• Home
 • »
 • News
 • »
 • entertainment
 • »
 • Matte Mayamruga: ಬದುಕು ಬದಲಾಗಬಹುದು-ಭಾವ ಅದೇ ಅಲ್ವೇ? ಮತ್ತೆ ಬರ್ತಿದೆ ಮಾಯಾಮೃಗ

Matte Mayamruga: ಬದುಕು ಬದಲಾಗಬಹುದು-ಭಾವ ಅದೇ ಅಲ್ವೇ? ಮತ್ತೆ ಬರ್ತಿದೆ ಮಾಯಾಮೃಗ

ಮಾಯಾಮೃಗ-ಆ ದಿನಗಳು-ಅಮರ ನೆನಪುಗಳು

ಮಾಯಾಮೃಗ-ಆ ದಿನಗಳು-ಅಮರ ನೆನಪುಗಳು

ಇಂದಿನ ಸೀರಿಯಲ್​ ನಲ್ಲಿ ಸಾಕಷ್ಟು ಗ್ಲಾಮರ್ ಇರುತ್ತದೆ. ಅಲಂಕಾರಕ್ಕೆನೇ ಇಲ್ಲಿ ಹೆಚ್ಚಿನ ಒತ್ತುಕೊಡಲಾಗಿದೆ. ಮತ್ತೆ ಮಾಯಾಮೃಗದ ಹಾಗೆ ಅಲ್ವೇ ಅಲ್ಲ. ಇಲ್ಲಿ ಭಾವನೆಗಳಿಗೆ ಒತ್ತು ಕೊಡಲಾಗಿದೆ.

 • News18 Kannada
 • Last Updated :
 • Bangalore [Bangalore], India
 • Share this:

  ಕನ್ನಡ ಕಿರುತೆರೆ (Small Screen) ಲೋಕ ಬದಲಾಗಿದೆ. ಇಲ್ಲಿ ಕಥೆ ಸಿಗೋದಿಲ್ಲ. ಗ್ಲಾಮರ್ ಇಡೀ (TV) ಟಿವಿಯನ್ನ ಆವರಿಸಿಕೊಳ್ಳುತ್ತಿದೆ. ಸಂಬಂಧಗಳ ಮೌಲ್ಯ ಹುಡುಕಿದರೂ ಸಿಗೋದಿಲ್ಲ. ಕಥೆಗಿಂತಲೂ (Story) ಇಲ್ಲಿ ಅಲಂಕಾರಕ್ಕೆ ಹೆಚ್ಚಿನ ಒತ್ತು. ಅಂದು ಇದ್ದ ಧಾರವಾಹಿಗಳ ಒಂದಂಶವೂ ಇಲ್ಲಿ ಸಿಗೋದಿಲ್ಲ. ಇಲ್ಲೂ ಸಿನಿಮಾ ರೀತಿ ಮೇಕಿಂಗ್ (Making) ಹಾವಳಿ ಶುರು ಆದಂತೆ ಕಾಣುತ್ತಿದೆ. ಬದುಕು ಬದಲಾಗಿರೋದಂತೂ ಸತ್ಯ. ಆದರೆ ಅದು ಸಂಬಂಧಗಳ ಮೌಲ್ಯದ ಚೌಕಟ್ಟಿನಲ್ಲಿದ್ರೇನೆ ಚಂದ ಅಲ್ವೇ? ಸಂಬಂಧಗಳ ಮೌಲ್ಯ, ಕುಟುಂಬದ ಮೌಲ್ಯ, ಭಾವನೆಗಳ ಮೌಲ್ಯ ಹೀಗೆ ಎಲ್ಲವನ್ನೂ ಇಟ್ಟುಕೊಂಡ ಧಾರವಾಹಿಗಳು ಅಂದು ಬರ್ತಾ ಇದ್ದವು. ಅಂತಹ ಧಾರವಾಹಿಗಳಲ್ಲಿ ಮಾಯಾಮೃಗ ಅತ್ಯಂತ ಜನಪ್ರಿಯ ಧಾರವಾಹಿನೇ ಆಗಿತ್ತು. 1998 ರಲ್ಲಿ ಪ್ರಸಾರ ಆಗುತ್ತಿದ್ದ ಮಾಯಾಮೃಗ ಈಗ ಮತ್ತೆ ಬರ್ತಿದೆ. ಹೊಸ ಕಥೆ, ಹೊಸ ಅಧ್ಯಾಯ, ಹೊಸ ಸಂಚಿಕೆಯೊಂದಿಗೆ ಸೀರಿಯಲ್ ಇದೇ 31 ರಿಂದ ಪ್ರಸಾರ ಆಗುತ್ತಿದೆ.


  ಈ ಹಿನ್ನೆಲೆಯಲ್ಲಿ ಮತ್ತೆ ಮಾಯಾಮೃಗ ಸೀರಿಯಲ್​ನ ಮೂವರು ನಿರ್ದೇಶಕರಲ್ಲಿ ಒಬ್ಬರಾದ ಪಿ.ಶೇಷಾದ್ರಿ ಅವರು ನ್ಯೂಸ್-18 ಕನ್ನಡ ಡಿಜಿಟಲ್​​ಗೆ ಒಂದಷ್ಟು ವಿಷಯಗಳನ್ನ ಹಂಚಿಕೊಂಡಿದ್ದಾರೆ. ಆ ವಿಷಯಗಳ ಚಿತ್ರಣ ಇಲ್ಲಿದೆ.


  ಬದುಕು ಬದಲಾಗಬಹುದು-ಭಾವ ಬದಲಾಗೋದಿಲ್ಲ


  ಮಾಯಾಮೃಗ ಅಂದಿನ ಯಶಸ್ವಿ ಧಾರವಾಹಿನೇ ಆಗಿತ್ತು. ಇದನ್ನ 25 ವರ್ಷದ ಬಳಿಕ ಸಿಕ್ವೆಲ್ ಮಾಡೋದು ದೊಡ್ಡ ಚಾಲೆಂಜ್ ಆಗಿದೆ. ಆದರೆ ಈ ಒಂದು ಸಾಹಸಕ್ಕೆ ಕೈ ಹಾಕಿದ್ದೇವೆ.


  ಬದುಕು ಬದಲಾಗಬಹುದು. ಭಾವ ಬದಲಾಗೋದಿಲ್ಲ. ಅನ್ನೋದೇ ನಮ್ಮ ನಂಬಿಕೆ. ಈ ನಂಬಿಕೆ ಈಗಲೂ ನಮ್ಮ ಸೀರಿಯಲ್ ಕೈಹಿಡಿಯುತ್ತದೆ ಅನ್ನೋದೇ ಪಿ.ಶೇಷಾದ್ರಿ ಅವರ ಬಲವಾದ ನಂಬಿಕೆ ಆಗಿದೆ.


  Kannada Serial Matte Mayamruga Director P. Sheshadri Talk About Serial
  ಬದುಕು ಬದಲಾಗಬಹುದು-ಭಾವ ಬದಲಾಗೋದಿಲ್ಲ


  ಮತ್ತೆ ಮಾಯಾಮೃಗದಲ್ಲಿ ಶೇಕಡ 90 ರಷ್ಟು ಈ ಹಿಂದಿನ ಕಲಾವಿದರೇ ಇದ್ದಾರೆ. 25 ವರ್ಷದ ಹಿಂದೆ ಶುರು ಆಗಿದ್ದ ಆ ಕಥೆಯ ಕಲಾವಿದರು ಇಲ್ಲಿ ಅಭಿನಯಿಸಿದ್ದಾರೆ. ಶಾಸ್ತ್ರಿಗಳ ಫ್ಯಾಮಿಲಿಯಲ್ಲಿದ್ದ ಎಲ್ಲ ಕಲಾವಿದರು ಮತ್ತೆ ಮಾಯಾಮೃಗದಲ್ಲಿದ್ದಾರೆ.


  ಶಾಸ್ತ್ರಿಗಳ ಫ್ಯಾಮಿಲಿ ಬೆಳೆದಿದೆ-ಮಕ್ಕಳ ಮಕ್ಕಳು ಬೆಳೆದಿದ್ದಾರೆ
  ಮತ್ತೆ ಮಾಯಾಮೃಗ ಶಾಸ್ತ್ರಿಗಳ ಫ್ಯಾಮಿಲಿ ದೊಡ್ಡದಾಗಿದೆ. ಮೊಮ್ಮಕ್ಕಳು ಹುಟ್ಟಿದ್ದಾರೆ. ಅವರ ಆಚಾರ-ವಿಚಾರಗಳ ಇಲ್ಲಿ ಚಿತ್ರಣಗೊಂಡಿವೆ. ಅಜ್ಜಿ ಮಾತು-ಮೊಮ್ಮಗಳ ರಿಯಾಕ್ಷನ್ ಇದನ್ನ ನಾವು ಇಲ್ಲಿ ನೋಡಬಹುದು. ಸೀರಿಯಲ್​ ನ ಒಂದು ಪ್ರೋಮೋ ಅದರ ಮೇಲೆ ಇಲ್ಲಿ ಬೆಳಕು ಚೆಲ್ಲುತ್ತದೆ.


  ಇದನ್ನೂ ಓದಿ: Meghana Raj-Raayan Raj Sarja: ಚಿರು ಮಗನಿಗೆ ಬರ್ತ್​ಡೇ ಸಂಭ್ರಮ! ಮಗನಿಗಾಗಿ ಅಮ್ಮನ ಸ್ಪೆಷಲ್ ವಿಶ್


  ಮತ್ತೆ ಮಾಯಾಮೃಗ ಸೀರಿಯಲ್ ಚಿತ್ರೀಕರಣ ಶುರು
  ಮತ್ತೆ ಮಾಯಾಮೃಗ ಸೀರಿಯಲ್ ಚಿತ್ರೀಕರಣ ಶುರು ಆಗಿದೆ. ಇದೇ 27 ರಂದು ಈ ಸೀರಿಯಲ್ ಸಂಬಂಧ ಮತ್ತೊಂದು ಪ್ರೆಸ್ ಮೀಟ್ ಕೂಡ ಇದೆ. ಇದರ ಹೊರತಾಗಿ ಸೀರಿಯಲ್ ಭಾವನೆಗಳನ್ನ ಇಟ್ಟುಕೊಂಡೇ ಬರುತ್ತಿದೆ ಅಂತಲೇ ಪಿ.ಶೇಷಾದ್ರಿ ಹೇಳಿದರು.


  ಇಂದಿನ ಸೀರಿಯಲ್​ ನಲ್ಲಿ ಸಾಕಷ್ಟು ಗ್ಲಾಮರ್ ಇರುತ್ತದೆ. ಅಲಂಕಾರಕ್ಕೆನೇ ಇಲ್ಲಿ ಹೆಚ್ಚಿನ ಒತ್ತುಕೊಡಲಾಗಿದೆ. ಮತ್ತೆ ಮಾಯಾಮೃಗದ ಹಾಗೆ ಅಲ್ವೇ ಅಲ್ಲ. ಇಲ್ಲಿ ಭಾವನೆಗಳಿಗೆ ಒತ್ತು ಕೊಡಲಾಗಿದೆ. ಆ ಭಾವನೆಗಳ ಒಟ್ಟು ಬದುಕಿನ ಚಿತ್ರಣವೇ ಮತ್ತೆ ಮಾಯಾಮೃಗ ಸೀರಿಯಲ್ ಎಂದು ಪಿ.ಶೇಷಾದ್ರಿ ತಿಳಿಸಿದರು.


  ಮಾಯಾಮೃಗ-ಆ ದಿನಗಳು-ಅಮರ ನೆನಪುಗಳು
  ಮಾಯಾಮೃಗ ಸೀರಿಯಲ್​ ಗೆ ಒಂದು ಶಕ್ತಿ ಇದೆ. ಅದು ಭಾವನೆಗಳ ಶಕ್ತಿ, ಸಂಬಂಧಗಳ ಶಕ್ತಿ, ಅದ್ಭುತ ಕಥೆಗಳ ಶಕ್ತಿ ಇದೆ. ಇವು ಆಗಲೂ ಈಗಲೂ ಒಳ್ಳೆ ನೆನಪುಗಳನ್ನೆ ಕಟ್ಟಿಕೊಟ್ಟಿವೆ. ಅಂದು ಸೀರಿಯಲ್ ನೋಡಿದವ್ರು ಈಗಲೂ ಆ ದಿನಗಳನ್ನ ಮೆಲುಕು ಹಾಕುತ್ತಾರೆ.


  Kannada Serial Matte Mayamruga Director P. Sheshadri Talk About Serial
  ಶಾಸ್ತ್ರಿಗಳ ಫ್ಯಾಮಿಲಿ ಬೆಳೆದಿದೆ-ಮಕ್ಕಳ ಮಕ್ಕಳು ಬೆಳೆದಿದ್ದಾರೆ


  ಇಂತಹ ಸೀರಿಯಲ್ ನ ಮುಂದುವರೆದ ಭಾಗವನ್ನ ಇವರೂ ನೋಡಬಹುದು. ಹೊಸಬರೂ ಈ ಕಥೆಗೆ ಕನೆಕ್ಟ್ ಆಗಬಹುದು. ಒಂದು ವೇಳೆ ಈ ಹಿಂದಿನ ಮಾಯಾಮೃಗ ವೀಕ್ಷಿಸಲು ಇಷ್ಟಪಡೋರಿಗೆ ಯುಟ್ಯೂಬ್​ ನಲ್ಲಿ ಆ ಎಪಿಸೋಡ್​ಗಳು ಲಭ್ಯ ಇವೆ ಅಂತಲೂ ಪಿ.ಶೇಷಾದ್ರಿ ಹೇಳಿದರು.


  ಮತ್ತೆ ಮಾಯಾಮೃಗ ಇದೇ 31 ರಿಂದ ಪ್ರಸಾರ ಆರಂಭ
  ಇನ್ನು ಮತ್ತೆ ಮಾಯಾಮೃಗ ಸೀರಿಯಲ್ ಇದೇ ತಿಂಗಳ ಕೊನೆ ದಿನ 31 ರಿಂದಲೇ ಶುರು ಆಗುತ್ತಿದೆ. ಸೋಮುವಾರದಿಂದ ಶುಕ್ರವಾರ ಪ್ರತಿ ದಿನ ರಾತ್ರಿ 9 ಕ್ಕೆ ಪ್ರಸಾರ ಆಗುತ್ತದೆ. ಕನ್ನಡದ ಸೀರಿಯಲ್ ಲೋಕದಲ್ಲಿ ಈ ಪ್ರಯೋಗ ಮೊದಲ ಪ್ರಯೋಗವೇ ಆಗಿದೆ.


  ಇದನ್ನೂ ಓದಿ: AbRam Khan: ಕ್ರೀಡೆಯಲ್ಲಿ ಗೋಲ್ಡ್ ಮೆಡಲ್ ಗೆದ್ದ ಶಾರುಖ್ ಮಗ ಅಬ್ರಾಮ್!


  ಪ್ರಖ್ಯಾತ ಸೀರಿಯಲ್ ಅನ್ನ ಎರಡನೇ ಭಾಗ ಮಾಡೋದು ಒಂದು ಸವಾಲಿನ ಕೆಲಸವೇ ಆಗಿದೆ. ಆ ಸಾಹಸವನ್ನ ನಿರ್ದೇಶಕ ಟಿ.ಎನ್.ಸೀತಾರಾಮ್, ನಾಗೇಂದ್ರ ಶಾ ಹಾಗೂ ಪಿ.ಶೇಷಾದ್ರಿ ಮಾಡುತ್ತಿದ್ದಾರೆ. ಇವರ ಈ ಸೀರಿಯಲ್ ಗೆ ಗುಡ್ ಲಕ್ ಹೇಳೋಣ ಅಲ್ವೇ?

  First published: