• Home
  • »
  • News
  • »
  • entertainment
  • »
  • Matte Mayamruga: ಮತ್ತೆ ಮಾಯಾಮೃಗದ ಶಾಸ್ತ್ರಿಗಳು ಈ ವಾರ ಸಿಕ್ತಾರಾ? ಪೊಲೀಸ್ ಕಂಪ್ಲೆಂಟ್ ಕೊಟ್ಟಿದ್ಯಾಕೆ?

Matte Mayamruga: ಮತ್ತೆ ಮಾಯಾಮೃಗದ ಶಾಸ್ತ್ರಿಗಳು ಈ ವಾರ ಸಿಕ್ತಾರಾ? ಪೊಲೀಸ್ ಕಂಪ್ಲೆಂಟ್ ಕೊಟ್ಟಿದ್ಯಾಕೆ?

ಮತ್ತೆ ಮಾಯಾಮೃಗದ ಶಾಸ್ತ್ರಿಗಳು ಈ ವಾರ ಸಿಕ್ಕೆ ಬಿಡ್ತಾರಾ?

ಮತ್ತೆ ಮಾಯಾಮೃಗದ ಶಾಸ್ತ್ರಿಗಳು ಈ ವಾರ ಸಿಕ್ಕೆ ಬಿಡ್ತಾರಾ?

ಮಾಯಾಮೃಗದಲ್ಲಿ ಶಾಸ್ತ್ರಿಗಳ ಫ್ಯಾಮಿಲಿ ಕೂಡ ಪ್ರಮುಖ ಆಗಿತ್ತು. ಇವರ ಸಾಂಪ್ರದಾಯಿಕ ಜೀವನ ಶೈಲಿ ಒಂದು ರೀತಿ ಮಾದರಿಯೇ ಆಗಿತ್ತು. ಆದರೆ ಮತ್ತೆ ಮಾಯಾಮೃಗದಲ್ಲಿ ಶಾಸ್ತ್ರಿಗಳು ಇರ್ತಾರೆ ಅನ್ನೋ ನಿರೀಕ್ಷೆ ಇತ್ತು. ಅದು ಇಲ್ಲಿವರೆಗೂ ಸಾಧ್ಯವಾಗಿಲ್ಲ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡ ಕಿರುತೆರೆಯಲ್ಲಿ ಮತ್ತೆ (Matte Mayamruga) ಮಾಯಾಮೃಗದ ಸಂಚಲನ ಶುರು ಆಗಿದೆ. ನಿಧಾನಕ್ಕೆ ವಾರ ವಾರಕ್ಕೆ ಜನ ಮತ್ತೆ ಮಾಯಾಮೃಗದತ್ತ ವಾಲುತ್ತಿದ್ದಾರೆ. ಹಳೆಬರಷ್ಟೇ ಅಲ್ಲ, ಹೊಸಬರು ಈ ಸೀರಿಯಲ್ ನತ್ತ ಒಲವು ತೋರುತ್ತಿದ್ದಾರೆ. 23 ವರ್ಷದ ಹಿಂದೆ ಕನ್ನಡದ ಕಿರುತೆರೆ ಮೇಲೆ ಮೈಲುಗಲ್ಲು ಸೃಷ್ಟಿಸಿದ (Mayamruga) ಮಾಯಾಮೃಗ ಈಗ ಸಿಕ್ವೆಲ್ ರೂಪದಲ್ಲಿ ಕನ್ನಡಿಗರ ಮುಂದೆ ಬಂದಿದೆ. ಹಳೆ ಬೇರು-ಹೊಸ ಚಿಗುರಿನೊಂದಿಗೆ (Serial) ಸೀರಿಯಲ್ ಪ್ರಿಯರ ಹೃದಯ ಗೆದ್ದಿದೆ. ಆದರೆ ಈ ಸೀರಿಯಲ್​​ ನಲ್ಲಿ ಶಾಸ್ತ್ರಿಗಳೇ ಇಲ್ವೇ? ಇಡೀ ಸೀರಿಯಲ್ ಪ್ರೇಮಿಗಳಿಗೆ ಈ ಒಂದು ಪ್ರಶ್ನೆ ಕಾಡುತ್ತಿದೆ. ಎಲ್ಲೋ ಹೋದ (Shastrigalu) ಶಾಸ್ತ್ರಿಗಳು ಯಾವಾಗ ಸಿಗ್ತಾರೆ ಅನ್ನೋ ಪ್ರಶ್ನೆ ಕೂಡ ಇದೆ. ಈಗ ಅದೇ ನಿಟ್ಟಿನಲ್ಲಿಯೇ ಶಾಸ್ತ್ರಿಗಳ ಮಗ ಶಾಮ್ ಪೊಲೀಸ್ ಕಂಪ್ಲೆಂಟ್ ಕೊಟ್ಟಿದ್ದಾರೆ.


ಮತ್ತೆ ಮಾಯಾಮೃಗ ನಿಧಾನಕ್ಕೆ ಕಥೆಯೊಳಗೆ ಎಳೆದುಕೊಳ್ಳುತ್ತಿದೆ!


ಮತ್ತೆ ಮಾಯಾಮೃಗ ಸೀರಿಯಲ್ ಶೃತಿ ಹಿಡಿದಿದೆ. ಸೀರಿಯಲ್ ಪ್ರೇಕ್ಷಕರು ಕತೆಯೊಳಗೆ ಹೋಗ್ತಾ ಇದ್ದಾರೆ. ನಿಧಾನಕ್ಕೆ ಸೀರಿಯಲ್ ಪ್ರೇಮಿಗಳನ್ನ ಸೆಳೆಯುತ್ತಿರೋ ಮತ್ತೆ ಮಾಯಾಮೃಗ ಆಡಂಬರ, ಅಬ್ಬರಗಳಿಲ್ಲದೇ ಸಾಗುತ್ತಿದೆ.


ಮತ್ತೆ ಮಾಯಾಮೃಗ ಸೀರಿಯಲ್ ಪಾತ್ರಗಳು ನಿತ್ಯವು ಒಂದೊಂದು ರೀತಿ ಇಷ್ಟ ಆಗುತ್ತಿವೆ. ಆಪ್ತತೆಯನ್ನ ದಿನವೂ ಹೆಚ್ಚಿಸುತ್ತಲೇ ಇವೆ. ಮಾಯಾಮೃಗದಲ್ಲಿದ್ದ ಪಾತ್ರಗಳು ತಮ್ಮ ಈ ಹಿಂದಿನ ಕಥೆಯನ್ನೆ ಇಲ್ಲಿ ಮುಂದುವರೆಸಿವೆ.


Kannada Serial Matte Mayamruga interesting fact


ಮಾಯಾಮೃಗದ ಪಾತ್ರಗಳ ಜೀವನ ಮತ್ತೆ ಶುರು


ಮತ್ತೆ ಮಾಯಾಮೃಗದಲ್ಲಿ ಹಳೆ ಪಾತ್ರಗಳು ತಮ್ಮ ಕಥೆಯನ್ನ ಜೀವಿಸುತ್ತಿವೆ. ಆಯಾ ಪಾತ್ರದ ಮಕ್ಕಳು ಇಲ್ಲಿ ಮತ್ತೆ ಮಾಯಾಮೃಗದ ಕಥೆಯನ್ನ ತಂದೆ-ತಾಯಿಯೊಂದಿಗೆ ಹೊಸ ಕಥೆಯನ್ನ ಹೇಳುತ್ತಿವೆ.
ಮತ್ತೆ ಮಾಯಾಮೃಗ ಸೀರಿಯಲ್​​ನಲ್ಲಿ ಎಲ್ಲವೂ ಇದೆ. ಹಳೆ ಪಾತ್ರಗಳ ಜೀವಂತಿಕೆ ಇಡೀ ಸೀರಿಯಲ್​ಗೆ ಮೊದಲಿನ ಸೆಳೆತವನ್ನ ತಂದುಕೊಟ್ಟಿದೆ. ಹೊಸ ಪಾತ್ರಗಳು ತಮ್ಮದೇ ರೀತಿಯಲ್ಲಿ ಇಂದಿನ ಸತ್ಯಗಳನ್ನ ಹೇಳ್ತಾವೆ.


ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ ಶಾಸ್ತ್ರಿಗಳ ಮಗ


ಮಾಯಾಮೃಗದಲ್ಲಿ ಶಾಸ್ತ್ರಿಗಳ ಫ್ಯಾಮಿಲಿ ಕೂಡ ಪ್ರಮುಖ ಆಗಿತ್ತು. ಇವರ ಸಾಂಪ್ರದಾಯಿಕ ಜೀವನ ಶೈಲಿ ಒಂದು ರೀತಿ ಮಾದರಿನೇ ಆಗಿತ್ತು. ಆದರೆ ಮತ್ತೆ ಮಾಯಾಮೃಗದಲ್ಲಿ ಶಾಸ್ತ್ರಿಗಳು ಇರ್ತಾರೆ ಅನ್ನೋ ನಿರೀಕ್ಷೆ ಇತ್ತು. ಅದು ಇಲ್ಲಿವರೆಗೂ ಸಾಧ್ಯವಾಗಿಲ್ಲ.


ಸೀರಿಯಲ್​ನ ನಿರ್ದೇಶಕರು ಶಾಸ್ತ್ರಿಗಳ ಸುತ್ತವೇ ಹೊಸ ಕುತೂಹಲ ಕ್ರಿಯೇಟ್ ಮಾಡಿದ್ದಾರೆ. ಶಾಸ್ತ್ರಿಗಳು ಎಲ್ಲೋ ಹೋಗಿದ್ದಾರೆ ಅನ್ನೋದನ್ನ ಹೇಳ್ತಾನೆ, ಪ್ರೇಕ್ಷಕರಲ್ಲಿ ಶಾಸ್ತ್ರಿಗಳ ಪಾತ್ರಧಾರಿ ದತ್ತಣ್ಣ ಮತ್ತೆ ಬರ್ತಾರೆ ಅನ್ನುವ ನಂಬಿಕೆಯನ್ನೂ ಜೀವಂತ ಇಟ್ಟಿದ್ದಾರೆ.


Kannada Serial Matte Mayamruga interesting fact


ಅಪ್ಪನನ್ನ ಹುಡುಕಿಕೊಡಿ ಎಂದು ಪೊಲೀಸರಿಗೆ ದೂರು


ಮತ್ತೆ ಮಾಯಾಮೃಗದಲ್ಲಿ ಎಲ್ಲೂ ದತ್ತಣ್ಣ ನಿರ್ವಹಿಸಿರೋ ಶಾಸ್ತ್ರಿಗಳ ಪಾತ್ರದ ಫೋಟೋ ಕೂಡ ತೋರಿಸಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಆ ಕೆಲಸವೂ ಆಗಿದೆ. ಹೌದು, ಅಪ್ಪನನ್ನ ಹುಡುಕಿಕೊಡಿ ಎಂದು ಪೊಲೀಸ್ ಆಫೀಸರ್ ಶಾಂತ್​ಕುಮಾರ್ ಅವರಿಗೆ ಶಾಮ ತಂದೆ ಫೋಟೋ ಕೊಟ್ಟಿದ್ದಾನೆ.


ಇದನ್ನೂ ಓದಿ: Harish Raj Special Talk: ಅದೇ ಭಾವ, ಅದೇ ಪ್ರೀತಿ, ರೂಪ ಮಾತ್ರ ಬದಲು-ಜೊತೆ ಜೊತೆಯಲಿ ಹರೀಶ್ ರಾಜ್ ಏನಂತಾರೆ?


ಅಲ್ಲಿಗೆ ಈ ಮೂಲಕ ಮತ್ತೆ ಮಾಯಾಮೃಗ ಸೀರಿಯಲ್​​ನ 15.11.2022 ರ ಮಂಗಳವಾರದ ಸಂಚಿಕೆಯಲ್ಲಿ ಶಾಸ್ತ್ರಿಗಳ ಫೋಟೋದ ದರುಶನ ಆಗಿದೆ. ಇನ್ನು ಶಾಂತ್ ಕುಮಾರ್ ಕೂಡ ಭರವಸೆ ಕೊಟ್ಟು ಕಳಿಸಿದ್ದಾರೆ. ಶಾಸ್ತ್ರಿಗಳನ್ನ ಹುಡುಕೊಡ್ತಿನಿ ಅಂತಲೂ ಹೇಳಿದ್ದಾರೆ.


ಮಾಯಾಮೃಗದ ಶಾಸ್ತ್ರಿಗಳಿಗೆ ಈಗ 80 ವರ್ಷ


ಮಾಯಾಮೃಗದ ಶಾಸ್ತ್ರಿಗಳಿಗೆ ವಯಸ್ಸಾಗಿದೆ. 80 ವರ್ಷ ಆಗಿರೋ ಶಾಸ್ತ್ರಿಗಳು ಪುತ್ರ ಶಾಮ ಮನೆಗೆ ಬಂದ ವಿಷಯ ತಿಳಿದು ಮನೆ ಬಿಟ್ಟು ಹೋದಂತಿದೆ. ಮನೆ ಬಿಟ್ಟು ಹೋದ ಶಾಸ್ತ್ರಿಗಳ ಹುಡುಕಾಟ ಮುಂದುವರದಿದೆ.


80 ವರ್ಷದ ಅಪ್ಪನ ಒಳಿತಿಗಾಗಿಯೇ ವಿಶೇಷ ಕಾರ್ಯಕ್ರಮ ಮಾಡ್ಬೇಕು ಅಂತ ಮನೆಗೆ ಬಂದ ಶಾಮ ಈಗ ಅಪ್ಪನ ಹುಡುಕಾಟದಲ್ಲಿಯೇ ತೊಡಗಿದ್ದಾರೆ. ಮುಂದೇನಾಗುತ್ತದೆ ಅನ್ನೋದೇ ಈಗೀನ ಕುತೂಹಲ.

First published: