• Home
 • »
 • News
 • »
 • entertainment
 • »
 • Gattimela: ಧ್ರುವನ ಕಿಡ್ನಾಪ್​ ಮಾಡಿ ಮದುವೆಯಾಗ್ತಾಳಾ ಅದಿತಿ? ಅತ್ತಿಗೆ ಸಹಾಯ ಸಿಗುತ್ತಾ?

Gattimela: ಧ್ರುವನ ಕಿಡ್ನಾಪ್​ ಮಾಡಿ ಮದುವೆಯಾಗ್ತಾಳಾ ಅದಿತಿ? ಅತ್ತಿಗೆ ಸಹಾಯ ಸಿಗುತ್ತಾ?

ಅದಿತಿ

ಅದಿತಿ

ಅದಿತಿಗೆ ಮನೆಯಲ್ಲಿ ಬೇರೆ ಗಂಡು ನೋಡಿದ್ದು, ಇಷ್ಟರಲ್ಲಿ ನಿಶ್ವಿತಾರ್ಥ ಇದೆ. ಅದಕ್ಕೆ ಮದುವೆಯನ್ನು ಹೇಗಾದ್ರೂ ತಪ್ಪಿಸಬೇಕು. ಧ್ರುವನನ್ನು ಮದುವೆಯಾಗಬೇಕು ಎಂದು, ಅದಿತಿ-ಆದ್ಯಾ ಸೇರಿ ಧ್ರುವನನ್ನು ಕಿಡ್ನಾಪ್ ಮಾಡೋ ಪ್ಲ್ಯಾನ್ ಮಾಡಿದ್ದಾರೆ. ಅದಿತಿ, ಆದ್ಯಾಳಾ ಕಿಡ್ನಾನ್ ಪ್ಲ್ಯಾನ್ ಸಕ್ಸಸ್ ಆಗುತ್ತಾ? ನೋಡಬೇಕು.

ಮುಂದೆ ಓದಿ ...
 • Share this:

  ಗಟ್ಟಿಮೇಳ (Gattimela), ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರವಾಗುತ್ತಿರುವ ಜಪಪ್ರಿಯ ಧಾರಾವಾಹಿ (Serial). ಸೋಮವಾರದಿಂದ ಶುಕ್ರವಾರದವರಗೆ ರಾತ್ರಿ 8 ಗಂಟೆಗೆ ಶುರುವಾಗುತ್ತೆ. ಬಡತನದಲ್ಲಿರುವ 4 ಹೆಣ್ಣು ಮಕ್ಕಳ ತಾಯಿ ಎಲ್ಲರಿಗೂ ಮದುವೆ ಮಾಡಿ ಹೇಗೆ ತನ್ನ ಜವಾಬ್ದಾರಿ ನಿಬಾಯಿಸುತ್ತಾಳೆ ಅನ್ನೋ ಕಥೆ. ಗಟ್ಟಿಮೇಳ ಧಾರಾವಾಹಿಯಲ್ಲಿ 4 ಹೆಣ್ಣು ಮಕ್ಕಳ ತಾಯಿ ಪರಿಮಳ. ಆಕೆಗೆ ಆರತಿ, ಅಮೂಲ್ಯ , ಅದಿತಿ, ಅಂಜು ಎಂಬ ಮಕ್ಕಳು. ಆರತಿ, ಅಮೂಲ್ಯಗೆ ಮದುವೆಯಾಗಿದ್ದು ಇಬ್ಬರು ಅಣ್ಣ-ತಮ್ಮ ಅಂದ್ರೆ ವೇದಾಂತ್, ವಿಕ್ರಾಂತ್‍ರನ್ನು ಮದುವೆಯಾಗಿದ್ದಾರೆ. ಈಗ ಅದಿತಿ ವೇದಾಂತ್ ತಮ್ಮ ಧ್ರುವ (Dhruva)ನನ್ನು ಪ್ರೀತಿಸುತ್ತಿದ್ದು, ಹೇಗಾದ್ರೂ ಮದುವೆ (Marriage) ಮಾಡಿಕೊಳ್ಳಬೇಕು ಎಂದು ಪ್ಲ್ಯಾನ್ (Plan) ಮಾಡುತ್ತಿದ್ದಾಳೆ. ಧ್ರುವನಿಗೆ ಅಪಘಾತವಾದ ಕಾರಣ ಏನೂ ನೆನಪಿಲ್ಲ. ಕೂತಲ್ಲೇ ಕೂತಿರುತ್ತಾನೆ.


  ಧ್ರುವನನ್ನು ಪ್ರೀತಿಸುತ್ತಿರುವ ಅದಿತಿ


  ವೇದಾಂತ್ ತಾಯಿ ಸುಹಾಸಿನಿ. ಆಕೆಗೆ ತನ್ನ ಇಬ್ಬರು ಸೊಸೆಯಂದಿರು ಆರತಿ, ಅಮೂಲ್ಯ ಬಡವರ ಮನೆಯವರು ಎಂದು ಸ್ವಲ್ಪವೂ ಇಷ್ಟ ಇಲ್ಲ. ಚಾನ್ಸ್ ಸಿಕ್ಕಾಗೆಲ್ಲಾ ಅವರಿಗೆ ಅವಮಾನ ಮಾಡುತ್ತಲೇ ಇರುತ್ತಾಳೆ. ಈಗ ಅದಿತಿಯೂ ಧ್ರುವನನ್ನು ಪ್ರೀತಿಸುತ್ತಿದ್ದು, ಅದಕ್ಕೆ ಆಕೆ ಒಪ್ಪಲು ಚಾನ್ಸೇ ಇಲ್ಲ ಎಂದು ಅದಿತಿಗೆ ಗೊತ್ತು. ಅಲ್ಲದೇ ಮನೆಯಲ್ಲಿ ಹೇಳೋಣ ಎಂದ್ರೆ, ಧ್ರುವನಿಗೆ ಹುಷಾರಿಲ್ಲದ ಕಾರಣ ಯಾರೂ ಒಪ್ಪಲ್ಲ ಎಂದು ಅದಿತಿ ಬೇಸರ ಮಾಡಿಕೊಂಡಿದ್ದಾಳೆ.

  Zee Kannada serial, Kannada serial, Gattimela serial, Gattimela serial Kannada cast, Kidnap plan in serial, ಗಟ್ಟಿಮೇಳ ಧಾರಾವಾಹಿ, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
  ಧ್ರುವ


  ಧ್ರುವನಿಗೆ ಅಪಘಾತ ಮಾಡಿಸಿದ್ದ ಸುಹಾಸಿನಿ
  ಇನ್ನು ಸುಹಾಸಿನಿ, ವೇದಾಂತ್ ಅವರಿಗೆ ನಿಜವಾದ ತಾಯಿ ಅಲ್ಲ. ಎಲ್ಲರೂ ಸುಹಾಸಿನಿ ಅಕ್ಕ ವೈದೇಹಿ ಮಕ್ಕಳು. ಆಸ್ತಿಗಾಗಿ ಮಕ್ಕಳು ಚಿಕ್ಕವರಿದ್ದಾಗಲೇ, ಅಕ್ಕನಿಂದ ದೂರ ಮಾಡಿ ತಾನು ಸಾಕುತ್ತಿದ್ದಳು. ಈಗ ವಿಕ್ರಾಂತ, ಧ್ರುವ ಹೇಗಾದ್ರೂ ತಾಯಿಯನ್ನು ಹುಡುಕಬೇಕು ಎಂದು ಪಣ ತೊಟ್ಟಿದ್ದರು. ಧ್ರುವನಿಗೆ ಅವನ ತಾಯಿ ವೈದೇಹಿ ಎಂದು ತಿಳಿದು, ಅದನ್ನು ಮನೆಯಲ್ಲಿ ತಿಳಿಸಲು ಬರುತ್ತಿದ್ದಾಗ, ಧ್ರುವಿನಿಗೆ ಅಪಘಾತ ಮಾಡಿಸಿದ್ದಾಳೆ. ಧ್ರುವ ಸದ್ಯ ಬದುಕುಳಿದಿದ್ದು, ಏನೂ ಮಾತನಾಡದೇ ಕೂತಲ್ಲೇ ಕೂತಿದ್ದಾನೆ. ಅವನು ಸರಿ ಹೋಗಬಾರದೆಂದು, ಬೇರೆ ಮಾತ್ರೆಗಳನ್ನು ನೀಡುತ್ತಿದ್ದಾಳೆ.


  ಇದನ್ನೂ ಓದಿ: Paaru: ಅರಸನಕೋಟೆಯ ಕಿರಿಯ ಪುತ್ರನ ರಾಸಲೀಲೆ ವೀಡಿಯೋ ಲೀಕ್ ಆಗುತ್ತಾ? ಶತ್ರುಗಳ ಬಲೆಗೆ ಸಿಲುಕ್ತಾನಾ ಪ್ರೀತು?


  ಅದಿತಿಗೆ ಅತ್ತಿಗೆ ಆದ್ಯಾ ಬೆಂಬಲ
  ಅದಿತಿ ಧ್ರುವನ್ನು ದಿನ ನೋಡಬೇಕು ಎಂದು, ಅವನನ್ನು ನೋಡಿಕೊಳ್ಳುವ ನರ್ಸ್ ವೇಷದಲ್ಲಿ ಅವರು ಮನೆಗೆ ಹೋಗುತ್ತಾ ಇರುತ್ತಾಳೆ. ಆಗ ಆದ್ಯಾಗೆ ಇಬ್ಬರ ಪ್ರೀತಿ ವಿಷಯ ಗೊತ್ತಾಗುತ್ತೆ. ಅಂದಿನಿಂದ ಅವಳ ಬೆಂಬಲ ನೀಡುತ್ತಾ ಬಂದಿರುತ್ತಾಳೆ. ಈಗಲೂ ಅಷ್ಟೇ ಅದಿತಿ, ಧ್ರುವನನ್ನು ಹೇಗಾದ್ರೂ ಒಂದು ಮಾಡಬೇಕು ಎಂದು ಕಾಯುತ್ತಾ ಇದ್ದಾಳೆ.


  Zee Kannada serial, Kannada serial, Gattimela serial, Gattimela serial Kannada cast, Kidnap plan in serial, ಗಟ್ಟಿಮೇಳ ಧಾರಾವಾಹಿ, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
  ಅದಿತಿ


  ಕಿಡ್ಯಾಪ್ ಮಾಡೋ ಪ್ಲ್ಯಾನ್ ಮಾಡಿದ ಅದಿತಿ-ಆದ್ಯಾ
  ಅದಿತಿಗೆ ಮನೆಯಲ್ಲಿ ಬೇರೆ ಗಂಡು ನೋಡಿದ್ದು, ಇಷ್ಟರಲ್ಲಿ ನಿಶ್ವಿತಾರ್ಥ ಇದೆ. ಅದಕ್ಕೆ ಮದುವೆಯನ್ನು ಹೇಗಾದ್ರೂ ತಪ್ಪಿಸಬೇಕು. ಧ್ರುವನನ್ನು ಮದುವೆಯಾಗಬೇಕು ಎಂದು, ಇಬ್ಬರು ಸೇರಿ ಧ್ರುವನನ್ನು ಕಿಡ್ನಾಪ್ ಮಾಡೋ ಪ್ಲ್ಯಾನ್ ಮಾಡಿದ್ದಾರೆ. ಇಬ್ಬರೇ ಹೆಂಗಸರು ಆಗಲ್ಲ ಎಂದು ಕಾಂತನ ಸಹಾಯ ಕೇಳಿದ್ದಾರೆ.


  ಅಣ್ಣಂದಿರು ಮಲಗುವುದನ್ನು ಕಾಯುತ್ತಿರುವ ಆದ್ಯಾ!
  ಧ್ರುವನನ್ನು ಕಿಡ್ನಾಪ್ ಮಾಡ ಬೇಕು ಅಂದ್ರೆ ಮನೆಯಲ್ಲಿ ಎಲ್ಲರೂ ಮಲಗಬೇಕು. ಆದ್ರೆ ವೇದಾಂತ್, ವಿಕ್ಕಿ ಯಾವೋದೂ ಕೆಲಸ ಮಾಡುತ್ತಾ ಕೂತಿದ್ದಾರೆ. ಆದ್ಯಾ ಅವರ ಬಳಿಯೇ ಕೂತು, ಇವರು ಇನ್ನೂ ಮಲಗುತ್ತಿಲ್ಲ ಎಂದು ಕಾಯುತ್ತಿದ್ದಾಳೆ. ಟೈಮ್ ಆಯ್ತು ಮಲಗಿ ಎಂದು ಹೇಳುತ್ತಿದ್ದಾಳೆ.


  ಇದನ್ನೂ ಓದಿ: Vikrant Rona: ಬಾಕ್ಸ್ ಆಫೀಸ್​ನಲ್ಲಿ 11ನೇ ದಿನವೂ ಭರ್ಜರಿ ಕಲೆಕ್ಷನ್; 200 ಕೋಟಿ ಕ್ಲಬ್ ಸೇರಲಿದ್ಯಾ ಕಿಚ್ಚ ಸುದೀಪ್ ಚಿತ್ರ!


  ಅದಿತಿ, ಆದ್ಯಾಳಾ ಕಿಡ್ನಾನ್ ಪ್ಲ್ಯಾನ್ ಸಕ್ಸಸ್ ಆಗುತ್ತಾ? ಅಥವಾ ಮನೆಯಲ್ಲಿ ಸಿಕ್ಕಿ ಹಾಕಿಕೊಳ್ತಾರಾ? ಅದಿತಿ, ಧ್ರುವನ ಪ್ರೀತಿ ಗೆಲ್ಲುತ್ತಾ ಕಾದ ನೋಡಬೇಕಿದೆ. ಎಲ್ಲದಕ್ಕೂ ಸಂಚಿಕೆಗಳನ್ನು ನೋಡಬೇಕು.

  Published by:Savitha Savitha
  First published: