• Home
  • »
  • News
  • »
  • entertainment
  • »
  • Harish Raj Special Talk: ಅದೇ ಭಾವ, ಅದೇ ಪ್ರೀತಿ, ರೂಪ ಮಾತ್ರ ಬದಲು-ಜೊತೆ ಜೊತೆಯಲಿ ಹರೀಶ್ ರಾಜ್ ಏನಂತಾರೆ?

Harish Raj Special Talk: ಅದೇ ಭಾವ, ಅದೇ ಪ್ರೀತಿ, ರೂಪ ಮಾತ್ರ ಬದಲು-ಜೊತೆ ಜೊತೆಯಲಿ ಹರೀಶ್ ರಾಜ್ ಏನಂತಾರೆ?

ಆರ್ಯನ ದೇಹ-ಬುದ್ದಿ, ಮುಖ ಮಾತ್ರ ವಿಶ್ವಾಸ್ ದೇಸಾಯಿ !

ಆರ್ಯನ ದೇಹ-ಬುದ್ದಿ, ಮುಖ ಮಾತ್ರ ವಿಶ್ವಾಸ್ ದೇಸಾಯಿ !

ಆರ್ಯವರ್ಧನ್ ಪಾತ್ರ ಅನಿರುದ್ಧ ಮುಂದುವರೆಸಿದ್ದರೆ ಅದು ಬೇರೆ ಇರುತ್ತಿತ್ತು. ಆದರೆ ಆರ್ಯವರ್ಧನ್ ಪಾತ್ರವಾಗಿಯೇ ಹರೀಶ್ ರಾಜ್ ಅಭಿನಯಿಸಬೇಕು. ಕಥೆಗೆ ನ್ಯಾಯ ಒದಗಿಸಬೇಕು. ಜನರಿಗೂ ಕನ್ವೆನ್ಸ್ ಆಗಬೇಕು. ಒಬ್ಬ ವ್ಯಕ್ತಿ ಎರಡು ಐಡೆಂಟಿಟಿ ಅನ್ನೋದು ಅಷ್ಟೇ ಸತ್ಯ. ಅದನ್ನ ನಿಭಾಯಿಸೋದು ಹರೀಶ್ ರಾಜ್​ ಗೆ ಚಾಲೆಂಜಿಗ್ ಜಾಬೇ ಆಗಿದೆ.

ಮುಂದೆ ಓದಿ ...
  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡ ಕಿರುತೆರೆಯಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿದ ಜೊತೆ ಜೊತೆಯಲಿ ಸೀರಿಯಲ್ (Jothe Jotheyali Serial) ವಿಶೇಷವಾಗಿಯೇ ಇದೆ. ಆರ್ಯವರ್ಧನ್ (Aryavardhan) ಪಾತ್ರದ ಮೂಲಕ ಅನಿರುದ್ಧ ಮನೆ ಮಾತಾಗಿದ್ದರು. ಅನಿರುದ್ಧ ಹೊರ ಬಂದ್ಮೇಲೆ ಸೀರಿಯಲ್ (Serial Lovers) ಪ್ರೇಮಿಗಳಲ್ಲಿ ಒಂದು ಪ್ರಶ್ನೆ ಇತ್ತು. ಅನಿರುದ್ಧ ಪಾತ್ರವನ್ನ ಯಾರು ಮಾಡ್ತಾರೆ ಅನ್ನೋದೇ ಆ ಕ್ವಶ್ಚನ್ ಆಗಿತ್ತು. ಅದಕ್ಕೆ ಉತ್ತರ ರೂಪದಲ್ಲಿಯೇ ಹರೀಶ್ (Harish Raj) ರಾಜ್ ಬಂದ್ರು. ಹೋಗ್ತಾ ಹೋಗ್ತಾ ಹರೀಶ್ ರಾಜ್, ಆರ್ಯವರ್ಧನ್ ಆಗಿ ಬದಲಾಗಿದ್ದಾರೆ. ಆರಂಭದಲ್ಲಿ ಅಷ್ಟೇನೂ ರಿಸೀವ್ ಮಾಡಿಕೊಳ್ಳದ ಪ್ರೇಕ್ಷಕರು ಈಗ ಹರೀಶ್ ರಾಜ್​ ಅವರನ್ನ ಆರ್ಯವರ್ಧನ್ ಆಗಿಯೇ ತೆಗೆದುಕೊಳ್ಳುತ್ತಿದ್ದಾರೆ. ಹೀಗೆ ಖುಷಿ ಹಂಚಿಕೊಂಡ ನಟ ಹರೀಶ್ ರಾಜ್, ನ್ಯೂಸ್-18 ಕನ್ನಡ ಡಿಜಿಟಲ್​ ಜೊತೆಗೆ ಇನ್ನೂ ಹಲವು ವಿಷಯ ಶೇರ್ ಮಾಡಿಕೊಂಡಿದ್ದಾರೆ. ಅದರ ಚಿತ್ರಣ ಮುಂದಿದೆ ಓದಿ.


ಆರ್ಯನ ದೇಹ-ಬುದ್ದಿ, ಮುಖ ಮಾತ್ರ ವಿಶ್ವಾಸ್ ದೇಸಾಯಿ !
ಜೊತೆ ಜೊತೆಯಲಿ ಸೀರಿಯಲ್ ಈ ಕಾರಣಕ್ಕೆ ವಿಶೇಷ ಅನಿಸುತ್ತಿದೆ. ಸೀರಿಯಲ್ ಲೋಕದಲ್ಲಿ ಇಂತಹ ಬದಲಾವಣೆ ಆಗಿರಲಿಲ್ಲ. ಆದರೂ ಅದು ಒಂದು ಹಂತಕ್ಕೆ ಇರುತ್ತಿತ್ತು. ಆದರೆ ಜೊತೆ ಜೊತೆಯಲಿ ಸೀರಿಯಲ್​ನಲ್ಲಿ ನಿಜಕ್ಕೂ ಭಾರೀ ಪ್ರಯೋಗವೇ ಆಗಿದೆ.


ಸೀರಿಯಲ್​ನ ಮುಖ್ಯ ಪಾತ್ರಧಾರಿ ಬದಲಾದಾಗ, ಬೇರೆ ನಟರನ್ನ ಆ ಕೂಡಲೇ ಆಯ್ಕೆ ಮಾಡಿ ಶೂಟಿಂಗ್ ಮಾಡಿ ಬಿಡಬಹದು. ಆದರೆ ಜನರನ್ನ ಕನ್ವೆನ್ಸ್ ಮಾಡೋದೇ ದೊಡ್ಡ ಚಾಲೆಂಜ್ ಆಗಿರುತ್ತದೆ. ಆ ಕೆಲಸ ಜೊತೆ ಜೊತೆಯಲಿ ಸೀರಿಯಲ್ ಮಾಡಿದೆ.


Kannada Serial Jothe Jotheyali Lead Actor Harisha Raj Special Talk


ವಿಶ್ವಾಸ ದೇಸಾಯಿ ಆರ್ಯವರ್ಧನ್ ಆಗಿ ಬದಲಾಗ್ತಿದ್ದಾರೆ
ಈ ಮಾತಂತೂ ಸತ್ಯ. ಸ್ವತಃ ಹರೀಶ್ ರಾಜ್ ಈ ಮಾತನ್ನ ಹೇಳುತ್ತಾರೆ. ಆರಂಭದಲ್ಲಿ ಜನ ಹರೀಶ್ ರಾಜ್ ಪಾತ್ರವನ್ನ ಅಷ್ಟಾಗಿ ಸ್ವೀಕರಿಸಿರಲಿಲ್ಲ. ಹೋಗ್ತಾ ಹೋಗ್ತಾ ಜನಕ್ಕೆ ಹರೀಶ್ ರಾಜ್ ಇಷ್ಟ ಆಗುತ್ತಿದ್ದಾರೆ.


ನಾನೇ ಆರ್ಯವರ್ಧನ್ ಅಂತ ಸೀರಿಯಲ್ ಪಾತ್ರಕ್ಕೂ ಕನ್ವಿನ್ಸ್​ ಮಾಡೋವಲ್ಲಿ ಹರೀಶ್ ರಾಜ್ ಸಕ್ಸಸ್ ಆಗಿದ್ದಾರೆ. ಜನ ಕೂಡ ಹರೀಶ್ ರಾಜ್ ನಿಜಕ್ಕೂ ಆರ್ಯವರ್ಧನ್ ಆಗಿ ಬದಲಾಗಿದ್ದಾರೆ ಅನ್ನೋದನ್ನ ಒಪ್ಪಿಕೊಳ್ಳುತ್ತಿದ್ದಾರೆ.



ಒಬ್ಬ ವ್ಯಕ್ತಿ ಎರಡು ವ್ಯಕ್ತಿತ್ವಗಳು-ಹರೀಶ್ ರಾಜ್


ಆರ್ಯವರ್ಧನ್ ಪಾತ್ರ ಅನಿರುದ್ಧ ಮುಂದುವರೆಸಿದ್ದರೆ ಅದು ಬೇರೆ ಇರುತ್ತಿತ್ತು. ಆದರೆ ಆರ್ಯವರ್ಧನ್ ಪಾತ್ರವಾಗಿಯೇ ಹರೀಶ್ ರಾಜ್ ಅಭಿನಯಿಸಬೇಕು. ಕಥೆಗೆ ನ್ಯಾಯ ಒದಗಿಸಬೇಕು. ಜನರಿಗೂ ಕನ್ವೆನ್ಸ್ ಆಗಬೇಕು. ಒಬ್ಬ ವ್ಯಕ್ತಿ ಎರಡು ಐಡೆಂಟಿಟಿ ಅನ್ನೋದು ಅಷ್ಟೇ ಸತ್ಯ. ಅದನ್ನ ನಿಭಾಯಿಸೋದು ಹರೀಶ್ ರಾಜ್​ ಗೆ ಚಾಲೆಂಜಿಗ್ ಜಾಬೇ ಆಗಿದೆ.


ಸವಾಲು ಸ್ವೀಕರಿಸೋದು ನನಗೆ ತುಂಬಾ ಇಷ್ಟ-ಹರೀಶ್ ರಾಜ್
ಹರೀಶ್ ರಾಜ್ ನಿಧಾನಕ್ಕೆ ಆರ್ಯವರ್ಧನ್ ಆಗಿ ಜನಕ್ಕೆ ಇಷ್ಟ ಆಗುತ್ತಿದ್ದಾರೆ. ಹೀಗೆ ಇಷ್ಟ ಆಗಬೇಕು ಅಂದ್ರೆ, ಹರೀಶ್ ರಾಜ್ ಕಷ್ಟಪಡಲೇಬೇಕು. ನಿಜ, ಆರ್ಯವರ್ಧನ್ ಪಾತ್ರವನ್ನ ಪ್ರತಿಬಿಂಬಿಸಬೇಕು. ಮರುವು ಇದೆ ಅನ್ನೋದನ್ನ ಅಭಿನಯಿಸಿ ತೋರಬೇಕು. ಕೋಪ, ಪ್ರೀತಿ, ಕನ್ಫ್ಯೂಜನ್, ಬೇಸರ ಎಲ್ಲವನ್ನೂ ತೋರಿಸಬೇಕು.


ಇದನ್ನ ಹರೀಶ್ ರಾಜ್ ಅಷ್ಟೇ ಸವಾಲಿನ ರೂಪದಲ್ಲಿಯೇ ಸ್ವೀಕರಿಸಿ ನಿಜಕ್ಕೂ ಗೆದ್ದು ಬಿಟ್ಟಿದ್ದಾರೆ. ಹರೀಶ್ ರಾಜ್ ಈಗ ನಿರ್ವಹಿಸ್ತಿರೋ ಪಾತ್ರ ಅಷ್ಟು ಸುಲಭ ಅಲ್ವೇ ಅಲ್ಲ ಬಿಡಿ. ಆದರೆ ಹರೀಶ್ ರಾಜ್ ಅದನ್ನ ಅಷ್ಟೇ ಸಮರ್ಥವಾಗಿಯೇ ನಿಭಾಯಿಸಿ ಸಕ್ಸಸ್ ಕಂಡಿದ್ದಾರೆ.


ಹಾಫ್ ಸೆಂಚ್ಯೂರಿ ಬಾರಿಸಿದ ಹರೀಶ್ ರಾಜ್ ಜೆಜೆ ಪಯಣ
ಹರೀಶ್ ರಾಜ್ ಬಂದ್ಮೇಲೆ ಜೊತೆ ಜೊತೆಯಲಿ 50 ಎಪಿಸೋಡ್ ಆಗಿವೆ. ಆರ್ಯವರ್ಧನ್ ಅನಿರುದ್ಧ ಇಲ್ಲದೇ ಏನಪ್ಪ ಮುಂದೆ ಅನ್ನೋರಿಗೆ ಹರೀಶ್ ರಾಜ್ ಇದ್ದಾರೆ ಅನ್ನೋ ಮಟ್ಟಿಗೆ ಸೀರಿಯಲ್ ತಂಡ, 50 ಎಪಿಸೋಡ್ ರೀಚ್ ಮಾಡಿದೆ. ಎಲ್ಲವೂ ಸೇರಿ ಜೊತೆ ಜೊತೆಯಲಿ ಸೀರಿಯಲ್ ಈಗ 800 ಸಂಚಿಕೆ ಪೂರ್ಣಗೊಳಿಸಿದೆ.


Kannada Serial Jothe Jotheyali Lead Actor Harisha Raj Special Talk
ಸವಾಲು ಸ್ವೀಕರಿಸೋದು ನನಗೆ ತುಂಬಾ ಇಷ್ಟ-ಹರೀಶ್ ರಾಜ್


ಜೊತೆ ಜೊತೆಯಲಿ ಟೀಮ್​​ಗೆ ಶುಭ ಹಾರೈಸಿದ ಹರೀಶ್ ರಾಜ್
ಹರೀಶ್ ರಾಜ್ ಈಗ ಜೊತೆ ಜೊತೆಯಲಿ ಸೀರಿಯಲ್​ನ ಭಾಗವೇ ಆಗಿದ್ದಾರೆ. ಸೀರಿಯಲ್ ಟೀಮ್​ ನಿಂದ ಒಳ್ಳೆ ಸ್ವಾಗತವನ್ನ ಸ್ವೀಕರಿಸಿದ ಹರೀಶ್ ರಾಜ್, ಯಶಸ್ವಿ 800 ಎಪಿಸೋಡ್ ಪೂರೈಸಿದ ಸೀರಿಯಲ್ ತಂಡಕ್ಕೆ ಶುಭ ಹಾರೈಕೆಯನ್ನೂ ತಿಳಿಸಿದ್ದಾರೆ.


ಇದನ್ನೂ ಓದಿ: KD Film Viral News: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ KD ಚಿತ್ರದ ನಾಯಕಿ ಯಾರು? ಮಾಲಾಶ್ರೀ ಮಗಳು ರಾಧನಾ ರಾಮ್ ಹೆಸರು ಕೇಳಿ ಬರ್ತಿರೋದೆಕೆ?


ಸೀರಿಯಲ್ ಒಂದು ಭಾಗವೇ ಆಗಿರೋ ಹರೀಶ್ ರಾಜ್ ತುಂಬಾ ಖುಷಿಯಲ್ಲಿಯೇ ಇದ್ದಾರೆ. ಆರ್ಯವರ್ಧನ್ ಪಾತ್ರವನ್ನ ಅಷ್ಟೇ ಎಂಜಾಯ್ ಮಾಡಿಕೊಂಡೇ ಮಾಡ್ತಾಯಿದ್ದಾರೆ. ಅದೇ ಖುಷಿಯಲ್ಲಿಯೇ ಸವಾಲಿನ ಆರ್ಯವರ್ಧನ್ ಪಾತ್ರವನ್ನ ನಿರ್ವಹಿಸಿ ಯಶಸ್ವಿಯಾಗಿ ವಿಶ್ವಾದಿಂದಲೇ ಸಾಗುತ್ತಿದ್ದಾರೆ.

First published: