Harsha v/s Saniya: ಲಂಚದ ನಾಟಕವಾಡಿಸಿದ ಸಾನಿಯಾಗೆ ಠಕ್ಕರ್ ಕೊಟ್ಟ ಹರ್ಷ, ಟೀಚರ್ ಸುದ್ದಿಗೆ ಬರ್ಬೇಡಿ ಎಂದು ವಾರ್ನಿಂಗ್!

ಭುವಿಗೆ ಯಾರೇ ತೊಂದ್ರೆ ಕೊಟ್ಟರು ಹರ್ಷ ಅವರನ್ನು ಸುಮ್ಮನೇ ಬಿಡಲ್ಲ. ಅವರು ಎಲ್ಲೇ ಇದ್ರೂ ಹುಡುಕಿಕೊಂಡು ಹೋಗಿ ಪಾಠ ಕಲಿಸುತ್ತಾನೆ. ಸುಮ್ಮನೇ ಪದೇ-ಪದೇ ಭುವಿಯ ತಂಟೆಗೆ ಬರಬೇಡಿ ಎಂದು ಸಾನಿಯಾಗೆ ಹರ್ಷ ವಾರ್ನ್ ಮಾಡುತ್ತಾನೆ.

ಸಾನಿಯಾ, ಹರ್ಷ

ಸಾನಿಯಾ, ಹರ್ಷ

  • Share this:
ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ (Channel) ಪ್ರತಿದಿನ ರಾತ್ರಿ 7.30ಕ್ಕೆ ಪ್ರಸಾರವಾಗುವ ಕನ್ನಡತಿ (Kannadathi) ಸೀರಿಯಲ್ (Serial) ಇತರೆ   ಧಾರಾವಾಹಿಗಳಿಗಿಂತ ಹೆಚ್ಚು ಜನಪ್ರಿಯತೆ ಗಳಿಸಿದೆ. ಕನ್ನಡದ ಕಂಪನ್ನು ಹರಡಿಸುತ್ತಿರುವ ಧಾರಾವಾಹಿಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ದಿನ ದಿನದಿಂದ ದಿನಕ್ಕೆ ಧಾರಾವಾಹಿ ಹೊಸ ಹೊಸ ಆಯಾಮಗಳಿಂದ ಜನರನ್ನು ಹಿಡಿದಿಟ್ಟುಕೊಳ್ಳತ್ತಿದೆ. ಟ್ವಿಸ್ಟ್‍ಗಳ ಮೂಲಕ ಟ್ವಿಸ್ಟ್ ನೀಡುತ್ತಿದ್ದು ಕುತೂಹಲ ಹೆಚ್ಚಿಸುತ್ತಿದೆ. ಹರ್ಷ-ಭುವಿ ಕ್ಯೂಟ್ ಜೋಡಿ ಜನರನ್ನು ಮೋಡಿ ಮಾಡಿದೆ. ಸುಂದರವಾಗಿದ್ರೂ ಕುತಂತ್ರ ಮಾಡೋ ಸಾನಿಯಾ, ವರೂಧಿನಿ ಕೂಡ ಜನರ ಕೆಂಗೆಣ್ಣಿಗೆ ಗುರಿಯಾಗುತ್ತಿದ್ದಾರೆ. ಕನ್ನಡತಿ ಸೀರಿಯಲ್‍ನಲ್ಲಿ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಹರ್ಷ-ಭುವಿ ಮದುವೆಯಾಗಿದೆ. ಭುವಿಯನ್ನು ಹರ್ಷ ಮದುವೆ (Marriage)ಯಾಗಿರೋದು ವಿಲನ್ ಸಾನಿಯಾ (Saniya)ಗೆ ಇಷ್ಟ ಇಲ್ಲ. ಆದ ಕಾರಣ ಅವರನ್ನು ದೂರ ಮಾಡೋ ಪ್ರಯತ್ನ ಮಾಡುತ್ತಲೇ ಇದ್ದಾಳೆ

ಭುವಿಯನ್ನು ಕಂಡ್ರೆ ಸಾನಿಯಾಗೆ ಸಂಕಟ!
ಸುಂಸ್ಕøತ ಹುಡುಗಿಯಾಗಿರುವ ಭುವಿ, ಹರ್ಷ ಹಾಗೂ ಅಮ್ಮಮ್ಮನ ಮನಸು ಗೆದ್ದ ಅವರ ಮನೆ ಸೊಸೆಯಾಗಿದ್ದಾಳೆ. ಅದಲ್ಲದೇ ಅಮ್ಮಮ್ಮ ತನ್ನ ಆಸ್ತಿಯನ್ನು ಈ ಮೊದಲೇ ಸೌಪರ್ಣಿಕ ಹೆಸರಿಗೆ ಬರೆದಿದ್ದಾಳೆ. ಅಂದ್ರೆ ಭುವಿ ಹೆಸರಿಗೆ ಬರೆದಿದ್ದಾರೆ. ಅಲ್ಲದೇ ಎಲ್ಲಿ ಭುವಿ ಅಧಿಕಾರ ಕಿತ್ತುಕೊಂಡು ಬಿಡುತ್ತಾಳೋ ಅಂತ ಸಾನಿಯಾ ಒಂದಲ್ಲ ಒಂದು ಕಿತಾಪತಿ ಮಾಡುತ್ತಿದ್ದಾಳೆ. ಅದಕ್ಕೆ ಇಲ್ಲ ಸಲ್ಲದ ಆರೋಪಗಳನ್ನು ಭುವನೇಶ್ವರಿ ಮೇಲೆ ಹಾಕುತ್ತಿದ್ದಾಳೆ.

ಭುವಿ ಮೇಲೆ ಲಂಚದ ಆರೋಪ ಹೊರಿಸಲು ನಾಟಕ
ಹರ್ಷ ಈಗಾಗಲೇ ತನ್ನ ಹೆಂಡತಿ ಭುವಿ ಸುದ್ದಿಗೆ ಬರಬೇಡಿ ಎಂದು ಸಾನಿಯಾ ವಾರ್ನ್ ಮಾಡಿದ್ದಾನೆ. ಅದಕ್ಕೆ ಕೋಪಗೊಂಡ ಸಾನಿಯಾ ಹೇಗಾದ್ರೂ ಭುವಿಯನ್ನು ಕೆಲಸದಿಂದ ತೆಗೆದು ಹಾಕಲು ಸ್ಕೆಚ್ ಹಾಕುತ್ತಿದ್ದಾಳೆ. ಅದಕ್ಕೆ ಕಾಲೀಜು ಬಿಟ್ಟ ಹುಡುಗರನ್ನು ಮತ್ತೆ ಕಾಲೇಜಿಗೆ ಸೇರಿಸುವ ನೆಪದಲ್ಲಿ ಡ್ರಾಮಾ ಮಾಡುತ್ತಿದ್ದಾಳೆ. ಅವರು ಭುವಿ ಅವರು ಮತ್ತೆ ಕಾಲೇಜಿಗೆ ಸೇರಿಸಿಕೊಳ್ಳಲು ಹಣ ಪಡೆದಿದ್ದಾರೆ ಎಂದು ಸಾನಿಯಾ ಬಳಿ ದೂರು ನೀಡಿದ್ದಾರೆ.

ಇದನ್ನೂ ಓದಿ: Hitler Kalyana: ಲೀಲಾಳನ್ನು ಮೇಲಿಂದ ತಳ್ಳಿ ಬಿಡ್ತಾನಾ AJ? ಅಯ್ಯೋ, ಇಬ್ಬರ ಮಧ್ಯೆ ಹೀಗೇಕಾಯ್ತು?

ಬೇಸರವಾಗಿದ್ದ ಭುವಿಗೆ ಹರ್ಷ ಸಮಾಧಾನ
ಇನ್ನು ಹುಡುಗರು ಲಂಚ ಪಡೆದರು ಎಂದು ಸುಳ್ಳು ಹೇಳಿದ್ದಕ್ಕೆ ಭುವಿ ಬೇಸರ ಮಾಡಿಕೊಂಡಿದ್ದಾಳೆ. ನಡೆದ ಘಟನೆಯನ್ನು ಹರ್ಷನಿಗೆ ತಿಳಿಸಿದ್ದಾಳೆ. ಹರ್ಷ ತಲೆ ಕೆಡಿಸಿಕೊಳ್ಳಬೇಡಿ ಎಂದು ಸಮಾಧಾನ ಮಾಡುತ್ತಾನೆ. ನಿಧಾನವಾಗಿ ಭುವಿಯ ಬಳಿ ಹುಡುಗರ ಹೆಸರು ತಿಳಿದುಕೊಳ್ಳುತ್ತಾನೆ.

ಇಂದು ಹುಡುಗರನ್ನು ಹುಡುಕುವ ಹರ್ಷ
ತನ್ನ ಹೆಂಡತಿ ಭುವಿಗೆ ಯಾರೇ ತೊಂದ್ರೆ ಕೊಟ್ಟರು ಹರ್ಷ ಅವರನ್ನು ಸುಮ್ಮನೇ ಬಿಡಲ್ಲ. ಅವರು ಎಲ್ಲೇ ಇದ್ರೂ ಹುಡುಕಿಕೊಂಡು ಹೋಗಿ ಪಾಠ ಕಲಿಸುತ್ತಾನೆ. ಅಂತೆಯೇ ಇವತ್ತು, ಭುವಿ ಮೇಲೆ ಲಂಚದ ಆರೋಪ ಹೊರಿಸಿರುವ ಹುಡುಗರನ್ನು ಹುಡುಕುತ್ತಾನೆ. ಅವರಿಗೆ ಸರಿಯಾಗಿ ಹೊಡೆದು ನಿಜ ಬಾಯಿ ಬಿಡಿಸುತ್ತಾನೆ.

ಸಾನಿಯಾಗೆ ಮತ್ತೆ ವಾರ್ನಿಂಗ್ ಕೊಟ್ಟ ಹರ್ಷ
ಭುವಿ ಮೇಲೆ ಲಂಚದ ಆರೋಪ ಹೊರಿಸಿದ ಹುಡುಗರ ಬಳಿ ಸತ್ಯ ಬಾಯ್ಬಿಡಿಸಿದ ಹರ್ಷ, ನೇರವಾಗಿ ಸಾನಿಯಾ ಬಳಿ ಹೋಗುತ್ತಾನೆ. ಈ ನಾಟಕವನ್ನೆಲ್ಲಾ ಸಾಕು ಮಾಡು ಎಂದು ಹೇಳುತ್ತಾನೆ. ಅದಕ್ಕೆ ಸಾನಿಯಾ ನಾನೇನು ಮಾಡಿದೆ ಅಂತ ಕೇಳಿದ್ದಾಗ, ದುಡ್ಡು ಕೊಟ್ಟು ಲಂಚದ ನಾಟವಾಡಿದಿದ್ದು ನನಗೆ ಗೊತ್ತಾಗಿದೆ. ಸುಮ್ಮನೇ ಪದೇ-ಪದೇ ಭುವಿಯ ತಂಟೆಗೆ ಬರಬೇಡಿ ಎಂದು ವಾರ್ನಿಂಗ್ ಮಾಡುತ್ತಾನೆ.

ಇದನ್ನೂ ಓದಿ: Paaru Serial: ರೊಚ್ಚಿಗೆದ್ದ ಅಖಿಲಾಂಡೇಶ್ವರಿ, ಪಾರು-ಜನನಿ ಜೊತೆ ಅರುಂಧತಿ ಮನೆಗೆ ಎಂಟ್ರಿ! ಇವತ್ತು ರೋಚಕ ತಿರುವು

ವಾರ್ನ್ ಮಾಡಿದ್ದಕ್ಕೆ ಸಾನಿಯಾ ಎನಂದ್ಲು, ಹರ್ಷ ಮತ್ತೇನು ಹೇಳಿದೆ, ಹರ್ಷನ ಎಚ್ಚರಿಕೆಗೆ ಸಾನಿಯಾ ಸುಮ್ಮನೆ ಆಗ್ತಾಳಾ, ಎಲ್ಲವನ್ನೂ ನೋಡಲು ಇವತ್ತಿನ ಎಪಿಸೋಡ್ ನೋಡಬೇಕಿದೆ.
Published by:Savitha Savitha
First published: