ಕನ್ನಡದ ರಜಿಯಾ ರಾಮ್ (Razia Ram) ಸೀರಿಯಲ್ ವಿಶೇಷವಾಗಿಯೇ ಇದೆ. ಈ ಸೀರಿಯಲ್ ಕಥೆ ಈಗಾಗಲೇ ಜನರನ್ನ ಸೆಳೆಯುತ್ತಲೇ ಇದೆ. ಧರ್ಮವನ್ನೂ ಮೀರಿದ ಪ್ರೇಮ ಕಥೆ ಅನ್ನೋದು ಈ ಧಾರವಾಹಿಯ (Serial Tag Line) ಟ್ಯಾಗ್ ಲೈನ್ ಆಗಿದೆ. ಇಂತಹ ಈ ಸೀರಿಯಲ್ ಈಗಾಗಲೇ 150 ಕ್ಕೂ ಹೆಚ್ಚು ಸಂಚಿಕೆ ಪೂರ್ಣಗೊಳಿಸಿದೆ. ಈ ಹಿನ್ನೆಲೆಯಲ್ಲಿ ಸೀರಿಯಲ್ ರಾಮ್ ಪಾತ್ರಧಾರಿ ಅಥರ್ವ (Atharva) ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ಮಾತನಾಡಿದ್ದಾರೆ.ವಿಶೇಷ ಮಾತುಕತೆಯಲ್ಲಿ ಅಥರ್ವ ಸಾಕಷ್ಟು ವಿಷಯ ಹಂಚಿಕೊಂಡಿದ್ದಾರೆ. ಅದರಲ್ಲೂ ಬೆಂಗಳೂರಿಗೆ (Bangalore) ಬಂದ ಹೊಸದರಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿರೋದು ಇದೆ. ಆ ವಿಷಯವನ್ನ ಅಷ್ಟೇ ಓಪನ್ ಆಗಿಯೇ ಹೇಳಿಕೊಂಡಿದ್ದಾರೆ.
ರಜಿಯಾ ರಾಮ್ ಸೀರಿಯಲ್ ಸಖತ್ ಆಗಿಯೇ ಓಡ್ತಿದೆ!
ರಜಿಯಾ ರಾಮ್ ಒಂದು ವಿಶೇಷ ಕಥೆಯ ಸೀರಿಯಲ್ ಆಗಿದೆ. ಧರ್ಮವನ್ನೂ ಮೀರಿದ ಪ್ರೇಮಕಥೆ ಇದಾಗಿದೆ.
ಇದನ್ನ ಈಗಾಗಲೇ ಜನ ಒಪ್ಪಿಕೊಂಡಿದ್ದಾರೆ. ಒಳ್ಳೆ ಸೀರಿಯಲ್ ಅನ್ನೋ ನಂಬಿಕೆ ಬಂದಾಗಿದೆ. ಈ ಕಾರಣಕ್ಕೇನೆ ರಜಿಯಾ ರಾಮ್ 150ಕ್ಕೂ ಹೆಚ್ಚು ಸಂಚಿಕೆಯನ್ನ ಪೂರ್ಣಗೊಳಿಸಿದೆ.
ರಜಿಯಾ ರಾಮ್ ಸೀರಿಯಲ್ನ ರಾಮ್ ಪಾತ್ರಧಾರಿ ಅಥರ್ವ ವಿಶೇಷವಾಗಿಯೆ ಗಮನ ಸೆಳೆಯುತ್ತಾರೆ. ಮೊದಲ ಸೀರಿಯಲ್ ಮೂಲಕವೇ ಜನರಿಗೆ ಇಷ್ಟ ಆಗಿದ್ದಾರೆ. ರಜಿಯಾಳ ರಾಮನಾಗಿ ಇಡೀ ಸೀರಿಯಲ್ನಲ್ಲಿ ಒಬ್ಬ ಕಾರ್ಯಕರ್ತನಾಗಿ ಕಾಣಿಸಿಕೊಂಡಿದ್ದಾರೆ.
ರಾಮ್ ಪಾತ್ರಧಾರಿ ಅಥರ್ವ ಆರಂಭದ ದಿನಗಳು ಹೇಗಿದ್ವು?
ರಜಿಯಾ ರಾಮ್ ಪಾತ್ರಧಾರಿ ಅಥರ್ವ ಸಡನ್ ಆಗಿಯೇ ಸೀರಿಯಲ್ಗೆ ಬಂದವ್ರಲ್ಲ. ಎಲ್ಲರಂತೆ ಅವಕಾಶಕ್ಕಾಗಿಯೇ ಸೈಕಲ್ ಹೊಡೆದಿದ್ದಾರೆ. ಸಿನಿಮಾ ಆಸೆ ಹೊತ್ತುಕೊಂಡು, ಇಂಜಿನಿಯರಿಂಗ್ ಮುಗಿದ್ಮೇಲೆ ಬೆಂಗಳೂರಿಗೆ ಬಂದ ಅಥರ್ವ ಅವಕಾಶಕ್ಕಾಗಿ ಅಲೆದಾಡಿದ್ದಾರೆ.
ಹೌದು, ಅಥರ್ವ ಸಿನಿಮಾ ಜರ್ನಿ ಇನ್ನೂ ಶುರು ಆಗಿಲ್ಲ. ಕಳೆದ ಎರಡು ವರ್ಷದ ಹಿಂದೆ 2020 ಅಲ್ಲಿ ಇಂಜಿನಿಯರಿಂಗ್ ಪೂರ್ಣಗೊಳಿಸಿದ್ದಾರೆ. ಅದಾದ್ಮೇಲೆ ಬಣ್ಣದ ಲೋಕಕ್ಕೆ ಬರಬೇಕು ಅನ್ನೋ ಆಸೆಯಿಂದಲೇ ಹಾಸನದಿಂದ ಬೆಂಗಳೂರಿಗೆ ಬಂದಿದ್ದಾರೆ.
ಡೆಲಿವರಿ ಬಾಯ್ ಆಗಿ ಕೆಲಸ ಮಾಡಿದ "ರಾಮ್" ಪಾತ್ರಧಾರಿ ಅಥರ್ವ
ಅಥರ್ವ ಓಪನ್ ಹಾರ್ಟೆಡ್ ವ್ಯಕ್ತಿತ್ವದ ಯುವಕ ಅಂದ್ರೆ ತಪ್ಪೇ ಆಗೋದಿಲ್ಲ. ಎಲ್ಲರ ಜೊತೆಗೆ ಅಷ್ಟೇ ಬೇಗ ಬೆರೆಯುತ್ತಾರೆ. ಅಷ್ಟೇ ಬೇಗ ಎಲ್ಲರಿಗೂ ಇಷ್ಟ ಆಗುತ್ತಾರೆ. ಅಂತಹ ಅಥರ್ವ ಬೆಂಗಳೂರಿಗೆ ಬಂದಾಗ ಅವಕಾಶಕ್ಕಾಗಿ ಅಲೆದಾಡಿದ್ದಾರೆ. ಅದರ ಜೊತೆಗೆ ಡೆಲಿವರಿ ಬಾಯ್ ಆಗಿಯೂ ಕೆಲಸ ಮಾಡಿದ್ದಾರೆ.
ನ್ಯೂಸ್-18 ಕನ್ನಡ ಡಿಜಿಟಲ್ ನ ವಿಶೇಷ ಮಾತು-ಕಥೆಯಲ್ಲಿ ತಮ್ಮ ಜೀವನದ ಈ ವಿಷಯವನ್ನ ಹೇಳಿಕೊಂಡಿದ್ದಾರೆ. ನಾನು ಬೆಂಗಳೂರಿಗೆ ಬಂದಾಗ ಅವಕಾಶಕ್ಕಾಗಿ ಅಲೆದಾಡಿದ್ದೇನೆ.
ಡೆಲಿವರಿ ಬಾಯ್ ಲಿಸ್ಟ್ನಲ್ಲಿ ನನ್ನ ಹೆಸರು ಈಗಲೂ ಸಿಗುತ್ತದೆ!
ಆ ಸಮಯದಲ್ಲಿಯೇ ಡೆಲಿವರಿ ಬಾಯ್ ಆಗಿಯೂ ಕೆಲಸ ಮಾಡಿದ್ದೇನೆ. ಈಗಲೂ ನನ್ನ ನಂಬರ್ ಡೆಲಿವರಿ ಬಾಯ್ ಲಿಸ್ಟ್ ನಲ್ಲಿ ನಿಮಗೆ ಸಿಗುತ್ತದೆ ಎಂದು ಅಥರ್ವ ಹೇಳಿದರು.
ಅಥರ್ವ ಸೀರಿಯಲ್ ಮಾಡ್ತಾನೇ, ಇತರ ಕಿರು ಚಿತ್ರಗಳನ್ನೂ ಮಾಡ್ತಾನೇ ಇರ್ತಾರೆ ಶಾರ್ಟ್ ಕಂಟೆಂಟ್ ಅನ್ನೂ ಮಾಡ್ತಾನೇ ಇರ್ತಾರೆ.
ಇದನ್ನೂ ಓದಿ: Amitha Kulal: ಕುಡ್ಲದ ಕುವರಿ ಮಲೆನಾಡ ಬೆಡಗಿಯಾದ ಕಥೆ, ಒಲವಿನ ನಿಲ್ದಾಣದ ತಾರಿಣಿ ಯಾರು?
ಹಾಸನಕ್ಕೆ ಬಂದಾಗ ಗೆಳೆಯರ ಜೊತೆಗೆ ಬೆರೆತು ಒಂದಷ್ಟು ಹೊಸ ಹೊಸ ಪ್ಲಾನ್ಗಳನ್ನೂ ಮಾಡ್ತಾರೆ. ಗೆಳೆಯರು ಅಂತ ಬಂದ್ರೆ, ಹೆಲ್ಪಿಗೂ ನಿಲ್ತಾರೆ. ಇದರ ಮಧ್ಯೆ ಸಿನಿಮಾ ವಿಚಾರಕ್ಕೆ ಸಂಬಂಧಿಸಿದಂತೆ ಮಾತು ಕಥೆ ಕೂಡ ನಡೆಯುತ್ತಿದೆ. ಹೀಗೆ ಹೊಸ ಹೊಸ ಕಲ್ಪನೆಯೊಂದಿಗೆ ಅಥರ್ವ ಮುನ್ನುಗ್ಗುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ