• Home
  • »
  • News
  • »
  • entertainment
  • »
  • Matte Mayamruga: ಮಾಯಾಮೃಗದ ಶಾಸ್ತ್ರಿಗಳು ಎಲ್ಲಿ ಹೋದ್ರು? ಸೀರಿಯಲ್​ಗೆ ಬರಲ್ವಾ?

Matte Mayamruga: ಮಾಯಾಮೃಗದ ಶಾಸ್ತ್ರಿಗಳು ಎಲ್ಲಿ ಹೋದ್ರು? ಸೀರಿಯಲ್​ಗೆ ಬರಲ್ವಾ?

ಶಾಸ್ತ್ರಿಗಳು ಎಲ್ಲಿ ಹೋದ್ರು? ಸೀರಿಯಲ್​ಗೆ ಬರ್ತಾರಾ? ಬರಲ್ವಾ?

ಶಾಸ್ತ್ರಿಗಳು ಎಲ್ಲಿ ಹೋದ್ರು? ಸೀರಿಯಲ್​ಗೆ ಬರ್ತಾರಾ? ಬರಲ್ವಾ?

ಮತ್ತೆ ಮಾಯಾಮೃಗದಲ್ಲಿ ಶಾಸ್ತ್ರಿಗಳ ಪಾತ್ರವನ್ನ ದತ್ತಣ್ಣ ಇಲ್ಲದೇ ಓಡಿಸುತ್ತಿದ್ದಾರೆ. ಇದು ನಿರ್ದೇಶಕರೇ ಮಾಡಿರೋ ಐಡಿಯಾನಾ? ಸದ್ಯಕ್ಕಂತೂ ಗೊತ್ತಿಲ್ಲ. ಆದರೆ ಶಾಸ್ತ್ರಿಗಳ ಪಾತ್ರದ ಸುತ್ತವೇ ಪ್ರೇಕ್ಷಕರಲ್ಲಿ ಅದ್ಭುತವಾಗಿಯೇ ಕುತೂಹಲ ಕ್ರಿಯೇಟ್ ಆಗಿದೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡ ಕಿರುತೆರೆಯಲ್ಲಿ ಮತ್ತೆ ಹೊಸ ಅಲೆ ಎದ್ದಿದೆ. ಸದಾ ಸದ್ದು-ಗದ್ದಲ್ಲ-ಗ್ಲಾಮರ್ ಇನ್ನಿಲ್ಲದ ಸಂಬಂಧಗಳ ಕಥೆಗೆ ಒಂದು (Break) ಬ್ರೇಕ್ ಬಿದ್ದಂತೆ ಆಗುತ್ತಿದೆ. ಕಾರಣ, (Mayamruga) ಮಾಯಾಮೃಗ. ಹೌದು, ಕಿರುತೆರೆಯಲ್ಲಿ ಮಾಯಾಮೃಗ ಸೀರಿಯಲ್​ನ ಹೊಸ ಅಧ್ಯಾಯ, ಹೊಸ (New Episode) ಸಂಚಿಕೆ, ಹೊಸ ಕಥೆ ಪ್ರಸಾರ ಆಗುತ್ತಿದೆ. ಇದರಿಂದ ಕಿರುತೆರೆಯಲ್ಲಿ ಹೊಸ ಸಂಚಲನ ಶುರು ಆಗಿದೆ. ಕೇವಲ ಒಂದೇ ವಾರದಲ್ಲಿಯೇ ಮತ್ತೆ (Matte Mayamruga) ಮಾಯಾಮೃಗ ತನ್ನ ಸೆಳೆತವನ್ನ ಹೆಚ್ಚಿಸುತ್ತಲೇ ಇದೆ. ಮತ್ತೆ ಮಾಯಾಮೃಗದ ಪಾತ್ರಗಳು ಹಳಬರಿಗೆ ಹೊಸಬರಿಗೆ ಹೀಗೆ ಎಲ್ಲರಿಗೂ ಇಷ್ಟ ಆಗುತ್ತಿದೆ. ರಾತ್ರಿ 9 ಗಂಟೆಯಾದ್ರೆ ಸಾಕು. ಟಿವಿ ಮುಂದೆ ಎಲ್ಲರೂ ಕುಳಿತುಕೊಂಡು ನೋಡುವ ದೃಶ್ಯ ಕಾಮನ್ ಆಗುತ್ತಿದೆ.


ಕನ್ನಡದ ಕಿರುತೆರೆಯಲ್ಲಿ "ಮತ್ತೆ ಮಾಯಾಮೃಗದ" ಸಂಚಲನ


ಮತ್ತೆ ಮಾಯಾಮೃಗ ಪುಟ್ಟ ಪರದೆಯಲ್ಲಿ ದೊಡ್ಡ ಸಂಚಲನದ ಸೂಚನೆ ನೀಡಿದೆ. ಕಳೆದ 31 ರಂದು ಸಿರಿಕನ್ನಡ ವಾಹಿನಿಯಲ್ಲಿ ಮತ್ತೆ ಮಾಯಾಮೃಗ ಪ್ರಸಾರ ಆರಂಭಿಸಿದೆ. ಮೊದಲ ಸಂಚಿಕೆಯಿಂದಲೇ ಮತ್ತೆ ಮಾಯಾಮೃಗ ಸಣ್ಣದೊಂದು ಸೆಳೆತ ಹುಟ್ಟಿಸಿದೆ.


ಮತ್ತೆ ಮಾಯಾಮೃಗದಲ್ಲಿ ಹೊಸ ಹೊಸ ಪಾತ್ರಗಳು ಪರಿಚಯ ಆಗ್ತಾನೇ ಇವೆ. ಶೀರ್ಷಿಕೆ ಗೀತೆಯಂತೂ ತನ್ನ ಗತ್ತನ್ನ ಮುಂದುವರೆಸಿದೆ. ಇಡೀ ಸೀರಿಯಲ್​​ಗೆ ಎಂದಿನ ಕಳೆಯನ್ನ ತಂದುಕೊಟ್ಟಿದೆ. ಭಾವನಾತ್ಮಕವಾಗಿಯೇ ಪುಟ್ಟ ಪರದೆಯ ಪ್ರೇಕ್ಷಕರನ್ನ ಟಚ್ ಮಾಡುತ್ತಿದೆ.


ಮತ್ತೆ ಮಾಯಾಮೃಗ ಜನರ ಮನಸನ್ನ ಗೆಲ್ಲುತ್ತಿದೆ


ಮತ್ತೆ ಮಾಯಾಮೃಗ ತನ್ನ ಸರಳ ಸಂಭಾಷಣೆ-ತುಂಬಾ ನೈಜ ಅನಿಸೋ ಪಾತ್ರಧಾರಿಗಳ ಅಭಿನಯ, ಅಬ್ಬರವಿಲ್ಲದ ಕಥೆ ಹೇಳುವ ರೀತಿಯಿಂದಲೇ ಮತ್ತೆ ಮಾಯಾಮೃಗದ ಜನರ ಮನದಲ್ಲಿ ಜಾಗ ಮಾಡಿಕೊಂಡಿದೆ. ಜನರ ಮನಸನ್ನು ಗೆಲ್ಲುತ್ತಿದೆ.


Kannada Serial Matte Mayamruga got viral day by day
ಹೊಸ ಪಾತ್ರಗಳ ಪರಿಚಯ-ಹಳೆ ಪಾತ್ರಗಳ ಮರು ಪರಿಚಯ


ಮತ್ತೆ ಮಾಯಾಮೃಗದ ಸೀರಿಯಲ್​ನಲ್ಲಿ ಮೊದಲ ಸಂಚಿಕೆಯಿಂದ ಈಗಿನವರೆಗೂ ಒಂದು ಪಾತ್ರ ಅತಿ ಹೆಚ್ಚು ಜನರಿಗೆ ಇಷ್ಟವಾಗುತ್ತಿದೆ. ಹೌದು, ಮಾಳವಿಕಾ ನಿರ್ವಹಿಸಿದ ಪಾತ್ರ ಈ ಹಿಂದಿನಂತೆ ಈಗಲೂ ಜನರಿಗೆ ಇಷ್ಟ ಆಗುತ್ತಿದೆ. ಹಳಬರೆಲ್ಲ ಮತ್ತೆ ಈ ಪಾತ್ರಕ್ಕೆ ಈಗ ಕನೆಕ್ಟ್ ಆಗುತ್ತಿದ್ದಾರೆ.


ಹೊಸ ಪಾತ್ರಗಳ ಪರಿಚಯ-ಹಳೆ ಪಾತ್ರಗಳ ಮರು ಪರಿಚಯ


ಮತ್ತೆ ಮಾಯಾಮೃಗದಲ್ಲಿ ಹಳೆ ಕತೆ ಇಲ್ಲಿ ಹೊಸ ರೂಪದಲ್ಲಿ ಮುಂದುವರೆದಿದೆ. ಹೊಸ ಪಾತ್ರಗಳ ಪರಿಚಯ ಕೂಡ ಇಲ್ಲಿ ವಿಶೇಷವಾಗಿಯೇ ಪರಿಚಯ ಆಗಿವೆ. ಹಳೆ ಪಾತ್ರಗಳಲ್ಲಿ ಶಾಸ್ತ್ರಿಗಳ ಹೆಂಡ್ತಿ ಪಾತ್ರ ಎಂದಿನಂತೆ ಇದೆ. ಅವರ ಮಗ ಶಾಮ್ ಪಾತ್ರವೂ ಇಲ್ಲಿ ಏನು ಅನ್ನೋದು ತಿಳಿದಿದೆ.


ಇದನ್ನೂ ಓದಿ: Bigg Boss House: ಬಿಗ್ ಬಾಸ್ ಮನೆಯಲ್ಲೊಂದು ಈರುಳ್ಳಿ ಕಥೆ! ಗದ್ದಲವೋ ಗದ್ದಲ!


ಮಾಳವಿಕಾ, ಮಂಜು ಭಾಷಿಣಿ, ಎಂ.ಡಿ.ಪಲ್ಲವಿ ಎಲ್ಲರ ಪಾತ್ರಗಳು ಇಲ್ಲಿ ಮರು ಪರಿಚಯ ಆಗಿವೆ. ಅವರ ಮಕ್ಕಳ ಪರಿಚಯವೂ ಆಗಿದೆ. ಆದರೆ ಮೊದಲ ಎಪಿಸೋಡ್​ನಿಂದಲೇ ಅದ್ಯಾಕೋ ಶಾಸ್ತ್ರಿಗಳ ಮರು ಪರಿಚಯ ಆಗ್ತಾನೇ ಇಲ್ಲ. ಯಾಕೆ?


ಶಾಸ್ತ್ರಿಗಳು ಎಲ್ಲಿ ಹೋದ್ರು? ಸೀರಿಯಲ್​ಗೆ ಬರ್ತಾರಾ? ಬರಲ್ವಾ?


ಮತ್ತೆ ಮಾಯಾಮೃಗದಲ್ಲಿ ಸದ್ಯ ಎದ್ದಿರೋ ಪ್ರಶ್ನೆ ಇದೊಂದೇನೆ ಆಗಿದೆ. ಮಾಯಾಮೃಗ ಸೀರಿಯಲ್​ ಹೆಚ್ಚು ಕಡಿಮೆ ಈ ಶಾಸ್ತ್ರಿಗಳ ಫ್ಯಾಮಿಲಿ ಸುತ್ತವೇ ಇತ್ತು. ಇಡೀ ಸೀರಿಯಲ್​ಗೆ ಶಾಸ್ತ್ರಿಗಳೇ ಪ್ರಮುಖ ಅನಿಸಿದ್ದರು. ಅವರ ಪರಿಚಯ ಈ ಹೊಸ ಮತ್ತೆ ಮಾಯಾಮೃಗದಲ್ಲಿ ಭರ್ಜರಿ ಆಗುತ್ತದೆ ಅನ್ನೋ ನಿರೀಕ್ಷೆನೂ ಇತ್ತು.


ಆದರೆ ಮತ್ತೆ ಮಾಯಾಮೃಗದಲ್ಲಿ ಶಾಸ್ತ್ರಿಗಳು ಕಾಣಿಸಿಕೊಂಡಿಯೇ ಇಲ್ಲ. ಮೊದಲ ಸಂಚಿಕೆಯಿಂದಲೇ ಈ ನಿರೀಕ್ಷೆ ಇತ್ತು. ಆದರೆ ಅದು ಮೂರನೇ ಸಂಚಿಕೆಯಲ್ಲೂ ಸಾಕಾರಗೊಳ್ಳಲಿಲ್ಲ. ಶಾಸ್ತ್ರಿಗಳು ಕಾಣೆಯಾಗಿದ್ದಾರೆ. ಎಲ್ಲಿ ಹೋದ್ರು ಗೊತ್ತೇ ಇಲ್ಲ. ಶಾಸ್ತ್ರಿಗಳ ಪತ್ನಿ ಶಾಸ್ತ್ರಿಗಳನ್ನ ಹುಡುಕುತ್ತಲೇ ಇದ್ದಾರೆ.


Kannada Serial Matte Mayamruga got viral day by day
ಶಾಸ್ತ್ರಿಗಳ ಪಾತ್ರಧಾರಿ ದತ್ತಣ್ಣ ಸೀರಿಯಲ್​ಗೆ ಬರೋದಿಲ್ವೇ?


ಶಾಸ್ತ್ರಿಗಳ ಪಾತ್ರಧಾರಿ ದತ್ತಣ್ಣ ಸೀರಿಯಲ್​ಗೆ ಬರೋದಿಲ್ವೇ?
ಮತ್ತೆ ಮಾಯಾಮೃಗದಲ್ಲಿ ಶಾಸ್ತ್ರಿಗಳ ಪಾತ್ರವನ್ನ ದತ್ತಣ್ಣ ಇಲ್ಲದೇ ಓಡಿಸುತ್ತಿದ್ದಾರೆ. ಇದು ನಿರ್ದೇಶಕರೇ ಮಾಡಿರೋ ಐಡಿಯಾನಾ? ಸದ್ಯಕ್ಕಂತೂ ಗೊತ್ತಿಲ್ಲ. ಆದರೆ ಶಾಸ್ತ್ರಿಗಳ ಪಾತ್ರದ ಸುತ್ತವೇ ಅದ್ಭುತವಾಗಿಯೇ ಕುತೂಹಲ ಪ್ರೇಕ್ಷಕರಲ್ಲಿ ಕ್ರಿಯೇಟ್ ಆಗಿದೆ.


ಶಾಸ್ತ್ರಿಗಳ ಪಾತ್ರವನ್ನ ಡೈರೆಕ್ಟರ್ ಅದ್ಯಾವಾಗ ಮರು ಪರಿಚಯ ಮಾಡ್ತಾರೋ ಏನೋ. 23 ವರ್ಷದ ಬಳಿಕ ಪ್ರಸಾರ ಆಗ್ತಿರೋ ಮತ್ತೆ ಮಾಯಾಮೃಗದ ಹೊಸ ಕಥೆಯಲ್ಲಿ ಶಾಸ್ತ್ರಿಗಳು ಹೇಗೆ ಕಾಣಿಸುತ್ತಾರೆ ಅನ್ನೋ ಕುತೂಹಲವೂ ಇದೆ.


ಇದನ್ನೂ ಓದಿ: BBK Season 09: ದಿವ್ಯಾ ಫೇಕ್ ಎಂದ ರಾಜಣ್ಣ, ಕಣ್ಣೀರಿಟ್ಟ ಉರುಡುಗ!


ಜೊತೆಗೆ ಅವರ ಪಾತ್ರ ಇಲ್ಲಿ ಮುಂದುವರೆಯುತ್ತದೆಯೋ ಅಥವಾ ಹೀಗೆ ಇದ್ದು ಇಲ್ಲದ ಹಾಗೆ ಉಳಿದು ಬಿಡುತ್ತದೆ ಅನ್ನೋ ಪ್ರಶ್ನೆ ಕೂಡ ಮತ್ತೆ ಮಾಯಾಮೃಗದ ಪ್ರೇಮಿಗಳಲ್ಲಿ ಕಾಡುತ್ತದೆ.


ಮತ್ತೆ ಮಾಯಾಮೃಗದಲ್ಲಿ ಶಂಕರ್ ಅಶ್ವಥ್ ವಿಶೇಷ ಫ್ಯಾಮಿಲಿ


ಮಾಯಾಮೃಗದಲ್ಲಿ ಶಂಕರ್ ಅಶ್ವಥ್ ಪಾತ್ರ ಇರಲಿಲ್ಲ ಅನ್ನೋದೇ ಬಹುತೇಕರ ಅಭಿಪ್ರಾಯ ಕೂಡ ಆಗಿದೆ. ಅದು ನಿಜವೂ ಕೂಡ ಆಗಿದೆ. ಆದರೆ ಮತ್ತೆ ಮಾಯಾಮೃಗದ ಕಥೆಯಲ್ಲಿ ಇವರ ಸುತ್ತದ ಒಂದು ಕಥೆ ಇದೆ.


ಇವರಿಗೂ ಒಂದು ಫ್ಯಾಮಿಲಿ ಕೂಡ ಇದೆ. ಈ ಫ್ಯಾಮಿಲಿಯಲ್ಲೂ ಒಬ್ಬ ಮಗ-ಸೊಸೆ ಕೂಡ ಇದ್ದಾರೆ. ಇವರ ಕಥೆ ಬೇರೆನೆ ಟ್ರ್ಯಾಕ್ ಅಲ್ಲಿಯೇ ಇದೆ. ಮಂಜು ಭಾಷಿಣಿ ಪಾತ್ರವೂ ಈ ಒಂದು ಫ್ಯಾಮಿಲಿಗೆ ಈಗ ಕನೆಕ್ಟ್ ಆಗಿದೆ. ಮುಂದೇನು ಅನ್ನೋದೇ ಈಗಿನ ಕುತೂಹಲ.

First published: