Lakshana Serial: ನಕ್ಷತ್ರಾಗೆ ತೊಂದ್ರೆ ಕೊಡೋ ಮೌರ್ಯನ ಪ್ಲ್ಯಾನ್ ಶ್ವೇತಾಗೆ ಗೊತ್ತಾಯ್ತಾ? ಇವತ್ತೇನಾಗುತ್ತೇ ನೋಡಿ

ಮೌರ್ಯನಿಗೆ ಸಿಎಸ್ ಮೇಲೆ ತುಂಬಾ ಕೋಪ. ಆದ ಕಾರಣ ಕಳೆದ 2 ವಾರಗಳಿಂದ ನಕ್ಷತ್ರಾಗೆ ತೊಂದರೆ ಕೊಡುತ್ತಿದ್ದಾನೆ. ಈಗ ಮೌರ್ಯ ಆ ಬಗ್ಗೆ ಮಾತನಾಡುವಾಗ ಶ್ವೇತಾ ಕೇಳಿಸಿಕೊಂಡಿದ್ದಾಳೆ. ಶ್ವೇತಾಗೆ ಎಲ್ಲಾ ನಿಜ ಗೊತ್ತಾಯ್ತಾ ಅಂತ ತಿಳಿದುಕೊಳ್ಳೋಕೆ ಇವತ್ತಿನ ಸಂಚಿಕೆ ನೋಡಬೇಕು...

 ಲಕ್ಷಣ

ಲಕ್ಷಣ

  • Share this:
ಲಕ್ಷಣ (Lakshana), ಕಲರ್ಸ್ ಕನ್ನಡ (Colors Kannada)ವಾಹಿನಿಯಲ್ಲಿ ಪ್ರತಿ ದಿನ ರಾತ್ರಿ 9.30ಕ್ಕೆ ಪ್ರಸಾರ ಆಗುತ್ತಿರುವ ಧಾರಾವಾಹಿ (Serial). ಕಪ್ಪು-ಬಿಳುಪಿನ ನಡುವೆ ತಾರತಮ್ಯವನ್ನು ಒಳಗೊಂಡ ಕಥೆ. ಬಣ್ಣ ಕಪ್ಪಾಗಿದ್ದರೇನು, ಲಕ್ಷಣ ಮುಖ್ಯ, ಮನಸ್ಸು ಮುಖ್ಯ ಎಂಬುವುದನ್ನು ತೋರಿಸಿ ಕೊಡುವ ಕಥಾಹಂದರ. ಲಕ್ಷಣ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ನಟಿ ನಕ್ಷತ್ರ. ನೋಡಲು ಕಪ್ಪು. ಹುಟ್ಟಿದಾಗಿನಿಂದಲೇ ಶ್ವೇತಾ ಮತ್ತು ನಕ್ಷತ್ರಾ ಅದಲು-ಬದಲು ಆಗಿರುತ್ತಾರೆ. ಬೆಳೆದು ದೊಡ್ಡವರಾದ ಮೇಲೆ ತಮ್ಮ ತಮ್ಮ ಮನೆ ಸೇರುತ್ತಾರೆ. ಶ್ವೇತಾಗೆ ದಿಡೀರ್ ಬಡತನಕ್ಕೆ ಹೊಂದಿಕೊಳ್ಳಲು ಆಗುತ್ತಿಲ್ಲ. ಅಲ್ಲದೇ ಶ್ವೇತಾ (Shwetha) ಮದುವೆಯಾಗಬೇಕಿದ್ದ ಭೂಪತಿಯನ್ನು ನಕ್ಷತ್ರ (Nakshatra) ಮದುವೆಯಾಗಿದ್ದಾಳೆ. ಹೇಗಾದ್ರೂ ಸರಿ ಭೂಪತಿಯನ್ನೇ ಮತ್ತೆ ಮದುವೆಯಾಗೋ ಆಸೆಯಲ್ಲಿ ಇದ್ದಾಳೆ ಶ್ವೇತಾ, ಆದ್ರೆ ಭೂಪತಿ ತಾಯಿ ಶಕುಂತಲಾ ದೇವಿ ಬಿಗ್ ಟ್ವಿಸ್ಟ್ ನೀಡಿದ್ದಾರೆ.

ಮೌರ್ಯನನ್ನು ಮದುವೆಯಾಗುವ ಆಫರ್
ಶ್ವೇತಾ ನೋಡಲು ಬೆಳ್ಳಗೆ ಸುಂದರವಾಗಿದ್ದಾಳೆ. ಮೊದಲಿನಿಂದಲೂ ಆಕೆಗೆ ಕಪ್ಪಗೆ ಇರೋರನ್ನೇ ಕಂಡರೆ ಆಗಲ್ಲ. ಆದ್ರೆ ಈಗ ಬಡತನದಲ್ಲಿ ಇರಲಾಗದ ಶ್ವೇತಾಗೆ ಶಕುಂತಲಾ ಒಂದು ಆಫರ್ ನೀಡಿದ್ದಾಳೆ. ತನ್ನ 4ನೇ ಮಗ ಮೌರ್ಯನನ್ನು ಮದುವೆಯಾಗುವಂತೆ ಕೇಳಿದ್ದಾಳೆ. ಶ್ವೇತಾ ಸಹ ಮೌರ್ಯ ಭೂಪತಿ ತಮ್ಮ, ಅಷ್ಟೇ ಸುಂದರವಾಗಿರುತ್ತಾನೆ ಎಂದು ಒಪ್ಪಿಕೊಂಡಿದ್ದಾಳೆ.

ಕಪ್ಪಾಗಿರೋ ಮೌರ್ಯನನ್ನು ಕಂಡು ಶಾಕ್ ಆದ ಶ್ವೇತಾ
ಶೌರ್ಯನಿಗೆ, ನಕ್ಷತ್ರ ತಂದೆ ಸಿಎಸ್ ಅಂದ್ರೆ ಚಂದ್ರಶೇಖರ್ ಏನಾದ್ರೂ ತೊಂದರೆ ಮಾಡಬಹುದು ಎಂದು ಗೌಪ್ಯ ಸ್ಥಳದಲ್ಲಿ ಇಟ್ಟಿದ್ದಾಳೆ. ಅದಕ್ಕೆ ಶ್ವೇತಾ, ಮೌರ್ಯ ಭೇಟಿಯಾಗಲು ಶಕುಂತಲಾ ದೇವಿಯ ಜಾಗ ನಿಗದಿ ಪಡಿಸಿ ಕಳಿಸಿದ್ದಾಳೆ. ಸುಂದರವಾಗಿರುತ್ತಾನೆ ಎಂದು ಮೌರ್ಯನಿಗೆ ಕಾಯುತ್ತಿದ್ದ ಶ್ವೇತಾ, ಆತನನ್ನು ನೋಟಿ ಶಾಕ್ ಆಗಿದ್ದಾಳೆ. ಇಷ್ಟು ಕಪ್ಪಾಗಿರೋರನ್ನು ಮದುವೆಯಾಗುವುದು ಹೇಗೆ ಎಂದು ಚಡಪಡಿಸುತ್ತಿದ್ದಾಳೆ.

ಇದನ್ನೂ ಓದಿ: Hitler Kalyana: ಲೀಲಾಳನ್ನು ಮೇಲಿಂದ ತಳ್ಳಿ ಬಿಡ್ತಾನಾ AJ? ಅಯ್ಯೋ, ಇಬ್ಬರ ಮಧ್ಯೆ ಹೀಗೇಕಾಯ್ತು?

ನಕ್ಷತ್ರಾಗೆ ತೊಂದ್ರೆ ಕೊಡ್ತಿದ್ದವನು ಮೌರ್ಯ ಎಂದು ಗೊತ್ತಾಯ್ತಾ?
ಚಂದ್ರಶೇಖರ್ ಮೌರ್ಯನನ್ನು ಕಿಡ್ನಾಪ್ ಮಾಡಿಸಿ, ಅವನ್ನನು ಮುಂದಿಟ್ಟುಕೊಂಡು ಬಲವಂತವಾಗಿ, ನಕ್ಷತ್ರಾ-ಭೂಪತಿಗೆ ಮದುವೆ ಮಾಡಿಸಿರುತ್ತಾನೆ. ಅದಕ್ಕೆ ಮೌರ್ಯನಿಗೆ ಸಿಎಸ್ ಮೇಲೆ ತುಂಬಾ ಕೋಪ. ಆದ ಕಾರಣ ಕಳೆದ 2 ವಾರಗಳಿಂದ ನಕ್ಷತ್ರಾಗೆ ತೊಂದರೆ ಕೊಡುತ್ತಿದ್ದಾನೆ. ಈಗ ಮೌರ್ಯ ಆ ಬಗ್ಗೆ ಮಾತನಾಡುವಾಗ ಶ್ವೇತಾ ಕೇಳಿಸಿಕೊಂಡಿದ್ದಾಳೆ. ಶ್ವೇತಾಗೆ ಎಲ್ಲಾ ನಿಜ ಗೊತ್ತಾಯ್ತಾ ಅಂತ ತಿಳಿದುಕೊಳ್ಳೋಕೆ ಇವತ್ತಿನ ಸಂಚಿಕೆ ನೋಡಬೇಕು.

ಒಂದೇ ಮನಸ್ಥಿಯ ಇಬ್ಬರು ಒಂದಾಗ್ತಾರಾ?
ಶ್ವೇತಾಗೂ ನಕ್ಷತ್ರ ಕಂಡ್ರೆ ಆಗಲ್ಲ. ಮೌರ್ಯನಿಗೂ ನಕ್ಷತ್ರ ಕಂಡ್ರೆ ಆಗಲ್ಲ. ಇಬ್ಬರ ಟಾರ್ಗೆಟ್ ಸೇಮ್ ಸಿಎಸ್, ನಕ್ಷತ್ರಾ. ಹಾಗಾಗಿ ಬಣ್ಣ ನೋಡಿ ಮದುವೆ ಬೇಡ ಎಂದುಕೊಂಡಿದ್ದ ಶ್ವೇತಾ, ನಕ್ಷತ್ರಾ ಮೇಲಿರೋ ಕೋಪಕ್ಕೆ ಒಪ್ಪಿಕೊಳ್ತಾಳ ಕಾದು ನೋಡಬೇಕಿದೆ. ಅಲ್ಲದೇ ಮದುವೆಯಾದ್ರೆ ರಾಯಲ್ ಲೈಫ್ ಲೀಡ್ ಮಾಡೋ ಆಸೆಯಲ್ಲಿದ್ದಾಳೆ.

ಇತ್ತ ಕಂಡ ಕಂಡವರ ಮೇಲೆ ಭೂಪತಿಗೆ ಅನುಮಾನ
ಇನ್ನು ಮೌರ್ಯ, ನಕ್ಷತ್ರಾಗೆ ಕಾಟ ಕೊಡುತ್ತಿದ್ದಾನೆ. ತೊಂದ್ರೆ ಕೊಡ್ತಿರೋರು ಯಾರು ಎಂದು ತಿಳಿದುಕೊಳ್ಳೋ ತವಕದಲ್ಲಿ ಭೂಪತಿ ಇದ್ದಾನೆ. ಆದ ಕಾರಣ ಕಂಡ ಕಂಡವರ ಮೇಲೆ ಅನುಮಾನ ಪಡುತ್ತಿದ್ದಾರೆ. ಮನೆಗೆ ಪೋಸ್ಟ್ ಮ್ಯಾನ್ ಬಂದ್ರೂ ಸಹ ಆತನನ್ನು ಹಿಡಿದು, ಯಾರು ನಿನ್ನ ಕಳಿಸಿದ್ದ ಎಂದು ಪ್ರಶ್ನಿಸುತ್ತಿದ್ದಾನೆ.

ಇದನ್ನೂ ಓದಿ: Harsha v/s Saniya: ಲಂಚದ ನಾಟಕವಾಡಿಸಿದ ಸಾನಿಯಾಗೆ ಠಕ್ಕರ್ ಕೊಟ್ಟ ಹರ್ಷ, ಟೀಚರ್ ಸುದ್ದಿಗೆ ಬರ್ಬೇಡಿ ಎಂದು ವಾರ್ನಿಂಗ್!

ಭೂಪತಿಗೆ ತನ್ನ ತಮ್ಮನೇ ನಕ್ಷತ್ರಾಗೆ ತೊಂದರೆ ಕೊಡ್ತಿದ್ದಾನೆ ಅಂತ ಗೊತ್ತಾಗುತ್ತಾ, ಮೌರ್ಯ ಸಿಕ್ಕಿ ಹಾಕಿಕೊಳ್ತಾನಾ? ಶ್ವೇತಾ ಮೌರ್ಯನನ್ನು ಮದುವೆಯಾಗುಲು ಒಪ್ಪುತ್ತಾಳಾ? ಮುಂದೇನಾಗುತ್ತೆ ಅನ್ನೋ ಕುತೂಹಲ ಅಭಿಮಾನಿಗಳಿಗೆ ಹೆಚ್ಚಾಗಿದೆ. ಎಲ್ಲ ತಿಳಿಯಲು ಲಕ್ಷಣ ಸಂಚಿಕೆಗಳನ್ನು ನೋಡಬೇಕು.
Published by:Savitha Savitha
First published: