Doresani: ಕುತೂಹಲ ಘಟ್ಟ ತಲುಪಿದ ದೊರೆಸಾನಿ ಸೀರಿಯಲ್, ನಡೆಯುತ್ತಾ ಆನಂದ್ - ದೀಪಿಕಾ ಮದುವೆ?

ದೊರೆಸಾನಿ ಕಥೆಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಮದುವೆ ಗಂಡು ವಿಶ್ವನಾಥನ್ ಆನಂದ್ ತನಗೆ ಇಷ್ಟವಿಲ್ಲ ಎಂದು ದೀಪಿಕಾ ನೇರಾ ನೇರವಾಗಿ ಹೇಳಿಬಿಟ್ಟಿದ್ದಾಳೆ. ಹಾಗಿದ್ದರೆ ಇವರಿಬ್ಬರ ಮದುವೆ ಏನಾಗಲಿದೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ.

ದೊರೆಸಾನಿ ಸೀರಿಯಲ್

ದೊರೆಸಾನಿ ಸೀರಿಯಲ್

  • Share this:
ಕನ್ನಡದ ಖಾಸಗಿ ವಾಹಿನಿ ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಜನಪ್ರಿಯ ಸೀರಿಯಲ್ (Serial) ‘ದೊರೆಸಾನಿ’ (Doresani) ದಿನೇ ದಿನೇ ಹೊಸ ತಿರುವುಗಳೊಂದಿಗೆ ಸಾಗುತ್ತಿದ್ದು, ಇದೀಗ ರೋಚಕ ಹಂತ ತಲುಪಿದೆ. ಹೌದು, ದೊರೆಸಾನಿ ಸೀರಿಯಲ್​ ನ ಗೂಬೆ ಬಾಸ್ ವಿಶ್ವನಾಥನ್ ಆನಂದ್‌ ಪುರುಷೋತ್ತಮ್ ಬಳಿ ಇರುವ ಎಲ್ಲಾ ಸತ್ಯವನ್ನು ಹೇಳಿಕೊಂಡು ಕ್ಷಮೆಯನ್ನೂ ಕೇಳಿಕೊಂಡಿದ್ದಾನೆ. ಅಲ್ಲದೇ ಪುರುಷೋತ್ತಮ್ ಸಹ ವಿಶ್ವನಾಥನ್ ಆನಂದ್‌ ನನ್ನು ಮನಸಾರೆ ಕ್ಷಮಿಸಿರುವುದಾಗಿ ಹೇಳಿದ್ದಾರೆ. ಆದರೆ ಆನಂದ್​ ಗೆ ಇದೀಗ ಸಂಕಷ್ಟ ಶುರುವಾಗಿದೆ. ಹೌದು, ಪುರುಷೋತ್ತಮ್ ಕ್ಷಮಿಸಿದರೂ ದೀಪಿಕಾ ಆನಂದ್​ ನನ್ನು ಕ್ಷಮಿಸುತ್ತಿಲ್ಲ. ಇದಲ್ಲದೇ ಕಥೆಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಮದುವೆ ಗಂಡು ವಿಶ್ವನಾಥನ್ ಆನಂದ್ ತನಗೆ ಇಷ್ಟವಿಲ್ಲ ಎಂದು ದೀಪಿಕಾ ನೇರಾ ನೇರವಾಗಿ ಹೇಳಿಬಿಟ್ಟಿದ್ದಾಳೆ. ಹಾಗಿದ್ದರೆ ಇವರಿಬ್ಬರ ಮದುವೆ ಏನಾಗಲಿದೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ.

ಪುರುಷೋತ್ತಮ್‌ಗೆ ಸತ್ಯ ಹೇಳಿದ ಆನಂದ್:

ಈಗಾಗಲೇ ಪುರುಷೋತ್ತಮ್ ಬಳಿ ಆನಂದ್ ಕ್ಷಮೇ ಕೇಳಿದ್ದು ಆಗಿದೆ. ಇಷ್ಟು ದಿನ ಕೆಲ ಪರಿಸ್ಥಿತಿಗೆ ಒಳಗಾಗಿ ಆನಂದ್ ಪದೇ ಪದೇ ಸುಳ್ಳುಗಳನ್ನೇ ಹೇಳುತ್ತಾ ಬಂದಿದ್ದನು. ಆದರೆ ಇದೀಗ ಅದನ್ನೆಲ್ಲಾ ಪಕ್ಕಕ್ಕೆ ಇಟ್ಟು ಸತ್ಯದ ದಾರಿಯನ್ನ ಹಿಡಿದು ದೀಪಿಕಾಳನ್ನ ಮದುವೆಯಾಗಲು ಆನಂದ್ ಮುಂದಾಗಿದ್ದಾರೆ. ಅಲ್ಲದೇ ತಮ್ಮ ಹಾಗೂ ಪುರುಷೋತ್ತಮ್ ನಡುವಿನ ಭಿನ್ನಾಭಿಪ್ರಾಯಕ್ಕೆ ಗಿರಿಧರ್ ಕಾರಣ ಎಂಬ ಸತ್ಯವೂ ಸಹ ತಿಳದಿದ್ದು, ಇರುವ ಎಲ್ಲಾ ಸತ್ಯವನ್ನೂ ಆನಂದ್ ಪುರುಷೋತ್ತಮ್ ಬಳಿ ಹೇಳಿಕೊಂಡು ಕ್ಷಮೆಯಾಚಿಸಿದ್ದಾರೆ. ಇದನ್ನು ತಿಳಿದ ನಂತರ ಪುರುಷೋತ್ತಮ್ ಆನಂದ್ ನನ್ನು ಮನಸಾರೆ ಕ್ಷಮಿಸಿದ್ದಾಗಿ ಹೇಳಿದ್ದಾರೆ.

ಮದುವೆ ಕುರಿತು ದೀಪಿಕಾಳ ನಿರ್ಧಾರಕ್ಕೆ ಬಿಟ್ಟ ಪುರುಷೋತ್ತಮ್:

ಇತ್ತ ಬಾಸ್ ವಿಶ್ವನಾಥನ್ ಆನಂದ್ ನನ್ನು ಪುರುಷೋತ್ತಮ್ ಕ್ಷಮಿಸಿದ್ದಾಗಿದೆ. ಅಲ್ಲದೇ ತನ್ನ ಮಗಳು ದೀಪಿಕಾಳನ್ನು ನೋಡಲು ಬಂದಿರುವ ಗಂಡು ಆನಂದ್ ಎಂದು ಸಹ ತಿಳಿಯಿತು. ಆದರೆ ಇದೆಲ್ಲದನ್ನೂ ಸಹಿಸಿಕೊಂಡಿರುವ ಪುರುಷೋತ್ತಮ್, ಮದುವೆಗೆ ಒಪ್ಪಿಗೆ ಕೊಡಬೇಕಾಗಿರೋದು ದೀಪಿಕಾ ಇದರಲ್ಲಿ ಸಂಪೂರ್ಣ ಅಧಿಕಾರ ಮತ್ತು ನಿರ್ಧಾರ ಅವಳಿಗೆ ಬಿಟ್ಟಿರುವುದಾಗಿ ಪುರುಷೋತ್ತಮ್ ಹೇಳಿದ್ದಾರೆ.

ಇದನ್ನೂ ಓದಿ: Jenu Goodu: ಶಶಾಂಕ್ ಮನೆಯವರಿಗೆ ಆಸರೆಯಾಗುತ್ತಾರಾ ದಿಯಾ ತಂದೆ ಡಾ ಶ್ರೀಧರ್?

ಆನಂದ್​ ಅವರನ್ನು ಇಷ್ಟ ಇಲ್ಲ ಎಂದ ದೀಪಿಕಾ:

ಬಾಸ್ ವಿಶ್ವನಾಥ್ ಆನಂದ್​ ಅವರನ್ನು ಪುರುಷೋತ್ತಮ್ aವರು ಕ್ಷಮಿಸಿದ್ದಾಗಿದೆ. ಅಲ್ಲದೇ ಮಗಳು ದೀಪಿಕಾಳ ಮದುವೆ ಕುರಿತು ಸಂಪೂರ್ಣ ನಿರ್ಧಾರವನ್ನು ಅವಳಿಗೆ ಬಿಟ್ಟುದ್ದಾರೆ. ಇದಲ್ಲದೇ ಪುರುಷೋತ್ತಮ್ ಮನೆಯವರಿಗೆ ಎಲ್ಲರಿಗೂ ಆನಂದ್ ಸಂಪೂರ್ಣ ಒಪ್ಪಿಗೆ ಆಗಿದ್ದಾರೆ. ಹೀಗಾಗಿ ಮನೆಯವರಿಗೆ ಎಲ್ಲರಿಗೂ ಆನಂದ್ ದೀಪಿಕಾಳನ್ನು ಮದುವೆ ಆಗಲು ಒಪ್ಪಿಗೆ ಇದೆ ಎಂದು ಹೇಳಿದ್ದಾರೆ. ಆದರೆ, ದೀಪಿಕಾ ಮಾತ್ರ ತನಗೆ ಆನಂದ್ ಇಷ್ಟವಿಲ್ಲ ಅಂತ ಕಡ್ಡಿ ತುಂಡು ಮಾಡಿದ ಹಾಗೆ ಹೇಳಿಬಿಟ್ಟಿದ್ದಾಳೆ.ಆದರೆ, ದೀಪಿಕಾ ಮಾತ್ರ ತನಗೆ ಆನಂದ್ ಇಷ್ಟವಿಲ್ಲ ಅಂತ ಕಡ್ಡಿ ತುಂಡು ಮಾಡಿದ ಹಾಗೆ ಹೇಳಿದ್ದು, ಕಥೆಯಲ್ಲಿ ಸಖತ್ ಟ್ವೀಸ್ಟ್ ಸಿಕ್ಕಂತಾಗಿದೆ.

ಹಾಗಿದ್ರೆ ನಡೆಯುತ್ತಾ ಆನಂದ್ - ದೀಪಿಕಾ ವಿವಾಹ?:

ಇದೀಗ ಪ್ರೇಕ್ಷರಲ್ಲಿ ಇದೇ ಪ್ರಶ್ನೆ ಮೂಡಿದೆ. ಹೌದು, ಆನಂದ್ ನನ್ನು ಪುರುಷೋತ್ತಮ್ ಸೇರಿದಂತೆ ಮನೆಯವರು ಎಲ್ಲರೂ ಒಪ್ಪಿದರೂ ದೀಪಿಕಾ ಒಪ್ಪಿಕೊಳ್ಳಲಿಲ್ಲ. ಇದರ ನಡುವೆ ಇವರಿಬ್ಬರ ಮದುವೆಯನ್ನು ಹೇಗಾದರೂ ಮಾಡಿ ತಪ್ಪಿಸಬೇಕೆಂದು ಸತ್ಯವತಿ ಸಹ ಪ್ಲಾನ್ ಮಾಡಿತ್ತುದ್ದಾಳೆ. ಹೀಗಿರುವಾಗ ದೀಪಿಕಾ - ಆನಂದ್ ಮದುವೆ ನಡೆಯುತ್ತಾ? ಎಂಬ ಕುತೂಹಲ ವೀಕ್ಷಕರಲ್ಲಿ ಕಾಡುತ್ತಿದ್ದು, ಈ ಪ್ರಶ್ನೆಗೆ ಮುಂದಿನ ಸಂಚಿಕೆವರೆಗೆ ಕಾಯಬೇಕಿದೆ.

ಇದನ್ನೂ ಓದಿ: Doresani: ರೋಚಕ ಹಂತ ತಲುಪಿದ ದೊರೆಸಾನಿ ಸೀರಿಯಲ್; ಆನಂದ್, ದೀಪಿಕಾಳ ಮದುವೆಗೆ ಸಿಗುತ್ತಾ ಗ್ರೀನ್ ಸಿಗ್ನಲ್?

ದೊರೆಸಾನಿ ಪಾತ್ರ ವರ್ಗ:

ಇನ್ನು, ದೊರೆಸಾನಿ ಧಾರಾವಾಹಿಯಲ್ಲಿ ದೀಪಿಕಾ ಆಗಿ ನಟಿ ರೂಪಿಕಾ, ಆನಂದ್ ಆಗಿ ನಟ ಪೃಥ್ವಿರಾಜ್, ಪುರುಷೋತ್ತಮ್ ಆಗಿ ನಟ ಜೈದೇವ್ ಮೋಹನ್ ಮತ್ತು ಸತ್ಯವತಿ ಪಾತ್ರದಲ್ಲಿ ಭವಾನಿ ಪ್ರಕಾಶ್ ಅಭಿನಯಿಸುತ್ತಿದ್ದಾರೆ.
Published by:shrikrishna bhat
First published: