• Home
 • »
 • News
 • »
 • entertainment
 • »
 • Paaru: ಅರಸನಕೋಟೆಯ ಕಿರಿಯ ಪುತ್ರನ ರಾಸಲೀಲೆ ವೀಡಿಯೋ ಲೀಕ್ ಆಗುತ್ತಾ? ಶತ್ರುಗಳ ಬಲೆಗೆ ಸಿಲುಕ್ತಾನಾ ಪ್ರೀತು?

Paaru: ಅರಸನಕೋಟೆಯ ಕಿರಿಯ ಪುತ್ರನ ರಾಸಲೀಲೆ ವೀಡಿಯೋ ಲೀಕ್ ಆಗುತ್ತಾ? ಶತ್ರುಗಳ ಬಲೆಗೆ ಸಿಲುಕ್ತಾನಾ ಪ್ರೀತು?

ಆದಿ-ಪ್ರೀತು

ಆದಿ-ಪ್ರೀತು

ಪ್ರೀತು ಅಣ್ಣನನ್ನು ಅಪ್ಪಿಕೊಂಡು ಕಣ್ಣೀರು ಹಾಕುತ್ತಾನೆ. ಏನ್ ಆಯ್ತು ಎಂದು ಹೇಳು ಅಂದ್ರೆ ಹೇಳದೇ ಮೌನವಾಗಿ, ಬೇಸರಗೊಂಡಿದ್ದಾನೆ. ತ್ಯ ಹೇಳಿದ್ರೆ ವಿಡಿಯೋ ಲೀಕ್ ಮಾಡ್ತೀವಿ ಎಂದು ಅರುಂಧತಿ ಮತ್ತು ಆಕೆಯ ಅಣ್ಣ ಬೆದರಿಕೆ ಹಾಕಿದ್ದಾರೆ. ಆ ವಿಷಯ ಗೊತ್ತಾದ್ರೆ ಮನೆಯ ಮರ್ಯಾದೆ ಹಾಳಾಗುತ್ತದೆ ಅಂತ ಪ್ರೀತು ಎಲ್ಲವನ್ನು ಸಹಿಸಿಕೊಂಡು ಸುಮ್ಮನಿದ್ದಾನೆ.

ಮುಂದೆ ಓದಿ ...
 • Share this:

  ಪಾರು (Paaru), ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತದೆ. ದಿನವೂ ರೋಚಕ ತಿರುವುಗಳಿಂದ ಪಾರು ಅಭಿಮಾನಿಗಳನ್ನು (Fans) ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಅಖಿಲಾಂಡೇಶ್ವರಿ ಏಳಿಗೆಯನ್ನು ಸಹಿಸದ ವಿರೋಧಿಗಳ ಬಣ ಅಖಿಲಾಂಡೇಶ್ವರಿ ಕುಟುಂಬಕ್ಕೆ ತೊಂದರೆ ಕೊಡುತ್ತಲೇ ಇದೆ. ಮೊದಲು ಮನೆಯವರ ಮಧ್ಯೆ ತಂದಿಟ್ಟು ತಮಾಷೆ ನೋಡಲು ಪ್ರಯತ್ನಿಸಿದ್ರು. ಅದು ಆಗದ ಕಾರಣ ಅಖಿಲಾಂಡೇಶ್ವರಿ ಎರಡನೇ ಮಗ ಪ್ರೀತುವನ್ನು ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ. ಪ್ರೀತುಗೆ ಪಾರ್ಟಿ ಮಾಡೋ ಅಭ್ಯಾಸವನ್ನೇ ಮುಂದಿಟ್ಟುಕೊಂಡು, ಅರುಂಧತಿ ತಾನೇ ಒಬ್ಬ ಹುಡುಗಿಯನ್ನು ಬಿಟ್ಟು ಇಬ್ಬರು ಒಟ್ಟಿಗೆ ಇರುವ ವಿಡಿಯೋ (Video) ಮಾಡಿ, TV ಚಾನೆಲ್‍ಗಳಿಗೆ ಕೊಡುವುದಾಗಿ ಹೇಳಿ ಪ್ರೀತುವನ್ನು ಹೆದರಿಸುತ್ತಿದ್ದಾಳೆ.


  ಅಣ್ಣನ ಅಪ್ಪಿಕೊಂಡು ಅಳುತ್ತಿರುವ ಪ್ರೀತು


  ಪ್ರೀತು ಇಡೀ ದಿನ ಮನೆಗೆ ಬಂದಿರಲಿಲ್ಲ. ಫೋನ್ ಕೂಡ ರಿಸೀವ್ ಮಾಡಿರಲಿಲ್ಲ. ಪ್ರೀತು ಬಂದಿದ್ದೇ ತಡ ಆದಿತ್ಯ ಎಲ್ಲ ಹೋಗಿದ್ದೆ ಎಂದು ಕೇಳಿದಾಕ್ಷಣ, ಪ್ರೀತು ಅಣ್ಣನನ್ನು ಅಪ್ಪಿಕೊಂಡು ಕಣ್ಣೀರು ಹಾಕುತ್ತಾನೆ. ಏನ್ ಆಯ್ತು ಎಂದು ಹೇಳು ಅಂದ್ರೆ ಹೇಳದೇ ಮೌನವಾಗಿ, ಬೇಸರಗೊಂಡಿದ್ದಾನೆ.


  Kannada serial Zee Kannada Paaru serial watch today episode Aditya brother in problem he hug Aditya and crying
  ಪಾರು ಧಾರಾವಾಹಿ


  ಪ್ರೀತು ಪತ್ನಿ ಜನನಿಗೆ ತಿಳಿಯುತ್ತಾ ವಿಷ್ಯಾ?


  ಇನ್ನು ಪ್ರೀತು ಮನೆಗ ಬರದಿದ್ದಕ್ಕೆ ಪತ್ನಿ ಜನನಿ ಕೂಡ ಗಾಬರಿಯಾಗಿದ್ದಳು. ಪ್ರೀತುನಾ ಎಷ್ಟೇ ವಿಚಾರಿಸಿದ್ರೂ ಅವನು ಏನೂ ಬಾಯ್ಬಿಡುತ್ತಿಲ್ಲ. ಸತ್ಯ ಹೇಳಿದ್ರೆ ವಿಡಿಯೋ ಲೀಕ್ ಮಾಡ್ತೀವಿ ಎಂದು ಅರುಂಧತಿ ಮತ್ತು ಆಕೆಯ ಅಣ್ಣ ಬೆದರಿಕೆ ಹಾಕಿದ್ದಾರೆ. ಆ ವಿಷಯ ಗೊತ್ತಾದ್ರೆ ಮನೆಯ ಮರ್ಯಾದೆ ಹಾಳಾಗುತ್ತದೆ ಅಂತ ಪ್ರೀತು ಎಲ್ಲವನ್ನು ಸಹಿಸಿಕೊಂಡು ಸುಮ್ಮನಿದ್ದಾನೆ.


  ಇದನ್ನೂ ಓದಿ: Vijay Deverakonda: ವಿಜಯ್ ದೇವರಕೊಂಡ ಅವರ ‘ಲೈಗರ್’ ಸಿನಿಮಾ ನೋಡುವುದಕ್ಕೂ ಮುನ್ನ ಈ ಚಿತ್ರಗಳನ್ನು ನೋಡಿ 


  ಪ್ರೀತು ಹೇಗೆ ಈ ಪ್ರಕರಣದಲ್ಲಿ ಸಿಲುಕಿದ?


  ಅರುಂಧತಿ ಅಖಿಲಾಂಡೇಶ್ವರಿ ಮೈದುನನ ಹೆಂಡತಿ ದಾಮಿನಿಯನ್ನು ಬಳಸಿಕೊಂಡು ಮನೆಯ ವಿಷಯವನ್ನೆಲ್ಲಾ ತಿಳಿದುಕೊಳ್ಳುತ್ತಿದ್ದಳು. ಹಾಗೇ ಪಾರು ಮತ್ತು ಜನನಿ ಮಧ್ಯೆ ವೈಷಮ್ಯ ಮೂಡುವಂತೆ ಮಾಡಿದ್ದಳು.


  ಒಂದು ದಿನ ಕೋಪದಲ್ಲಿ ಜನನಿ, ಪಾರ್ವತಿ ಫೋಟೋ ಸುಟ್ಟಿರುತ್ತಾಳೆ. ಅದಾದ ಎರಡು ದಿನದ ಬಳಿಕೆ ಪಾರ್ವತಿ ಮೇಲೆ ಆಸಿಡ್ ದಾಳಿ ನಡೆಯುತ್ತೆ. ಜನನಿ ಮೊಬೈಲ್‍ನಿಂದ ದಾಮಿನಿ ಮೆಸೇಜ್ ಮಾಡಿ, ಮನೆಯವರಿಗೆ ಜನನಿ ಮೇಲೆ ಅನುಮಾನ ಬರುವಂತೆ ಮಾಡಿರುತ್ತಾಳೆ.


  ಹೆಂಡತಿ ಮೇಲಿನ ಕೋಪಕ್ಕೆ ಮತ್ತೆ ಕುಡಿದ ಪ್ರೀತು!


  ಆಗ ತನ್ನ ಹೆಂಡತಿ ಜನನಿ ಮೇಲಿನ ಕೋಪಕ್ಕೆ ಒರೀತು ಮತ್ತೆ ಕುಡಿಯಲು ಶುರು ಮಾಡುತ್ತಾನೆ. ಅವನು ಹೋಗುತ್ತಿದ್ದ ಜಾಗಕ್ಕೆ ಅರುಂಧತ್ತಿ ಪ್ರೀತು, ಹಳೇ ಗೆಳತಿಯನ್ನು ಕರೆಸಿ, ಇಬ್ಬರು ಒಟ್ಟಿಗೆ ಇರುವಂತೆ ಪ್ಲ್ಯಾನ್ ಮಾಡುತ್ತಾಳೆ. ಆಗ ಪ್ರೀತುವೂ ಗೆಳತಿಯನ್ನು ನಂಬಿ ಆಕೆ ಮನೆಗೆ ಹೋದಾಗ ಈ ವಿಡಿಯೋ ತೆಗೆದಿರುತ್ತಾರೆ.


  ಆದಿತ್ಯ, ಪಾರು ಪ್ರೀತು ಮೌನಕ್ಕೆ ಕಾರಣ ಹುಡುಕುತ್ತಾರಾ?


  ಆದಿತ್ಯ, ಪಾರು ಪ್ರೀತು ಈ ರೀತಿ ಮೌನವಾಗಿದ್ರೆ, ನೋಡಿಕೊಂಡು ಸುಮ್ಮನೆ ಇರಲ್ಲ. ಇಬ್ಬರು ಅವನ ಮೌನಕ್ಕೆ ಕಾರಣ ಹುಡುಕುತ್ತಾರೆ. ಪ್ರೀತುಗೆ ಏನಾಯ್ತು ಅನ್ನುವುದರ ಬಗ್ಗೆ ಪತ್ತೆ ಹಚ್ಚಿ, ಅವನ ಸಮಸ್ಯೆ ಪರಿಹರಿಸಬಹುದು.


  Kannada serial Zee Kannada Paaru serial watch today episode Aditya brother in problem he hug Aditya and crying
  ಪಾರು ಧಾರಾವಾಹಿ


  ಇದನ್ನೂ ಓದಿ: Ramachari Serial: ಅಣ್ಣ-ಅತ್ತಿಗೆ ಮನೆ ಬಿಟ್ಟು ಹೋಗಲು ನಿಜವಾದ ಕಾರಣವೇನು? ಅಪರ್ಣ ಡೈರಿ ರಾಮಾಚಾರಿ ಕೈಯಲ್ಲಿ! 


  ಇನ್ನು ಅರುಂಧತಿ ಆ ವಿಡಿಯೋ ಮುಂದಿಟ್ಟುಕೊಂಡು, ಪ್ರೀತು ಬಳಿ ಇನ್ಯಾವ ಕೆಲಸ ಮಾಡಿಸುತ್ತಾಳೋ ಗೊತ್ತಿಲ್ಲ. ಅಖಿಲಾಂಡೇಶ್ವರಿ ಕಂಪನಿಗೆ ಸಂಬಂಧ ಪಟ್ಟ ವಿಷಯಗಳನ್ನು ಪ್ರೀತು ಮೂಲಕ ತಿಳಿದಿಕೊಳ್ಳಬಹುದು. ಅವರು ಬ್ಯುಸಿನೆಸ್ ಹಾಳು ಮಾಡಿ ತಮಾಷೆ ನೋಡಬಹುದು.


  ಇಲ್ಲ, ಮನೆ ಒಡೆಯುವ ಕೆಲಸ ಮಾಡಬಹುದು. ಒಟ್ಟಿನಲ್ಲಿ ಅಖಿಲಾಂಡೇಶ್ವರಿ ಮರ್ಯಾದೆ ತೆಗೆಯುವುದೇ ಅರುಂಧತ್ತಿ ಉದ್ದೇಶವಾಗಿದೆ. ಧಾರಾವಾಹಿ ಕುತೂಹಲ ಮೂಡಿಸುತ್ತಿದ್ದು, ಸಂಚಿಕೆಗಳನ್ನು ನೋಡಬೇಕು.

  Published by:Savitha Savitha
  First published: