• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Jothe Jotheyali: ಆರ್ಯವರ್ಧನ್ ಭೇಟಿಯಾದ ಆರ್ಯವರ್ಧನ್! ಜೊತೆ ಜೊತೆಯಾಗಿ ಗೆಳೆಯರು ಹೇಳಿದ್ದೇನು?

Jothe Jotheyali: ಆರ್ಯವರ್ಧನ್ ಭೇಟಿಯಾದ ಆರ್ಯವರ್ಧನ್! ಜೊತೆ ಜೊತೆಯಾಗಿ ಗೆಳೆಯರು ಹೇಳಿದ್ದೇನು?

ಹರೀಶ್ ರಾಜ್-ಅನಿರುದ್ಧ ಭೇಟಿ ಆಗಿದ್ದ್ಯಾಕೆ ?

ಹರೀಶ್ ರಾಜ್-ಅನಿರುದ್ಧ ಭೇಟಿ ಆಗಿದ್ದ್ಯಾಕೆ ?

'ಜೊತೆ ಜೊತೆಯಲಿ' ಸೀರಿಯಲ್ ಆ್ಯಕ್ಟರ್ ಹರೀಶ್ ರಾಜ್ ಇದೀಗ ಅನಿರುದ್ದ್‌ರನ್ನು ಭೇಟಿಯಾಗಿದ್ದು ಯಾಕೆ? ಸೀರಿಯಲ್ ಮುಗಿದ ಮೇಲೆ ಭೇಟಿಯಾಗಲು ಕಾರಣವೇನು? ಇವರಿಬ್ಬರ ಫೋಟೋ ಈಗ ಫುಲ್ ವೈರಲ್ ಆಗಿದೆ.

 • News18 Kannada
 • 3-MIN READ
 • Last Updated :
 • Bangalore [Bangalore], India
 • Share this:

ಕಿರುತೆರೆಯ ಇಬ್ಬರು ನಾಯಕ ನಟರು  ಒಂದೇ ಸೀರಿಯಲ್‌ನಲ್ಲಿ ನಟಿಸಿದ ಇತಿಹಾಸ ಇದಿಯೇ ? ಹೌದು ಇಂತಹ ಒಂದು ಘಟನೆಯ ನಡೆದಿದೆ. ಆ ಸೀರಿಯಲ್ ನಲ್ಲಿ ಒಂದೇ ಕ್ಯಾರೆಕ್ಟರ್‌ ಅನ್ನ ಇಬ್ಬರು (Jothe Jotheyal Serial Updates) ನಾಯಕ ನಟರು ನಿರ್ವಹಿಸಿರೋ ಸತ್ಯವೂ ಇಡೀ ಕನ್ನಡ ನಾಡಿಗೆ ಗೊತ್ತಿದೆ. ಅದನ್ನ ನೋಡಿದ ಜನ ಖುಷಿನೂ ಪಟ್ಟಿದ್ದೂ ಇದೆ,  ಬೇಸರಗೊಂಡಿದ್ದು ಇದೆ. ಸೂಪರ್ ಹಿಟ್ ಸೀರಿಯಲ್‌ನ (Kannada Serial Jothe Jotheyal) ನಾಯಕನೇ ಶೂಟಿಂಗ್‌ ಸೆಟ್‌ನಿಂದ ಎದ್ದು ಹೋದ್ಮೇಲೆ ಆ ಜಾಗಕ್ಕೆ ಯಾರು ಬರ್ತಾರೆ ? ಸೀರಿಯಲ್ ಓಡುತ್ತಾ ? ಹೀಗೆ ಎಲ್ಲ ಪ್ರಶ್ನೆಗಳೂ ಇದ್ದವು. ಅದಕ್ಕೆ (Jothe Jotheyal Updates) ಉತ್ತರವಾಗಿ ಮತ್ತೊಬ್ಬ ನಾಯಕ ನಟ ಆ ಪಾತ್ರ ಮಾಡಿದರು.


ಅದು ಸಕ್ಸಸ್ ಆಯಿತೇ? ಇಲ್ಲ ಸೀರಿಯಲ್ ಅರ್ಧದಲ್ಲಿ ಮುಗಿಯಿತೇ ? ನಿಜ, ಜೊತೆ ಜೊತೆಯಲಿ ಸೀರಿಯಲ್ ಎಂಡ್ ಆಗಿದೆ. ಸೀರಿಯಲ್ ಮುಗಿದ್ಮೇಲೆ ಏನ್ ಆಗಿದೆ ಗೊತ್ತೇ ? ಇಲ್ಲಿದೆ ಓದಿ.


Kannada Serial Jothe Jotheyal Lead Actor Harish Raj met Aniruddha after Serial End
ಆರ್ಯವರ್ಧನ್ ಮೀಟ್ಸ್ ಆರ್ಯವರ್ಧನ್!


ಜೊತೆ ಜೊತೆಯಲಿ ಸೀರಿಯಲ್ ಎಂಡ್ ಆಗಿದೆ. ಕೊನೆ ಸಂಚಿಕೆ ಚಿತ್ರೀಕರಿಸಿದ ಸೀರಿಯಲ್ ತಂಡ ಒಟ್ಟಿಗೆ ನಿಂತು ಫೋಟೋ ತೆಗೆಸಿಕೊಂಡಿದೆ. ಸೀರಿಯಲ್ ಮುಗಿದು ಹೋಯಿತು ಅನ್ನುವ ಬೇಸರವೂ ಇವರ ಮನದಲ್ಲಿ ಮೂಡಿದೆ.
ಜೊತೆ ಜೊತೆಯಲಿ ಸೀರಿಯಲ್ ಕಲಾವಿದರ ಸ್ಪೆಷಲ್ ಗ್ರೂಪ್ ಫೋಟೋ


ಇದಕ್ಕೂ ಹೆಚ್ಚಾಗಿ ಈ ಸೀರಿಯಲ್‌ ದಿನಗಳೆದಂತೆ ತನ್ನ ಕ್ರೇಜ್ ಕಳೆದುಕೊಂಡ ಸತ್ಯ ಕೂಡ ಈ ಕಲಾವಿದರನ್ನ ಕಾಡಿದ್ದು ಇದೆ. ಆದರೆ ಜೊತೆ ಜೊತೆಯಲಿ ಸೀರಿಯಲ್ ಅನ್ನ ಜನ ಇಷ್ಟಪಟ್ಟು ನೋಡಿದ್ದರು. ಅದಕ್ಕೆ ಇದು ಟಾಪ್‌ ಅಲ್ಲಿಯೇ ಇತ್ತು.
ಇದರ ಟೈಟಲ್ ಟ್ರ್ಯಾಕ್ ಸೂಪರ್ ಹಿಟ್ ಆಗಿತ್ತು. ನೂರು ಜನ್ಮ ಕೂಡಿ ಬಾಳುವ ಜೋಡಿ ನಮ್ಮದು ಅನ್ನೋ ಗೀತೆ ಎಲ್ಲರ ಮನದಲ್ಲಿ ಜಾಗ ಮಾಡಿಕೊಂಡಿತ್ತು. ಅಷ್ಟು ಟಾಪ್ ಅಲ್ಲಿಯೇ ಇದ್ದ ಸೀರಿಯಲ್ ಚೆನ್ನಾಗಿಯೇ ಹೋಗ್ತಾ ಇತ್ತು.


ಜೊತೆ ಜೊತೆಯಲಿ ಸೀರಿಯಲ್ ಬೇಗ ಮುಗಿದದ್ದು ಯಾಕೆ ?


ಆದರೆ ಸೀರಿಯಲ್ ಹೀರೋ ಆರ್ಯವರ್ಧನ್ ಪಾತ್ರಧಾರಿ ಅನಿರುದ್ಧ ಸೆಟ್‌ನಿಂದ ಎದ್ದು ಹೋದ್ರು. ಇದಾದ್ಮೇಲೆ ಏನೇನೋ ಆಗಿ ಹೋಯಿತು. ಅನಿರುದ್ಧ ಪಾತ್ರಕ್ಕೆ ನಟ ಹರೀಶ್ ರಾಜ್ ಬಂದ್ರು. ಆದರೆ ಸೀರಿಯಲ್ ಮೊದಲಿನ ಕ್ರೇಜ್ ಉಳಿಸಿಕೊಳ್ಳಲೇ ಇಲ್ಲ.


ನಿಧಾನಕ್ಕೆ ಎಲ್ಲವೂ ಬದಲಾಯಿತು. ಈಗ ಸೀರಿಯಲ್ ಮುಗಿದು ಹೋಗಿದೆ. ಎಲ್ಲವೂ ಮುಗಿದ ಮೇಲೆ ಅನ್ನೋ ಹಾಗೆ ಹರೀಶ್ ರಾಜ್ ಇದೀಗ ಆರ್ಯವರ್ಧನ್ ಪಾತ್ರಧಾರಿ ಅನಿರುದ್ಧ ಅವರನ್ನಭೇಟಿಯಾಗಿದ್ದಾರೆ.


Kannada Serial Jothe Jotheyal Lead Actor Harish Raj met Aniruddha after Serial End
ಅನಿರುದ್ಧ್ ದಂಪತಿ ಜೊತೆ ಹರೀಶ್ ರಾಜ್


ಹರೀಶ್ ರಾಜ್-ಅನಿರುದ್ಧ ಭೇಟಿ ಆಗಿದ್ದ್ಯಾಕೆ ?


ಅನಿರುದ್ಧ ಜೊತೆಗೆ ಹರೀಶ್ ರಾಜ್ ಫೋಟೋ ತೆಗೆಸಿಕೊಂಡಿದ್ದಾರೆ. ಅದನ್ನ ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ. ಜೊತೆಗೆ ಒಂದರೆಡು ಸುಂದರವಾದ ಸಾಲುಗಳನ್ನ ಕೂಡ ಹರೀಶ್ ರಾಜ್ ಬರೆದಿದ್ದಾರೆ.


How life Brings us all Together! JOTHE JOTHEYALI! Was nice meeting you after a long time Brother


"ಜೀವನ ನಮ್ಮನ್ನ ಹೇಗೆ ಜೊತೆಗೆ ತಂದಿದೆ ನೋಡಿ. ಬ್ರದರ್ ನಿಮ್ಮನ್ನ ಬಹು ದಿನಗಳ ಬಳಿಕ ಭೇಟಿ ಆಗಿರೋದು ತುಂಬಾ ಖುಷಿ ತಂದಿದೆ" ಅಂತಲೇ ಹೇಳಿಕೊಂಡಿದ್ದಾರೆ.


ಜೊತೆ ಜೊತೆಯಲಿ ಸೀರಿಯಲ್‌ನ ಪಾತ್ರಕ್ಕೆ ಹರೀಶ್ ರಾಜ್ ಆಯ್ಕೆಯಾದಾಗ ನ್ಯೂಸ್-18 ಕನ್ನಡ ಡಿಜಿಟಲ್‌ ಜೊತೆಗೂ ಮಾತನಾಡಿದ್ದರು. ಆರ್ಯವರ್ಧನ್ ಪಾತ್ರಕ್ಕೆ ಆಯ್ಕೆಯಾದ ಖುಷಿ ಹಂಚಿಕೊಂಡಿದ್ದರು. ಮೊದಲ ದಿನ ಸೀರಿಯಲ್‌ ಸೆಟ್‌ನಲ್ಲಿ ಸಿಕ್ಕ ಸ್ವಾಗತವನ್ನೂ ಕೊಂಡಾಡಿದ್ದರು.


ಸೀರಿಯಲ್ ಎಂಡ್-ಕಣ್ಣೀರಾದ ಮೇಘಾ ಶೆಟ್ಟಿ


ಅದೇ ಸೀರಿಯಲ್ ಈಗ ಮುಗಿದಿದೆ. ಸೀರಿಯಲ್ ನಾಯಕಿ ಅನು ಸಿರಿಮನೆ ಪಾತ್ರಧಾರಿ ಮೇಘಾ ಶೆಟ್ಟಿ ಭಾವುಕರಾಗಿದ್ದಾರೆ. ಸೀರಿಯಲ್ ಮುಗಿದ ಬೇಸರದಲ್ಲಿ ಕಣ್ಣೀರಾಗಿದ್ದಾರೆ. ಇದೇ ರೀತಿ ಇತರ ಕಲಾವಿದರು ಜೊತೆ ಜೊತೆಯಲಿ ಸೀರಿಯಲ್‌ ಅನ್ನ ಮಿಸ್ ಮಾಡಿಕೊಳ್ಳುತ್ತಿದ್ದಾರೆ.


ಇದನ್ನೂ ಓದಿ: Cannes 2023-Kushboo: ಕಾನ್ ಫಿಲ್ಮ್ ಫೆಸ್ಟಿವಲ್​ನಲ್ಲಿ ಸೀರೆಯುಟ್ಟು ಮಿಂಚಿದ ಖುಷ್ಬೂ, ದೇಶದ ಸಂಸ್ಕೃತಿ ಎತ್ತಿ ಹಿಡಿದ ನಟಿ


ಆದರೆ ಹರೀಶ್ ರಾಜ್ ಮಾತ್ರ ಅನಿರುದ್ಧ ಅವರನ್ನ ಭೇಟಿಯಾಗಿದ್ದಾರೆ. ಜೊತೆಗೊಂದು ಫೋಟೋ ತೆಗೆದುಕೊಂಡು ಸಂತೋಷಪಟ್ಟಿದ್ದಾರೆ. ಇದಲ್ಲದೇ ಜೊತೆ ಜೊತೆಯಲಿ ಸೀರಿಯಲ್ ಟೀಮ್ ಕೂಡ ಅನಿರುದ್ಧ ಜೊತೆಗೆ ಫೋಟೋ ತೆಗೆಸಿಕೊಂಡಿದೆ. ಎಲ್ಲರೂ ಈ ಸಮಯದಲ್ಲಿ ಒಟ್ಟಾಗಿ ನಿಂತು ಆ ದಿನಗಳನ್ನ ಹೀಗೆ ನೆನಪಿಸಿಕೊಂಡಿದ್ದಾರೆ.

top videos
  First published: