಯಕ್ಕೆ ಕಾರ್ತಿಕ್ ಏನಂತಾನೆ ಕಾದು ನೋಡಬೇಕಿದೆ.

  Kannada serial Zee Kannada Sathya serial Karthik Sathya fair divorce paper mother in law watch today episode
  ಸತ್ಯ


  ಲೇಡಿ ರಾಮಾಚಾರಿಗೆ ಕಷ್ಟದ ಮೇಲೆ ಕಷ್ಟ

  ಸತ್ಯ ಹೇಗೋ ಗ್ಯಾರೇಜ್ ನಲ್ಲಿ ಕೆಲಸ ಮಾಡಿಕೊಂಡು, ಬಂದ ಹಣದಿಂದ ಮನೆ ನಡೆಸಿಕೊಮಡು ಖುಷಿಯಾಗಿದ್ದಳು. ಆದ್ರೆ ಈ ಮದುವೆ ಅನ್ನೋ ಬಂಧನದಲ್ಲಿ ಸಿಲುಕಿ ಪರದಾಡುತ್ತಿದ್ದಾಳೆ. ಗಂಡನ ಮನೆಯವರು ಪ್ರೀತಿ ಸಿಗದೇ ಒದ್ದಾಡುತ್ತಿದ್ದಾಳೆ.

  ಇದನ್ನೂ ಓದಿ: Ramachari Marriage: ಚಾರುಗೆ ರಾಮಾಚಾರಿಯನ್ನು ಮದುವೆಯಾಗೋ ಆಸೆ! ದಿಢೀರ್ ಬದಲಾವಣೆ ಹೇಗೆ? 

  ಹೇಗಾದ್ರೂ ತನ್ನನ್ನು ತಾನು ಬದಲಿಸಿಕೊಂಡು ಇರೋಣ ಎಂದ್ರೂ ಅತ್ತೆ ಬಿಡುತ್ತಿಎ. ಈಗ ಸತ್ಯ ಏನ್ ಮಾಡ್ತಾಳೆ ಅನ್ನೋ ಕುತೂಹಲಕ್ಕೆ ಧಾರಾವಾಹಿಯನ್ನು ನೋಡಬೇಕು.
  Published by:Savitha Savitha
  First published: