• Home
  • »
  • News
  • »
  • entertainment
  • »
  • Kannada Film Hejjaru: ಜೊತೆ ಜೊತೆಯಲಿ ಸೀರಿಯಲ್ ಟೈಟಲ್ ಟ್ರ್ಯಾಕ್ ರೈಟರ್ ಈಗ ಸಿನಿಮಾ ಡೈರೆಕ್ಟರ್ !

Kannada Film Hejjaru: ಜೊತೆ ಜೊತೆಯಲಿ ಸೀರಿಯಲ್ ಟೈಟಲ್ ಟ್ರ್ಯಾಕ್ ರೈಟರ್ ಈಗ ಸಿನಿಮಾ ಡೈರೆಕ್ಟರ್ !

ಶೇಕಡ 80 ರಷ್ಟು ಹೆಜ್ಜಾರು ಸಿನಿಮಾ ಶೂಟಿಂಗ್ ಕಂಪ್ಲೀಟ್

ಶೇಕಡ 80 ರಷ್ಟು ಹೆಜ್ಜಾರು ಸಿನಿಮಾ ಶೂಟಿಂಗ್ ಕಂಪ್ಲೀಟ್

ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಚಿತ್ರದ ದೇವರೆ ಹಾಡನ್ನ ಇದೇ ಹರ್ಷಪ್ರಿಯಾ ಬರೆದಿದ್ದಾರೆ. ಈ ಹಿಂದೆ ನವೀನ್ ಕೃಷ್ಣ ಅಭಿನಯದ ಧಿಮಾಕು ಚಿತ್ರಕ್ಕೂ ಹರ್ಷಪ್ರಿಯಾ ಹಾಡು ಬರೆದಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡ ಕಿರುತೆರೆಯ (Small Screen) ಲೋಕದಲ್ಲಿ ಜೊತೆ ಜೊತೆಯಲಿ ಸೀರಿಯಲ್ ಭಾರೀ (Full Sound) ಸೌಂಡ್ ಮಾಡಿದೆ. ತನ್ನ ಟೈಟಲ್ (Title Track) ಟ್ರ್ಯಾಕ್ ನಿಂದಲೇ ಇದು ಅದೆಷ್ಟೋ ಸೀರಿಯಲ್ ಪ್ರಿಯರ ಹೃದಯ ಕದ್ದಿದೆ. ಒಂದು ರೀತಿ ಈ ಟೈಟಲ್ ಇಡೀ ಸೀರಿಯಲ್​ನ ಪ್ರಮುಖ ಆಕರ್ಷಣೆನೆ ಆಗಿದೆ. ಇಂತಹ ಹಾಡನ್ನ ಬರೆದ (Lyrical Writer) ರೈಟರ್ ಪುಟ್ಟಕ್ಕನ ಮಕ್ಕಳು, ಮಹಾನಾಯಕ, ಕಿನ್ನರಿ ಹೀಗೆ ಪಟ್ಟಿ ದೊಡ್ಡದಿದೆ. ಹೆಚ್ಚು ಕಡಿಮೆ 25 ಕ್ಕೂ ಹೆಚ್ಚು ಸೀರಿಯಲ್ ಟೈಟಲ್ ಟ್ರ್ಯಾಕ್ ಬರೆದ ರೈಟರ್ ಮೊಟ್ಟ ಮೊದಲ ಬಾರಿಗೆ ಡೈರೆಕ್ಟರ್ ಆಗಿದ್ದಾರೆ. ಮೊದಲ ಪ್ರಯತ್ನದಲ್ಲಿಯೇ ವಿಶಿಷ್ಟ ಟೈಟಲ್ ಅನ್ನೂ ಇಟ್ಟಿದ್ದಾರೆ. ಆ ಸಿನಿಮಾದ ಟೈಟಲ್ ಅನ್ನ ಕೂಡ ಈಗ ರಿವೀಲ್ ಮಾಡಿದ್ದಾರೆ.


ಕನ್ನಡ ಚಿತ್ರರಂಗದಲ್ಲಿ ಅತ್ಯದ್ಭುತ ಲಿರಿಕ್ ರೈಟರ್ಸ್ ಇದ್ದಾರೆ. ಕೆಲವರು ಸೀರಿಯಲ್​ಗೆ ಸೀಮಿತ ಆಗಿದ್ದಾರೆ. ಇನ್ನು ಕೆಲವರು ಸಿನಿಮಾಗೆ ಫಿಕ್ಸ್ ಆಗಿದ್ದಾರೆ. ಆದರೆ ಎರಡನ್ನೂ ಮ್ಯಾನೇಜ್ ಮಾಡೋ ರೈಟರ್ಸ್ ಕಡಿಮೇನೆ ಬಿಡಿ. ಆದರೆ ನಾವು ಈಗ ಹೇಳ್ತಿರೋ ಈ ರೈಟರ್ ಕೊಂಚ ಡಿಫರಂಟ್ ಆಗಿದ್ದಾರೆ.


ಹೌದು, ಇವರೇ ಹರ್ಷಪ್ರಿಯಾ. ಇವರ ಮೂಲ ಹೆಸರು ರಾಜು. ಆದರೆ ಕಿರುತೆರೆ ಲೋಕದಲ್ಲಿ ಹರ್ಷಪ್ರಿಯಾ ಅಂತಲೇ ಗುರುತಿಸಿಕೊಂಡಿದ್ದಾರೆ. ಆಗಾಗ ತೆರೆ ಮೇಲೂ ಕಾಣಿಸಿಕೊಂಡದ್ದು ಇದೆ.


ಜೊತೆ ಜೊತೆಯಲಿ ಸೀರಿಯಲ್ ಶೀರ್ಷಿಕೆ ಹಾಡು ಬರೆದ ಹರ್ಷಪ್ರಿಯಾ
ಹರ್ಷಪ್ರಿಯಾ ಬರೆದ ಹಾಡು ಹಿಟ್ ಆಗಿವೆ. ಸೀರಿಯಲ್ ಲೋಕದಲ್ಲಿ ಒಳ್ಳೆ ಹೆಸರು ಕೂಡ ಇದೆ. ಸ್ಕ್ರೀನ್ ಪ್ಲೇ ರೈಟರ್ ಕೂಡ ಹೌದು.ಇಂತಹ ಹರ್ಷಪ್ರಿಯಾ ಜೊತೆ ಜೊತೆಯಲಿ ಸೀರಿಯಲ್ ಟೈಟಲ್ ಟ್ರ್ಯಾಕ್ ಬರೆದಿದ್ದಾರೆ. ಇದು ಸೂಪರ್ ಹಿಟ್ ಆಗಿದೆ. ಸೀರಿಯಲ್​ಗೂ ಒಂದು ಮೈಲೇಜ್ ತಂದುಕೊಟ್ಟಿದೆ.


Kannada Serial Title Writer Harshapriya entered to Sandalwood
ನೆಗೆಟಿವ್ ಪಾತ್ರದಲ್ಲಿ ನಟ-ನಿರ್ದೇಶಕ ನವೀನ್ ಕೃಷ್ಣ


ಹರ್ಷಪ್ರಿಯಾ ಸುಮಾರು 25ಕ್ಕೂ ಹೆಚ್ಚು ಸೀರಿಯಲ್​ಗಳಿಗೆ ಟೈಟಲ್ ಟ್ರ್ಯಾಕ್ ಬರೆದಿದ್ದಾರೆ. ಅವುಗಳಲ್ಲಿ ಪುಟ್ಟಕ್ಕನ ಮಕ್ಕಳು, ಮಹಾನಾಯಕ, ಕಿನ್ನರಿ ಸೇರಿದಂತೆ ಇನ್ನೂ ಹಲವು ಸೀರಿಯಲ್​ಗಳೂ ಇವೆ.


ಹೆಬ್ಬುಲಿ ಕಿಚ್ಚನಿಗಾಗಿ ದೇವರೆ ಹಾಡು ಬರೆದ ಹರ್ಷಪ್ರಿಯಾ
ಹರ್ಷಪ್ರಿಯಾ ಸೀರಿಯಲ್​​ಗೂ ಕೆಲಸ ಮಾಡಿದ್ದಾರೆ. ಸಿನಿಮಾಗಳಿಗೂ ಕೆಲಸ ಮಾಡಿದ್ದಾರೆ. ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಚಿತ್ರದ ದೇವರೆ ಹಾಡನ್ನ ಇದೇ ಹರ್ಷಪ್ರಿಯಾ ಬರೆದಿದ್ದಾರೆ. ಈ ಹಿಂದೆ ನವೀನ್ ಕೃಷ್ಣ ಅಭಿನಯದ ಧಿಮಾಕು ಚಿತ್ರಕ್ಕೂ ಹರ್ಷಪ್ರಿಯಾ ಹಾಡು ಬರೆದಿದ್ದಾರೆ.


ಹೆಜ್ಜಾರು ಹರ್ಷಪ್ರಿಯಾ ಮೊದಲ ನಿರ್ದೇಶನದ ಸಿನಿಮಾ
ಕನ್ನಡದ ಸೀರಿಯಲ್​ಗಳಿಗೆ ಟೈಟಲ್ ಟ್ರ್ಯಾಕ್ ಬರೆಯೋದು. ಸೀರಿಯಲ್ ಸ್ಕ್ರೀನ್​ ಪ್ಲೇ ಮಾಡೋದು, ಹೀಗೆ ಬರವಣಿಗೆ ಕೆಲಸದಲ್ಲಿಯೇ ಇದ್ದ ಹರ್ಷಪ್ರಿಯಾ, ಈಗ ನಿರ್ದೇಶನಕ್ಕೆ ಹೆಜ್ಜೆ ಇಟ್ಟಿದ್ದಾರೆ. ಮೊದಲ ಹೆಜ್ಜೆಯ ಸಿನಿಮಾಕ್ಕೆ "ಹೆಜ್ಜಾರು" ಅನ್ನೋ ವಿಶೇಷ ಟೈಟಲ್​ ಅನ್ನೆ ಇಟ್ಟಿದ್ದಾರೆ.


ಇದನ್ನೂ ಓದಿ: Daali Dhananjaya: ಮತ್ತೆ ಒಂದಾದ ರತ್ನನ್ ಪ್ರಪಂಚದ ಜೋಡಿ! ಡಾಲಿ ಧನಂಜಯ್​ಗೆ ರೋಹಿತ್ ಪದಕಿ ಮತ್ತೊಂದು ಸಿನಿಮಾ


ಹೆಜ್ಜಾರು ಅಂದ್ರೆ ಏನೂ ಅನ್ನೋದನ್ನ ಈಗಲೇ ಬಿಟ್ಟುಕೊಡದ ಡೈರೆಕ್ಟರ್ ಹರ್ಷಪ್ರಿಯಾ, ನ್ಯೂಸ್-18 ಕನ್ನಡ ಡಿಜಿಟಲ್​ಗೆ ಇನ್ನೂ ಒಂದಷ್ಟು ಸಿನಿಮಾ ಬಗೆಗಿನ ಮಾಹಿತಿಯನ್ನ ಈಗ ಹಂಚಿಕೊಂಡಿದ್ದಾರೆ.


Kannada Serial Title Writer Harshapriya entered to Sandalwood
ಹೆಜ್ಜಾರು ರಾಮ್ ಜಿ ನಿರ್ಮಾಣದ ಸಿನಿಮಾ


ಹೆಜ್ಜಾರು ಸಿನಿಮಾ ಒಂದು ವಿಶೇಷ ಕಥೆ ಸಿನಿಮಾನೇ ಆಗಿದೆ. ಈ ಚಿತ್ರದಲ್ಲಿ ಸ್ಕ್ರೀನ್​ ಪ್ಲೇ ಅದ್ಭುತವಾಗಿಯೇ ಇರುತ್ತದೆ. ಇಡೀ ಕಥೆ ಮೂರು ಕಾಲಘಟ್ಟದಲ್ಲಿಯೇ ಸಾಗುತ್ತದೆ. 1965, 1995, 2020 ಹೀಗೆ ಮೂರು ಕಾಲಘಟ್ಟದ ಕಥೆಯ್ನನೆ ಇದು ಹೊಂದಿದೆ.


ಈ ಮೂಲಕ ನವ ನಟ ಅಭಿ ಆಳ್ವಾ ಕನ್ನಡಕ್ಕೆ ಕಾಲಿಡುತ್ತಿದ್ದಾರೆ. ನವ ನಟಿ ಲಿಯೋನಿಲ್ಲ ಶ್ವೇತಾ ಡಿಸೋಜಾ ಈ ಚಿತ್ರದ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ.


ಶೇಕಡ 80 ರಷ್ಟು ಹೆಜ್ಜಾರು ಸಿನಿಮಾ ಶೂಟಿಂಗ್ ಕಂಪ್ಲೀಟ್
ಹೆಜ್ಜಾರು ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಶೇಕಡ 80 ರಷ್ಟು ಮಾತಿನ ಭಾಗದ ಚಿತ್ರೀಕರಣ ಆಗಿದೆ. ಸಾಹಸ ದೃಶ್ಯದ ಚಿತ್ರೀಕರಣವೂ ಪೂರ್ಣಗೊಂಡಿದೆ. ಇನ್ನು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದೆ.


ಹೆಜ್ಜಾರು ಯಾವ ರೀತಿಯ ಸಿನಿಮಾ-ಏನ್ ಇದರ ಕಥೆ?
ಹೆಜ್ಜಾರು ಸಿನಿಮಾದಲ್ಲಿ ಮಿಡ್ ಟೌನ್ ಕಥೆ ಇದೆ. ಅಂದ್ರೆ ಅತ್ತ ಹಳ್ಳಿನೂ ಅಲ್ಲ. ಇತ್ತ ಸಿಟಿನೂ ಅಲ್ಲದ ಊರಿನ ಕಥೆಯನ್ನೆ ಈ ಚಿತ್ರ ಹೊಂದಿದೆ. ಆದರೆ ಈ ಚಿತ್ರದಲ್ಲಿ ಇನ್ನೂ ಒಂದು ವಿಷಯ ಇದೆ. ಅದು ಕನ್ನಡದ ಮಟ್ಟಿಗೆ ಹೊಸ ರೀತಿಯ ಪ್ರಯೋಗವೆ ಆಗಿದೆ.


ಇದನ್ನೂ ಓದಿ: Actor Jaggesh: ಜಗ್ಗೇಶ್ SSLC ಮಾರ್ಕ್ಸ್​ ಕಾರ್ಡ್ ವೈರಲ್! ಹಿಂದಿಯಲ್ಲಿ ವೀಕ್, ಗಣಿತದಲ್ಲಿ ಎಷ್ಟಿತ್ತು ಅಂಕ?


ಹೆಜ್ಜಾರು ಸಿನಿಮಾದಲ್ಲಿ ಒಂದು ಪ್ರಯೋಗ ಆಗಿದೆ. ಇದನ್ನ ಕೇಳಿದಾಗಲೇ ವಿಶೇಷ
ಅನಿಸುತ್ತದೆ. ಅದರ ಬಗ್ಗೆ ವಿವರಿಸೋದಾದ್ರೆ, ಒಬ್ಬರ ಜೀವನದಲ್ಲಿ ನಡೆದ ಕಥೆ, ಇನ್ನೊಬ್ಬರ ಜೀವನದಲ್ಲೂ ನಡೆಯುತ್ತದೆ. ಅದನ್ನ ಡೈರೆಕ್ಟರ್ ಹರ್ಷಪ್ರಿಯಾ ಪ್ಯಾರಲಲ್ ಕಥೆ ಅಂತಲೇ ಕರೆದಿದ್ದಾರೆ. ಅದನ್ನೆ ಇಲ್ಲಿ ಬೇರೆ ರೀತಿಯಾಗಿಯೇ ತೋರಿಸಿದ್ದಾರೆ.


ಹೆಜ್ಜಾರು ರಾಮ್ ಜಿ ನಿರ್ಮಾಣದ ಸಿನಿಮಾ
ಸೀರಿಯಲ್ ಪ್ರಿಯರು ರಾಮ್​ ಜಿ ಹೆಸರನ್ನ ಕೇಳಿಯೇ ಇರುತ್ತಾರೆ. ಈ ಹೆಸರು ಕಿರುತೆರೆಯಲ್ಲಿ ಆಗಾಗ ಕೇಳಿ ಬರ್ತಾನೇ ಇರುತ್ತದೆ. ಕಾರಣ, ಕೆ.ಎಸ್. ರಾಮ್ ಜಿ ಸೀರಿಯಲ್ ಮಾಡ್ತಾನೇ ಬಂದಿದ್ದಾರೆ.


ನೆಗೆಟಿವ್ ಪಾತ್ರದಲ್ಲಿ ನಟ-ನಿರ್ದೇಶಕ ನವೀನ್ ಕೃಷ್ಣ
ಈಗ ರಾಮ್ ಜಿ ಹೆಜ್ಜಾರು ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೂ ಎಂಟ್ರಿ ಕೊಟ್ಟಿದ್ದಾರೆ. ಇನ್ನುಳಿದಂತೆ ಹೆಜ್ಜಾರು ಸಿನಿಮಾ ತಂಡ ಸದ್ಯಕ್ಕೆ ಟೈಟಲ್ ರಿವೀಲ್ ಮಾಡಿದೆ. ನಟ-ನಿರ್ದೇಶಕ ನವೀನ್ ಕೃಷ್ಣ ಈ ಚಿತ್ರದಲ್ಲಿ ಸಂಪೂರ್ಣ ನೆಗೆಟಿವ್ ರೋಲ್ ಮಾಡಿದ್ದಾರೆ. ಕಾರ್ತಿಕ್ ಭಟ್ ಸಂಭಾಷಣೆ ಬರೆದಿದ್ದಾರೆ. ಮುಂದೆ ಒಂದೊಂದಾಗಿಯೇ ಎಲ್ಲ ವಿಷಯವನ್ನ ರಿವೀಲ್ ಮಾಡಲಿದೆ. ವೇಟ್ ಮಾಡಿ.

First published: