Abhinav Vishwanathan: ಎಂಜಿನಿಯರ್​ ನಟನಾದ ಇಂಟರೆಸ್ಟಿಂಗ್ ಕಥೆ - ಇಂಚರಾಳ ಅಗಸ್ತ್ಯನ ರಿಯಲ್​ ಸ್ಟೋರಿ ಇದು

Kannada Serial: ನನ್ನರಸಿ ರಾಧೆ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪ್ರಸಿದ್ದ ಧಾರಾವಾಹಿಗಳಲ್ಲಿ ಒಂದು. ಇದರ ಮುಖ್ಯ ಪಾತ್ರಧಾರಿ ಅಗಸ್ತ್ಯ ಯಾರಿಗೆ ತಾನೇ ಗೊತ್ತಿಲ್ಲ. ಆ ಸಿಡುಕು ಮೂತಿ ಸಿದ್ದಪ್ಪ ಪಾತ್ರ ಮಾಡುತ್ತಿರುವ ಅಭಿನವ್ ವಿಶ್ವನಾಥನ್ ಹುಡುಗಿಯರ ಹಾಟ್ ಪೇವರೇಟ್. ಈ ಸುರಸುಂದರ ನಟನ ಬಗ್ಗೆ ಗೊತ್ತಿಲ್ಲದ ಕೆಲ ಮಾಹಿತಿ ಇಲ್ಲಿದೆ.

ಅಭಿನವ್ ವಿಶ್ವನಾಥನ್​

ಅಭಿನವ್ ವಿಶ್ವನಾಥನ್​

  • Share this:
ನನ್ನರಸಿ ರಾಧೆ ಧಾರಾವಾಹಿಯಲ್ಲಿ ನಾಯಕ ಅಗಸ್ತ್ಯ ರಾಥೋಡ್ ಆಗಿ ಅಭಿನಯಿಸುತ್ತಿರುವ ಅಭಿನವ್ ಎಂದರೆ ಬಹಳಷ್ಟು ಜನರಿಗೆ ಇಷ್ಟ. ಹುಡುಗಿಯರಂತೂ ಅವರಿಗಾಗಿಯೇ ಧಾರಾವಾಹಿ ನೋಡುವುದು ಎಂದರೆ ತಪ್ಪಲ್ಲ.


ಧಾರಾವಾಹಿಯಲ್ಲಿ ಖಡಕ್ ಹಾಗೂ ಸಿಡುಕಿನ ನಾಯಕನ ಪಾತ್ರ ಮಾಡುವ ಅಭಿನವ್, ನಟನಾಗುವ ಮುನ್ನ ಎಂಜಿಯರ್ ಆಗಿ ಕೆಲಸ ಮಾಡುತ್ತಿದ್ದರಂತೆ. ಹಾಗಾದ್ರೆ ಎಂಜಿಯರ್ ನಟನಾಗಿದ್ದು ಹೇಗೆ ಇಲ್ಲಿದೆ ಸ್ಟೋರಿ.


ಅಭಿನವ್​ಗೆ ಮೊದಲಿನಿಂದಲೂ ನಾಟಕ ಮತ್ತು ಅಭಿನಯದಲ್ಲಿ ಆಸಕ್ತಿ ಇತ್ತು. ಅದರಲ್ಲೂ ರಂಗಶಂಕರದಲ್ಲಿ ನಡೆಯುವ ಪ್ರತಿಯೊಂದು ನಾಟಕವನ್ನು ನೋಡುತ್ತಿದ್ದರಂತೆ. ಅಷ್ಟು ಮಟ್ಟಿಗೆ ನಟನೆಯ ಮೇಲೆ ಅವರಿಗೆ ಒಲವಂತೆ.


ಎಂಜಿಯರ್ ಪದವಿ ಮುಗಿಸಿದ ನಂತರ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಭಿನವ್, ನಟನೆಯ ಮೇಲೆ ಒಲವು ಹೆಚ್ಚಾಗಿ, ಕೆಲಸ ಬಿಟ್ಟು ಧಾರಾವಾಹಿ ಸೇರಿದ್ದಾರೆ.


ಕಾಲೇಜು ದಿನಗಳಲ್ಲಿ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಅಭಿನವ್, ಹುಡುಗಿಯರ ಹ್ಯಾಂಡಸನ್ ಹಂಕ್. ಅವರಿಗೆ ಇರುವ ಲೇಡಿ ಫ್ಯಾನ್ಸ್ ನೋಡಿದ್ರೆ ಆಶ್ಚರ್ಯವಾಗದೇ ಇರಲ್ಲ.


ಅಗಸ್ತ್ಯ-ಇಂಚರಾ ಕೋಳಿ ಜಗಳ, ಪ್ರೀತಿ ಜನರಿಗೆ ಬಹಳ ಇಷ್ಟ. ಇದು ಅಭಿನವ್ ಮೊದಲ ಧಾರಾವಾಹಿಯಾದರೂ ಅದ್ಭುತವಾಗಿ ಅಭಿನಯಿಸಿ, ಜನರ ಮನಗೆದ್ದಿದ್ಧಾರೆ.


ರಂಗಭೂಮಿಯಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಅಭಿನವ್ ಅಲ್ಲಿನ ಮಕ್ಕಳಿಗೆ ನಾಟಕಗಳನ್ನು ಹೇಳಿಕೊಡುತ್ತಾರೆ. ಇದೀಗ ಧಾರಾವಾಹಿಯ ಮಜಲುಗಳನ್ನು ಅರ್ಥ ಮಾಡಿಕೊಂಡಿರುವ ಅಭಿನವ್​ಗೆ ಸಿನೆಮಾಗಳಲ್ಲಿ ಮಾಡಲು ಆಸೆ ಇದೆ.


ಎಲ್ಲೇ ಹೋದರೂ ಜನ ಅಗಸ್ತ್ಯ ರಾಥೋಡ್ ಎಂದು ಗುರುತಿಸುತ್ತಾರೆ. ಸೆಲ್ಫಿ ಕೇಳುತ್ತಾರೆ. ಹಲವರಿಗೆ ನನ್ನ ನಿಜವಾದ ಹೆಸರು ಅಭಿನವ್ ಎಂಬುದು ಗೊತ್ತಿಲ್ಲ. ನಾನು ಇಂದು ಅಗಸ್ತ್ಯ ಎಂದೇ ಫೇಮಸ್ ಎಂದು ಅಭಿನವ್ ಸಂತೋಷ ವ್ಯಕ್ತಪಡಿಸಿದ್ಧಾರೆ.


ಏನೇ ಇರಲಿ, ಅಗಸ್ತ್ಯ ಮಾತ್ರ ಧಾರಾವಾಹಿ ಪ್ರಿಯರ ನೆಚ್ಚಿನ ನಟ ಎನ್ನುವುದರಲ್ಲಿ ಅನುಮಾನವಿಲ್ಲ. ಹೀಗೆ ಹಲವು ಅವಕಾಶಗಳನ್ನು ಪಡೆಯಲಿ ಎಂಬುದು ನಮ್ಮ ಆಶಯ.
Published by:Sandhya M
First published: