ಗಟ್ಟಿಮೇಳದ ಮಹತಿಗೆ SSLCಯಲ್ಲಿ 99.04%, ಇದು ಸೀರಿಯಲ್ ಅಲ್ಲ ನಿಜವಾದ ರಿಸಲ್ಟ್!

’ಗಟ್ಟಿಮೇಳ’ (Gattimela) ಧಾರಾವಾಹಿಯ ಪಾತ್ರದಾರಿ ಮಹತಿ ವೈಷ್ಣವಿ ಭಟ್ (Mahati Vaishnavi Bhat) ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯಲ್ಲಿ 625 ಕ್ಕೆ 619 ಅಂಕಗಳನ್ನು ಪಡೆಯುವ ಮೂಲಕ 99.04% ಪಡೆದಿದ್ದಾರೆ.

ಮಹತಿ ವೃಷ್ಣವಿ ಗೌಡ

ಮಹತಿ ವೃಷ್ಣವಿ ಗೌಡ

  • Share this:
ಕನ್ನಡದ ಖಾಸಗಿ ವಾಹಿನಿ ಜೀ ಕನ್ನಡದಲ್ಲಿನ (Zee Kannada) ಫೇಮಸ್ ಸೀರಿಯಲ್ ’ಗಟ್ಟಿಮೇಳ’ (Gattimela) ಧಾರಾವಾಹಿಯ ಪಾತ್ರದಾರಿ ಮಹತಿ ವೈಷ್ಣವಿ ಭಟ್ (Mahati Vaishnavi Bhat) ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯಲ್ಲಿ 625 ಕ್ಕೆ 619 ಅಂಕಗಳನ್ನು ಪಡೆಯುವ ಮೂಲಕ 99.04% ಪಡೆದಿದ್ದಾರೆ. ಕರ್ನಾಟಕ SSLC ಫಲಿತಾಂಶ ಈಗಾಗಲೇ ಪ್ರಕಟವಾಗಿದ್ದು, ಯುವ ನಟಿ ಮಹತಿ ವೈಷ್ಣವಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಈ ವರ್ಷ ಹತ್ತನೇ ತರಗತಿಯ ಅಂತಿಮ ಪರೀಕ್ಷೆಗೆ ಹಾಜರಾಗಿದ್ದ ನಟಿ 99.04% ಅಂಕ ಗಳಿಸುವ ಮೂಲಕ ನಟನೆ ಮತ್ತು ಓದಿನಲ್ಲಿ ಎರಡರಲ್ಲಿಯೂ ಮುಂದಿರುವುದಾಗಿ ತೋರಿಸಿಕೊಟ್ಟಿದ್ದಾರೆ. ವೈಷ್ಣವಿ ಇದಕ್ಕೂ ಮೊದಲು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಡ್ರಾಮಾ ಜೂನಿಯರ್ಸ್ ರಿಯಾಲಿಟಿ ಶೋ ಮೂಲಕ ಹೆಚ್ಚು ಮನೆಮಾತಾಗಿದ್ದರು. 

ಆದರೆ ಇದೀಗ ಧಾರಾವಹಿಗಳಲ್ಲಿ ಹೆಚ್ಚು ಬ್ಯೂಸಿಯಾಗಿರುವ ಯುವ ನಟಿ ಶಿಕ್ಷಣದಲ್ಲಿಯೂ ಉತ್ತಮ ಸಾಧನೆ ಮಾಡಿದ್ದಾರೆ. ಈ ಬಗ್ಗೆ ಮಹತಿ ಇನ್ಸ್ಟಾಗ್ರಾಂ ನಲ್ಲಿ ಫೊಸ್ಟ್ ಒಂದನ್ನು ಶೇರ್ ಮಾಡಿದ್ದು, ಎಲ್ಲಡೆ ಸಖತ್ ವೈರಲ್ ಆಗುತ್ತಿದೆ.

ಹೀಗಿದೆ ನೋಡಿ ಮಹತಿ ಅಂಕಪಟ್ಟಿ:

ಗಟ್ಟಿಮೇಳ ಸೀರಿಯಲ್​ ನಲ್ಲಿ ನಟಿಸಿದ ಮಹತಿ ವೈಷ್ಣವಿ ಭಟ್ SSLC ಪರೀಕ್ಷೆಯಲ್ಲಿ 625ಕ್ಕೆ 619 ಅಂಕ ಪಡೆಯುವ ಮೂಲಕ 99.04% ಪಡೆದಿದ್ದಾರೆ. ನಟಿ ಮಹತಿ ವೈಷ್ಣವಿ ಭಟ್ ಕನ್ನಡದಲ್ಲಿ 124, ಇಂಗ್ಲೀಷ್ ಭಾಷೆಯಲ್ಲಿ 100, ಹಿಂದಿಯಲ್ಲಿ 99, ಗಣಿತದಲ್ಲಿ 100, ವಿಜ್ಞಾನದಲ್ಲಿ 97, ಸಮಾಜ ವಿಜ್ಞಾನದಲ್ಲಿ 99 ಅಂಕಗಳನ್ನು ಗಳಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ. ಓದು ಮತ್ತು ನಟನೆ ಎರಡನ್ನೂ ಸಮವಾಗಿ ತೂಗಿಸಿಕೋಮಡಿರುವ ಮಹಿತಿಗೆ ಎಲ್ಲಡೆಯಿಂದ ಶುಭ ಹಾರೈಕೆ ಬರುತ್ತಿದೆ. ಈ ಅಂಕಪಟ್ಟಿಯನ್ನು ಮಹಿತಿ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.


ಎಲ್ಲರಿಗೂ ಧನ್ಯವಾದ ತಿಳಸಿದ ವೈಷ್ಣವಿ ಭಟ್:

ಎಸ್​ಎಸ್​ಎಲ್​ಸಿ ಅಂಕಪಟ್ಟಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಅಡಿಬರಹದಲ್ಲಿ ಎಲ್ಲರಿಗೂ ಧನ್ಯವಾದವನ್ನು ತಿಳಿಸಿದ್ದಾರೆ. ಈ ಕುರಿತು ಬರೆದುಕೊಂಡಿರುವ ಅವರು, ‘ನಿಮ್ಮ ಬೆಂಬಲಕ್ಕಾಗಿ ಅಮ್ಮಾ, ಪಪ್ಪಾ, ಅಣ್ಣಯ್ಯ, ಅಮ್ಮಮ್ಮ, ತಾತಯ್ಯ ಧನ್ಯವಾದಗಳು. ನನ್ನ ಶಿಕ್ಷಕರು ಮತ್ತು ಶಾಲೆಗೆ ಧನ್ಯವಾದಗಳು. ಓದು ಹಾಗೂ ನಟನೆ ಎರಡರಲ್ಲೂ ನನಗೆ ಬೆಂಬಲ ನೀಡುತ್ತಿದ್ದಾರೆ ಮತ್ತು ನಿಮ್ಮ ನಿರಂತರ ಬೆಂಬಲಕ್ಕಾಗಿ ಗಟ್ಟಿಮೇಳ ತಂಡ ಮತ್ತು ಜೀ ಅವರಿಗೆ ತುಂಬಾ ಧನ್ಯವಾದಗಳು.

ಇದನ್ನೂ ಓದಿ: Sunny Leone: ’ಡಿಂಗರ ಬಿಲ್ಲಿ’ ಅವತಾರ ತಾಳಿದ ಸನ್ನಿ, ಮತ್ತೆ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಸೇಸಮ್ಮ!

ನೀವು ಇಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ. ಗೆಳೆಯರೇ ನನ್ನ Insta ಕುಟುಂಬಕ್ಕೆ ವಿಶೇಷ ಧನ್ಯವಾದಗಳು. ಪರೀಕ್ಷೆಗಳ ಕಾರಣದಿಂದಾಗಿ, ನನಗೆ ಏನನ್ನೂ ಪೋಸ್ಟ್ ಮಾಡಲು ಅಥವಾ ನಿಮ್ಮೊಂದಿಗೆ ಸಂವಹನ ನಡೆಸಲು ಸಾಧ್ಯವಾಗಲಿಲ್ಲ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು‘ ಎಂದು ಬರೆದುಕೊಂಡಿದ್ದಾರೆ.

ಗಣ್ಯರಿಂದ ಮಹತಿ ಶುಭ ಹಾರೈಕೆ:

ಎಸ್​ಎಸ್​ಎಲ್​ಸಿ ಅಲ್ಲಿ ಉತ್ತಮ ಅಂಕಗಳಿಸುವುದರೊಂದಿಗೆ ಸಾಧನೆ ಮಾಡಿರುವ ಮಹತಿ ವೈಷ್ಣವಿ ಭಟ್​ ಗೆ ಎಲ್ಲಡೆಯಿಂದ ಶುಭಕೋರಲಾಗುತ್ತಿದೆ. ಅಲ್ಲದೇ ತಂಡದ ಸಹ ಕಲಾವಿದರುಗಳು ಸಹ ಶುಭ ಹಾರೈಸಿದ್ದಾರೆ. ಅವರಲ್ಲಿ ಪ್ರಮುಖವಾಗಿ ಗಟ್ಟಿಮೇಳದ ಸಾಹಿತಿ ಅಕಾ ಶರಣ್ಯ ಶೆಟ್ಟಿ ಶುಭ ಕೋರಿದ್ದು, ‘ಅಭಿನಂದನೆಗಳು ಮಹತಿ. ಹೆಮ್ಮೆ. ನಿಮ್ಮ ಭವಿಷ್ಯಕ್ಕೆ ಶುಭವಾಗಲಿ‘ ಎಂದು ಹಾರೈಸಿದ್ದಾರೆ. ಮತ್ತೊಂದೆಡೆ, ಮಹತಿಯ ಆನ್-ಸ್ಕ್ರೀನ್ ಅಕ್ಕ ಪ್ರಿಯಾ ಜೆ ಆಚಾರ್ ಕೂಡ ಮಹತಿಯ ಅಂಕಗಳ ಪಟ್ಟಿಯನ್ನು ಹಂಚಿಕೊಂಡು ಅವರನ್ನು ಅಭಿನಂದಿಸಿದರು.

ಇದನ್ನೂ ಓದಿ: NTR ಅಭಿಮಾನಿಗಳಿಗೆ ಡಬಲ್ ಧಮಾಕ, ಪ್ರಶಾಂತ್ ನೀಲ್ ಜೊತೆಗಿನ ಹೊಸ ಚಿತ್ರದ ಪೋಸ್ಟರ್ ರಿಲೀಸ್

ಸಾಮಾಜಿಕ ಮಾಧ್ಯಮದಲ್ಲಿ ಸಕ್ರೀಯರಾಗಿರುವ ಮಹತಿ:

ಇನ್ನು, ಗಟ್ಟಿಮೇಳ ಸೀರಿಯಲ್​ ನಲ್ಲಿ ಹಾಗೂ ಡ್ರಾಮಾ ಜೂನಿಯರ್ಸ್ ನ ಮೂಲಕ ಪ್ರಸಿದ್ಧರಾಗಿರುವ ನಟಿ ಮಹತಿ ವೈಷ್ಣವಿ ಭಟ್ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಮಹತಿ ವೈಷ್ಣವಿ ಭಟ್ ಅವರು 119k ಫಾಲೋವರ್ಸ್ ಇದ್ದು, ಅಗ್ಗಾಗ್ಗೆ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
Published by:shrikrishna bhat
First published: