Olavina Nildana: ತಾರಿಣಿಯ ರೇಗಿಸಿದವರಿಗೆ ಸರಿಯಾಗಿ ಮಾಂಜಾ ನೀಡಿದ ಸಿದ್ಧಾಂತ್! ಮನದಲ್ಲಿ ಕುಚ್ ಕುಚ್

ತಾರಿಣಿ ಕಂಡ್ರೆ ತನಗೆ ಆಗಲ್ಲ ಅಂತೀರೋ ಸಿದ್ಧಾಂತ, ತಾರಿಣಿಯನ್ನು ಕಾಲೇಜಿನಲ್ಲಿ ರೇಗಿಸಿದವರಿಗೆ ಸರಿಯಾದ ಮಾಂಜಾ ನೀಡಿದ್ದಾನೆ. ಎಲ್ಲರ ತರ ತಾರಿಣಿ ಅಲ್ಲ. ಅವಳ ತಂಟೆಗೆ ಬಂದ್ರೆ ಸುಮ್ಮನಿರಲ್ಲ ಎಂದು ಎಚ್ಚರಿಕೆ ನೀಡಿದ್ದಾನೆ. ಅಲ್ಲದೇ ಎಲ್ಲರ ಮುಂದೆ ತಾರಿಯನ್ನು ಹೊಗಳಿದ್ದಾನೆ. ಸಿದ್ಧಾಂತ್ ಮಾತು ಕೇಳಿ ತಾರಿಣಿ ಪುಲ್ ಖುಷಿಯಾಗಿ, ಖುಷಿಯ ನಶೆಯಲ್ಲಿ ತೇಲಾಡುತ್ತಿದ್ದಾಳೆ.

ಒಲವಿನ ನಿಲ್ದಾಣ

ಒಲವಿನ ನಿಲ್ದಾಣ

  • Share this:
ಸದ್ದಿಲ್ಲದೇ ಕನ್ನಡಿಗರ ಮನದಲ್ಲಿ ಜಾಗ ಮಾಡಿಕೊಳ್ತಿದೆ ಒಲವಿನ ನಿಲ್ದಾಣ (Olavina Nildana) ಧಾರಾವಾಹಿ (Serial). ಕಳೆದ ತಿಂಗಳಷ್ಟೇ ತನ್ನ ಪ್ರಯಾಣ ಶುರು ಮಾಡಿರುವ ಒಲವಿನ ನಿಲ್ದಾಣ ಧಾರಾವಾಹಿ ಅಭಿಮಾನಿಗಳ ಮನದಲ್ಲಿ ಎಲ್ಲೂ ಸ್ಟಾಪ್ ಆಗದೇ ಓಡ್ತಾ ಇದೆ. ಈ ಧಾರಾವಾಹಿಯು ಕಲರ್ಸ್ ಕನ್ನಡ (Colors Kannada)ದಲ್ಲಿ ಸೋಮವಾರದಿಂದ, ಶುಕ್ರವಾರದವರೆಗೆ ಸಂಜೆ 6 ಗಂಟೆವರೆಗೆ ಪ್ರಸಾರ ಆಗುತ್ತಿದೆ. ತಾರಿಣಿ ಕಂಡ್ರೆ ತನಗೆ ಆಗಲ್ಲ ಅಂತೀರೋ ಸಿದ್ಧಾಂತ (Siddhant), ತಾರಿಣಿ (Tharini)ಯನ್ನು ಕಾಲೇಜಿನಲ್ಲಿ ರೇಗಿಸಿದವರಿಗೆ ಸರಿಯಾದ ಮಾಂಜಾ ನೀಡಿದ್ದಾನೆ. ಎಲ್ಲರ ತರ ತಾರಿಣಿ ಅಲ್ಲ. ಅವಳ ತಂಟೆಗೆ ಬಂದ್ರೆ ಸುಮ್ಮನಿರಲ್ಲ ಎಂದು ಎಚ್ಚರಿಕೆ ನೀಡಿದ್ದಾನೆ. ಅಲ್ಲದೇ ಎಲ್ಲರ ಮುಂದೆ ತಾರಿಣಿಯನ್ನು ಹೊಗಳಿದ್ದಾನೆ. ಸಿದ್ಧಾಂತ್ ಮಾತು ಕೇಳಿ ತಾರಿಣಿ ಪುಲ್ ಖುಷಿಯಾಗಿ, ಖುಷಿಯ ನಶೆಯಲ್ಲಿ ತೇಲಾಡುತ್ತಿದ್ದಾಳೆ.

ತಾರಿಣಿಗೆ ರೇಗಿಸಿದ್ದ ಕಾಲೇಜಿನ ಹುಡುಗರು
ಒಲವಿನ ನಿಲ್ದಾಣದ ನಟಿ ತಾರಿಣಿ. ಮುಗ್ಧ ಹುಡುಗಿ. ಕಾಲೇಜಿನಲ್ಲಿ ಆಕೆ ತನ್ನ ಸ್ನೇಹಿತೆ ಜೊತೆ ಇರುವಾಗ ಅದೇ ಕಾಲೇಜಿನ ಹುಡುಗರು ತಾರಿಣಿಯನ್ನು ರೇಗಿಸುತ್ತಾರೆ. ಅದಕ್ಕೆ ತಾರಿಣಿ ಅಳುತ್ತಾ ಕೂತಿರುತ್ತಾಳೆ. ಸಿದ್ಧಾಂತ್ ಏಕೆ, ಏನು ಎಂದಾಗ ಏನೂ ಹೇಳದೇ ಹೊರಟು ಹೋತ್ತಾಳೆ. ಆದ್ರೆ ತಾರಿಣಿ ಸ್ನೇಹಿತೆ ಮೂಲಕ ವಿಷಯ ಗೊತ್ತಾಗುತ್ತದೆ.

ಇವತ್ತು ತಾರಿಣಿಯನ್ನು ರೇಗಿಸಿದವರಿಗೆ ಮಾಂಜಾ
ವಿಷಯ ತಿಳಿಯುತ್ತಿದ್ದಂತೆ, ಸಿದ್ಧಾಂತ ತಾರಿಣಿಯನ್ನು ಕರೆದುಕೊಂಡು ರೇಗಿಸಿದವನ ಬಳಿ ಕರೆದುಕೊಂಡು ಹೋಗುತ್ತಾನೆ. ತಾರಿಣಿ ಮತ್ತು ಕಾಲೇಜಿನ ಸ್ನೇಹಿತರ ಮುಂದೆ ಸರಿಯಾಗಿ ಹೊಡೆಯುತ್ತಾನೆ. ಏನಾಯ್ತು ಅಂತ ನೋಡೋದಕ್ಕೆ ನೀವು ಇವತ್ತಿನ ಸಂಚಿಕೆ ನೋಡಬೇಕು.

ಇದನ್ನೂ ಓದಿ: Harsha v/s Saniya: ಲಂಚದ ನಾಟಕವಾಡಿಸಿದ ಸಾನಿಯಾಗೆ ಠಕ್ಕರ್ ಕೊಟ್ಟ ಹರ್ಷ, ಟೀಚರ್ ಸುದ್ದಿಗೆ ಬರ್ಬೇಡಿ ಎಂದು ವಾರ್ನಿಂಗ್!

ಸಿದ್ಧಾಂತ್ ಮಾತಿಗೆ ಖುಷಿಯಾದ ತಾರಿಣಿ
ರೇಗಿಸಿದವನಿಗೆ ಸಿದ್ಧಾಂತ್ ಸರಿಯಾಗಿ ಥಳಿಸಿ, ನೀನು ತಾರಿಣಿ ತಂಟೆಗೆ ಹೋಗಬೇಡ. ನಿನ್ನ ಜೊತೆ ಪಬ್‍ಗೆ ಬರೋ ಹುಡುಗಿಯರ ತರ ಅವಳಲ್ಲ. ಪ್ರೀತಿ ನಾಟಕ ಮಾಡೋ ಹುಡುಗಿ ಅಲ್ಲ ಅವಳು. ಪ್ರೀತಿಗೆ ಅರ್ಥ ಉಳಿದಿರೋದೇ ಇಂತವರಿಂದ. ಪ್ರೀತಿಗೆ ಅಷ್ಟೋ, ಇಷ್ಟೋ ಗೌರವ ಇದೆ. ಅವಳ ಮುಂದೆ ಮಾತನಾಡೋಕೆ ಯೋಗ್ಯತೆ ಇಲ್ಲ ನಿನಗೆ. ಮಸಿಯನ್ನೇ ವಜ್ರ ಎಂದು ಕೊಂಡವರಿಗೆ, ಮಾಣಿಕ್ಯದ ಬೆಲೆ ಹೇಗೆ ಗೊತ್ತಾಗುತ್ತೆ. ಇನ್ನೊಮ್ಮೆ ಅವಳ ತಂಟೆಗೆ ಬಂದ್ರೆ ಕಣ್ಣು ಪೂರ ಮುಚ್ಚಿಸಿ ಬಿಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾನೆ. ಸಿದ್ಧಾಂತ್ ಮಾತು ಕೇಳಿ ತಾರಿಣಿ ತುಂಬಾ ಖುಷಿಯಾಗಿದ್ದಾಳೆ.

ಸಿದ್ಧಾಂತ್ ಅತ್ತಿಗೆಗೆ ನಿಜ ಗೊತ್ತಾಯ್ತಾ?
ಅದಲ್ಲದೇ ಒಲವಿನ ನಿಲ್ದಾಣದಲ್ಲಿ ತಾರಿಣಿ ತನ್ನ ಊರಿಗೆ ಹೋದಾಗ ತಾತಾ ಇಷ್ಟವಿಲ್ಲದ ನಿಶ್ಚಿತಾರ್ಥ ಮಾಡುತ್ತಾ ಇರುತ್ತಾರೆ. ಆಗ ಅದನ್ನು ಸಿದ್ಧಾಂತ್ ತಪ್ಪಿಸಿರುತ್ತಾನೆ. ತಾನು, ತಾರಿಣಿ ಪ್ರೀತಿ ಮಾಡುತ್ತಿದ್ದೇವೆ ಎಂದು ಹೇಳಿ ಸುಳ್ಳು ಹೇಳಿ ಎಂಗೇಜ್‍ಮೆಂಟ್ ಮಾಡಿಕೊಂಡಿರುತ್ತಾನೆ. ಆದ್ರೆ ಸಿದ್ಧಾಂತ್ ತನ್ನ ಕನಸಿನ ಹುಡುಗ ಎಂದು ಕೊಂಡ ತಾರಿಣಿಗೆ ಆತನ ಮೇಲೆ ಪ್ರೀತಿಯಾಗುತ್ತೆ. ಆದ್ರೆ ಸುಳ್ಳು ಎಂಗೇಜ್‍ಮೆಂಟ್ ಆದ ವಿಷಯ ಸಿದ್ಧಾಂತ್ ಮನೆಯಲ್ಲಿ ಗೊತ್ತಿಲ್ಲ. ಅನುಮಾನ ಬಂದಿರೋ ಸಿದ್ಧಾಂತ್ ಅತ್ತಿಗೆ ಸತ್ಯ ಹುಡುಕಲು ಹೊರಟಿದ್ದಾಳೆ. ಈಗ ಪೆನ್‍ಡ್ರೈವ್ ಒಂದು ಸಿಕ್ಕಿದ್ದು, ಅದರಲ್ಲಿ ಸತ್ಯ ಗೊತ್ತಾಗಿದೆ. ಇವತ್ತಿನ ಸಂಚಿಕೆಯಲ್ಲಿ ಆಕೆ ಆ ಫೋಟೋಗಳನ್ನು ನೋಡಲಿದ್ದಾಳೆ.

ಇದನ್ನೂ ಓದಿ: Hitler Kalyana: ಲೀಲಾಳನ್ನು ಮೇಲಿಂದ ತಳ್ಳಿ ಬಿಡ್ತಾನಾ AJ? ಅಯ್ಯೋ, ಇಬ್ಬರ ಮಧ್ಯೆ ಹೀಗೇಕಾಯ್ತು?

ಹಾಗಾದ್ರೆ ಸಿದ್ಧಾಂತ್ ಸುಳ್ಳಿನ ನಿಶ್ಚಿತಾರ್ಥ ಮನೆಯಲ್ಲಿ ಬಯಲಾಗುತ್ತಾ? ಸಿದ್ಧಾಂತ್ ಅತ್ತಿಗೆ ಮನೆಯಲ್ಲಿ ರಾಮಾಯಣ ಮಾಡ್ತಾಳಾ? ತನಗೆ ತಿಳಿದ ಸುದ್ದಿಯನ್ನು ತನ್ನ ಅತ್ತೆಗೆ ತಿಳಿಸುತ್ತಾಳಾ? ಸಿದ್ಧಾಂತ್ ಅಮ್ಮನಿಗೆ ಗೊತ್ತಾದ್ರೆ ಏನಾಗುತ್ತೆ? ಎಲ್ಲವನ್ನೂ ತಿಳಿದುಕೊಳ್ಳೋದಕ್ಕೆ ಮುಂದಿನ ಸಂಚಿಕೆಗಳನ್ನು ನೋಡಬೇಕು.
Published by:Savitha Savitha
First published: