Ramachari Serial: ಅಣ್ಣ-ಅತ್ತಿಗೆ ಮನೆ ಬಿಟ್ಟು ಹೋಗಲು ನಿಜವಾದ ಕಾರಣವೇನು? ಅಪರ್ಣ ಡೈರಿ ರಾಮಾಚಾರಿ ಕೈಯಲ್ಲಿ!

ಅಪರ್ಣಗೆ ಡೈರಿ ತೋರಿಸಿ ಇದರ ಮೇಲೆ ಆಣೆ ಮಾಡಿ ಎಂದು ರಾಮಾಚಾರಿ ಹೇಳುತ್ತಾನೆ. ಅದಕ್ಕೆ ಅಪರ್ಣ ಕಕ್ಕಾ ಬಿಕ್ಕಿಯಾಗುತ್ತಾಳೆ. ಡೈರಿಯಲ್ಲಿ ಅಪರ್ಣ ತನ್ನೆಲ್ಲಾ ಕಾಯಿಲೆ ಬಗ್ಗೆ ಅದರಲ್ಲಿ ಬರೆದಿದ್ದಾಳೆ. ಅದು ರಾಮಾಚಾರಿ ಕೈಗೆ ಸಿಕ್ಕಿದ್ದು,  ಮನೆಯವರಿಗೆಲ್ಲಾ ಅಪರ್ಣಗೆ ಕ್ಯಾನ್ಸರ್ ಇರೋದು ಗೊತ್ತಾಗಲಿದೆ.

ರಾಮಾಚಾರಿ

ರಾಮಾಚಾರಿ

  • Share this:
    ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ (Serials) ರಾಮಾಚಾರಿ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿದೆ. ಇದು ಹೆಚ್ಚು ಜನಪ್ರಿಯತೆ ಗಳಿಸುತ್ತಿದೆ. ರಾಮಾಚಾರಿ ಈಗ ದೊಡ್ಡ ಅಭಿಮಾನಿಗಳ (Fans) ಬಳಗವೇ ಇದೆ. ಎಷ್ಟೋ ಜನ ರಾತ್ರಿ 9ಕ್ಕೆ ತಪ್ಪದೇ ಈಗ ಸೀರಿಯಲ್ ನೋಡುತ್ತಾರೆ. ಸುಸಂಸ್ಕøತ ಹುಡುಗನಾಗಿರವ ರಾಮಾಚಾರಿ, ದುರಂಕಾರಿ ಚಾರುಲತಾ ಕೊಬ್ಬು ಇಳಿಸೋದನ್ನು ನೋಡೋದಕ್ಕೆ ಒಂದು ಚೆಂದ. ಎಲ್ಲರ ಬದುಕು ಸರಿ ಮಾಡ್ತಿದ್ದ ರಾಮಾಚಾರಿ ಮನೆ ಒಡೆದು ಹೋಗುವ ಸ್ಥಿತಿ ಬಂದಿದೆ. ರಾಮಾಚಾರಿ ಅಣ್ಣ (Brother) ಕೋದಂಡ ಮನೆಯಿಂದ ದೂರವಾಗುವ ಮಾತುಗಳನ್ನಾಡುತ್ತಿದ್ದಾನೆ. ನನಗೆ ಈ ಮನೆಯಲ್ಲಿ ಗೌರವ (Respect) ಸಿಕ್ತಿಲ್ಲ. ಅದಕ್ಕೆ ಮನೆ ಬಿಟ್ಟು ಹೋಗಲು ನಿರ್ಧರಿಸಿದ್ದಾನೆ ಎನ್ನುತ್ತಿದ್ದಾನೆ. ಅದಕ್ಕೆ ಪತ್ನಿ ಅಪರ್ಣ ಸಹ ಸಾಥ್ ನೀಡುತ್ತಿದ್ದಾರೆ.

    ರಾಮಾಚಾರಿ ಅಣ್ಣನಿಗೆ ಬೇಸರವ್ಯಾಕೆ?
    ಧಾರಾವಾಹಿಯಲ್ಲಿ ರಾಮಾಚಾರಿ ಅಣ್ಣ ಭಾರೀ ಬೇಸರದಲ್ಲಿದ್ದಾರೆ. ನಾನು ಅಣ್ಣನಾದ್ರೂ ನನಗೆ ಈ ಮನೆಯಲ್ಲಿ ಗೌರವ ಸಿಕ್ತಿಲ್ಲ. ಚಿಕ್ಕವನದ್ರೂ ರಾಮಾಚಾರಿಗೆ ಹೆಚ್ಚಿನ ಗೌರವ. ತಾನು ಈ ಮನೆಯಲ್ಲಿ ಇರುವುದಿಲ್ಲ. ಮನೆ ಬಿಟ್ಟು ಹೋಗುತ್ತೇನೆ ಎಂದು ತನ್ನ ಅಪ್ಪನ ಮುಂದೆ ಹೇಳಿಕೊಂಡಿದ್ದಾನೆ. ರಾಮಾಚಾರಿ ಎಷ್ಟೇ ಹೇಳಿದ್ರೂ ಕೇಳದೇ ಬ್ಯಾಗ್ ಸಮೇತ ಕೋದಂಡ, ಅಪರ್ಣ ಮನೆ ಬಿಟ್ಟು ಹೊರಟು ನಿಂತಿದ್ದಾರೆ.

    ಗಂಡನ ಮಾತಿಗೆ ಒಪ್ಪಿದ್ಯಾಕೆ ಅಪರ್ಣ?
    ಹೌದು ಅಪರ್ಣ ಬೇಕು ಅಂತ ತನ್ನ ಗಂಡನನ್ನು ಕರೆದಕೊಂಡ ಮನೆ ಬಿಟ್ಟು ಹೋಗತ್ತಿಲ್ಲ. ಅಪರ್ಣ ಕ್ಯಾನ್ಸರ್‍ನಿಂದ ಬಳಲುತ್ತಿದ್ದಾಳೆ. ಆ ಕಾಯಿಲೆ ಬಗ್ಗೆ ಮನೆಯಲ್ಲಿ ಗೊತ್ತಿಲ್ಲ. ಗೊತ್ತಾದ್ರೆ ಲಕ್ಷ ಲಕ್ಷ ಖರ್ಚು ಮಾಡುತ್ತಾರೆ ಎಂದುಕೊಂಡು, ಇರೋವರೆಗೂ ಗಂಡನ ಮನೆಗೆ ಕಷ್ಟ ಕೊಡಬಾರದು ಎಂದು ಈ ರೀತಿಯ ನಿರ್ಧಾರ ಮಾಡಿದ್ದಾಳೆ. ತನ್ನ ಬದುಕಿನ ನೋವನ್ನೆಲ್ಲಾ ಡೈರಿಯಲ್ಲಿ ದಿನ ಬರೆಯುತ್ತಿದ್ದಳು.

    ಇದನ್ನೂ ಓದಿ: Sathya serial: 6 ತಿಂಗಳಲ್ಲಿ ಸತ್ಯಾ-ಕಾರ್ತಿಕ್‍ಗೆ ಡಿವೋರ್ಸ್ ಆಗುತ್ತಾ? ಲೇಡಿ ರಾಮಾಚಾರಿಗೆ ನೂರೆಂಟು ಸಂಕಷ್ಟ!

    ಅಪರ್ಣ ಡೈರಿ ರಾಮಾಚಾರಿ ಕೈಯಲ್ಲಿ!
    ಅಣ್ಣ, ಅತ್ತಿಗೆಗೆ ಮನೆ ಬಿಟ್ಟು ಹೋಗಬೇಡಿ ಎಂದು ರಾಮಾಚಾರಿ ಎಷ್ಟೇ ಕೇಳಿಕೊಂಡ್ರು, ಕೇಳದೇ ಮನೆಯಿಂದ ಹೋಗಲು ಸಿದ್ಧವಾಗಿದ್ದಾರೆ. ಮನೆಯಿಂದ ದೂರು ಹೋಗಲು ನಿರ್ಧಾರ ಮಾಡಿದ ಮೇಲೆ ನಮಗೆ ಒಂದು ಕ್ಷಣವೂ ಇರಲ್ಲ ನಾವು. ನನ್ನ ಬುದ್ಧಿಗೆ ಮಂಕು ಬಡಿದಿತ್ತು. ಈಗ ಸರಿ ಹೋಗಿದೆ. 2 ದಿನ ಟೈಂ ತಗೋಳಿ, ಅಲ್ಲಿಯ ವರೆಗೆ ತವರು ಮನೆಯಲ್ಲಿ ಇರುತ್ತೇವೆ. ನಮಗೆ ಯಾವದೇ ಆಸೆ ಇಲ್ಲ. ನೀವು ಕೊಟ್ಟಿದ್ದೇ ಆಶೀರ್ವಾದ ಎಂದು ಅಪರ್ಣ ಹೇಳುತ್ತಾಳೆ. ಆಗ ರಾಮಾಚಾರಿ ಡೈರಿಯನ್ನು ತೋರಿಸುತ್ತಾನೆ.

    ಇದರಮೇಲೆ ಆಣೆ ಮಾಡಿ ಎಂದು ಡೈರಿ ತೋರಿಸಿದ ರಾಮಾಚಾರಿ
    ಮನೆ ಬಿಟ್ಟು ಹೊರಟ ಮಗ ಕೋದಂಡ, ಅಪರ್ಣಳನ್ನು ತಂದೆ ಯಾವ ಕಾರಣಕ್ಕೆ ಹೊರಟಿದ್ದೀರಿ ನಿಜ ಹೇಳಿ ಹೋಗಿ ಎನ್ನುತ್ತಾರೆ. ಅದಕ್ಕೆ ನಾವು ಮೊನ್ನೆ ಹೇಳಿದಂತೆ ಬೆಲೆ ಇಲ್ಲ ಅದಕ್ಕೆ ಎಂದು ಕೋದಂಡ ಹೇಳುತ್ತಾನೆ. ಅದಕ್ಕೆ ರಾಮಾಚಾರಿ ಸತ್ಯ ಹೇಳಿ ಅಂದಾಗ ಯಾವುದರ ಮೇಲೆ ಬೇಕಾದ್ರೂ ಪ್ರಮಾಣ ಮಾಡ್ತಿನಿ ಎಂದ ಅಪರ್ಣಗೆ ಡೈರಿ ತೋರಿಸಿ ಇದರ ಮೇಲೆ ಆಣೆ ಮಾಡಿ ಎಂದು ಹೇಳುತ್ತಾನೆ. ಅದಕ್ಕೆ ಅಪರ್ಣ ಕಕ್ಕಾ ಬಿಕ್ಕಿಯಾಗುತ್ತಾಳೆ.

    ಇದನ್ನೂ ಓದಿ: Olavina Nildana: ಸಂಕಷ್ಟದಿಂದ ಪಾರಾದ ತಾರಿಣಿ, ಮಾವ ಪಾಲಾಕ್ಷನ ಕುತಂತ್ರ ಮನೆಯವರ ಮುಂದೆ ಬಯಲಾಗುತ್ತಾ?

    ಡೈರಿಯಿಂದ ಸತ್ಯ ಬಯಲಾಗುತ್ತಾ?
    ಇನ್ನು ಡೈರಿಯಲ್ಲಿ ಅಪರ್ಣ ತನ್ನೆಲ್ಲಾ ಕಾಯಿಲೆ ಬಗ್ಗೆ ಅದರಲ್ಲಿ ಬರೆದಿದ್ದಾಳೆ. ಅದು ರಾಮಾಚಾರಿ ಕೈಗೆ ಸಿಕ್ಕಿದ್ದು,  ಮನೆಯವರಿಗೆಲ್ಲಾ ಅಪರ್ಣಗೆ ಕ್ಯಾನ್ಸರ್ ಇರೋದು ಗೊತ್ತಾಗಲಿದೆ. ಈ ವಿಷಯ ರಾಮಾಚಾರಿ ಮನೆಯಲ್ಲಿ ತಿಳಿಸಿ, ಅಣ್ಣ-ಅತ್ತಿಗೆಯನ್ನು ಮನೆಯಲ್ಲೇ ಉಳಿಸಿಕೊಳ್ತಾನಾ, ಅಥವಾ ದುಡ್ಡು ಕರ್ಚಾಗುತ್ತೆ ಅಂತ ಅಪರ್ಣ ಯಾರ, ಮಾತು ಕೇಳದೇ ಮನೆ ಬಿಟ್ಟು ಹೋಗುತ್ತಾಳೋ ಕಾದು ನೋಡಬೇಕು. ಎಲ್ಲವನ್ನೂ ನೋಡಲು ರಾಮಾಚಾರಿ ಸಂಚಿಕೆಗಳನ್ನು ನೋಡಬೇಕು.
    Published by:Savitha Savitha
    First published: