• Home
  • »
  • News
  • »
  • entertainment
  • »
  • Agnisakshi Director: ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದ 'ಅಗ್ನಿಸಾಕ್ಷಿ' ಡೈರೆಕ್ಟರ್, 'ಕಂಬ್ಳಿಹುಳ' ಹೀರೋ ಜೊತೆ ಹಯವದನ ಹೊಸ ಸಿನಿಮಾ

Agnisakshi Director: ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದ 'ಅಗ್ನಿಸಾಕ್ಷಿ' ಡೈರೆಕ್ಟರ್, 'ಕಂಬ್ಳಿಹುಳ' ಹೀರೋ ಜೊತೆ ಹಯವದನ ಹೊಸ ಸಿನಿಮಾ

ಹೊಸ ಕಥೆ, ಮೊದಲ ಸಿನಿಮಾ, ಸ್ಕ್ರಿಪ್ಟ್ ಪೂಜೆ ಡನ್

ಹೊಸ ಕಥೆ, ಮೊದಲ ಸಿನಿಮಾ, ಸ್ಕ್ರಿಪ್ಟ್ ಪೂಜೆ ಡನ್

ಪುಟ್ಟ ಪರದೆಯ ಫೇಮಸ್ ಡೈರೆಕ್ಟರ್ ಹಯವದನ ಬೆಳ್ಳಿ ಪರದೆಗೆ ಬರ್ತಿದ್ದಾರೆ. ಮೊದಲ ಸಿನಿಮಾದಲ್ಲಿಯೇ ಭರವಸೆಯ ನಾಯಕ ನಟನಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಮೊದಲ ನಿರ್ದೇಶನದ ಸಿನಿಮಾ ಆಗಿದ್ದರಿಂದಲೇ ಹಯವದನ ಒಳ್ಳೆ ಕಥೆಯನ್ನೆ ಮಾಡಿಕೊಂಡು ರೆಡಿ ಆಗಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದ ಪುಟ್ಟಪರದೆಯಲ್ಲಿ ಅನೇಕ (Kannada New Movie) ಸೀರಿಯಲ್ ಬಂದಿವೆ. ಎಲ್ಲ ಸೇರಿಯಲ್​ಗಳೂ ತನ್ನದೇ ರೀತಿಯಲ್ಲಿ ಗಮನ ಸೆಳೆದಿವೆ. ಸೀರಿಯಲ್​ (Agnisakshi Serial) ಲೋಕದಲ್ಲಿ ಹಂಗಾಮ ಕೂಡ ಮಾಡಿವೆ. ಈ ಪೈಕಿ ಅಗ್ನಿಸಾಕ್ಷಿ, ಕಮಲಿ, ನಾಗಿಣಿ, ಶುಭ ಮಂಗಳ, (Kannada Serial) ಮಧುಬಾಲ ಸೀರಿಯಲ್​​​ಗಳು ಜನರ ಗಮನ ಸೆಳೆದಿದ್ದವು. ಈ ಸೀರಿಯಲ್​ ಮೂಲಕ ಡೈರೆಕ್ಟರ್ ಹಯವದನ ಕೂಡ ಜನರ ಹೃದಯ ಗೆದ್ದರು. ಆದರೆ ಈಗ ಇದೇ ಹಯವದನ (Big Screen) ದೊಡ್ಡಪರದೆಗೆ ಕಾಲಿಡುತ್ತಿದ್ದಾರೆ. ಇವರ ಮೊದಲ ಪ್ರಯತ್ನಕ್ಕೆ ಹೀರೋ ಕೂಡ ಸಿಕ್ಕಾಗಿದೆ. ಈ ಸಂಕ್ರಾಂತಿ ಹಬ್ಬಕ್ಕೆ ಸಿನಿಮಾ ಕೂಡ ಶುರು ಆಗುತ್ತಿದೆ. ಇದರ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.


ಅಗ್ನಿಸಾಕ್ಷಿ ಡೈರೆಕ್ಟರ್ ಹಯವದನ ಫಸ್ಟ್ ಸಿನಿಮಾ ಕಥೆ ಹೇಗಿದೆ?
ಪುಟ್ಟ ಪರದೆಯ ಫೇಮಸ್ ಡೈರೆಕ್ಟರ್ ಹಯವದನ ಬೆಳ್ಳಿ ಪರದೆಗೆ ಬರ್ತಿದ್ದಾರೆ. ಮೊದಲ ಸಿನಿಮಾದಲ್ಲಿಯೇ ಭರವಸೆಯ ನಾಯಕ ನಟನಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಮೊದಲ ನಿರ್ದೇಶನದ ಸಿನಿಮಾ ಆಗಿದ್ದರಿಂದಲೇ ಹಯವದನ ಒಳ್ಳೆ ಕಥೆಯನ್ನೆ ಮಾಡಿಕೊಂಡು ರೆಡಿ ಆಗಿದ್ದಾರೆ.


Kannada Serial Director Hayavadana going to enter Big Screen Soon
ಕಂಬ್ಳಿಹುಳ ಚಿತ್ರದ ನಾಯಕನಟ ಅಂಜನ್


ಅಗ್ನಿಸಾಕ್ಷಿ, ಕಮಲಿ, ನಾಗಿಣಿ, ಶುಭಮಂಗಳದಂತಹ ಸೂಪರ್ ಸೀರಿಯಲ್ ಕೊಟ್ಟ ಹಯವದನ ಈಗ ಒಳ್ಳೆ ಕಥೆಯನ್ನೆ ಮಾಡಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾಕ್ಕೆ ಎಡಿಕ್ಟ್ ಆಗಿರೋ ಮಕ್ಕಳು-ದುಡಿದು ಹೈರಾಣ ಆಗೋ ತಂದೆ ಮಕ್ಕಳ ಸಂಘರ್ಷವೇ ಈ ಚಿತ್ರದ ಪ್ರಮುಖ ಎಳೆ ಆಗಿದೆ.


ಹೊಸ ಕಥೆ, ಮೊದಲ ಸಿನಿಮಾ, ಸ್ಕ್ರಿಪ್ಟ್ ಪೂಜೆ ಡನ್
ಹಯವದನ ತಮ್ಮ ಮೊದಲ ಚಿತ್ರದ ಕೆಲಸ ಶುರು ಮಾಡಿದ್ದಾರೆ. ನಾಯಕನ ಆಯ್ಕೆ ಆಗಿದೆ. ನಾಯಕಿ ಮತ್ತು ಇತರ ತಾರಾ ಬಳಗದ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಅದಕ್ಕೂ ಮೊದಲೇ ಡೈರೆಕ್ಟರ್ ಹಯವದನ ತಮ್ಮ ಚಿತ್ರದ ಸ್ಕ್ರಿಪ್ಟ್ ಪೂಜೆ ಮಾಡಿಕೊಂಡಿದ್ದಾರೆ.




ಕಂಬ್ಳಿಹುಳ ಚಿತ್ರದ ಅಂಜನ್ ಚಿತ್ರದ ನಾಯಕ ನಟ
ಕನ್ನಡದಲ್ಲಿ ಇತ್ತೀಚಿಗೆ ಒಂದು ಸಿನಿಮಾ ಬಂದಿತ್ತು. ಕಂಬ್ಳಿಹುಳ ಅನ್ನೋ ವಿಶೇಷ ಟೈಟಲ್​​ ಮೂಲಕವೇ ಈ ಚಿತ್ರ ಗಮನ ಸೆಳೆದಿತ್ತು. ಸಿನಿಮಾ ಕೂಡ ಚೆನ್ನಾಗಿಯೇ ಇತ್ತು. ಚಿತ್ರ ನೋಡಿದವ್ರು ಒಪ್ಪಿಕೊಂಡಿದ್ದರು. ವಿಮರ್ಶಕರು ಈ ಚಿತ್ರಕ್ಕೆ ಒಳ್ಳೆ ಮಾರ್ಕ್ಸ್ ಕೊಟ್ಟಿದ್ದಾರೆ.


ಅದೇ ಚಿತ್ರದ ನಾಯಕ ನಟ ಅಂಜನ್ ನಾಗೇಂದ್ರ ಈಗ ಡೈರೆಕ್ಟರ್ ಹಯವದನ ಅವರ ಸಿನಿಮಾದ ಹೀರೋ ಆಗಿದ್ದಾರೆ. ಈಗಾಗಲೇ ಅಧಿಕೃತವಾಗಿಯೇ ಹಯವದನ ಅದನ್ನ ಅನೌನ್ಸ್ ಮಾಡಿದ್ದಾರೆ. ಇನ್ನು ಚಿತ್ರದ ಇತರ ಮಾಹಿತಿಯನ್ನ ಶೀಘ್ರದಲ್ಲಿಯೇ ಹೇಳಿಕೊಳ್ಳಲಿದ್ದಾರೆ.


ಸೋಷಿಯಲ್ ಡ್ರಾಮಾ ವಿಷಯವನ್ನ ಒಳಗೊಂಡ ಸಿನಿಮಾ
ಹೌದು, ಹಯವದನ ತಮ್ಮ ಈ ಮೊದಲ ಸಿನಿಮಾದಲ್ಲಿ ಸೋಷಿಯಲ್ ಡ್ರಾಮ ವಿಷಯವನ್ನೆ ಹೇಳ್ತಿದ್ದಾರೆ. ಅಪ್ಪ-ಮಕ್ಕಳ ಸಂಘರ್ಷದ ಮಧ್ಯ ತಂದೆ-ಮಗನ ಸೆಂಟಿಮೆಂಟ್ಸ್ ಅನ್ನೂ ಇಟ್ಟಿದ್ದಾರೆ. ಅದೇ ಈ ಚಿತ್ರ ಹೈಲೈಟಿಂಗ್ ಪಾಯಿಂಟ್​ ಕೂಡ ಆಗಿದೆ.


ಅಗ್ನಿಸಾಕ್ಷಿ ಡೈರೆಕ್ಟರ್ ಹಯವದನ ಚಿತ್ರಕ್ಕೆ ಬಂಡವಾಳ ಹಾಕ್ತವ್ರೆ
ಡೈರೆಕ್ಟರ್ ಹಯವದನ ಈ ಹಿಂದೆ ಕಿರುತೆರೆಯಲ್ಲಿ ಒಳ್ಳೆ ಕಥೆಗಳ ಸೀರಿಯಲ್ ಕೊಟ್ಟಿದ್ದಾರೆ. ಆ ಸೀರಿಯಲ್​ಗಳೆಲ್ಲ ಸೂಪರ್ ಹಿಟ್ ಕೂಡ ಆಗಿವೆ. ಅದೇ ನಂಬಿಕೆ ಮೇಲೇನೆ ದೊಡ್ಡಪರದೆ ಮೇಲೂ ಮ್ಯಾಜಿಕ್ ಕೂಡ ಮಾಡೋಕೆ ಬರ್ತಿದ್ದಾರೆ.


ಆದರೆ ಡೈರೆಕ್ಟರ್ ಹಯವದನ ಇಲ್ಲಿ ಕೇವಲ ನಿರ್ದೇಶಕರಾಗಿಯೇ ಬರ್ತಿಲ್ಲ. ಪವನ್ ಸಿಮಿಕೇರಿ ಜೊತೆಗೂಡಿ ಚಿತ್ರಕ್ಕೆ ದುಡ್ಡು ಕೂಡ ಹಾಕುತ್ತಿದ್ದಾರೆ. ಈ ಮೂಲಕ ಡೈರೆಕ್ಟರ್ ಹಯವದನ ಬೆಳ್ಳಿ ಪರದೆಗೆ ನಿರ್ಮಾಪಕರಾಗಿಯೂ ಬರ್ತಿದ್ದಾರೆ.


Kannada Serial Director Hayavadana going to enter Big Screen Soon
ಡೈರೆಕ್ಟರ್ ಹಯವದನ ಫಸ್ಟ್ ಸಿನಿಮಾ ಕಥೆ ಹೇಗಿದೆ?


ಜನವರಿ-15 ರಂದು ಹಯವದನ ಸಿನಿಮಾ ಶುರು
ಹಯವನದ ನಿರ್ದೇಶನದ ಮೊದಲ ಸಿನಿಮಾ ಜನವರಿ-15 ರಂದು ಸೆಟ್ಟೇರುತ್ತಿದೆ. ಈ ಹಿನ್ನೆಲೆಯಲ್ಲಿಯೇ ಈಗಾಗಲೇ ಎಲ್ಲ ಕೆಲಸ ಶುರು ಆಗಿದೆ. ಇನ್ನೇನು ಕೆಲವೆ ದಿನಗಳಲ್ಲಿ ಚಿತ್ರದ ಟೈಟಲ್ ರಿವೀಲ್ ಆಗುತ್ತದೆ.


ಇದನ್ನೂ ಓದಿ: Kantara: ಕಾಂತಾರ ಗೆಲುವನ್ನು ಕೊಂಡಾಡಿದ ಟಾಲಿವುಡ್ ಸ್ಟಾರ್! ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಿದ ಅಲ್ಲು ಅರ್ಜುನ್


ಚಿತ್ರಕ್ಕೆ ಶಿವ ಪ್ರಸಾದ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ನಟರಾಜ್ ಮದ್ದಾಲ ಕ್ಯಾಮೆರಾ ವರ್ಕ್​ ಮಾಡ್ತಿದ್ದಾರೆ. ಒಟ್ಟಾರೆ ಈ ಚಿತ್ರದ ಮೂಲಕ ಅಗ್ನಿಸಾಕ್ಷಿ ಡೈರೆಕ್ಟರ್ ಹಯವದನ ಬೆಳ್ಳಿತೆರೆಗೆ ಕಾಲಿಡುತ್ತಿದ್ದಾರೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು