Olavina Nildana: ಸಂಕಷ್ಟದಿಂದ ಪಾರಾದ ತಾರಿಣಿ, ಮಾವ ಪಾಲಾಕ್ಷನ ಕುತಂತ್ರ ಮನೆಯವರ ಮುಂದೆ ಬಯಲಾಗುತ್ತಾ?

ತಾರಿಣಿ ನಿಶ್ಚಿತಾರ್ಥವಾಗಿದ್ದು ಮಾವ ಪಾಲಾಕ್ಷನಿಗೆ ಇಷ್ಟ ಇಲ್ಲ. ಅದನ್ನೂ ಹೇಗಾದ್ರೂ ಮಾಡಿ ತಪ್ಪಿಸಬೇಕು ಎಂದು ಪ್ರಯತ್ನ ಮಾಡುತ್ತಿದ್ದಾನೆ. ಈ ರೀತಿ ರೌಡಿಗಳನ್ನು ಸಹ ಪಾಲಾಕ್ಷನೇ ಸೆಟ್ ಮಾಡಿದ್ದು ಎಂದು ತಾರಿಣಿ ಮನೆಯವರಿಗೆ ಗೊತ್ತಾಗುತ್ತಾ ಎನ್ನೋ ಕುತೂಹಲ ಹೆಚ್ಚಾಗಿದೆ.

ಒಲವಿನ ನಿಲ್ದಾಣ ಧಾರಾವಾಹಿ

ಒಲವಿನ ನಿಲ್ದಾಣ ಧಾರಾವಾಹಿ

 • Share this:
  ಸದ್ದಿಲ್ಲದೇ ಕನ್ನಡಿಗರ ಮನದಲ್ಲಿ ಜಾಗ ಮಾಡಿಕೊಳ್ತಿದೆ ಒಲವಿನ ನಿಲ್ದಾಣ (Olavina Nildana) ಧಾರಾವಾಹಿ (Serial). ಕಳೆದ ತಿಂಗಳಷ್ಟೇ ತನ್ನ ಪ್ರಯಾಣ ಶುರು ಮಾಡಿರುವ ಒಲವಿನ ನಿಲ್ದಾಣ ಧಾರಾವಾಹಿ ಅಭಿಮಾನಿಗಳ (Fans) ಮನದಲ್ಲಿ ಎಲ್ಲೂ ಸ್ಟಾಪ್ ಆಗದೇ ಓಡ್ತಾ ಇದೆ. ಈ ಧಾರಾವಾಹಿಯು ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ, ಶುಕ್ರವಾರದವರೆಗೆ ಸಂಜೆ 6 ಗಂಟೆವರೆಗೆ ಪ್ರಸಾರ ಆಗುತ್ತಿದೆ. ಸಿದ್ಧಾಂತ್ ಪ್ರೀತಿಯ (Love) ಭ್ರಮೆಯಲ್ಲಿದ್ದ ತಾರಿಣಿಗೆ ವಾಸ್ತವದ ಅರಿವಾಗಿದೆ. ತನ್ನ ಮೇಲೆ ಸಿದ್ಧಾಂಗೆ ಪ್ರೀತಿ ಇಲ್ಲ ಎಂದು ತಿಳಿದಿದೆ. ಇನ್ನು ತಡ ಮಾಡಿದ್ರೆ ಸರಿ ಇರಲ್ಲ. ಮನೆಯಲ್ಲಿ ಎಲ್ಲಾ ವಿಷಯ ಹೇಳಿ ಬಿಡ್ತಿನಿ ಎಂದು ಊರಿಗೆ ಹೋಗಿದ್ದವಳಿಗೆ,ಶಾಕ್ ಕಾದಿತ್ತು. ತನ್ನ ಮನೆಯವರು ಕಳಿಸಿದ್ದಾರೆ, ಎಂದು ಬೇರೆಯವರ ಗಾಡಿ ಹತ್ತಿ ಹೊರಟವಳಿಗೆ ರೌಡಿಗಳು ಕಾಟ ಕೊಟ್ಟಿದ್ದಾರೆ. ಸದ್ಯ ಸೇಪ್ ಆಗಿ ಮನೆ ಸೇರಿದ್ದಾಳೆ. ಇದರ ಹಿಂದೆ ಪಾಲಾಕ್ಷನ ಕೈವಾಡ ಇದೆ ಎಂದು ಮನೆಯವರಿಗೆ ಗೊತ್ತಾಗುತ್ತಾ?

  ಮೊದಲೇ ನೋವಿನಲ್ಲಿದ್ದ ತಾರಿಣಿಗೆ ಶಾಕ್!
  ಸಿದ್ಧಾಂತ್, ತಾರಿಣಿಗೆ ತಾನು ನಿನ್ನನ್ನು ಪ್ರೀತಿಸುತ್ತಿಲ್ಲ. ಸುಳ್ಳು ಎಂಗೇಜ್‍ಮೆಂಟ್ ಬಗ್ಗೆ ಮನೆಯಲ್ಲಿ ಹೇಳಿ ಎಂದು ಒತ್ತಾಯ ಮಾಡುತ್ತಿದ್ದಾನೆ. ಸಿದ್ಧಾಂತ್ ತನ್ನ ಪ್ರೀತಿಸುತ್ತಿಲ್ಲ ಅನ್ನೋ ಮಾತು ಕೇಳಿ ತಾರಿಣಿ ನೋವಿನಲ್ಲಿದ್ದಾಳೆ. ಸಿದ್ಧಾಂತ್‍ಗೆ ಹೆಚ್ಚು ನೋವು ಕೋಡೋದು ಬೇಡ ಎಂದು ತಾರಿಣಿ ಊರಿಗೆ ಹೋಗಿದ್ದಾಳೆ. ಆದ್ರೆ ಮನೆಗೆ ಹೋಗುವಾಗ ತೊಂದರೆಯಲ್ಲಿ ಸಿಲುಕಿದ್ದಳು.

  ತಾರಿಣಿಗೆ ತೊಂದರೆ ಕೊಟ್ಟ ರೌಡಿಗಳು
  ತಾರಿಣಿ ಬೆಂಗಳೂರಿನಿಂದ ಬಂದು, ತನ್ನ ಮನೆಗೆ ಹೋಗಲು ಕಾಯುತ್ತಿದ್ದಾಗ, ಬೇರೆ ಯಾರೋ ಬಂದು ನಿಮ್ಮ ತಾತಾ ಹೇಳಿದ್ದಾರೆ ಬನ್ನಿ ಎಂದು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ತೊಂದರೆ ಕೊಡುತ್ತಿದ್ದರು. ಆಗ ಕಾಪಾಡುವ ನೆಪದಲ್ಲಿ ತಾರಿಣಿಯನ್ನು ಮದುವೆ ಆಗ ಬೇಕು ಎಂದು ಕುತಂತ್ರ ಮಾಡುತ್ತಿರುವವನು ಕಾಪಾಡುತ್ತಾನೆ.

  ಇದನ್ನೂ ಓದಿ: Paaru Twist: ಅರುಂಧತಿ ಬಲೆಯಲ್ಲಿ ಸಿಲುಕಿದ ಅಖಿಲಾಂಡೇಶ್ವರಿ ಪುತ್ರ; ಪ್ರೀತು ರಾಸಲೀಲೆ ವಿಡಿಯೋ ಟಿವಿಯಲ್ಲಿ!

  ಮೊಮ್ಮಗಳು ಕಾಣದೇ ತಾತಾ ಕಂಗಾಲು
  ಇನ್ನು ತಾರಿಣಿ ಎಷ್ಟು ಸಮಯವಾದ್ರೂ ಮನೆಗೆ ಬರದಿದ್ದನ್ನು ನೋಡಿ ತಾತಾ ಗಾಬರಿಯಾಗಿದ್ದಾರೆ. ತಾರಿಣಿಯನ್ನು ಕರೆದುಕೊಂಡು ಬರುಲು, ತಾರಿಣಿ ತಂದೆ, ಮಾವ ಪಾಲಾಕ್ಷ ಹೊರಡುತ್ತಾರೆ. ಅಷ್ಟರಲ್ಲಿ ತಾರಿಣಿ ಬರುತ್ತಾಳೆ. ತಾತಾನನ್ನು ಕಂಡು ಓಡಿ ಹೋಗಿ ತಬ್ಬಿಕೊಂಡು ಕಣ್ಣಿರು ಹಾಕುತ್ತಿದ್ದಾಳೆ.

  ಎಲ್ಲ ಕುತಂತ್ರದ ಹಿಂದೆ ಮಾವ ಪಾಲಾಕ್ಷನ ಕೈವಾಡ ಇದೆ ಎಂದು ಗೊತ್ತಾಗುತ್ತಾ?
  ಇನ್ನು ತಾರಿಣಿ ನಿಶ್ಚಿತಾರ್ಥವಾಗಿದ್ದು ಮಾವ ಪಾಲಾಕ್ಷನಿಗೆ ಇಷ್ಟ ಇಲ್ಲ. ಅದನ್ನೂ ಹೇಗಾದ್ರೂ ಮಾಡಿ ತಪ್ಪಿಸಬೇಕು ಎಂದು ಪ್ರಯತ್ನ ಮಾಡುತ್ತಿದ್ದಾನೆ. ಅಲ್ಲದೇ ತಾರಿಣಿಯನ್ನು ಬೇರೆ ಹುಡುಗನೊಂದಿಗೆ ಮದುವೆ ಮಾಡಿಸಬೇಕು ಎಂದು ಏನೇನೋ ನಾಟಕವಾಡುತ್ತಿದ್ದಾನೆ. ಈ ರೀತಿ ರೌಡಿಗಳನ್ನು ಸಹ ಪಾಲಾಕ್ಷನೇ ಸೆಟ್ ಮಾಡಿದ್ದು ಎಂದು ತಾರಿಣಿ ಮನೆಯವರಿಗೆ ಗೊತ್ತಾಗುತ್ತಾ ಎನ್ನೋ ಕುತೂಹಲ ಹೆಚ್ಚಾಗಿದೆ.

  ತಾರಿಣಿಗೆ ಬೈದು ಒದ್ದಾಡುತ್ತಿರುವ ಸಿದ್ಧಾಂತ್
  ಇನ್ನು ಸಿದ್ಧಾಂತ್ ತಾರಿಣಿಗೆ ಬೈದು, ಮನೆಯಲ್ಲಿ ನಿಜ ಸಂಗತಿ ಹೇಳು ಎಂದಿದ್ದಾನೆ. ಆದ್ರೆ ಅವಳಿಗೆ ಬೈದು, ಅವಳು ಊರಿಗೆ ಹೋದ ನಂತರ ಬೇಸರ ಮಾಡಿಕೊಂಡಿದ್ದಾನೆ. ತಾನು ಯಾಕೆ ಹೀಗೆ ಮಾಡಿದೆ? ತಾರಿಣಿ ಒಳ್ಳೆ ಹುಡುಗಿ. ಮಧ್ಯರಾತ್ರಿ ಪಿ.ಜಿ ಹೋಗಿ ಗಲಾಟೆ ಮಾಡ ಬಾರದಿತ್ತು ಎಂದು ನೊಂದುಕೊಂಡಿದ್ದಾನೆ.

  ಇದನ್ನೂ ಓದಿ: Kannadathi: ಅಮ್ಮಮ್ಮ ಬರೋ ಖಷಿಯಲ್ಲಿ ಮನೆ ಮಂದಿ! ಸಾನಿಯಾ ಸಿಡಿಮಿಡಿ

  ದಿನದಿಂದ ದಿನಕ್ಕೆ ಸೀರಿಯಲ್‍ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಹೆಚ್ಚಾಗುತ್ತಿದೆ. ತಾರಿಣಿ ತಾತಾನ ಬಳಿ ಸತ್ಯ ಹೇಳ್ತಾಳಾ, ಸಿದ್ಧಾಂತ್‍ನಿಂದ ದೂರ ಆಗ್ತಾಳಾ, ಮುಂದೇನಾಗುತ್ತೆ ಅನ್ನೋ ಕುತೂಹಲ ಪ್ರತಿದಿನ ಕಾಡುತ್ತೆ. ಅದಕ್ಕೆ ನೀವು ಒಲವಿನ ನಿಲ್ದಾಣ ಧಾರಾವಾಹಿ ನೋಡಬೇಕು.
  Published by:Savitha Savitha
  First published: