Paaru Twist: ಅರುಂಧತಿ ಬಲೆಯಲ್ಲಿ ಸಿಲುಕಿದ ಅಖಿಲಾಂಡೇಶ್ವರಿ ಪುತ್ರ; ಪ್ರೀತು ರಾಸಲೀಲೆ ವಿಡಿಯೋ ಟಿವಿಯಲ್ಲಿ!

ಅಖಿಲಾಂಡೇಶ್ವರಿ ಮೇಲಿನ ಕೋಪಕ್ಕೆ ಅವಳ ಮಗನನ್ನು ಅರುಂಧತಿ ರಾಸಲೀಲೆ ಪ್ರಕರಣದಲ್ಲಿ ಸಿಲುಕಿಸಿದ್ದಾಳೆ. ಪ್ರೀತುವಿನ ವಿಡಿಯೋ ಎಲ್ಲ ಟಿವಿಗಳಲ್ಲೂ ಪ್ರಸಾರವಾಗುತ್ತಿದೆ. ಈಗ ಅಖಿಲಾಂಡೇಶ್ವರಿ, ಆದಿತ್ಯ, ಪಾರು, ಜನನಿ ಹೇಗೆ ಪ್ರೀತುವನ್ನು ಈ ಪ್ರಕರಣದಿಂದ ಕಾಪಾಡ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ.

ಪಾರು ಧಾರಾವಾಹಿ

ಪಾರು ಧಾರಾವಾಹಿ

  • Share this:
    ಪಾರು (Paaru), ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಧಾರಾವಾಹಿ. ಪ್ರತಿದಿನ ಸಂಜೆ ಸೋಮವಾರದಿಂದ ಶುಕ್ರವಾರದವರೆಗೆ 6.30ಕ್ಕೆ ಪ್ರಸಾರವಾಗುತ್ತದೆ. ದಿನವೂ ರೋಚಕ ತಿರುವುಗಳಿಂದ ಪಾರು ಅಭಿಮಾನಿಗಳನ್ನು ಹಿಡಿದಿಡುವಲ್ಲಿ ಯಶಸಿಯಾಗುತ್ತಿದೆ. ತನ್ನ ಗತ್ತು, ಗಮ್ಮತ್ತಿನಿಂದ ಅಖಿಲಾಂಡೇಶ್ವರಿ (Akhilandeshwari) ಪಾತ್ರದಲ್ಲಿ ವಿನಯ್ ಪ್ರಸಾದ್ (Vinaya Prasad) ಹೆಸರು ವಾಸಿಯಾಗಿದ್ದಾರೆ. ಅಖಿಲಾಂಡೇಶ್ವರಿ ಏಳಿಗೆ ಸಹಿಸದ ವಿರೋಧಿಗಳು ಆಕೆಯ ಸಂಸಾರ (Family) ಹಾಳು ಮಾಡಲು ಯತ್ನಿಸುತ್ತಿದ್ದಾರೆ. ವಿಲನ್ ಅರುಂಧತ್ತಿ (Arundhati) ಹೇಗಾದ್ರೂ ಅಖಿಲ ಮನೆ ಒಡೆಯಲು ಕಾಯುತ್ತಿದ್ದಾಳೆ. ಮೊದಲು ತಾಯಿ-ಮಕ್ಕಳ ನಡುವೆ ತಂದಿಡಲು ಯತ್ನಿಸಿದಳು. ಅದು ಆಗದ ಕಾರಣ, ಅಖಿಲಾಂಡೇಶ್ವರಿ 2ನೇ ಮಗ (Son) ಪ್ರೀತು ಮುಂದೆ ಇಟ್ಟುಕೊಂಡು ಅಖಿಲಾ ಮಾನ ಮರ್ಯಾದೆ ತೆಗೆಯಲು ಬಲೆ ಹೆಣೆದಿದ್ದಾಳೆ.

    ರಾಸಲೀಲೆ ಪ್ರಕರಣದಲ್ಲಿ ಪ್ರೀತು!

    ಅಖಿಲಾಂಡೇಶ್ವರಿಗೆ ಆದಿತ್ಯ, ಪ್ರೀತು ಎಂದು ಇಬ್ಬರು ಮಕ್ಕಳು. ಪ್ರೀತು ಚಿಕ್ಕ ಮಗ. ಇಬ್ಬರನ್ನೂ ಅಖಿಲಾಂಡೇಶ್ವರಿ ತುಂಬಾ ಶಿಸ್ತಿನಿಂದ, ಜವಾಬ್ದಾರಿಯಿಂದ ಬೆಳೆಸಿದ್ದಾಳೆ. ಆದ್ರೆ ಪ್ರೀತು ಆಗಾಗ ಅಮ್ಮನಿಗೆ ಗೊತ್ತಿಲ್ಲದಂತೆ ಕುಡಿಯುತ್ತಾನೆ.

    ಆಗ ಪಬ್‍ಗೆ ಹೋಗಿ ಕುಡಿಯುವಾಗ ಅಲ್ಲಿ ತನ್ನ ಹಳೆ ಗೆಳತಿಯ ಪರಿಚಯವಾಗುತ್ತೆ. ಆಕೆ ಅಮಲಿನಲ್ಲಿದ್ದ ಪ್ರೀತುವನ್ನು ಮನೆಗೆ ಕರೆದುಕೊಂಡು ಹೋಗಿ, ವಿಡಿಯೋ ಮಾಡಿಕೊಂಡಿದ್ದಾಳೆ.

    ಅರುಂಧತ್ತಿಗೆ ಧಮ್ಕಿ ಹಾಕಿದ ಪ್ರೀತುಗೆ ಶಾಕ್!

    ಪ್ರೀತು ತನ್ನ ಗೆಳತಿ ಮನೆ ಎಂದು ಹೋಗಿರುತ್ತಾನೆ. ಆದ್ರೆ ಅಲ್ಲಿ ಅರುಂಧತಿ, ಅವರ ಅಣ್ಣ ಇರುವುದನ್ನು ನೋಡಿ ಶಾಕ್ ಆಗುತ್ತಾನೆ. ಅಲ್ಲದೇ ಕೋಪಗೊಂಡು ಈಗಾಲೇ ಈ ವಿಷಯ ಅಮ್ಮನಿಗೆ ಹೇಳುತ್ತೇನೆ ಎಂದು ಪೋನ್ ಮಾಡಲು ಹೋಗುತ್ತಾನೆ.

    Kannada serial Zee Kannada Paaru serial watch today episode big twist hero brother in trouble
    ಪಾರು


    ಆಗ ಅರುಂಧತ್ತಿ ಇರು ಪ್ರೀತು ಒಂದು ನಿಮಿಷ ಟಿ.ವಿ ನೋಡು, ಆಮೇಲೆ ಏನು ಬೇಕಾದ್ರೂ ಮಾಡುವಂತೆ ಹೇಳುತ್ತಾಳೆ. ಟಿ.ವಿ ನೋಡಿದ ಪ್ರೀತುಗೆ ಶಾಕ್ ಆಗುತ್ತೆ. ಯಾಕಂದ್ರೆ ತನ್ನದೇ ರಾಸಲೀಲೆ ಟಿ.ವಿಯಲ್ಲಿ ಪ್ರಸಾರವಾಗುತ್ತಿರುವುದನ್ನು ಕಂಡು ಶಾಕ್ ಆಗಿದ್ದಾನೆ.

    ಇದನ್ನೂ ಓದಿ: Kannadathi: ಅಮ್ಮಮ್ಮ ಬರೋ ಖಷಿಯಲ್ಲಿ ಮನೆ ಮಂದಿ! ಸಾನಿಯಾ ಸಿಡಿಮಿಡಿ

    ಮಗನ ವಿಡಿಯೋ ನೋಡಿ ಆತಂಕದಲ್ಲಿ ಅಖಿಲಾಂಡೇಶ್ವರಿ

    ಅಖಿಲಾಂಡೇಶ್ವರಿ ಮನೆಯಲ್ಲಿ ಟಿವಿ ಹಾಕಿದಾಗ ಅವಳಿಗೆ ಆತಂಕವಾಗುತ್ತೆ. ಯಾಕಂದ್ರೆ ಎಲ್ಲಾ ನ್ಯೂಸ್ ಚಾನೆಲ್‍ಗಳಲ್ಲಿ ಪ್ರೀತುವಿನ ವಿಡಿಯೋ ಪ್ಲೇ ಆಗುತ್ತಾ ಇರುತ್ತೆ. ಇದೇನಿದು ಪ್ರೀತುವಿನ ಈ ರೀತಿಯ ವಿಡಿಯೋ ಹರಿದಾಡುತ್ತಿದೆ ಎಂದು ಅಖಿಲಾಂಡೇಶ್ವರಿ ಆತಂಕದಲ್ಲಿದ್ದಾಳೆ. ಏನೂ ಮಾಡಲು ತೋಚದೇ ಸೈಲೆಂಟ್ ಆಗಿ ಕೂತು ಬಿಟ್ಟಿದ್ದಾಳೆ.

    ಗಂಡನ ಅಶ್ಲೀಲ ವಿಡಿಯೋ ನೋಡಿ ಜನನಿ ಕಣ್ಣೀರು

    ಪ್ರೀತುನನ್ನು ಆ ಅವತಾರದಲ್ಲಿ ಟಿ.ವಿಯಲ್ಲಿ ನೋಡಿ ಪತ್ನಿ ಜನನಿ ಕಣ್ಣೀರು ಹಾಕುತ್ತಿದ್ದಾಳೆ. ತನ್ನ ಗಂಡ ಏಕೆ ಈ ರೀತಿ ಮಾಡಿದ ಎಂದು ದಂಗು ಬಡಿದಂತೆ ನಿಂತು ಬಿಟ್ಟಿದ್ದಾಳೆ.  ಆದಿತ್ಯ, ಪಾರು ಸಹ ಶಾಕ್ ಆಗಿದ್ದಾರೆ. ಇದೇನಿದು ಈ ರೀತಿ ಆಗಿ ಹೋಗಿದೆ ಎಂದು ಕಂಗಾಲಾಗಿದ್ದಾರೆ.

    ಇರದ ಹಿಂದೆ ಅರುಂಧತಿ ಕೈವಾಡ ಇದೆ ಎಂದು ಗೊತ್ತಾಗುತ್ತಾ?

    ಅಖಿಲಾಂಡೇಶ್ವರಿ ತೊಂದ್ರೆ ಕೊಡಬೇಕು ಎಂದು ಅರುಂಧತ್ತಿ ಹೀಗಾಲೆ ಒಂದರ ನಂತರ ಒಂದು ತೊಂದರೆ ಕೊಟ್ಟು ಸಿಕ್ಕಿ ಬಿದ್ದಿದ್ದಳು. ಅಖಿಲಾಂಡೇಶ್ವರಿ ಅರುಂಧತ್ತಿ ಮನೆಗೆ ಹೋಗಿ ಕಪಾಳಕ್ಕೆ ಹೊಡೆದು ತನ್ನ ಕುಟುಂಬದ ಸುದ್ದಿಗೆ ಬರಬೇಡಿ ಎಂದು ವಾರ್ನ್ ಮಾಡಿ ಬಂದಿದ್ದಳು.

    Kannada serial Zee Kannada Paaru serial watch today episode big twist hero brother in trouble
    ಆದಿತ್ಯ


    ಅದೇ ಕೋಪಕ್ಕೆ ಅರುಂಧತ್ತಿ ಪ್ರೀತುವನ್ನು ಬಲೆಯಲ್ಲಿ ಸಿಲುಕಿಸಿ, ಮರ್ಯಾದೆ ತೆಗೆಯುತ್ತಿದ್ದಾಳೆ. ಈ ವಿಡಿಯೋ ಹಿಂದೆ ಅರುಂಧತ್ತಿ ಕೈವಾಡ ಇದೆ ಎಂದು ಅಖಿಲಾಂಡೇಶ್ವರಿಗೆ ಗೊತ್ತಾಗುತ್ತಾ ಅನ್ನೋದೇ ಕುತೂಹಲ.

    ಇದನ್ನೂ ಓದಿ: HBD Mahesh Babu: 16 ವರ್ಷವಾದರೂ ಕಡಿಮೆಯಾಗದ ಪೋಕಿರಿ ಪವರ್! ಮಹೇಶ್ ಬಾಬು ಸಿನಿಮಾ ಸೂಪರೋ ಸೂಪರ್

    ತನ್ನ ಮಗನ್ನು ಅಖಿಲಾಂಡೇಶ್ವರಿ ಈ ಪ್ರಕರಣದಿಂದ ಹೇಗೆ ಕಾಪಾಡುತ್ತಾಳೆ. ಇದು ನಿಜಾನಾ, ಸುಳ್ಳಾ, ಪ್ರೀತು ಹೇಗೆ ಈ ಕುತಂತ್ರದಲ್ಲಿ ಸಿಲುಕಿದ, ಈಗ ಆದಿತ್ಯ, ಪಾರು ಪ್ರೀತುನನ್ನು ಪಾರುಮಾಡುತ್ತಾರಾ? ಎಲ್ಲವನ್ನೂ ನೋಡಲು ಸಂಚಿಕೆ ನೋಡಬೇಕು.
    Published by:Savitha Savitha
    First published: