Olavina Nildana: I Love You ಎಂದು ಪ್ರಪೋಸ್ ಮಾಡೋಕೆ ರೆಡಿಯಾದ ತಾರಿಣಿ! ಲೇಡಿಸ್ ಪಿಜಿಗೆ ನುಗ್ಗಿದ ಸಿದ್ಧಾಂತ್?

ಸಿದ್ಧಾಂತ್‍ನನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿರುವ ತಾರಿಣಿ, ಇವತ್ತು ಪ್ರಪೋಸ್ ಮಾಡೋಣ ಅಂತ ಯೋಚ್ನೆ ಮಾಡುತ್ತಿದ್ದಾಳೆ. ಸಿದ್ಧಾಂತ್ ಎಷ್ಟೇ ಅಂದ್ರು ಅವನು ಬಂದು ಪ್ರೀತಿ ಹೇಳಲ್ಲ. ತನಗೆ ಕಾಯಲು ಆಗಲ್ಲ. ಪ್ರೀತಿಯನ್ನು ಹೇಳಿಕೊಂಡ್ರೆ ಮನಸ್ಸು ಹಗುರಾಗುತ್ತೆ ಎಂದು ಡಿಸೈಡ್ ಮಾಡಿದ್ದಾಳೆ.

ಒಲವಿನ ನಿಲ್ದಾಣ

ಒಲವಿನ ನಿಲ್ದಾಣ

  • Share this:
ಒಲವಿನ ನಿಲ್ದಾಣ (Olavina Nildana), ಕಲರ್ಸ್ ಕನ್ನಡ (Colors Kannada)ದಲ್ಲಿ, ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಪ್ರೀತಿಯ ತಿರುವುಗಳಿಂದ ಕನ್ನಡಲಿಗರ ಮನದಲ್ಲಿ ಯಾವುದೇ ಸಮಯದಲ್ಲೂ ಸ್ಟಾಪ್ ಆಗದೇ ಓಡುತ್ತಿದೆ. ಹೊಸದಾಗಿ ಶುರವಾದ ಕಥೆಯಾದ್ರೂ ಜನರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ. ನಾಯಕಿ ತಾರಿಣಿಗೆ ನಾಯಕ ಸಿದ್ಧಾಂತ್ (Siddhanth) ಮೇಲೆ ತುಂಬಾ ಪ್ರೀತಿ. ಆದ್ರೆ ಸಿದ್ಧಾಂತ್‍ಗೆ ತನ್ನ ಬದುಕು, ಗುರಿ (Goal) ಬಗ್ಗೆ ಮಾತ್ರ ಯೋಚನೆ. ಆದ ಕಾರಣ ಅವನು ಪ್ರೀತಿಗಿಂತ ಅಂತ ತಲೆ ಕೆಡಿಸಿಕೊಳ್ಳುತ್ತಿಲ್ಲ. ಸಿದ್ಧಾಂತ ಕಾಳಜಿಯಲ್ಲಿ ಮುಳುಗಿರುವ ತಾರಿಣಿ ಸಿದ್ಧಾಂತ್‍ಗೆ ಪ್ರಪೋಸ್ ಮಾಡಲು ತಯಾರಿ ನಡೆಸಿಕೊಳ್ಳುತ್ತಿದ್ದಾಳೆ. ಆದ್ರೆ ಸಿದ್ಧಾಂತ್ ರಾತ್ರಿಯಾಗಿದ್ರೂ, ತಾರಿಣಿ ಇರೋ ಲೇಡಿಸ್ ಪಿಜಿಗೆ ನುಗ್ಗಿದ್ದಾನೆ.

I Love You ಸಿದ್ಧಾಂತ್ ಅಂತ ಪ್ರಪೋಸ್ ಮಾಡ್ತಿನಿ
ಸಿದ್ಧಾಂತ್‍ನನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿರುವ ತಾರಿಣಿ, ಇವತ್ತು ಪ್ರಪೋಸ್ ಮಾಡೋಣ ಅಂತ ಯೋಚ್ನೆ ಮಾಡುತ್ತಿದ್ದಾಳೆ. ಸಿದ್ಧಾಂತ್ ಎಷ್ಟೇ ಅಂ ದ್ರು ಅವನು ಬಂದು ಪ್ರೀತಿ ಹೇಳಲ್ಲ. ತನಗೆ ಕಾಯಲು ಆಗಲ್ಲ. ಪ್ರೀತಿಯನ್ನು ಹೇಳಿಕೊಂಡ್ರೆ ಮನಸ್ಸು ಹಗುರಾಗುತ್ತೆ ಎಂದು ಡಿಸೈಡ್ ಮಾಡಿದ್ದಾಳೆ. ಅನ್ನಿಸಿದ್ದನ್ನು, ಮನಸ್ಸಿನಲ್ಲಿ ಇರೋದನ್ನು ಹೇಳೋಕೆ ರೆಡಿಯಾಗಿದ್ದಾಳೆ. ಸದ್ಯದ ನಿರ್ಧಾರ ತಿಳಿಸಬೇಕು ಅಷ್ಟೇ ಅಂತ ತಾರಿನಿ ನಿರ್ಧಾರ ಮಾಡಿದ್ದಾಳೆ. I Love You ಸಿದ್ಧಾಂತ್ ಎಂದು ಪ್ರಪೋಸ್ ಮಾಡಲು ಸಿದ್ಧತೆ ನಡೆಸಿಕೊಳ್ಳುತ್ತಿದ್ದಾಳೆ.

ತಾರಿಣಿ ಪಿಜಿಗೆ ನುಗ್ಗಿದ ಸಿದ್ಧಾಂತ್
ತಾರಿಣಿ ಇರೋದು ಲೇಡಿಸ್ ಪಿಜಿಯಲ್ಲಿ. ಆಕೆ ಸಿದ್ಧಾಂತ್ ಪ್ರಪೋಸ್ ಮಾಡೋ ಬಗ್ಗೆ ಯೋಚನೆ ಮಾಡ್ತಾ ಇದ್ರೆ, ಇತ್ತ ಸಿದ್ಧಾಂತ್ ರಾತ್ರಿ ಅನ್ನೋದನ್ನು ನೋಡದೇ, ಲೇಡಿಸ್ ಪಿಜಿಗೆ ಬಂದಿದ್ದಾನೆ. ಸೆಕ್ಯೂರಿಟಿ ಎಷ್ಟೇ ತಡೆದರೂ ಕೇಳದೇ ಒಳಗೆ ನುಗ್ಗಿದ್ದಾನೆ. ಪ್ರತಿಯೊಂದು ರೂಮ್‍ನನ್ನು ತಟ್ಟಿ ತಾರಿಣಿಗಾಗಿ ಹುಟುಕಾಟ ನಡೆಸಿದ್ದಾನೆ.

ಇದನ್ನೂ ಓದಿ: Doresani Serial: ಆನಂದ್‍ಗೆ ಹೇಳದೇ ದೀಪಿಕಾ ನಿಶ್ಚಿತಾರ್ಥ ಮಾಡಿಕೊಳ್ತಾಳಾ? ಬೇಸರದಲ್ಲಿ ಬೆಸ್ಟ್ ಫ್ರೆಂಡ್! 

ತಾರಿಣಿ ಮೇಲ್ಯಾಕೆ ಕೋಪ ಸಿದ್ಧಾಂತ್‍ಗೆ?
ಅಷ್ಟು ರಾತ್ರಿಯಲ್ಲಿ ಪಿಜಿಗೆ ನುಗ್ಗಿ ಮಾತನಾಡುವಂತದ್ದು ಏನಿದೆ? ಹಾಗಾದ್ರೆ ಸಿದ್ಧಾಂತ್ ಕೋಪ ಮಾಡಿಕೊಂಡು ಪಿಜೆಗೆ ಬಂದಿದ್ದು ಏಕೆ ಅಂತ ಗೊತ್ತಿಲ್ಲ. ಅದು ಗೊತ್ತಾಗಬೇಕಾದ್ರೆ ಇವತ್ತಿನ ಎಪಿಸೋಡ್ ನೋಡಬೇಕು.

ಪೊಲೀಸ್‍ಗೆ ಕರೆ ಮಾಡಿದ ಸೆಕ್ಯೂರಿಟಿ ಗಾರ್ಡ್
ಸಿದ್ಧಾಂತ್ ಎಷ್ಟೇ ಹೇಳಿದ್ರೂ ಕೇಳದೇ ಲೇಡಿಸ್ ಪಿಗೆ ನುಗ್ಗಿದ್ದಾನೆ. ಅದಕ್ಕೆ ಪಿಜಿಯ ಸೆಕ್ಯೂರಿಟಿ ಗಾರ್ಡ್ ಪೊಲೀಸರಿಗೆ ಪೋನ್ ಮಾಡಿದ್ದಾನೆ. ಸರ್ ಯಾರೂ ಹುಡುಗ ಪಿಜಿಗೆ ಬಂದು ಗಲಾಟೆ ಮಾಡುತ್ತಿದ್ದಾನೆ, ಬೇಗೆ ಬನ್ನಿ ಎಂದು ಹೇಳಿದ್ದಾನೆ. ಪೊಲೀಸರು ಬಂದ್ರೆ ಸಿದ್ಧಾಂತ್‍ನನ್ನು ಅರೆಸ್ಟ್ ಮಾಡ್ತಾರಾ ಕಾದು ನೋಡಬೇಕಿದೆ.

ಮಗನನ್ನು ಹಿಂಬಾಲಿಸಿ ಬಂದ ಅಪ್ಪ
ಮಗ ಸಿದ್ಧಾಂತ್ ರಾತ್ರಿ ಹೊತ್ತಲ್ಲಿ ಎಲ್ಲಿ ಹೋಗುತ್ತಿದ್ದಾನೆ ಎಂದು ಅವರ ತಂದೆ ಆಟೋದಲ್ಲಿ ಹಿಂಬಾಲಿಸಿಕೊಂಡು ಬಂದಿದ್ದಾರೆ. ತಾರಿಣಿಯ ಪಿಜೆ ಮಗ ಹೋಗಿದ್ದನ್ನು ನೋಡಿ, ಗಾಬರಿಗೊಂಡು ತಾನು ಒಳಗೆ ಹೋಗುತ್ತಿದ್ದಾನೆ.

ಸತ್ಯ ಹುಡುಕಲು ಹೊರಟ ಸಿದ್ಧಾಂತ್ ಅತ್ತಿಗೆ!

ಅದಲ್ಲದೇ ಒಲವಿನ ನಿಲ್ದಾಣದಲ್ಲಿ ತಾರಿಣಿ ತನ್ನ ಊರಿಗೆ ಹೋದಾಗ ತಾತಾ ಇಷ್ಟವಿಲ್ಲದ ನಿಶ್ಚಿತಾರ್ಥ ಮಾಡುತ್ತಾ ಇರುತ್ತಾರೆ. ಆಗ ಅದನ್ನು ಸಿದ್ಧಾಂತ್ ತಪ್ಪಿಸಿರುತ್ತಾನೆ. ತಾನು, ತಾರಿಣಿ ಪ್ರೀತಿ ಮಾಡುತ್ತಿದ್ದೇವೆ ಎಂದು ಹೇಳಿ ಸುಳ್ಳು ಹೇಳಿ ಎಂಗೇಜ್‍ಮೆಂಟ್ ಮಾಡಿಕೊಂಡಿರುತ್ತಾನೆ. ಆದ್ರೆ ಸಿದ್ಧಾಂತ್ ತನ್ನ ಕನಸಿನ ಹುಡುಗ ಎಂದು ಕೊಂಡ ತಾರಿಣಿಗೆ ಆತನ ಮೇಲೆ ಪ್ರೀತಿಯಾಗುತ್ತೆ. ಆದ್ರೆ ಸುಳ್ಳು ಎಂಗೇಜ್‍ಮೆಂಟ್ ಆದ ವಿಷಯ ಸಿದ್ಧಾಂತ್ ಮನೆಯಲ್ಲಿ ಗೊತ್ತಿಲ್ಲ. ಅನುಮಾನ ಬಂದಿರೋ ಸಿದ್ಧಾಂತ್ ಅತ್ತಿಗೆ ಸತ್ಯ ಹುಡುಕಲು ಹೊರಟಿದ್ದಾಳೆ.

ಇದನ್ನೂ ಓದಿ: Paaru Serial: ಆ್ಯಸಿಡ್ ಹಾಕಿದ್ದು ಯಾರು ಅಂತ ಕೊನೆಗೂ ಗೊತ್ತಾಯ್ತಾ ಪಾರುಗೆ? ಮುಂದಿದೆ ಬಿಗ್ ಟ್ವಿಸ್ಟ್! 

ತಾರಿಣಿ ತನ್ನ ಪ್ರೀತಿ ಹೇಳಿಕೊಳ್ಳಬೇಕು ಅಂದುಕೊಂಡಾಗಲೇ ಈ ರೀತಿ ಆಗಿದೆ. ಈಗ ತಾರಿಣಿ ತನ್ನ ಪ್ರೇಮ ನಿವೇದನೆ ಹೇಳಿಕೊಳ್ತಾಳಾ? ಇಲ್ವಾ ಅಂತ ನೋಡೋಕೆ ಎಪಿಸೋಡ್‍ಗಳನ್ನು ನೋಡಬೇಕು.
Published by:Savitha Savitha
First published: