ಬೆಳಗಾವಿ ಮಿರ್ಚಿ ಲಡ್ಕಿ ಮಯೂರಿ ಜರ್ಮನಿಯಲ್ಲಿ: ಕುಟುಂಬದ ಜೊತೆ ಸುತ್ತುತ್ತಿದ್ದಾರೆ ಗಲ್ಲಿ ಗಲ್ಲಿ..!

news18
Updated:July 7, 2018, 2:20 PM IST
ಬೆಳಗಾವಿ ಮಿರ್ಚಿ ಲಡ್ಕಿ ಮಯೂರಿ ಜರ್ಮನಿಯಲ್ಲಿ: ಕುಟುಂಬದ ಜೊತೆ ಸುತ್ತುತ್ತಿದ್ದಾರೆ ಗಲ್ಲಿ ಗಲ್ಲಿ..!
news18
Updated: July 7, 2018, 2:20 PM IST
ರಕ್ಷಾ ಜಾಸ್ಮೀನ್, ನ್ಯೂಸ್ 18 ಕನ್ನಡ

ನಟ-ನಟಿಯರು ಚಿತ್ರೀಕರಣದಿಂದ ಕೊಂಚ ಬಿಡುವು ಸಿಕ್ಕರೆ ಸಾಕು, ಊರಿಗೆ ಹೋಗಿಬಿಡುತ್ತಾರೆ. ಅದೇ ಸ್ವಲ್ಪ ಕಾಸು ಹಾಗೂ ಸ್ನೇಹಿತರು ಇರುವವರು ವಿದೇಶಕ್ಕೆ ಹಾರಿ, ಅಲ್ಲಿ ಎಂಜಾಯ್ ಮಾಡುತ್ತಾರೆ.

ಇನ್ನು ಕುಟುಂಬದವರೊಂದಿಗೆ  ವಿದೇಶಕ್ಕೆ ಹಾರಿದರೆ, ಖುಷಿ ದುಪ್ಪಟ್ಟು  ಆಗುವುದರಲ್ಲಿ ಅನುಮಾನವೇ ಇಲ್ಲ. ಸದ್ಯ ನಮ್ಮ ಸ್ಯಾಂಡಲ್‍ವುಡ್‍ನ ನಾಟ್ಯ ಮಯೂರಿ ಕೆಲವು ದಿನಗಳಿಂದ ವಿದೇಶದಲ್ಲೇ ಮೊಕ್ಕಾಮು ಹೂಡಿ, ಅಲ್ಲೇ ಆರಾಮಾಗಿ ರೆಕ್ಕೆ ಬಿಚ್ಚಿ ಕುಣಿದು ಕುಪ್ಪಳಿಸುತ್ತಾ ಇದ್ದಾರೆ.

ಇವರ ಕೆನ್ನೆ ಮೇಲೊಂದು ಕಪ್ಪು ಚುಕ್ಕೆ... ಇವರ ಹೆಸರಲ್ಲೇ ಇದೆ ನವಿಲಿನ ಛಾಯೆ... ಅಶ್ವಿನಿ ನಕ್ಷತ್ರದಲ್ಲಿ ಗುರುತಿಸಿಕೊಂಡು ಬೆಳ್ಳಿ ಪರದೆ ಮೇಲೆ 'ಇಷ್ಟಕಾಮ್ಯ' ಪೂರೈಸಿಕೊಂಡ ವಯ್ಯಾರಿ. 'ಕೃಷ್ಣಲೀಲಾ' ಆಗಿ 'ನಟರಾಜ ಸರ್ವೀಸ್‍'ನಲ್ಲಿ ಗೆದ್ದು ಕರಿಯನ ಜತೆ ಜಗಳವಾಡಿದ್ದ ನಟಿಯೇ ನಮ್ಮ ಕನ್ನಡದ ನಾಟ್ಯ ಮಯೂರಿ. ಇವರೆ ನೋಡಿ  ಜರ್ಮನಿಯಲ್ಲಿ ಫುಲ್ ಮಸ್ತಿ ಮಾಡುತ್ತಿದ್ದಾರೆ.

ಸದ್ಯ ತಾನು ಒಪ್ಪಿಕೊಂಡಿದ್ದ ಸಿನಿಮಾಗಳನ್ನ ಮುಗಿಸಿರೋ ಮಯೂರಿ, ತಾಯಿ ಜೊತೆ ಜರ್ಮನಿ ವಿಮಾನ ಹತ್ತಿದ್ದಾರೆ. ಇದೇ ತಿಂಗಳ 11ರಂದು ಮಯೂರಿ ಹುಟ್ಟುಹಬ್ಬ ಇದ್ದು, ಇದರ ಆಚರಣೆಗಾಗಿ ಜರ್ಮನಿಯಲ್ಲಿ ಲ್ಯಾಂಡ್ ಆಗಿದ್ದಾರೆ. ಸತತ ಒಂದು ವಾರದಿಂದ ಜರ್ಮನಿ ಸೇರಿದಂತೆ ಯೂರೋಪ್, ಫ್ರಾಂಕ್‍ಫರ್ಟ್‍ನಲ್ಲಿ ಫುಲ್ ಸುತ್ತುತ್ತಿದ್ದಾರೆ.

 

Loading...Kid in me woke up Wen this happened 🤓 #mommysprincess


A post shared by mayuri (@mayurikyatari) on


ಮಯೂರಿ ಅಕ್ಕ ಮದುವೆಯಾಗಿ ಜರ್ಮನಿಯಲ್ಲಿ ಸೆಟಲ್ ಆಗಿದ್ದು, ಅಕ್ಕ ಭಾವನ ಮನೆಯಲ್ಲೆ ಉಳಿದುಕೊಂಡಿರೋ ಮಯೂರಿ, ಜರ್ಮನಿ ನಗರವನ್ನ ಫುಲ್ ರೌಂಡ್​ ಹಾಕುತ್ತಿದ್ದಾರೆ. ಬೆಳಗ್ಗೆ ಇಂದ ಸಂಜೆವರೆಗೂ ಅಲ್ಲಿನ ಗಲ್ಲಿ ಗಲ್ಲಿಗಳಲ್ಲಿ ಡ್ಯಾನ್ಸ್ ಮಾಡಿಕೊಂಡು, ಬೋಟ್‍ನಲ್ಲಿ ರೌಂಡ್ಸ್ ಹೊಡೆದು, ತನಗಿಷ್ಟದ ಶಾಪಿಂಗ್ ಸ್ಟ್ರೀಟ್‍ನಲ್ಲಿ ಫುಲ್ ಶಾಪಿಂಗ್ ಮಾಡಿಕೊಂಡು ಮಜಾ ಮಾಡುತ್ತಿದ್ದಾರೆ.

ಆದರೂ ಅಭಿಮಾನಿಗಳು ಇಲ್ಲಿ ಮಯೂರಿ ಹುಟ್ಟುಹಬ್ಬವನ್ನ ಆಚರಿಸಲು ಪ್ಲಾನ್ಸ್ ಹಾಕಿಕೊಂಡಿದ್ದರು. ಆದರೆ ಮಯೂರಿ ಮಾತ್ರ ಕೈಗೆಟುಕದಷ್ಟು ದೂರದ ಊರಿನಲ್ಲಿ ಹುಟ್ಟುಹಬ್ಬವನ್ನ ಆಚರಿಸಿಕೊಳುತ್ತಾ ಇದ್ದಾರೆ. ಹೀಗಾಗಿ ಅಭಿಮಾನಗಳು ಇಲ್ಲಿಂದಲೇ ನಾಟ್ಯ ಮಯೂರಿಗೆ ಶುಭಕೋರುವುದು ಉತ್ತಮ.

Busy making memories😘 #germanydiaries Good night people 😘


A post shared by mayuri (@mayurikyatari) onFirst published:July 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ