ಲಕ್ಷ್ಮೀ ಬಾರಮ್ಮ ಸೀರಿಯಲ್(Serial)ನ ಚಿನ್ನು ಪಾತ್ರಧಾರಿ(Chinnu Character) ಯಾರು ಎಂದರೇ ಇಡೀ ಕರ್ನಾಟವೇ ಉತ್ತರ ನೀಡುತ್ತೆ. ಹೌದು, ಈ ಸೀರಿಯಲ್ ಮೂಲಕ ಕವಿತಾ ಗೌಡ(Kavitha Gowda) ಮನೆ ಮನೆಗೂ ಪರಿಚಯವಾದವರು. ಕಿರುತರೆ ಹಾಗೂ ಕೆಲ ಸಿನಿಮಾದಲ್ಲೂ ಕವಿತಾ ಗೌಡ ಬಣ್ಣ ಹಚ್ಚಿದ್ದಾರೆ. ಕವಿತಾ ಗೌಡ ಎಂಬ ಹೆಸರು ಯಾರಿಗೂ ಅಷ್ಟಾಗಿ ತಿಳಿದಿಲ್ಲ. ಅದೇ ಲಕ್ಷ್ಮಿ ಬಾರಮ್ಮ ಸೀರಿಯಲ್ನ ಚಿನ್ನು ಎಂದರೆ ಎಲ್ಲರಿಗೂ ತಿಳಿಯುತ್ತೆ. ಇದೀಗ ಕವಿತಾ ಗೌಡ ಅಲಿಯಾಸ್ ಚಿನ್ನು ಅವರನ್ನು ಕಿಡ್ನಾಪ್(Kidnap) ಮಾಡಲಾಗಿದೆ. ಹೌದು, ಇದು ನಿಜ ಶಾಪ್ವೊಂದರ ಆಚೆ ಬರುತ್ತಿದ್ದ ಕವಿತಾ ಅವರನ್ನು ಕಿಡ್ನಾಪ್ ಮಾಡಲಾಗಿದೆ. ಸೆಲ್ಫಿ(Selfie) ಕೇಳುವ ನೆಪದಲ್ಲಿ ನಾಲ್ವರು ನಟಿ ಕವಿತಾ ಗೌಡ ಅವರನ್ನು ಕಿಡ್ನಾಪ್ ಮಾಡಿದ್ದಾರೆ. ಕಾರಿ(Car)ನಲ್ಲಿ ಬರುವ ನಾಲ್ವರ ತಂಡ ಸೆಲ್ಫಿಗಾಗಿ ಮನವಿ ಮಾಡುತ್ತಾರೆ ಇದಕ್ಕೆ ಒಪ್ಪುವ ಕವಿತಾ ಕೂಡ ಸೆಲ್ಫಿ ನೀಡುತ್ತಾರೆ. ಹೀಗೆ ಯಾಮಾರಿಸಿ ಕವಿತಾ ಗೌಡ ಅವರನ್ನು ಕಿಡ್ನಾಪ್ ಮಾಡಲಾಗಿದೆ. ಈ ಸುದ್ಧಿ ಇದೀಗ ಎಲ್ಲೆಡೆ ಸದ್ದು ಮಾಡುತ್ತಿದೆ. ಅರೇ ಯಾರದು ಕವಿತಾ ಗೌಡ ಅವರನ್ನು ಕಿಡ್ನಾಪ್ ಮಾಡಿದವರು ಅಂತ ಯೋಚಿಸುತ್ತಿದ್ದೀರಾ? ಹೆಚ್ಚು ಟೆನ್ಶನ್(Tension) ಆಗುವುದು ಬೇಡ. ಕವಿತಾ ಗೌಡ ಅವರನ್ನು ಕಿಡ್ನಾಪ್ ಮಾಡಿದ್ದು, ಬೇರೆ ಯಾರು ಅಲ್ಲ ‘ಗೋವಿಂದ ಗೋವಿಂದ’ ಸಿನಿಮಾ(Movie) ತಂಡದವರೇ. ಗಾಬರಿಯಾಗಬೇಡಿ, ಕವಿತಾ ಗೌಡ ಅಭಿನಯದ 'ಗೋವಿಂದ ಗೋವಿಂದ' ಸಿನಿಮಾದ ಕಿಡ್ನಾಪ್ ಸೀನ್(Kidnap Scene) ಆಗಿದ್ದು, ಈ ದೃಶ್ಯವನ್ನು ಪ್ರಚಾರಕ್ಕಾಗಿ ಚಿತ್ರತಂಡ ಬಳಸಿಕೊಂಡಿದೆ. ಈ ವಿಡಿಯೋ ಇದೀಗ ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ.
ಸಿನಿಮಾದ ಕಿಡ್ನಾಪ್ ದೃಶ್ಯ ಬಳಸಿ ಪ್ರಚಾರ!
ಗೋವಿಂದ ಗೋವಿಂದ ಸಿನಿಮಾದ ದೃಶ್ಯವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ದೃಶ್ಯದಲ್ಲಿ ಕವಿತಾ ಗೌಡ ಅವರನ್ನು ಕಿಡ್ನಾಪ್ ಮಾಡಲಾಗುತ್ತೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಮೊದಲು ಈ ವಿಡಿಯೋ ನೋಡಿದೆವರಲ್ಲ ಕವಿತಾ ಗೌಡ ಅವರನ್ನು ನಿಜವಾಗಿ ಕಿಡ್ನಾಪ್ ಮಾಡಲಾಗಿದೆ ಎಂದುಕೊಂಡಿದ್ದರು. ಆಮೇಲೆ ಸಿನಿಮಾದ ದೃಶ್ಯ ಅಂತ ತಿಳಿದ ಬಳಿಕ ರಿಲ್ಯಾಕ್ಸ್ ಆಗಿದ್ದಾರೆ. ಕೆಲವರು ಇದು ನಿಜವಾಗಿಯೂ ನಡೆದಿದೆ ಎಂದು ಗಾಬರಿಯಾಗಿ ನ್ಯೂಸ್ ಚಾನೆಲ್ಗಳನ್ನ ನೋಡೋಣ ಎಂದು ಟಿವಿ ಕೂಡ ಆನ್ ಮಾಡಿದ್ದಾರೆ.
ಇದನ್ನು ಓದಿ : ಅಪ್ಪು ಕನಸು ನನಸು ಮಾಡುತ್ತಿರೋ ಅಶ್ವಿನಿ: ಪುನೀತ್ ಪತ್ನಿ ಕಡೆಯಿಂದ ಬಿಗ್ ಅನೌನ್ಸ್ಮೆಂಟ್!
ಕಾಮಿಡಿ ಎಂಟರ್ಟೈನ್ಮೆಂಟ್ ಸಿನಿಮಾ ‘ಗೋವಿಂದ ಗೋವಿಂದ’!
ನವೆಂಬರ್ 26ಕ್ಕೆ ಸಿನಿಮಾ ರಿಲೀಸ್!
ಸುಮಂತ್ ಶೈಲೇಂದ್ರ ಬಾಬು ಮತ್ತು ಭಾವನಾ ಮೆನನ್ ನಟಿಸಿರುವ ಈ ಚಿತ್ರದಲ್ಲಿ ಕವಿತಾ ಗೌಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನವೆಂಬರ್ 26ರಂದು ಸಿನಿಮಾ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಈ ಚಿತ್ರವನ್ನು ಮೂರು ಭಾಷೆಗಳಲ್ಲಿ ರಿಲೀಸ್ ಮಾಡಲಾಗುತ್ತಿದೆ. ಸಿನಿಮಾದಲ್ಲಿ ಕವಿತಾಗೌಡ ಜೊತೆ ಭಾವನ ಮೆನನ್, ರೂಪೇಶ್ ಶೆಟ್ಟಿ, ಪವನ್ ಕುಮಾರ್, ವಿಜಯ್ ಚೆಂಡೂರ್, ಅಚ್ಯುತ್ ಕುಮಾರ್, ವಿ.ಮನೋಹರ್, ಕೆ ಮಂಜು, ಕಡ್ಡಿಪುಡಿ ಚಂದ್ರು, ಪದ್ಮಾ ವಾಸಂತಿ ಸೇರಿದಂತೆ ಹಲವರು ಪಾತ್ರವರ್ಗದಲ್ಲಿದ್ದಾರೆ. ದೇವ್ ರಂಗಭೂಮಿ ಕಥೆ-ಚಿತ್ರಕಥೆ- ಸಂಭಾಷಣೆ ಬರೆದಿದ್ದು, ಕೆ ಎಸ್ ಚಂದ್ರಶೇಖರ್ ಛಾಯಗ್ರಹಣ, ರವಿಚಂದ್ರನ್ ಸಂಕಲನ, ಪ್ರಕಾಶ್ ಪುಟ್ಟಸ್ವಾಮಿ ಕಲಾ ನಿರ್ದೇಶನ ಮತ್ತು ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಸಿನಿಮಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ