Kannadathi Serial: ಕೊನೆಗೂ ಭುವಿಗೆ ಮುತ್ತು ನೀಡಿದ ಹರ್ಷ, ಮದುವೆ ನಿಲ್ಲಿಸಲು ವರೂಧಿನಿ ಪ್ರಯತ್ನ!

ಹಲವು ಕುತೂಹಲ ಘಟ್ಟಗಳನ್ನು ದಾಟಿ ಬಂದಿರೋ ಕನ್ನಡತಿ ಸೀರಿಯಲ್​ನಲ್ಲಿ ಇದೀಗ ವೀಕ್ಷಕರು ಹರ್ಷ ಮತ್ತು ಭುವಿ ಮದುವೆಗಾಗಿ ಎದುರು ನೋಡುತ್ತಿದ್ದಾರೆ ಎಂದರೂ ತಪ್ಪಾಗಲಾರದು.

ಕನ್ನಡತಿ ಸೀರಿಯಲ್

ಕನ್ನಡತಿ ಸೀರಿಯಲ್

  • Share this:
ಕಲರ್ಸ್​ ಕನ್ನಡದಲ್ಲಿ (Colours Kannada) ಪ್ರಸಾರವಾಗುತ್ತಿರುವ ಕನ್ನಡತಿ ಧಾರಾವಾಹಿ (Kannadathi Serial) ಜನಮೆಚ್ಚಿಗೆ ಪಡೆಯುವಲ್ಲಿ ಯಶಸ್ವಿಯಾಗಿದೆ. ನಾನಾ ಕಾರಣಗಳಿಂದ ಈ ಧಾರವಾಹಿ (Serial) ಜನ ಮೆಚ್ಚುಗೆ ಗಳಿಸಿದೆ. ಹಲವು ಕುತೂಹಲ ಘಟ್ಟಗಳನ್ನು ದಾಟಿ ಬಂದಿರೋ ಸೀರಿಯಲ್​ನಲ್ಲಿ ಇದೀಗ ವೀಕ್ಷಕರು ಹರ್ಷ ಮತ್ತು ಭುವಿ ಮದುವೆಗಾಗಿ ಎದುರು ನೋಡುತ್ತಿದ್ದಾರೆ ಎಂದರೂ ತಪ್ಪಾಗಲಾರದು. ಹೌದು, ಇವರಿಬ್ಬರು ಪರಸ್ಪರ ಪ್ರೀತಿ ಹೇಳಿಕೊಂಡಿದ್ದಲ್ಲದೇ ಮನೆಯವರನ್ನು, ಅದರಲ್ಲಿಯೂ ಅಜ್ಜಮ್ಮನ್ನನೂ ಸಹ ಒಪ್ಪಿಸಿ, ನಿಶ್ಚಿತಾರ್ಥದ ಜೊತೆಗೆ ಪ್ರಿ ವೆಡ್ಡಿಂಗ್ ಫೋಟೋಶೂಟ್ (Photoshoot) ಕೂಡ ಮಾಡಿಸಿಕೊಂಡಿರುವುದು ವೀಕ್ಷಕರಲ್ಲಿ ಸಖತ್ ಸಂತಸ ತಂದಿದೆ. ಹೀಗಾಗಿ ಭುವಿ ಮತ್ತು ಹರ್ಷನ ಮದುವೆ ಎಂದು ನಡೆಯುತ್ತದೆ ಎಂದು ಪ್ರೇಕ್ಷಕರು ಕಾತೂರದಿಂದ ಕಾಯುತ್ತಿದ್ದಾರೆ.

ಪ್ರೇಮ ಪಕ್ಷಿಗಳಾದ ಹರ್ಷ - ಭುವಿ:

ಇನ್ನು, ಕನ್ನಡತಿ ಸೀರಿಯಲ್ ಮೊದಲಿನಿಂದಲೂ ಬೇರೆಲ್ಲಾ ಧಾರಾವಾಹಿಗಳಿಗಿಂತ ವಿಭಿನ್ನವಾಗಿ ಮೂಡಿಬರುತ್ತಿದೆ. ಆದರೆ ಇದೀಗ ಹರ್ಷ ಮತ್ತು ಭುವಿ ನಿಶ್ಛಿತಾರ್ಥದ ನಂತರ ಕಥೆಯಲ್ಲಿ ಪ್ರೇಮದ ಮಿಲನವಾಗಿದೆ. ಹೌದು, ಹರ್ಷ, ಭುವಿ ಇದೀಗ ಸಂಪೂರ್ಣ ಪ್ರೇಮಿಗಳಾಗಿದ್ದಾರೆ. ಟೀಚರ್ ಭುವಿ ಹತ್ತಿರ ಹರ್ಷ ಇನ್ನಷ್ಟು ಆತ್ಮೀಯವಾಗಿ ಹಸೆಮಣೆ ಏರಲು ಕಾತುರದಿಂದ ಕಾಯುತ್ತಿದ್ದಾನೆ. ಇದರ ನಡುವೆ ಕೊನೆಗೂ ಹರ್ಷ, ಭುವಿಗೆ ಮೊದಲ ಮುತ್ತು ನೀಡುತ್ತಾನೆ.

ಮದುವೆ ನಿಲ್ಲಿಸಲು ಪ್ರಯತ್ನಿಸುತ್ತಿರು ವರೂಧಿನಿ:

ಇತ್ತ ಹರ್ಷ ಮತ್ತು ಭುವಿ ಮದುವೆಯ ಸಂಭ್ರಮದಲ್ಲಿದ್ದರೆ, ಅತ್ತ ಸಾನಿಯಾ ಮತ್ತು ವರೂಧಿನಿ ಈ ವಿವಾಹವನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದಾರೆ. ಸಾನಿಯಾ ಆಗ್ಗಾಗ್ಗೆ ವರೂಧಿನಿ ಬ್ರೇನ್ ವಾಶ್ ಮಾಡುತ್ತಿದ್ದಾಳೆ. ಅಲ್ಲದೇ ಸೈಕೋ ವರೂಧಿನಿಗೆ ಕೆಲವೊಮ್ಮೆ ಹರ್ಷನ ನೆನಪಾದರೆ, ಇನ್ನೊಮ್ಮೆ ತನ್ನ ಸ್ನೇಹಿತೆ ಭುವಿಯ ಚಿಂತೆ ಕಾಡುತ್ತದೆ. ಆದರೂ ಇವರಿಬ್ಬರೂ ಸಂತಸದಿಂದ ಇರುವುದನ್ನು ನೋಡಿದರೆ ಈಗಲೂ ವರೂಧಿನಿ ಸಹಿಸಿಕೊಳ್ಳುತ್ತಿಲ್ಲ. ಇದನ್ನು ಬಳಸಿಕೊಲ್ಳುತ್ತಿರುವ ಸಾನಿಯಾ, ವರೂಧೀನಿಯನ್ನು ಇಟ್ಟುಕೊಂಡು ಮುಂದೇನು ಮಾಡುತ್ತಾಳೋ ಎಂಬುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ: Kannadathi Serial: ಕನ್ನಡತಿ ಸೀರಿಯಲ್​ನಲ್ಲಿ ಬಿಗ್​ ಟ್ವಿಸ್ಟ್, ಸುಪಾರಿ ಕಿಲ್ಲರ್​ನಿಂದ ಬಚಾವ್ ಆಗ್ತಾಳಾ ಭುವಿ?

ಮತ್ತೊಬ್ಬ ವಿಲನ್ ಉದ್ಭವ:

ಕನ್ನಡತಿಯಲ್ಲಿ ವರೂಧಿನಿ ಹಾಗೂ ಸಾನಿಯಾ ಈವರೆಗೆ ವಿಲನ್ ಗಳಾಗಿ ಇದ್ದರು. ಆದರೆ ಇದೀಗ ಇವರಿಬ್ಬರ ಗುಂಪಿಗೆ ಮತ್ತೊಬ್ಬರ ಎಂಟ್ರಿಯಾಗಿದೆ. ಹೌದು, ಹರ್ಷನ ಚಿಕ್ಕಪ್ಪ ಸಹ ಭುವಿ ಮತ್ತು ಹರ್ಷನ ಮದುವೆಯನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದಾನೆ. ತನ್ನ ಮಗಳು ಸುಚಿಯ ಮದುವೆಯನ್ನು ನಿಲ್ಲಿಸಲು ಭುವಿ ಕಾರಣ ಎಂದು ಇದೀಗ ಇವರಿಬ್ಬರ ಮದುವೆ ನಡೆಯದಿರಲು ಚಿಕ್ಕಪ್ಪ ಅಡ್ಡಗಾಲು ಹಾಕುತ್ತಿದ್ದಾನೆ.

ಮದುವೆ ಆಹ್ವಾನ ಪತ್ರಿಕೆ ಸಿದ್ಧ:

ಅನೇಕ ಸಮಸ್ಯೆ ಹಾಗೂ ಮದುವೆಯನ್ನು ತಡೆಯಲು ಪ್ರಯತ್ನಿಸುತ್ತಿರುವರ ನಡುವೆ ಹರ್ಷ, ಭುವಿ ಮದುವೆಯಾಗಲಿದೆಯಾ? ಎಂದು ಕಾದು ನೋಡಬೇಕಿದೆ. ಇದರ ನಡುವೆ ಹರ್ಷ ಮತ್ತು ಭುವಿ ಮದುವೆಯ ಇನ್ವಿಟೇಶನ್ ಕಾರ್ಡ್ ಸಿದ್ಧವಾಗಿದೆ. ಜೊತೆಯಲ್ಲಿ ಅಮ್ಮಮ್ಮನ ಆರೋಗ್ಯದಲ್ಲಿಯೂ ಏರುಪೇರಾಗುತ್ತಿದೆ. ಇಷ್ಟೆಲ್ಲಾ ಏರುಪೇರುಗಳನ್ನು ದಾಟಿ ಮದುವೆ ಆಗಲಿದ್ಎಯಾ ಎಂದು ಹಾಗೂ ಕನ್ನಡತಿಯಲ್ಲಿ ಮುಂದೇನು ಆಗಲಿದೆ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ: Kannadathi Serial: ಕನ್ನಡತಿ ಸೀರಿಯಲ್​ಗೆ ಮತ್ತೊಂದು ಕಿರೀಟ, ಹಿಂದಿಗೆ ಡಬ್ ಆಗುತ್ತಿದೆ ಕನ್ನಡ ಧಾರಾವಾಹಿ

ಪ್ರೇಕ್ಷಕರಿಗೂ ಮದುವೆಗೆ ಆಹ್ವಾನ:

ಇನ್ನು, ಕನ್ನಡತಿ ಸೀರಿಯಲ್​ ನ ಅಮ್ಮಮ್ಮ ಪಾತ್ರಧಾರಿ ಚಿತ್ಕಲಾ ಬಿರಾದಾರ್ ಅವರು 'ಕನ್ನಡತಿ' ಧಾರಾವಾಹಿಯ ಮದುವೆಗೆ ಬನ್ನಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರೇಕ್ಷಕರಿಗೆ ಆಹ್ವಾನ ನೀಡಿದ್ದಾರೆ.

ಕನ್ನಡತಿ ಸೀರಿಯಲ್​ನ ಪಾತ್ರವರ್ಗ:

ಕನ್ನಡತಿ ಧಾರಾವಾಹಿಯಲ್ಲಿ ಭುವಿಯಾಗಿ ನಟಿ ರಂಜನಿ ರಾಘವನ್, ಹರ್ಷ ಆಗಿ ನಟ ಕಿರಣ್ ರಾಜ್, ರತ್ನಮಾಲಾ ಆಗಿ ಚಿತ್ಕಳಾ ಬಿರಾದಾರ, ವರೂಧಿನಿ ಆಗಿ ಸಾರಾ ಅಣ್ಣಯ್ಯ, ಸಾನಿಯಾ ಆಗಿ ಆರೋಹಿ ನೈನಾ ನಟಿಸಿದ್ದಾರೆ.
Published by:shrikrishna bhat
First published: