Breaking News: ಕನ್ನಡ ಕಿರುತೆರೆ ನಟ ಚಂದನ್‌ಗೆ ಕಪಾಳಮೋಕ್ಷ! ತೆಲುಗು ಧಾರಾವಾಹಿ ಶೂಟಿಂಗ್ ಸೆಟ್‌ನಲ್ಲಿ ಕಿರಿಕ್

ಹೈದ್ರಾಬಾದ್‌ನಲ್ಲಿ ಸಾವಿತ್ರಮ್ಮಗಾರು ಅಬ್ಬಾಯಿ ಧಾರಾವಾಹಿಯ ಶೂಟಿಂಗ್ ನಡೆಯುತ್ತಾ ಇತ್ತು. ಈಗಾಗಲೇ ಜನಮನ ಸೆಳೆದ ಈ ಧಾರಾವಾಹಿಯಲ್ಲಿ ಚಂದನ್ ಕುಮಾರ್ ಅವ್ರೇ ಮುಖ್ಯ ಪಾತ್ರ ನಿರ್ವಹಿಸುತ್ತಾ ಇದ್ದರು. ಶೂಟಿಂಗ್ ವೇಳೆ ಅಲ್ಲಿನ ಕ್ಯಾಮೆರಾಮೆನ್ ಹಾಗೂ ತಂತ್ರಜ್ಞರ ಜೊತೆ ಚಂದನ್ ಕುಮಾರ್ ಕಿರಿಕ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಕಿರುತೆರೆ ನಟ ಚಂದನ್ ಕುಮಾರ್

ಕಿರುತೆರೆ ನಟ ಚಂದನ್ ಕುಮಾರ್

  • Share this:
ಹೈದ್ರಾಬಾದ್: ಕನ್ನಡ ಕಿರುತೆರೆಯ (Kannada Serials) ಖ್ಯಾತ ನಟ (Actor) ಚಂದನ್ ಕುಮಾರ್ (Chandan Kumar) ಮೇಲೆ ಹಲ್ಲೆ (Attack) ನಡೆದಿದೆ. ಕನ್ನಡ ಕಿರುತೆರೆ ಜೊತೆಗೆ ಹಿರಿ ತೆರೆಯಲ್ಲೂ (Cinema) ಚಂದನ್ ಬ್ಯುಸಿ ಇದ್ದರು. ಅತ್ತ ತೆಲುಗು ಧಾರಾವಾಹಿಗಳಲ್ಲೂ (Telugu Serials) ನಟಿಸುತ್ತಾ ಆಂಧ್ರ ಪ್ರದೇಶ (Andhra Pradesh), ತೆಲಂಗಾಣ (Telangana) ಜನರ ಮನ ಗೆದ್ದಿದ್ದರು. ಇದೀಗ ತೆಲುಗು ಧಾರಾವಾಹಿಯೊಂದರ ಚಿತ್ರೀಕರಣದ (Shooting) ವೇಳೆ ಚಂದನ್ ಮೇಲೆ ಹಲ್ಲೆ ನಡೆಸಲಾಗಿದೆ. ತೆಲುಗಿನ ಜನಪ್ರಿಯ ಧಾರಾವಾಹಿ ಸಾವಿತ್ರಮ್ಮಗಾರು ಅಬ್ಬಾಯಿ (Svithrammagari Abbayi) ಶೂಟಿಂಗ್ ಸೆಟ್‌ನಲ್ಲಿ ಹಲ್ಲೆ ನಡೆದಿದೆ ಎನ್ನಲಾಗಿದೆ. ಕಳೆದ ಒಂದು ತಿಂಗಳ ಹಿಂದೆ ಹಲ್ಲೆ ನಡೆದಿದ್ದು, ಇದೀಗ ಜಟಾಪಟಿಯ ವಿಡಿಯೋ ವೈರಲ್ (Video Viral) ಆಗಿದೆ.



ಹೈದ್ರಾಬಾದ್‌ನಲ್ಲಿ ಚಿತ್ರೀಕರಣದ ವೇಳೆ ಕಿರಿಕ್

ಹೈದ್ರಾಬಾದ್‌ನಲ್ಲಿ ಸಾವಿತ್ರಮ್ಮಗಾರು ಅಬ್ಬಾಯಿ ಧಾರಾವಾಹಿಯ ಶೂಟಿಂಗ್ ನಡೆಯುತ್ತಾ ಇತ್ತು. ಈಗಾಗಲೇ ಜನಮನ ಸೆಳೆದ ಈ ಧಾರಾವಾಹಿಯಲ್ಲಿ ಚಂದನ್ ಕುಮಾರ್ ಅವ್ರೇ ಮುಖ್ಯ ಪಾತ್ರ ನಿರ್ವಹಿಸುತ್ತಾ ಇದ್ದರು. ಶೂಟಿಂಗ್ ವೇಳೆ ಅಲ್ಲಿನ ಕ್ಯಾಮೆರಾಮೆನ್ ಹಾಗೂ ತಂತ್ರಜ್ಞರ ಜೊತೆ ಚಂದನ್ ಕುಮಾರ್ ಕಿರಿಕ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

'ಸಾವಿತ್ರಮ್ಮಗಾರಿ ಅಬ್ಬಾಯಿ' ಧಾರಾವಾಹಿ


ನಟ ಚಂದನ್‌ಗೆ ಕಪಾಳಮೋಕ್ಷ

ಧಾರಾವಾಹಿ ಸೆಟ್‌ನಲ್ಲಿ ಚಂದನ್ ಕುಮಾರ್ ಅವರೇ ಕ್ಯಾಮೆರಾ ಅಸಿಸ್ಟೆಂಟ್‌ ಮೇಲೆ ಮೊದಲು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಜಗಳ ಆಗಿದೆ. ಈ ವೇಳೆ ತಂತ್ರಜ್ಞರು ಮಾತಿಗೆ ಮಾತು ಬೆಳೆಸಿದ್ದು, ತಂತ್ರಜ್ಞರೊಬ್ಬರು ಚಂದನ್‌ಗೆ ಕಪಾಳ ಮೋಕ್ಷ ಮಾಡಿದ್ದಾರೆ.

ಹಿಂದೆ ಹಲ್ಲೆ ಮಾಡಿದ್ದರಾ ಚಂದನ್?

ಚಂದನ್ ಈ ಹಿಂದೆಯೂ ಕಿರಿಕ್ ಮಾಡಿಕೊಂಡಿದ್ದರು ಎನ್ನಲಾಗಿದೆ. ಅದೇ ಕ್ಯಾಮರಾಮೆನ್‌ ಅಸ್ಟಿಸ್ಟೆಂಟ್‌ ಜೊತೆ ಕಿತ್ತಾಡಿಕೊಂಡು, ಹೊಡೆದಿದ್ದರು ಎನ್ನಲಾಗುತ್ತಿದೆ. ಅದೇ ವಿಚಾರಕ್ಕೆ ಮತ್ತೆ ಗಲಾಟೆ ನಡೆದು ಚಂದನ್ ಮೇಲೆ ಹಲ್ಲೆ ನಡೆದಿದೆ ಅಂತ ಹೇಳಲಾಗುತ್ತಿದೆ. ಈ ಘಟನೆ ಹೈದ್ರಾಬಾದ್‌ನಲ್ಲಿ ಶೂಟಿಂಗ್ ವೇಳೆ ತಿಂಗಳ ಹಿಂದೆ ನಡೆದಿದೆ ಎನ್ನಲಾಗಿದ್ದು, ಇದೀಗ ವೈರಲ್ ಆಗಿದೆ.

ಇದನ್ನೂ ಓದಿ: Actress Navya Rao: ತೆಲುಗಿನಲ್ಲಿ ಬ್ಯುಸಿ ಇದ್ದಾರೆ ನವ್ಯಾ ರಾವ್, ಕನ್ನಡಕ್ಕೆ ಯಾವಾಗ ಬರ್ತೀರಾ ಎಂದ ಫ್ಯಾನ್ಸ್

 ಲಕ್ಷ್ಮೀ ಬಾರಮ್ಮ ಧಾರಾವಾಹಿಯಿಂದ ಖ್ಯಾತಿ ಗಳಿಸಿದ ನಟ

ಚಂದನ್ ಈ ಹಿಂದೆ ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ ಕರ್ನಾಟಕದ ಮನೆ ಮಾತಾಗಿದ್ದರು. ಬಳಿಕ 'ರಾಧಾ ಕಲ್ಯಾಣ', 'ಲಕ್ಷ್ಮೀ ಬಾರಮ್ಮ', 'ಸರ್ವ ಮಂಗಳ ಮಾಂಗಲ್ಯೇ' ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದರು. ಸದ್ಯ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಮರಳಿ ಮನಸ್ಸಾಗಿದೆ ಎಂಬ ಧಾರಾವಾಹಿಯಲ್ಲಿ ಚಂದನ್ ಕುಮಾರ್ ನಟಿಸುತ್ತಿದ್ದಾರೆ.

ಹೋಟೆಲ್‌ ಕೂಡ ನಡೆಸುತ್ತಿರುವ ಚಂದನ್

ಸದ್ಯ ಧಾರಾವಾಹಿಗಳ ಶೂಟಿಂಗ್ ಜೊತೆಗೆ ಚಂದನ್ ಕುಮಾರ್ ಒಡೆತನದ ಹೋಟೆಲ್ ಕೂಡ ಇದೆ., ಇದರ ಜೊತೆಗೆ ಪ್ರೋಟೀನ್ ಅಂಗಡಿ ಕೂಡ ಇದೆ. ಹೀಗಾಗಿ ಚಂದನ್ ಕುಮಾರ್ ಸಖತ್ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ: Jote Joteyali Serial: ಗೆಳೆಯ ಜೇಂಡೆಯಿಂದ ಅಪಾಯದಲ್ಲಿ ಆರ್ಯವರ್ಧನ್? ಮುಂದಿದೆ ಬಿಗ್ ಟ್ವಿಸ್ಟ್

ತೆಲುಗಿನಲ್ಲಿ ಚಂದನ್ ಕುಮಾರ್ ಫುಲ್ ಬ್ಯುಸಿ

ಇನ್ನು ತೆಲುಗು ಕಿರುತೆರೆಗೂ ಜಿಗಿದಿರುವ ಚಂದನ್, ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸಾವಿತ್ರಮ್ಮಗಾರಿ ಅಬ್ಬಾಯಿ' ಧಾರಾವಾಹಿಯ ಮುಖ್ಯಭೂಮಿಕೆಯಲ್ಲಿ ಮಿಂಚುತ್ತಿದ್ದಾರೆ. ಕಾಕತಾಳೀಯ ಅಂದ್ರೆ, 'ಸಾವಿತ್ರಮ್ಮಗಾರಿ ಅಬ್ಬಾಯಿ' ಸೀರಿಯಲ್ ನಲ್ಲೂ ''ಎರಡನೇ ಮದುವೆ'' ಕಾನ್ಸೆಪ್ಟ್ ಇದೆ. ಈ ಬಗ್ಗೆ ಚಂದನ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. ಒಟ್ನಲ್ಲಿ, ಕನ್ನಡ ಮತ್ತು ತೆಲುಗಿನ ಸೀರಿಯಲ್ ಗಳಲ್ಲಿ ಬಿಜಿಯಾಗಿರುವ ಚಂದನ್ ಸದ್ಯ ಯಾವುದೇ ಸಿನಿಮಾ ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ ಎನ್ನಲಾಗಿದೆ.
Published by:Annappa Achari
First published: