Kannada Serial: ಮಂಗಳಗೌರಿ ಮದುವೆ ಧಾರವಾಹಿಯ ಪೊಲೀಸ್​ ಪಾತ್ರಧಾರಿ ನಟ ಚಿನ್ನಪ್ಪ ‘ರಾಜೀನಾಮೆ’..!

Kannada Serial: 'ಮಂಗಳಗೌರಿ ಮದುವೆ' ಧಾರಾವಾಹಿಯಿಂದ ನಟ ಗಗನ್​ ಚಿನ್ನಪ್ಪ(Gagan Chinappa) ಹೊರಬಿದ್ದಿದ್ದಾರೆ. ಕನ್ನಡದ ಟಾಪ್ 5 ಧಾರಾವಾಹಿಗಳಲ್ಲಿ 'ಮಂಗಳಗೌರಿ ಮದುವೆ' ಕೂಡ ಒಂದು. ಸ್ವತಃ ಗಗನ್ ಚಿನ್ನಪ್ಪ ಅವರೇ ಈ ವಿಷಯವನ್ನು ಅಧಿಕೃತಪಡಿಸಿದ್ದಾರೆ

ಮಂಗಳ ಗೌರಿ ಮದುವೆ ಧಾರಾವಾಹಿ

ಮಂಗಳ ಗೌರಿ ಮದುವೆ ಧಾರಾವಾಹಿ

  • Share this:
ಯಾರ ಮನೆಯಲ್ಲಿ ನೋಡಿದರೂ ಕನ್ನಡ ಸೀರಿಯಲ್(Kannada Serials)​ಗಳ ಅಬ್ಬರ. ಆ ಸೀರಿಯಲ್​ನಲ್ಲಿ ಹೀಗಾಯ್ತಂತೆ.. ಈ ಸೀರಿಯಲ್​ನಲ್ಲಿ ಹೀಗಾಯ್ತಂತೆ ಅಂತ ಹೇಳುವುದನ್ನು ಕೇಳಿದ್ದೇವೆ. ಧಾರವಾಹಿಗಳ ಪಾತ್ರಗಳು ಜನಸಾಮನ್ಯರು ಜೀವನಕ್ಕೆ ಹತ್ತಿರವಾಗಿರುತ್ತವೆ. ಹೀಗಾಗಿ ಸೀರಿಯಲ್​​ನಲ್ಲಿ ಬರುವ ಕೆಲವ ಪಾತ್ರ(Character)ಗಳನ್ನು ಜನ ನಮ್ಮವರೆಂದು ಭಾವಿಸುರುತ್ತಾರೆ. ಒಂದೆರೆಡು ಎಪಿಸೋಡ್​ಗಳಲ್ಲಿ ಆ ಪಾತ್ರಗಳು ಕಾಣಿಸಿದಿದ್ದರೆ ಬೇಜಾರು ಮಾಡಿಕೊಳ್ಳುತ್ತಾರೆ. ಇದೀಗ ಕನ್ನಡ ಕಿರತೆರೆ ಸೂಪರ್​ ಹಿಟ್​ ಧಾರಾವಾಹಿ ಮಂಗಳಗೌರಿ(Managala Gowri) ತಂಡದಿಂದ ಒಂದು ಬ್ಯಾಡ್​ ನ್ಯೂಸ್(Bad News)​​ ಬಂದಿದೆ. ಅದೆನಪ್ಪ ಅಂದರೆ 'ಮಂಗಳಗೌರಿ ಮದುವೆ' ಧಾರಾವಾಹಿಯಿಂದ ನಟ ಗಗನ್​ ಚಿನ್ನಪ್ಪ(Gagan Chinappa) ಹೊರಬಿದ್ದಿದ್ದಾರೆ. ಕನ್ನಡದ ಟಾಪ್ 5 ಧಾರಾವಾಹಿಗಳಲ್ಲಿ 'ಮಂಗಳಗೌರಿ ಮದುವೆ' ಕೂಡ ಒಂದು. ಸ್ವತಃ ಗಗನ್ ಚಿನ್ನಪ್ಪ ಅವರೇ ಈ ವಿಷಯವನ್ನು ಅಧಿಕೃತಪಡಿಸಿದ್ದಾರೆ. ಈ ಧಾರಾವಾಹಿಯಲ್ಲಿ ಅವರು ನಾಯಕನ ಪಾತ್ರ ಮಾಡಿದ್ದರು. ಖಡಕ್​ ಪೊಲೀಸ್​ ಅಧಿಕಾರಿ(Police Officer)ಯ ಪಾತ್ರದಲ್ಲಿ ಗಗನ್​ ಕಾಣಿಸಿಕೊಂಡಿದ್ದರು. ಈ ಪಾತ್ರ ಜನರಿಗೆ ಬಹಳ ಅಚ್ಚುಮೆಚ್ಚು. ಈ ಪಾತ್ರದಲ್ಲಿ ಕರುನಾಡಿಗೆ ಗಗನ್​ ಚಿನ್ನಪ್ಪ ಪರಿಚಯವಾಗಿದ್ದರು. ಆದರೆ ಹೀಗೆ ಏಕಾಏಕಿ ಧಾರಾವಾಹಿಯಿಂದ ಹೊರ ನಡೆದಿರುವುದು ಆ ಸೀರಿಯಲ್​ ಪ್ರೇಮಿಗಳಿಗೆ ಬೇಸರ ತರಿಸಿದೆ.

ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಗಗನ್ ಚಿನ್ನಪ್ಪ
'ಮಂಗಳಗೌರಿ ಮದುವೆ' ಧಾರಾವಾಹಿಯಲ್ಲಿ ಪೊಲೀಸ್ ಅಧಿಕಾರಿ ರಾಜೀವ್ ಪಾತ್ರದಲ್ಲಿ ಗಗನ್ ನಟಿಸುತ್ತಿದ್ದರು. ಕೆಲ ವರ್ಷಗಳಿಂದ ಅವರು ಈ ಧಾರಾವಾಹಿಯಲ್ಲಿ ಭಾಗಿಯಾಗಿದ್ದರು. ಗಗನ್ ಧಾರಾವಾಹಿಯಿಂದ ಹೊರಬಿದ್ದಿರೋದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಅಷ್ಟೇ ಅಲ್ಲದೇ ಪುಟ್ಟ ಗೌರಿ ಸೀರಿಯಲ್​ ನಂತರ ಮಂಗಳ ಗೌರಿ ಧಾರಾವಾಹಿ ಜನರಿಗೆ ಹತ್ತಿರವಾಗಿತ್ತು. ಪುಟ್ಟ ಗೌರಿ ಧಾರಾವಾಹಿ ಕೆಲ ಅಂಶಗಳನ್ನು ಇಟ್ಟುಕೊಂಡು ಮಂಗಳ ಗೌರಿ ಸೀರಿಯಲ್​ ಶುರುವಾಗಿತ್ತು. ಗಗನ್​ ಚಿನ್ನಪ್ಪ ಅವರ ನಟನೆಯೂ ಈ ಧಾರಾವಾಹಿ ಇಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಲು ಸಾಧ್ಯವಾಗಿತ್ತು. ಆದರೆ ಈ ರೀತಿ ಏಕಾಏಕಿ ಸೀರಿಯಲ್​ ಬಿಡಲು ಕಾರಣವೇನು ಅಂತಲೂ ಗಗನ್​ ಹೇಳಿದ್ದಾರೆ.

ಮಂಗಳ ಗೌರಿ ಸೀರಿಯಲ್​ ಬಿಡಲು ಕಾರಣ ಕೊಟ್ಟ ಗಗನ್​!

ಗಗನ್ ಚಿನ್ನಪ್ಪ "ನಾನು ಧಾರಾವಾಹಿಯಿಂದ ಹೊರನಡೆದಿರೋದು ಸತ್ಯ. ನನಗೆ ಒಂದು ಬದಲಾವಣೆ ಬೇಕಿತ್ತು. ಹೀಗಾಗಿ ಈ ನಿರ್ಧಾರ ಮಾಡಿದೆ. ಸದ್ಯ ಯಾವುದೇ ಧಾರಾವಾಹಿಯನ್ನು ಒಪ್ಪಿಕೊಂಡಿಲ್ಲ. ನನ್ನ ಬಳಿ ಈಗ ಮೂರು ಸಿನಿಮಾಗಳಿವೆ. ಅದರ ಕಡೆಗೆ ಗಮನ ಕೊಡಬೇಕಿದೆ. ಎಲ್ಲವೂ ಫೈನಲ್ ಆದನಂತರದಲ್ಲಿ ನಾನು ಹೆಚ್ಚಿನ ಮಾಹಿತಿ ನೀಡುವೆ" ಎಂದು ಹೇಳಿದ್ದಾರೆ

ಇದನ್ನು ಓದಿ :  ಡಿ. 2ರಂದು ಕಿರುತೆರೆ ಸ್ಟಾರ್​ ಕಾವ್ಯ ಗೌಡ ಮದುವೆ, ಸಿದ್ಧತೆ ನೋಡಿ ಭರ್ಜರಿಯಾಗಿದೆ..!

ಬಿಗ್ ಬಾಸ್ ಮಿನಿ ಸೀಸನ್‌ನಲ್ಲಿ ಮಿಂಚಿದ್ದ ಗಗನ್​!

ಗಗನ್ ಚಿನ್ನಪ್ಪ ಅವರಿಗೆ ಸಿನಿಮಾ ಮಾಡಬೇಕು ಎನ್ನೋದು ಅನೇಕ ವರ್ಷಗಳ ಕನಸು. ಈ ಹಿಂದೆಯೇ ಕೂಡ ನಟಿಸುವ ಆಸೆ ಹೊರಹಾಕಿದ್ದರು, ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿರುವುದಕ್ಕಾಗಿ ಹೇಳಿದ್ದರು. ಬಿಗ್ ಬಾಸ್ ಮಿನಿ ಸೀಸನ್‌ನಲ್ಲಿಯೂ ಗಗನ್ ಚಿನ್ನಪ್ಪ ಭಾಗವಹಿಸಿ, ಉತ್ತಮ ಆಟ ಪ್ರದರ್ಶನ ತೋರಿಸಿದ್ದರು. ಬಿಗ್​ ಬಾಸ್​ ಮಿನಿ ಶೋನಲ್ಲೂ ಅದ್ಬುತ ಪರ್ಫಾಮೆನ್ಸ್​ ನೀಡಿ ಮೆಚ್ಚುಗೆ ಗಳಸಿಕೊಂಡಿದ್ದರು. ತುಂಬಾ ಜನ ಕಿರುತೆರೆಯಲ್ಲಿ ಸ್ಟಾರ್​ ಆಗುತ್ತಿದ್ದಂತ ಬೆಳ್ಳಿತೆರೆಗೆ ಜೀಗಿಯುತ್ತಾರೆ. ಕಿರುತೆರೆಯಲ್ಲಿ ಹೆಸರು ಬರುತ್ತಿದ್ದಂತೆ ಸಿನಿಮಾ ಮಾಡಲು ಸೀರಿಯಲ್​ ಬಿಟ್ಟು ಹೋಗಿರುವುದನ್ನು ನಾವು ನೋಡಿದ್ದೇವೆ.

ಇದನ್ನು ಓದಿ : ಕಿರುತೆರೆ ಸ್ಟಾರ್​ ನಟಿ ಕವಿತಾ ಗೌಡ @ ಚಿನ್ನು ಕಿಡ್ನಾಪ್​, ಅಪಹರಣದ ದೃಶ್ಯ ಇಲ್ಲಿದೆ ನೋಡಿ..

ಗಗನ್ ಚಿನ್ನಪ್ಪ ಕೊಡಗಿನವರಾಗಿದ್ದು. ಅವರ ತಂದೆಗೆ ಪಿತ್ರಾರ್ಜಿತ ಆಸ್ತಿ ಕೂಡ ಇದೆ. ಅದನ್ನು ನೋಡಿಕೊಂಡು ಕೃಷಿ ಮಾಡಬೇಕು ಎಂಬುದು ಗಗನ್ ಆಸೆ. ಚಿಕ್ಕ ವಯಸ್ಸಿನಿಂದಲೂ ಕೃಷಿ ಮಾಡಬೇಕು ಎಂದು ಗಗನ್ ಆಸೆ ಇಟ್ಟುಕೊಂಡಿದ್ದಾರಂತೆ.
Published by:Vasudeva M
First published: