ಏಪ್ರಿಲ್ ಫೂಲ್ ಅಲ್ಲಾ! ನಾಳೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ ಕನ್ನಡ ಕಿರುತೆರೆಯ ಈ ಕ್ಯೂಟ್ ಜೋಡಿ

ಚಂದನ್​ ಹಾಗೂ ಕವಿತಾ ಗೌಡ ಈ ಮೊದಲು ಸಾಮಾಜಿಕ ಜಾಲತಾಣದಲ್ಲಿ ಒಟ್ಟಿಗೆ ಇರುವ ಫೋಟೋಗಳನ್ನು ಅಪ್ಲೋಡ್​ ಮಾಡುತ್ತಿದ್ದರು. ಹಾಗಾಗಿ ಅಭಿಮಾನಿಗಳಿಗೆ ಇವರಿಬ್ಬರ ನಡುವೆ ಪ್ರೀತಿ ಚಿಗುರಿದೆ ಎಂಬ ಅನುಮಾನ ಹುಟ್ಟಿಕೊಂಡಿತ್ತು.

ನಟ ಚಂದನ್​ - ನಟಿ ಕವಿತಾ ಗೌಡ

ನಟ ಚಂದನ್​ - ನಟಿ ಕವಿತಾ ಗೌಡ

 • Share this:
  ಕಿರುತೆರೆಯ ಕ್ಯೂಟ್​​ ಕಪಲ್​ ಎನಿಸಿರುವ ನಟ ಚಂದನ್​ ಹಾಗೂ ನಟಿ ಕವಿತಾ ಗೌಡ ಒಬ್ಬರನೊಬ್ಬರು ಪ್ರೀತಿಸಿಸುತ್ತಿದ್ದು, ಇದೀಗ ಈ ಜೋಡಿ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಏಪ್ರಿಲ್​ 1 ರಂದು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ.

  ಚಂದನ್​ ಹಾಗೂ ಕವಿತಾ ಗೌಡ ಈ ಮೊದಲು ಸಾಮಾಜಿಕ ಜಾಲತಾಣದಲ್ಲಿ ಒಟ್ಟಿಗೆ ಇರುವ ಫೋಟೋಗಳನ್ನು ಅಪ್ಲೋಡ್​ ಮಾಡುತ್ತಿದ್ದರು. ಹಾಗಾಗಿ ಅಭಿಮಾನಿಗಳಿಗೆ ಇವರಿಬ್ಬರ ನಡುವೆ ಪ್ರೀತಿ ಚಿಗುರಿದೆ ಎಂಬ ಅನುಮಾನ ಹುಟ್ಟಿಕೊಂಡಿತ್ತು. ಆದರೆ ಈ ಜೋಡಿ ಮಾತ್ರ ಎಲ್ಲೂ ತಮ್ಮ ಪ್ರೀತಿಯ ಬಗ್ಗೆ ಹೇಳಿಕೊಂಡಿರಲಿಲ್ಲ. ಆದರೀಗ ಮದುವೆಗೂ ಮುನ್ನ ತಮ್ಮ ಪ್ರೀತಿಯ ಬಗ್ಗೆ ಗುಟ್ಟು ಬಿಚ್ಚಿಟ್ಟಿದ್ದಾರೆ. ಅಭಿಮಾನಿಗಳಂತೂ ತಾವಂದುಕೊಂಡಿದ್ದ ಊಹೆ ಸರಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

  ಚಂದನ್​ ಮತ್ತು ಕವಿತಾ ‘ಲಕ್ಷ್ಮೀ ಬಾರಮ್ಮ’ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದರು. ಆ ಬಳಿಕೆ ಸ್ನೇಹವಾಗಿ ನಂತರ ಅದು ಪ್ರೀತಿಗೆ ತಿರುಗಿದೆ ಎನ್ನಲಾಗುತ್ತಿದೆ. ಇನ್ನು ಚಂದನ್​ ಹಾಗೂ ಕವಿತಾ ಬಿಗ್​ ಬಾಸ್​ ವೇದಿಕೆ ಮೇಲೂ ಕಾಣಿಸಿಕೊಂಡಿದ್ದರು. ಬಿಗ್​ ಬಾಸ್​ ಸೀಸನ್​ 3ನಲ್ಲಿ ಚಂದನ್​ ಗುರುತಿಸಿಕೊಂಡಿದ್ದರೆ, ಅಷ್ಟು ಮಾತ್ರವಲ್ಲದೆ, ಲೈಫ್​ ಇಷ್ಟೇನೆ, ಪರಿಣಯ, ಎರಡೊಂದ್ಲ ಮೂರು, ಲವ್​ ಯೂ ಆಲಿಯಾ ಸಿನಿಮಾದಲ್ಲಿ ನಟಿಸಿದ್ದರು.

  ಇನ್ನು ಕವಿತಾ ಗೌಡ ಬಿಗ್​ ಬಾಸ್​ 5ರಲ್ಲಿ ಭಾಗವಹಿಸಿದ್ದರು. ಆ ವೇಳೆ ಮತ್ತೋರ್ವ ಸ್ಪರ್ಧಿ ಶಶಿ ಮತ್ತು ಕವಿತಾ ಗೌಡ ನಡುವೆ ಪ್ರೀತಿ ಇದೆ ಎಂಬ ಗಾಳಿಸುದ್ದಿ ಹರಿದಾಡಿತ್ತು.

  ಈ ಜೋಡಿ ಒಟ್ಟಿಗೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಅನೇಕ ಇವೆ. ಆದರೂ ಇವರಿಬ್ಬರ ನಡುವಿನ ಪ್ರೀತಿಯ ಬಗ್ಗೆ ಅಭಿಮಾನಿಗಳೊಂದಿಗೆ ಹೇಳಿಕೊಂಡಿರಲಿಲ್ಲ. ಆದರೀಗ ಈ ವಿಚಾರ ತಿಳಿದು ಅಭಿಮಾನಿಗಳು ‘ಬೇಗನೆ ಮದುವೆ ಆಗಿ’ ಎಂದು ಹಾರೈಸುತ್ತಿದ್ದಾರೆ.


  ಕಳೆದ ವರ್ಷ ಕೊರೋನಾ ಲಾಕ್​ಡೌನ್​ ಸಮಯದಲ್ಲಿ ಕವಿತಾ(ಜು.26) ಅವರ ಹುಟ್ಟುಹಬ್ಬವಿತ್ತು. ಲಾಕ್​ಡೌನ್​ ನಿಯಮ ಜಾರಿಗೆ ಬಂದಿದ್ದರಿಂದ ಗೆಳೆಯರೊಂದಿಗೆ ಸಿಂಪಲ್ಲಾಗಿ ಜನ್ಮದಿನ ಆಚರಿಸಿದ್ದರು. ಈ ವೇಳೆ ಚಂದನ್​ ಕುಮಾರ್​ ಅವರು ಮಧ್ಯರಾತ್ರಿ ಆಕೆಯ ಮನೆಗೆ ಬಂದು ಸರ್ಪ್ರೈಸ್​ ನೀಡಿದ್ದರು.

  ಲಾಕ್​ಡೌನ್​ ಸಡಿಲಿಕೆಯ ಬಳಿಕ ಈ ಜೋಡಿ ಸ್ನೇಹಿತರೆಲ್ಲರ ಜೊತೆಗೂಡಿ ಪ್ರವಾಸ ಮಾಡಿದ್ದರು. ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.


  ಇದೀಗ  ಕ್ಯೂಟ್​ ಕಪಲ್​ ಹಸೆಮಣೆ ಏರಲು ಸಿದ್ದರಾಗಿದ್ದಾರೆ. ಅಭಿಮಾನಿಗಳಿಗಂತೂ ಈ ವಿಚಾರ ಸಂಸತವನ್ನು ನೀಡಿದೆ.
  Published by:Harshith AS
  First published: