Doresani: ಮಾತಲ್ಲಿ ಹೇಳಲಾಗದ್ದನ್ನು ಪತ್ರದ ಮೂಲಕ ಹೇಳ್ತಿದ್ದಾಳೆ ದೀಪಿಕಾ! ಲೆಟರ್​ನಲ್ಲಿ ಏನಿದೆ?

ಆನಂದ್ ಜೊತೆ ಮಾತು ಬಿಟ್ಟಿರುವ ದೀಪಿಕಾ, ಆತನ ಮನೆಗೆ ಬಂದಿದ್ದಾಳೆ. ದೀಪಿಕಾ ಬಂದಿದ್ದ ನೋಡಿದ ಆನಂದ್ ಖುಷಿಗೆ ಪಾರವೇ ಇಲ್ಲ. ಈಗಲಾದ್ರೂ ಮನಸಾರೆ ಮಾತಾಡು ಎನ್ನುತ್ತಾನೆ. ಅದಕ್ಕೆ ದೀಪಿಕಾ, ಮಾತನಾಡೋ ಸ್ಥಿತಿಯಲ್ಲಿ ಇಲ್ಲ. ನಾನು ಏನು ಹೇಳಬೇಕೋ, ಅದು ಈ ಲೆಟರ್‍ನಲ್ಲಿ ಇದೆ. ದಯವಿಟ್ಟು ಇದನ್ನು ಓದಿ ಹರಿದು ಹಾಕಿ ಎಂದು ಹೇಳುತ್ತಾಳೆ.

ದೊರೆಸಾನಿ ಸೀರಿಯಲ್

ದೊರೆಸಾನಿ ಸೀರಿಯಲ್

  • Share this:
    ದೊರೆಸಾನಿ (Doresani), ಕಲರ್ಸ್ ಕನ್ನಡದಲ್ಲಿ  (Colors Kannada) ಮೂಡಿ ಬರುತ್ತಿರುವ ಧಾರಾವಾಹಿ (Serial). ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 6.30ಕ್ಕೆ ಪ್ರಸಾರವಾಗುತ್ತದೆ. ಒಂದು ಸುಂದರ ಪ್ರೇಮ ಕಥೆಯಿಂದ ಶುರುವಾದೋ ಸೀರಿಯಲ್, ಏನೇನು ತಿರುವುಗಳನ್ನು ಪಡೆದುಕೊಂಡು ನಟ. ನಟಿ ದೂರ ಆಗು ಪರಿಸ್ಥಿತಿ ಬಂದಿದೆ. ಆನಂದ್ ಈ ಕಥೆಯ ಹೀರೋ, ಶ್ರೀಮಂತರ ಮನೆ ಹುಡುಗ. ಆದ್ರೆ ಅಪ್ಪ-ಅಮ್ಮ ಇಲ್ಲದ ಅನಾಥ. ದೀಪಿಕಾ ಈ ಕಥೆಯ ನಾಯಕಿ. ಬಡವರ ಮನೆ ಹುಡುಗಿ. ಆನಂದ್, ದೀಪಿಕಾ, ಆನಂದ್ (Anand) ಪರಿಚಯವಾಗಿ ಸ್ನೇಹಿರಾಗಿರುತ್ತಾರೆ. ಆ ಮೇಲೆ ಲವ್ (Love) ಮಾಡಲು ಶುರು ಮಾಡುತ್ತಾರೆ. ಆದ್ರೆ ದೀಪಿಕಾ ತಂದೆಗೆ ಇದು ಇಷ್ಟ ಆಗಲ್ಲ. ಆದ ಕಾರಣ ದೀಪಿಕಾ, ಆನಂದ್‍ಗೆ ತನ್ನನ್ನು ಮರೆಯುವಂತೆ ಹೇಳಿ, ಬೆಸ್ಟ್ ಫ್ರೆಂಡ್ಸ್ ಆಗಿರೋಣ ಅಂತ ಹೇಳ್ತಾಳೆ.

    ದೀಪಿಕಾಗೆ ತನ್ನ ಗೆಳೆಯನನ್ನು ಜೋಡಿ ಮಾಡಿದ ಆನಂದ್
    ದೀಪಿಕಾ ಬೇಡ ಎಂದ ಮೇಲೆ ಆನಂದ್, ಆಕೆಗೆ ಒಳ್ಳೆಯ ಹುಡುಗನನ್ನೇ ಮದುವೆ ಮಾಡಬೇಕು ಎಂದು, ತನ್ನ ಆತ್ಮೀಯ ಸ್ನೇಹಿತ ಚಿನ್ಮಯ್‍ನನ್ನು ಮದುವೆ ಮಾಡಿಕೊಳ್ಳುವಂತೆ ಹೇಳುತ್ತಾನೆ. ದೀಪಿಕಾ ಮನೆಯವರು ಸಹ ಒಪ್ಪಿದ್ದಾರೆ. ಮನೆಯವರಿಗಾಗಿ ದೀಪಿಕಾ ಸಹ ಒಪ್ಪಿದ್ದಾಳೆ.

    colors Kannada Serials, Dore Sani serial cast, Dore Sani today episode, interesting letter episode, ದೊರೆಸಾನಿ ಧಾರಾವಾಹಿ, ದೊರೆಸಾನಿಅಭಿಮಾನಿಗಳು, ಕಲರ್ಸ್ ಕನ್ನಡ ಧಾರಾವಾಹಿ, Kannada news, Karnataka news,
    ಚಿನ್ಮಯ್


    ಆನಂದ್ ಜೊತೆ ಮಾತನಾಡಬೇಡ ಎಂದು ಹೇಳಿರುವ ಚಿನ್ಮಯ್
    ಆನಂದ್, ದೀಪಿಕಾ ಮೊದಲು ಲವ್ ಮಾಡ್ತಿದ್ದರು ಎಂದು, ದೀಪಿಕಾ ಮದುವೆಯಾಗುತ್ತಿರುವ ಚಿನ್ಮಯ್‍ಗೆ ಗೊತ್ತಾಗಿದೆ. ಅದೇ ಕಾರಣಕ್ಕೆ ಆನಂದ್ ಜೊತೆ ಮಾತನಾಡಬೇಡಿ ಎಂದು ದೀಪಿಕಾಗೆ ಹೇಳಿದ್ದಾನೆ. ದೀಪಿಕಾ ಸಹ ಖುಷಿಯಾಗಿದ್ದಾಳೆ. ಆದ್ರೆ ದೀಪಿಕಾ ಮಾತು ಬಿಟ್ಟಿರುವುದನ್ನು ಆನಂದ್ ಕೈಯಲ್ಲಿ ಅರಗಿಸಿಕೊಳ್ಳಲು ಆಗುತ್ತಿಲ್ಲ. ಎಷ್ಟೇ ಪ್ರಯತ್ನ ಮಾಡಿದ್ರೂ ದೀಪಿಕಾ ಮಾತನಾಡುತ್ತಿಲ್ಲ. ಮಾತು ಬಿಡಲು ಕಾರಣ ತಿಳಿಯದೇ, ಕಾರಣನಾದ್ರೂ ಹೇಳಿ ಎಂದು ಆನಂದ್ ಕೇಳುತ್ತಿದ್ದಾನೆ.

    ಪತ್ರದ ಸಮೇತ ಆನಂದ್ ಮನೆಗೆ ಬಂದ ದೀಪಿಕಾ
    ಆನಂದ್ ಜೊತೆ ಮಾತು ಬಿಟ್ಟಿರುವ ದೀಪಿಕಾ, ಆತನ ಮನೆಗೆ ಬಂದಿದ್ದಾಳೆ. ದೀಪಿಕಾ ಬಂದಿದ್ದ ನೋಡಿದ ಆನಂದ್ ಖುಷಿಗೆ ಪಾರವೇ ಇಲ್ಲ. ಇದು ಕನಸಲ್ಲಾ ತಾನೇ, ನೀನಾಗಿಯೇ ನಮ್ಮ ಮನೆಗೆ ಬಂದಿದ್ದಿ. ಇವತ್ತು ಎಲ್ಲಾ ಮೀಟಿಂಗ್ ಕ್ಯಾನ್ಸಲ್ ಮಾಡಿ ಮನೆಯಲ್ಲೇ ಇರುತ್ತೇನೆ ಎಂದು ಹೇಳಿ, ತನ್ನ ಮನೆಯ ಕೆಲಸದಾಕೆಗೆ ಸಿಹಿ ಮಾಡಲು ಹೇಳಿದ್ದಾನೆ.

    ಇದನ್ನೂ ಓದಿ: Kannadathi: ಅಮ್ಮಮ್ಮ ಇಲ್ಲದಿರುವಾಗ ಭುಗಿಲೆದ್ದ ಆಸ್ತಿ ವಿವಾದ; ಹರ್ಷ, ಚಿಕ್ಕಪ್ಪನ ನಡುವೆ ಗಲಾಟೆಯಾಗುತ್ತಾ?

    ಲೆಟರ್ ನಲ್ಲಿ ಇದೆ ಮುಖ್ಯ ವಿಷಯ
    ದೀಪಿಕಾ ತನಗೆ ಊಟ ಮಾಡುವಷ್ಟು ಸಮಯ ಇಲ್ಲ. ಒಂದು ಮುಖ್ಯವಾದ ವಿಷಯ ಹೇಳಬೇಕಿತ್ತು ಅಂದಾಗ, ಆನಂದ್ ನೀನು 10 ನಿಮಿಷ ನಿನ್ನ ಸಮಯ ಕೊಟ್ಟರೆ ಅದೇ ನನ್ನ ಭಾಗ್ಯ ಎನ್ನುತ್ತಾನೆ. ಹೋಗಿದ ಜೀವ ವಾಪಸ್ ಬಂದಂತೆ ಆಗಿದೆ. ಈಗಲಾದ್ರೂ ಮನಸಾರೆ ಮಾತಾಡು ಎನ್ನುತ್ತಾನೆ. ಅದಕ್ಕೆ ದೀಪಿಕಾ, ಮಾತನಾಡೋ ಸ್ಥಿತಿಯಲ್ಲಿ ಇಲ್ಲ. ನಾನು ಏನು ಹೇಳಬೇಕೋ, ಅದು ಈ ಲೆಟರ್‍ನಲ್ಲಿ ಇದೆ. ದಯವಿಟ್ಟು ಇದನ್ನು ಓದಿ ಹರಿದು ಹಾಕಿ ಎಂದು ಹೇಳುತ್ತಾಳೆ. ನನ್ನ ಯಾಕಷ್ಟು ದೂರ ಮಾಡಿದೇ, ಏಕೆ ನನ್ನ ಮೇಲೆ ಕೋಪನಾ, ಎರೆಡೆಟು ಹೊಡೆದು ಬಿಡು ಎನ್ನುತ್ತಾನೆ. ಅದಕ್ಕೆ ದೀಪಿಕಾ ಎಲ್ಲದಕ್ಕೂ ಉತ್ತರ ಈ ಲೆಟರ್‍ನಲ್ಲಿದೆ ಎಂದು ಹೇಳಿ, ಆನಂದ್ ಜೀವನದಿಂದ ಹೊರಟು ಹೋಗುತ್ತಾಳೆ.

    ಇದನ್ನೂ ಓದಿ: Puneeth Rajkumar Rakhi: ಅಲ್ಲಿ ನೋಡಿದ್ರೂ ಅಪ್ಪು, ಇಲ್ಲಿ ನೋಡಿದ್ರೂ ಅಪ್ಪು! ಮಾರುಕಟ್ಟೆಗೆ ಬಂದಿವೆ ಪುನೀತ್ ರಾಖಿಗಳು

    ಆನಂದ್ ಮನೆ ಬಳಿ ದೀಪಿಕಾಳನ್ನು ನೋಡಿದ ಚಿನ್ಮಯ್
    ಇನ್ನು ದೀಪಿಕಾ ಪತ್ರ ಕೊಟ್ಟು ಆನಂದ್ ಮನೆಯಿಂದ ಹೊರಡುತ್ತಿದ್ದಾಗ, ಚಿನ್ಮಯ್ ನೋಡಿದ್ದಾನೆ. ಮೊದಲೇ ಇಬ್ಬರ ಮೇಲೆ ಅನುಮಾನ ಇರೋ ಚಿನ್ಮಯ್ ಈಗ ಏನ್ ಮಾಡ್ತಾನೆ. ದೀಪಿಕಾಗೆ ಈ ಬಗ್ಗೆ ಪ್ರಶ್ನೆ ಕೇಳುತ್ತಾನಾ, ಇಲ್ಲ ತನ್ನ ಗೆಳೆಯ ಆನಂದ್ ಬಳಿಯೇ ಹೋಗಿ ಪ್ರಶ್ನೆ ಮಾಡ್ತಾನಾ? ಇಬ್ಬರ ಮದುವೆ ನಡೆಯುತ್ತಾ? ಎಲ್ಲದನ್ನೂ ನೋಡೋಕೆ ಸಂಚಿಕೆ ನೋಡಬೇಕು.
    Published by:Savitha Savitha
    First published: