Olavina Nildana: ಸಿದ್ಧಾಂತ್ ಪ್ರೀತಿ ಭ್ರಮೆಯಲ್ಲಿದ್ದ ತಾರಿಣಿಗೆ ವಾಸ್ತವದ ಅರಿವು, ಮನೆಯವರಿಗೆ ಸತ್ಯ ಹೇಳಲು ನಿರ್ಧಾರ!

ಸಿದ್ಧಾಂತ್ ಪ್ರೀತಿಯ ಭ್ರಮೆಯಲ್ಲಿದ್ದ ತಾರಿಣಿಗೆ ವಾಸ್ತವದ ಅರಿವಾಗಿದೆ. ತನ್ನ ಮೇಲೆ ಸಿದ್ಧಾಂತ್‍ಗೆ ಪ್ರೀತಿ ಇಲ್ಲ ಎಂದು ತಿಳಿದಿದೆ. ಇನ್ನು ತಡ ಮಾಡಿದ್ರೆ ಸರಿ ಇರಲ್ಲ. ಮನೆಯಲ್ಲಿ ಎಲ್ಲಾ ವಿಷಯ ಹೇಳಿ ಬಿಡ್ತಿನಿ ಎಂದು ಊರಿಗೆ ಹೊರಟು ನಿಂತಿದ್ದಾಳೆ.

ಸಿದ್ಧಾಂತ್ ಪ್ರೀತಿಯ ಭ್ರಮೆಯಲ್ಲಿದ್ದ ತಾರಿಣಿಗೆ ವಾಸ್ತವದ ಅರಿವಾಗಿದೆ. ತನ್ನ ಮೇಲೆ ಸಿದ್ಧಾಂತ್‍ಗೆ ಪ್ರೀತಿ ಇಲ್ಲ ಎಂದು ತಿಳಿದಿದೆ. ಇನ್ನು ತಡ ಮಾಡಿದ್ರೆ ಸರಿ ಇರಲ್ಲ. ಮನೆಯಲ್ಲಿ ಎಲ್ಲಾ ವಿಷಯ ಹೇಳಿ ಬಿಡ್ತಿನಿ ಎಂದು ಊರಿಗೆ ಹೊರಟು ನಿಂತಿದ್ದಾಳೆ.

ಸಿದ್ಧಾಂತ್ ಪ್ರೀತಿಯ ಭ್ರಮೆಯಲ್ಲಿದ್ದ ತಾರಿಣಿಗೆ ವಾಸ್ತವದ ಅರಿವಾಗಿದೆ. ತನ್ನ ಮೇಲೆ ಸಿದ್ಧಾಂತ್‍ಗೆ ಪ್ರೀತಿ ಇಲ್ಲ ಎಂದು ತಿಳಿದಿದೆ. ಇನ್ನು ತಡ ಮಾಡಿದ್ರೆ ಸರಿ ಇರಲ್ಲ. ಮನೆಯಲ್ಲಿ ಎಲ್ಲಾ ವಿಷಯ ಹೇಳಿ ಬಿಡ್ತಿನಿ ಎಂದು ಊರಿಗೆ ಹೊರಟು ನಿಂತಿದ್ದಾಳೆ.

  • Share this:
ಒಲವಿನ ನಿಲ್ದಾಣ (Olavina Nildana) ಕಳೆದ ತಿಂಗಳಷ್ಟೇ ಶುರುವಾಗಿರುವ ಧಾರಾವಾಹಿ (Serial). ಕಲರ್ಸ್ ಕನ್ನಡದಲ್ಲಿ (Colos Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ಬಂದು ಕಡಿಮೆ ದಿನ ಆಗಿದ್ರು. ಜನ ಮಿಸ್ ಮಾಡ್ದೇ ಈ ಸೀರಿಯಲ್ ನೋಡಲು ಕಾಯ್ತಾ ಇರ್ತಾರೆ. ನಟ ಸಿದ್ಧಾಂತ್ (Siddhant) ಗುರಿ, ಅವನ ಕಾಳಜಿ, ಮನೆಯವರ ಬಗ್ಗೆಯ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ಇನ್ನು ನಟಿ ತಾರಿಣಿ ಮುಗ್ಧತೆ. ಸಿದ್ಧಾಂತ್ ಮೇಲಿನ ಪ್ರೀತಿ (Love), ತನ್ನ ಕನಸಿನ ಹುಡುಗನ್ನು ಪಡೆಯಲು ಪರದಾಡುತ್ತಿರುವ ಪರಿ ಜನರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ. ತಾರಿಣಿ ತನ್ನ ಪ್ರೀತಿಯನ್ನು ಸಿದ್ಧಾಂತ್ ಬಳಿ ಹೇಳಿಕೊಳ್ಳಬೇಕು ಎನ್ನುವಷ್ಟರಲ್ಲಿ ಒಂದು ಘಟನೆ ನಡೆದು ಹೋಗಿ ಬಿಟ್ಟಿದೆ. ಅದರಿಂದ ತಾರಿಣಿ ಮನಸ್ಸು ಚೂರಾಗಿದೆ. ಯಾವ ಘಟನೆ ಓದಿ.

ಸಿದ್ಧಾಂತ್ ತನ್ನ ಪ್ರೀತಿಸಲ್ಲ ಎಂದು ಗೊತ್ತಾಯ್ತಾ ತಾರಿಣಿಗೆ?
ಸಿದ್ಧಾಂತ್ ತಾರಿಣಿ ಜೀವನ ಉಳಿಸಲು ತಾನು ಪ್ರೀತಿಸುತ್ತಿದ್ದೇನೆ ಎಂದು ಸುಳ್ಳು ಹೇಳಿ ತಾರಿಣಿ ಜೊತೆ ಸುಳ್ಳಿನ ನಿಶ್ಚಿತಾರ್ಥ ಮಾಡಿಕೊಂಡಿರುತ್ತಾನೆ. ಅದೇ ಈಗ ಸಿದ್ಧಾಂತ್‍ಗೆ ಮುಳುವಾಗುತ್ತಿದೆ. ತಾರಿಣಿ ಮನೆಯವರು ಪದೇ ಪದೇ ಸಿದ್ಧಾಂತ್‍ಗೆ ಕಾಲ್ ಮಾಡಿ ನಿಮ್ಮ ಮನಗೆ ಬರುತ್ತೇವೆ. ಲಗ್ನ ಪತ್ರಿಕೆ ಮಾಡಿಸಿ ಬೇಕು ಮಾಹಿತಿ ಕೊಡು ಎಂದು ಕೇಳುತ್ತಿದ್ದಾರೆ. ಆದ್ರೆ ಸಿದ್ಧಾಂತ್‍ನ ಸುಳ್ಳಿನ ನಿಶ್ಚಿತಾರ್ಥದ ಬಗ್ಗೆ ಅವರ ಮನೆಯಲ್ಲಿ ಗೊತ್ತಿಲ್ಲ.

ಕೋಪಗೊಂಡ ಸಿದ್ಧಾಂತ್ ತಾರಿಣಿ ಮೇಲೆ ಸಿಡಿ ಮಿಡಿ
ತಾರಿಣಿ ಮನೆಯವರು ಸಿದ್ಧಾಂತ್ ಮನೆಯಲ್ಲಿದ್ದಾಗಲೇ ಪದೇ ಪದೇ ಕಾಲ್ ಮಾಡುತ್ತಿರುವುದರಿಂದ ಕೋಪಗೊಂಡಿದ್ದಾನೆ. ಹೇಗಾದ್ರೂ ಮಾಡಿ ಇದನ್ನು ಇಲ್ಲಿಗೆ ನಿಲ್ಲಿಸಬೇಕು ಎಂದು ರಾತ್ರೋ ರಾತ್ರಿ ತಾರಿಣಿ ಇದ್ದ ಲೇಡಿಸ್ ಪಿಜಿಗೆ ನುಗ್ಗಿ ಈ ಸುಳ್ಳು ನಿಶ್ಚಿತಾರ್ಥದ ಬಗ್ಗೆ ನಿಮ್ಮ ಮನೆಯಲ್ಲಿ ಹೇಳು. ಪ್ರತಿ ಕ್ಷಣ ನನ್ನ ನೆಮ್ಮದಿ ಹಾಳಾಗುತ್ತಿದೆ ಎಂದು ಖಾರಾವಾಗಿ ಹೇಳಿದ್ದಾನೆ.

ಇದನ್ನೂ ಓದಿ: Sathya Serial: ವರಮಹಾಲಕ್ಷ್ಮಿ ಹಬ್ಬದ ತಯಾರಿ ಜವಾಬ್ದಾರಿ ಸತ್ಯ ಮೇಲೆ! ಏನ್ ಮಾಡ್ತಾಳೆ ಲೇಡಿ ರಾಮಾಚಾರಿ? 

ನಿನ್ನ ಮೇಲೆ ನನಗೆ ಪ್ರೀತಿ ಇಲ್ಲ ಎಂದು ನೇರವಾಗಿ ಹೇಳಿದ ಸಿದ್ಧಾಂತ್
ಮನೆಯಲ್ಲಿ ವಿಷಯ ತಿಳಿಸದ ತಾರಿಣಿ ಮೇಲೆ ಕೋಪಗೊಂಡಿರುವ ಸಿದ್ಧಾಂತ್, ನೀನು ನನ್ನ ಪ್ರೀತಿ ಮಾಡುತ್ತಿದ್ದರೆ ಇಲ್ಲೇ ಬಿಟ್ಟು ಬಿಡು. ನನಗೆ ನಿನ್ನ ಮೇಲೆ ಆ ರೀತಿಯ ಯಾವ ಭಾವನೆಯೂ ಇಲ್ಲ ಎಂದು ನೇರವಾಗಿ ಹೇಳಿದ್ದಾನೆ. ಬೇರೆ ಸ್ನೇಹಿತರಂತೆ ನೀನು ಸ್ನೇಹಿತಿ ಅಷ್ಟೆ ಎಂದು ತಾರಿಗೆ ಸ್ಪಷ್ಟವಾಗಿ ಹೇಳಿದ್ದಾನೆ.

ಮನೆಯಲ್ಲಿ ತನ್ನ ಸುಳ್ಳಿನ ನಿಶ್ಚಿತಾರ್ಥದ ಬಗ್ಗೆ ಹೇಳ್ತಾಳಾ?
ಸಿದ್ಧಾಂತ್ ಪ್ರೀತಿಯ ಭ್ರಮೆಯಲ್ಲಿದ್ದ ತಾರಿಣಿಗೆ ವಾಸ್ತವದ ಅರಿವಾಗಿದೆ. ತನ್ನ ಮೇಲೆ ಸಿದ್ಧಾಂತ್‍ಗೆ ಪ್ರೀತಿ ಇಲ್ಲ ಎಂದು ತಿಳಿದಿದೆ. ಇನ್ನು ತಡ ಮಾಡಿದ್ರೆ ಸರಿ ಇರಲ್ಲ. ಮನೆಯಲ್ಲಿ ಎಲ್ಲಾ ವಿಷಯ ಹೇಳಿ ಬಿಡ್ತಿನಿ ಎಂದು ಊರಿಗೆ ಹೊರಟು ನಿಂತಿದ್ದಾಳೆ. ಆಕೆಯ ಸ್ನೇಹಿತೆ ಎಷ್ಟೇ ತಡೆದರೂ ಕೇಳುತ್ತಿಲ್ಲ. ನಾನು ಹೋಗೇ ಹೋಗುತ್ತೇನೆ ಎಂದು ಹಠ ಹಿಡಿದಿದ್ದಾಳೆ. ಅಲ್ಲದೇ ಊರಿಗೆ ಬರುವುದಾಗಿ ಮನೆಯವರಿಗೆ ಬರುತ್ತಿದ್ದೇನೆ ಎಂದು ಹೇಳಿದ್ದಾಳೆ.

ಇದನ್ನೂ ಓದಿ: Gattimela: ವರಮಹಾಲಕ್ಷ್ಮಿ ಹಬ್ಬಕ್ಕೆ ಪರಿಮಳರನ್ನು ಮನೆಗೆ ಕರೆದ ಸುಹಾಸಿನಿ, ಏನಿದು ಆಶ್ಚರ್ಯ! 

ಹಾಗಾದ್ರೆ ಸಿದ್ಧಾಂತ್-ತಾರಿಣಿ ಪ್ರೇಮ ಕಥೆ ಕೊನೆಯಾಗುತ್ತಾ?
ಸಿದ್ಧಾಂತ್, ತಾರಿಣಿಯನ್ನು ಪ್ರೀತಿಸುತ್ತಾನೆ ಎಂದು ಕೊಂಡಿದ್ದ ಎಲ್ಲರಿಗೂ ನಿರಾಶೆಯಾಗಿದೆ. ಹಾಗಾದ್ರೆ ಸಿದ್ಧಾಂತ್‍ಗೆ ತಾರಿಣಿ ಮೇಲೆ ಪ್ರೀತಿ ಆಗಲ್ವಾ? ತಾರಿಣಿನು ಸಿದ್ಧಾಂತ್‍ನನ್ನು ಮರೆತು ಬಿಡುತ್ತಾಳಾ? ತೀವ್ರ ಕುತೂಹಲ ಮೂಡಿಸುತ್ತಿದೆ ಒಲವಿನ ನಿಲ್ದಾಣ ಧಾರವಾಹಿ. ಏನಾಗುತ್ತೋ ಏನೋ ಎಂದು ಪ್ರೇಕ್ಷಕ ಕಾಯುತ್ತಿದ್ದಾನೆ. ಇಬ್ಬರು ಒಂದಾದ್ರೆ ಸಾಕು ಎಂದು ಕೊಳ್ಳುತ್ತಿದ್ದಾರೆ. ಹಾಗಾದ್ರೆ ಮುಂದೆ ಏನಾಗುತ್ತೆ ಅಂತ ನೋಡೋಕೆ ಸಂಚಿಕೆಗಳನ್ನು ನೋಡಬೇಕು.
Published by:Savitha Savitha
First published: