ಕನ್ನಡದ ಜೊತೆ ಜೊತೆಯಲಿ ಸೀರಿಯಲ್ ಖ್ಯಾತಿಯ ನಟಿ (Megha Shetty) ಮೇಘಾ ಶೆಟ್ಟಿ ಸಿನಿಮಾರಂಗದಲ್ಲೂ ಬೆಳೆಯುತ್ತಿದ್ದಾರೆ. ಸೀರಿಯಲ್ ಖ್ಯಾತಿಯ ಜೊತೆಗೆ ಸಿನಿಮಾ (Cinema Offers) ಆಫರ್ಗಳನ್ನೂ ಒಪ್ಪಿಕೊಂಡಿದ್ದಾರೆ. ಈಗಾಗಲೇ ಅಭಿನಯಿಸಿರೋ ದಿಲ್ಪಸಂದ್, ತ್ರಿಬಲ್ ರೈಡಿಂಗ್ ಸಿನಿಮಾ ರಿಲೀಸ್ ಆಗಿವೆ. ಈಗ ಇನ್ನೂ ಒಂದಷ್ಟು ಸಿನಿಮಾಗಳನ್ನ ಮೇಘಾ ಶೆಟ್ಟಿ ಒಪ್ಪಿಕೊಂಡಿದ್ದಾರೆ. ಅಷ್ಟರಲ್ಲಿಯೇ ಮೇಘಾ ಶೆಟ್ಟಿ ಕನ್ನಡದ ಜೊತೆಗೆ ಮರಾಠಿ (Marathi Cinema) ಇಂಡಸ್ಟ್ರೀಗೂ ಕಾಲಿಟ್ಟಿದ್ದಾರೆ. ಈ ಮೂಲಕ ಮರಾಠಿ ಚಿತ್ರ ಪ್ರೇಮಿಗಳಿಗೂ ಕನ್ನಡದ ಮೇಘಾ ಶೆಟ್ಟಿ ಇಷ್ಟವಾಗಲಿದ್ದಾರೆ. ಅಂದ್ಹಾಗೆ ಆ ಸಿನಿಮಾ (New Cinema) ಯಾವುದು? ಏನ್ ಅದರ ಇತರ ಡಿಟೈಲ್ಸ್.? ಯಾರು ಹೀರೋ, ಮತ್ಯಾರು ಡೈರೆಕ್ಟರ್ ? ಆ ಎಲ್ಲವೂ ಇಲ್ಲಿದೆ ಓದಿ.
ಪುಟ್ಟ ಪರದೆಯಿಂದ ದೊಡ್ಡ ಪರದೆಗೆ ಬಂದ ಮೇಘಾ ಶೆಟ್ಟಿ
ಕನ್ನಡದಲ್ಲಿ ಜೊತೆ ಜೊತೆಯಲಿ ಸೀರಿಯಲ್ ಮೋಡಿ ಇನ್ನೂ ಇದೆ. ಈ ಸೀರಿಯಲ್ನ ಟೈಟಲ್ ಟ್ರ್ಯಾಕ್ ಸೂಪರ್ ಆಗಿಯೇ ಕ್ರೇಜ್ ಕ್ರಿಯೇಟ್ ಮಾಡಿದೆ. ಇದರ ಗುಂಗು ಇನ್ನೂ ಇದೆ. ಅದೇ ಸೀರಿಯಲ್ ಖ್ಯಾತಿಯ ನಟಿ ಮೇಘಾ ಶೆಟ್ಟಿ ಲಕ್ ಚೆನ್ನಾಗಿಯೇ ಇದೆ.
ಮೇಘಾ ಶೆಟ್ಟಿ ಒಂದೇ ಒಂದು ಸೀರಿಯಲ್ ನಿಂದಲೇ ಇಡೀ ಕನ್ನಡ ನಾಡಿಗೆ ಪರಿಚಯ ಆಗಿದ್ದಾರೆ. ಸೀರಿಯಲ್ ಸೂಪರ್ ಹಿಟ್ ಆಗಿದ್ದೇ ತಡ, ಸಿನಿಮಾದವರ ಕಣ್ಣು ಈ ಬೆಡಗಿ ಮೇಲೆ ಬಿದ್ದೇ ಬಿಡ್ತು ನೋಡಿ. ಅದೇ ಕಾರಣಕ್ಕೆ ಈ ಚೆಲುವೆಯನ್ನ ಆಫರ್ಗಳು ಹುಡುಕಿಕೊಂಡು ಬಂದೇ ಬಿಟ್ಟಿವೆ.
ಮೇಘಾ ಶೆಟ್ಟಿ ಅಭಿನಯದ ಎರಡು ಸಿನಿಮಾ ರಿಲೀಸ್
ಮೇಘಾ ಶೆಟ್ಟಿ ಅಭಿನಯದ ಎರಡು ಸಿನಿಮಾ ರಿಲೀಸ್ ಆಗಿವೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಚಿತ್ರ ರಿಲೀಸ್ ಆಗಿದೆ. ಡಾರ್ಲಿಂಗ್ ಕೃಷ್ಣ ಅಭಿನಯದ ದಿಲ್ಪಸಂದ್ ಚಿತ್ರವೂ ಇತ್ತೀಚಿಗೆ ತೆರೆ ಕಂಡಿದೆ.
ಹೀಗೆ ಮೇಘಾ ಶೆಟ್ಟಿ ಬೆಳ್ಳಿ ತೆರೆ ಮೇಲೆ ಮಿಂಚುತ್ತಲೇ ಇದ್ದಾರೆ. ಸಿನಿಮಾ ಮಾಡ್ತಾನೇ ಜೊತೆ ಜೊತೆಯಲಿ ಸೀರಿಯಲ್ ಅನ್ನೂ ಮುಂದುವರೆಸಿದ್ದಾರೆ. ಸೀರಿಯಲ್ ಬಿಡದೇನೆ ಮೇಘಾ ಶೆಟ್ಟಿ ಈಗ ಬಹು ಭಾಷೆಯ ಸಿನಿಮಾವೊಂದನ್ನ ಒಪ್ಪಿಕೊಂಡಿದ್ದಾರೆ
ಮರಾಠಿ ಸೇರಿ ಕನ್ನಡ ಭಾಷೆಯಲ್ಲಿ ಚಿತ್ರ ರಿಲೀಸ್!
ಮೇಘಾ ಶೆಟ್ಟಿ ಅಭಿನಯದ "ಆಪರೇಷನ್ ಲಂಡನ್ ಕೆಫೆ" ಬಹು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರದ ಮೂಲಕ ಮೇಘಾ ಶೆಟ್ಟಿ ಮರಾಠಿ ಇಂಡಸ್ಟ್ರೀಗೂ ಕಾಲಿಡುತ್ತಿದ್ದಾರೆ. ಈ ಚಿತ್ರ ಕನ್ನಡ, ಮರಾಠಿ, ಹಿಂದಿ, ತಮಿಳು, ತೆಲುಗು, ಮಲೆಯಾಳಂ ಭಾಷೆಯಲ್ಲೂ ರಿಲೀಸ್ ಆಗುತ್ತಿದೆ.
"ಆಪರೇಷನ್ ಲಂಡನ್ ಕೆಫೆ" ಸಿನಿಮಾದ ಚಿತ್ರೀಕರಣ ಕೊನೆ ಹಂತದಲ್ಲಿಯೇ ಇದೆ. ಈ ಸಿನಿಮಾ ಬಹು ಭಾಷೆಯಲ್ಲಿ ರೆಡಿ ಆಗ್ತಿರೋದ್ರಿಂದಲೇ ಸಿನಿಮಾ ತಂಡ ಈಗ ಕೊನೆ ಹಂತದ ಸಿನಿಮಾದ ಚಿತ್ರೀಕರಣದ ಕೆಲಸಕ್ಕೆ ಸಜ್ಜಾಗುತ್ತಿದ್ದು, ನಟಿ ಮೇಘಾ ಶೆಟ್ಟಿ ಈ ಸಿನಿಮಾದಲ್ಲಿ ಹಳ್ಳಿ ಹುಡುಗಿಯಾಗಿ ಅಭಿನಯಿಸಿದ್ದಾರೆ.
ಹಳ್ಳಿ ಹುಡುಗಿ ಮೇಘಾ ಶೆಟ್ಟಿ ಜೊತೆಗೆ ಕವೀಶ್ ಶೆಟ್ಟಿ ಜೋಡಿ
"ಆಪರೇಷನ್ ಲಂಡನ್ ಕೆಫೆ" ಈ ಸಿನಿಮಾದಲ್ಲಿ ಯುವ ನಟ ಕವೀಶ್ ಶೆಟ್ಟಿಗೆ ನಟಿ ಮೇಘಾ ಶೆಟ್ಟಿ ಜೋಡಿ ಆಗಿದ್ದಾರೆ. ಇದರ ಜೊತೆಗೆ ಈ ಚಿತ್ರದಲ್ಲಿ ಮರಾಠಿ ಸ್ಟಾರ್ ಕಲಾವಿದ ವಿರಾಟ್ ಮಡಕೆ ಕೂಡ ಅಭಿನಯಸಿದ್ದಾರೆ. ಈಗಾಗಲೇ ಈ ಕಲಾವಿದನ ಪಾತ್ರದ ಪೋಸ್ಟರ್ ಕೂಡ ರಿಲೀಸ್ ಆಗಿದೆ.
ಇದನ್ನೂ ಓದಿ: Sharn Horror Film: ಕನ್ನಡದ ಹಾಸ್ಯ ನಾಯಕ ನಟನ ಹೊಸ ಜರ್ನಿ; ಶರಣ್, ಚಿಕ್ಕಣ್ಣ ಮತ್ತೆ ಜೋಡಿ ಮೋಡಿ!
ಆಪರೇಷನ್ ಲಂಡನ್ ಕೆಫೆ ಚಿತ್ರದ ರಾಘವೇಂದ್ರ ಡೈರೆಕ್ಷನ್ ಮಾಡಿದ್ದಾರೆ. ವಿಶೇಷವಾಗಿ ಈ ಚಿತ್ರವನ್ನ ಭಟ್ಕಳ, ಕಳಸ ಕಾಡು, ಉಡುಪಿ, ಚಿಕ್ಕಮಗಳೂರು, ಬೆಂಗಳೂರುನಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಬಜಾರಿ ಹಳ್ಳಿ ಹುಡುಗಿಯಾಗಿಯೇ ಮೇಘಾ ಶೆಟ್ಟಿ ಇಲ್ಲಿ ಕಾಣಿಸಿಕೊಂಡಿದ್ದಾರೆ. ಮೇಘಾ ಶೆಟ್ಟಿ ಈ ಪಾತ್ರದ ಫೋಟೋಗಳು ಕೂಡ ಈಗಾಗಲೇ ಹೊರ ಬಿದ್ದಿವೆ.
ಆಪರೇಷನ್ ಲಂಡನ್ ಕೆಫೆ ಚಿತ್ರದ ಕೊನೆ ಹಂತದ ಚಿತ್ರೀಕರಣದಲ್ಲಿಯೇ ಇರೋದ್ರಿಂದ ಸಿನಿಮಾವನ್ನ ಮುಂದಿನ ವರ್ಷ ರಿಲೀಸ್ ಮಾಡೋಕೆ ಚಿತ್ರ ತಂಡ ಈಗ ಪ್ಲಾನ್ ಮಾಡಿದ್ದಾರೆ. 2023 ರಲ್ಲಿಯೇ ಆಪರೇಷನ್ ಲಂಡನ್ ಕೆಫೆ ಸಿನಿಮಾ ರಿಲೀಸ್ ಆಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ