Kannadathi: ಅಮ್ಮಮ್ಮ ತೋರಿಸಿದ ವಿಡಿಯೋ ನೋಡಿ ಸಾನಿಯಾ ಶಾಕ್! ಬದುಕಿ ಬಂದ ರತ್ನಮಾಲಾರಿಂದ ಟಾಂಗ್

ರತ್ನಮಾಲಾ ಸಾನಿಯಾಗೆ ವಿಡಿಯೋವೊಂದನ್ನು ಕಳಿಸಿದ್ದಾರೆ. ಅಲ್ಲದೇ ಆಕೆಯನ್ನು ಮುಂದೆಯೇ ಕೂರಿಸಿಕೊಂಡಿದ್ದಾರೆ. ಆ ವಿಡಿಯೋ ನೋಡಲು ಹೇಳುತ್ತಾರೆ. ಸಾನಿಯಾ ಕುತೂಹಲದಿಂದ ಇಲ್ಲೇ ಇದ್ದರೂ, ಅತ್ತೆ ಯಾವ ವಿಡಿಯೋ ಕಳಿಸಿದ್ದಾರೆ ಅಂತ ನೋಡಿದ್ದಾಳೆ. ಅದನ್ನು ನೋಡಿ ಶಾಕ್ ಆಗಿದ್ದಾಳೆ.

ಕನ್ನಡತಿ ಧಾರಾವಾಹಿ

ಕನ್ನಡತಿ ಧಾರಾವಾಹಿ

  • Share this:
    ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ (Kannadathi) ಧಾರಾವಾಹಿ (Serial) ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ (Fans) ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಹರ್ಷ-ಭುವಿ ಮದುವೆ ಸಮಯದಲ್ಲಿ ಅಮ್ಮಮ್ಮನಿಗೆ ಹುಷಾರಿಲ್ಲದೇ ಹೆಚ್ಚಿನ ಚಿಕಿತ್ಸೆಗೆ ವಿದೇಶಕ್ಕೆ ಹೋಗಿದ್ದರು. ಅವರು ಮನೆಯಲ್ಲಿ ಇಲ್ಲದೇ ವೇಳೆಯೇ ಹರ್ಷನ (Harsha) ಚಿಕ್ಕಪ್ಪ ಆಸ್ತಿಗಾಗಿ ಜಗಳ ತೆಗೆದಿದ್ದರು. ಅಮ್ಮಮ್ಮ ಗುಣಮುಖರಾಗಿ ವಿದೇಶದಿಂದ ಮನೆಗೆ ಬಂದಿದ್ದಾರೆ. ಮನೆಯವರೆಲ್ಲಾ ಖುಷಿಯಾಗಿದ್ದಾರೆ. ಅಮ್ಮಮ್ಮ ಬಂದ ಮೇಲೆ ಮನೆಯಲ್ಲಿ ಎಲ್ಲವೂ ಸರಿ ಹೋಗುತ್ತೆ ಅಂತ ಸಂತೋಷದಿಂದ ಇದ್ದಾರೆ. ಆದ್ರೆ ಅಮ್ಮಮ್ಮ ಸಾನಿಯಾಗೆ ಒಂದು ವಿಡಿಯೋ (Video) ಕಳಿಸಿದ್ದು, ಅದನ್ನು ನೋಡಿ ಸಾನಿಯಾ ಶಾಕ್ ಆಗಿದ್ದಾಳೆ.

    ಅಮ್ಮಮ್ಮ ವಾಪಸ್ ಬಂದ ಖುಷಿಯಿಲ್ಲ ಸಾನಿಯಾಗೆ

    ರತ್ನಮಾಲಾ ಅವರ ಆರೋಗ್ಯ ಹದಗೆಟ್ಟಾಗ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ಕಳಿಸಲಾಗಿತ್ತು. ಆದ್ರೆ ಅವರು ಗುಣ ಮುಖರಾಗಿ ಬಂದಿದ್ದಾರೆ. ಅದು ಸಾನಿಯಾಗೆ ಇಷ್ಟ ಇಲ್ಲ. ಸಾನಿಯಾಗೆ ರತ್ನಮಾಲಾ ಎಂ.ಡಿ ಪೋಸ್ಟ್ ನೀಡಿದ್ದರು. ಅದರ ಅವಧಿ ಮುಗಿದಿದೆ. ಅಮ್ಮಮ್ಮ ಬದುಕಿ ಬಂದ್ರೆ ಎಲ್ಲಿ ತನ್ನನ್ನು ಅಧಿಕಾರದಿಂದ ಕಿತ್ತು ಬಿಡುತ್ತಾರೋ ಅಂತ, ಅಮ್ಮಮ್ಮ ವಾಪಸ್ ಬಂದಿದ್ದು ಸಾನಿಯಾ ಅವರಿಗೆ ಇಷ್ಟ ಇಲ್ಲ.

    ಸಾನಿಯಾಗೆ ವಿಡಿಯೋ ಕಳಿಸಿದ ರತ್ನಮಾಲಾ

    ಇನ್ನು ಹುಷಾರಾಗಿ ಬಂದಿರುವ ರತ್ನಮಾಲಾ ಅವರು, ಮನೆಯವರನ್ನು ನೋಡಿ ಖುಷಿಯಾಗಿದ್ದಾರೆ. ಅದೇ ರೀತಿ ಮರೆಯದೇ ಸಾನಿಯಾಗೆ ವಿಡಿಯೋವೊಂದನ್ನು ಕಳಿಸಿದ್ದಾರೆ. ಅಲ್ಲದೇ ಆಕೆಯನ್ನು ಮುಂದೆಯೇ ಕೂರಿಸಿಕೊಂಡಿದ್ದಾರೆ. ಆ ವಿಡಿಯೋ ನೋಡಲು ಹೇಳುತ್ತಾರೆ. ಸಾನಿಯಾಳು ಕುತೂಹಲದಿಂದ ಇಲ್ಲೇ ಇದ್ದರೂ, ಅತ್ತೆ ಯಾವ ವಿಡಿಯೋ ಕಳಿಸಿದ್ದಾರೆ ಅಂತ ನೋಡಿದ್ದಾಳೆ. ಅದನ್ನು ನೋಡಿ ಶಾಕ್ ಆಗಿದ್ದಾಳೆ.

    Colors Kannada serial, Kannada serial, Kannadathi Serial, Kannadathi serial today episode, interesting episode in serial, ಕನ್ನಡತಿ ಧಾರಾವಾಹಿ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಹರ್ಷ-ಭುವಿ


    ಹಾಗಾದ್ರೆ ವಿಡಿಯೋದಲ್ಲಿ ಏನಿದೆ?

    ಅಮ್ಮಮ್ಮನಿಗೆ ಹುಷಾರಿಲ್ಲದಾಗ ಆಂಬುಲೆನ್ಸ್ ನಲ್ಲಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾ ಇರುತ್ತಾರೆ. ಆಗ ಸಾನಿಯಾ ಅಮ್ಮಮ್ಮ ಇನ್ನು ಬದುಕುವುದಿಲ್ಲ ಎಂದು ಕೊಂಡು ಏನೇನು ಮಾತನಾಡುತ್ತಾ ಇರುತ್ತಾಳೆ. ಈಗ ಅಧಿಕಾರದಿಂದ ಹೇಗೆ ತೆಗೆಯುತ್ತೀರಾ? ಆಸ್ಪತ್ರೆಗೆ ಹೋದ್ರೆ ವಾಪಸ್ ಬದುಕಿ ಬರಲ್ಲ ಎಂದು ನಗುತ್ತಾ, ಗರ್ವದಿಂದ ಹೇಳಿರುತ್ತಾಳೆ. ಅದು ಅಮ್ಮಮ್ಮ ನೋಡುತ್ತಾ ಇದ್ದರೂ ಹಾಗೇ ಮಾಡಿರುತ್ತಾಳೆ. ಅದನ್ನು ರತ್ನಮಾಲಾ ಅವರು ವಿಡಿಯೋ ಮಾಡಿಕೊಂಡಿದ್ದಾರೆ. ಆ ವಿಡಿಯೋವನ್ನೇ ಈಗ ಸಾನಿಯಾಗೆ ಕಳಿಸಿದ್ದಾರೆ.

    ಇದನ್ನೂ ಓದಿ: Ramachari Marriage: ಚಾರುಗೆ ರಾಮಾಚಾರಿಯನ್ನು ಮದುವೆಯಾಗೋ ಆಸೆ! ದಿಢೀರ್ ಬದಲಾವಣೆ ಹೇಗೆ? 

    ಈಗ ಏನ್ ಹೇಳ್ತಾಳೆ ಸಾನಿಯಾ?

    ಸಾನಿಯಾ ಅಮ್ಮಮ್ಮ ಕಳಿಸಿದ ವಿಡಿಯೋ ನೋಡಿ ಶಾಕ್ ಆಗಿದ್ದಾಳೆ. ತಾನು ಮಾತನಾಡಿದ್ದೆಲ್ಲಾ ವಿಡಿಯೋ ಮಾಡಿದ್ದಾರೆ ಎಂದು ಗಾಬರಿಯಾಗಿದ್ದಾಳೆ. ಮೊದಲೇ ಅಧಿಕಾರದ ಅವಧಿ ಮುಗಿದಿತ್ತು. ಈಗ ಈ ರೀತಿ ಬೇರೆ ಮಾತನಾಡಿದ್ದಾಳೆ. ಎಲ್ಲವನ್ನೂ ಸೇರಿಸಿ ಅಮ್ಮಮ್ಮ ಇನ್ನೇನು ಮಾಡೋತ್ತಾರೋ ಅನ್ನೋ ಭಯ ಸಾನಿಯಾಗೆ ಶುರುವಾಗಿದೆ.

    ವರೂಧಿನಿಗೆ ಹೇಳಿ ಸಾನಿಯಾ ಮಾಹಿತಿ ತರಿಸುತ್ತಿರುವ ರತ್ನಮಾಲಾ

    ರತ್ನಮಾಲಾ ಅವರು ಹುಷಾರಾಗುತ್ತಿದ್ದಂತೆ, ವಿದೇಶದಿಂದಲೇ ವರೂಧಿನಿಗೆ ಕರೆ ಮಾಡಿರುತ್ತಾರೆ. ವರೂಧಿನಿಗೆ ಸಾನಿಯಾ ಬಗ್ಗೆ ಕೆಲವೊಂದು ಡಿಟೇಲ್ಸ್ ರೆಡಿ ಮಾಡಲು ಹೇಳಿದ್ದಾರೆ. ಅಲ್ಲದೇ ತಾವು ಕರೆ ಮಾಡಿದ್ದನ್ನು ಗುಟ್ಟಾಗಿ ಇಡಬೇಕು. ಯಾರಿಗೂ ಹೇಳಬಾರದು ಎಂದು ವರೂಧಿಗೆ ಹೇಳಿದ್ದಾರೆ.

    ಇದನ್ನೂ ಓದಿ: Olavina Nildana: ತಾರಿಣಿಯ ಸುಳ್ಳು ಪ್ರೀತಿ ಸುದ್ದಿ ಕೇಳಿ ತಾತನಿಗೆ ಹೃದಯಾಘಾತ! ಮನೆ ಮಂದಿಗೆಲ್ಲಾ ಆಘಾತ! 

    ಹಾಗಾದ್ರೆ ಸಾನಿಯಾ ಅಧಿಕಾರ ಹೋಗುವುದು ನಿಜಾನಾ, ಅಮ್ಮಮ್ಮ ಯಾವ ನಿರ್ಧಾತ ತೆಗೆದುಕೊಂಡಿದ್ದಾಳೆ? ಎಲ್ಲವನ್ನೂ ನೋಡಲು ಕನನ್ಡತಿ ಧಾರಾವಾಹಿ ಸಂಚಿಕೆಗಳನ್ನು ನೋಡಬೇಕು.
    Published by:Savitha Savitha
    First published: