ಹಿರಿಯ ನಟ ಶಿವರಾಮ್​ ಪಂಚಭೂತಗಳಲ್ಲಿ ಲೀನ: `ನಾಗರಹಾವು’ ವರದಣ್ಣ ಇನ್ನೂ ನೆನಪು ಮಾತ್ರ..!

ಕನ್ನಡದ ಹಿರಿಯ ನಟ ಶಿವರಾಮ್(Shivarm)​ ಅವರು ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿರುವ ಕನ್ನಡ ಚಿತ್ರರಂಗದ ಹಿರಿಯ ನಟ(Senior Actor) ಶಿವರಾಂ ಅವರ ಅಂತ್ಯಕ್ರಿಯೆ ಬನಶಂಕರಿಯ ಚಿತಾಗಾರದಲ್ಲಿ ನಡೆದಿದೆ. 

ನಾಗರಹಾವು ಚಿತ್ರದಲ್ಲಿ ಶಿವರಾಮ್​, ಆರತಿ

ನಾಗರಹಾವು ಚಿತ್ರದಲ್ಲಿ ಶಿವರಾಮ್​, ಆರತಿ

  • Share this:
ಕನ್ನಡದ ಹಿರಿಯ ನಟ ಶಿವರಾಮ್(Shivarm)​ ಅವರು ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿರುವ ಕನ್ನಡ ಚಿತ್ರರಂಗದ ಹಿರಿಯ ನಟ(Senior Actor) ಶಿವರಾಂ ಅವರ ಅಂತ್ಯಕ್ರಿಯೆ ಬನಶಂಕರಿಯ ಚಿತಾಗಾರದಲ್ಲಿ ನಡೆದಿದೆ.  ಪಾರ್ಥಿವ ಶರೀರವನ್ನು ಚಿತ್ರರಂಗದವರು ಮತ್ತು ಸಾರ್ವಜನಿಕ ದರ್ಶನಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು ಭಾನುವಾರ ಬೆಳಗ್ಗೆ 10.30ರವರೆಗೆ ಇಡಲಾಗಿತ್ತು. ಶಿವರಾಂ ಅವರ ಪಾರ್ಥಿವ ಶರೀರವನ್ನ ಕಲಾಕ್ಷೇತ್ರದಲ್ಲಿ ಇಟ್ಟು ನಂತರ ತ್ಯಾಗರಾಜನಾಗರದಲ್ಲಿರುವ ಅವರ ನಿವಾಸಕ್ಕೆ ವರ್ಗಾಯಿಸಲಾಗುತ್ತು. ಅಲ್ಲಿ ಪೂಜಾ ವಿಧಿವಿಧಾನವನ್ನು ನೆರವೇರಿಸಿ ಬಳಿಕ ಕುಟುಂಬ(Family)ಸ್ಥರು, ಸಮೀಪದ ಬಂಧುಗಳ ಸಮ್ಮುಖದಲ್ಲಿ ಬನಶಂಕರಿಯ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು. 6 ದಶಕಗಳ ಕಾಲ ಸಿನಿರಸಿಕರನ್ನು ರಂಜಿಸಿದ್ದ ಹಿರಿಯ ನಟ ಶಿವರಾಮ್​ ಇನ್ನೂ ನೆನೆಪು ಮಾತ್ರ.. ಅಪ್ಪು ಅಕಾಲಿಕ ಮರಣದ ನೋವಿನಲ್ಲಿದ್ದಾಗಲೇ ಚಂದನವನದ ಮತ್ತೊಂದು ಕೊಂಡಿ ಕಳಚಿದೆ. 84 ವರ್ಷದ ಶಿವರಾಮ್​ ಅವರ ಕೊಡಗೆ ಅಪಾರ. ಕೆಲ ದಿನಗಳ ಹಿಂದೆ ಮನೆಯಲ್ಲಿ ಪೂಜೆಗೆ ಕುಳಿತುಕೊಳ್ಳಲು ಸಿದ್ಧರಾಗುತ್ತಿದ್ದ ವೇಳೆ ನಟ ಶಿವರಾಂ ಎಡವಿ ಬಿದ್ದು ತಲೆಗೆ ಪೆಟ್ಟಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಕೋಮಾ ಸ್ಥಿತಿಗೆ ಜಾರಿದ ನಂತರ ಚೇತರಿಕೆ ಕಾಣಲೇ ಇಲ್ಲ. ಅದಕ್ಕೂ ಕೆಲ ದಿನಗಳ ಹಿಂದೆ ಅವರಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಪಘಾತವಾಗಿತ್ತು. 

ಪುತ್ರ ಲಕ್ಷ್ಮೀಶ್ ಅವರಿಂದ ಅಗ್ನಿ ಸ್ಪರ್ಶ 

ಸಿನಿ ಅಂಗಳದಲ್ಲಿ ಶಿವರಾಮ್ ಅಂಕಲ್, ಶಿವರಾಮ್ ಅಣ್ಣ ಅಂತಾನೇ ಗುರುತಿಸಿಕೊಂಡಿದ್ದರು. ಚಂದನವನದ ಎಲ್ಲ ಸೂಪರ್ ಸ್ಟಾರ್ ಗಳ ಜೊತೆಯಲ್ಲಿ ಶಿವರಾಮ್ ನಟಿಸಿದ್ದರು. ಎಲ್ಲ ಗಣ್ಯರು ಬಂದು ಶಿವರಾಮ್​ ಅವರ ಅಂತಿಮ ದರ್ಶನ ಪಡೆದರು. ಬನಶಂಕರಿ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆ ನೇರವೇರಿಸಲಾಯಿತು. ಶಿವರಾಮ್​ ಅವರ ಪುತ್ರ ಅಗ್ನಿ ಸ್ಪರ್ಶ ಮಾಡಿದರು.ಬ್ರಾಹ್ಮಣ್ಯದ ಯಜುರ್ವೇದ ಸಂಪ್ರದಾಯದಂತೆ ನಡೆಯಲಿರುವ ಅಂತಿಮ‌ ವಿಧಿ ವಿಧಾನ ನೆರವೇರಿಸಲಾಯ್ತು.ಕಣ್ಣೀರು ಹಾಕುತ್ತಾ, ನೋವಿನಿಂದಲೇ, ಅತಿ ದುಖಃದಿಂದಲೇ ಅವರ ಅಂತ್ಯಕ್ರಿಯೆ ನಡೆಸಲಾಯ್ತು. ಪಂಚಭೂತಗಳಲ್ಲಿ ನಮ್ಮ ನಾಗರಾಹಾವು ಸಿನಿಮಾದ ವರದಣ್ಣ ಲೀನರಾಗಿದ್ದಾರೆ.

ಶಿವರಾಮ್​ ಮತ್ತು ಚಂದನವನ ಒಡನಾಟ!

1965 ರಲ್ಲಿ ಬೆರೆತ ಜೀವ ಸಿನಿಮಾ ಮೂಲಕ ಶಿವರಾಂ ಚಿತ್ರರಂಗ ಪ್ರವೇಶಿಸಿದ್ದರು. ವಿಷ್ಣುವರ್ಧನ್, ಡಾ. ರಾಜ್ ಕುಮಾರ್, ಅಂಬರೀಶ್ ಸೇರಿದಂತೆ ಎಲ್ಲ ದಿಗ್ಗಜರ ಜೊತೆ ನಟಿಸಿದ್ದಾರೆ. ಆರಂಭದಲ್ಲಿ ಕಾಲೇಜು ಹುಡುಗ, ಹೀರೋ ಸೋದರ ಮತ್ತು ಕಾಮಿಡಿ ಪಾತ್ರಗಳಲ್ಲಿ ಶಿವರಾಮ್ ನಟಿಸುತ್ತಿದ್ರು. 6 ದಶಕಗಳ ಕಾಲ ಕಲೆ ಸೇವೆ ಸಲ್ಲಿಸಿದ್ದಾರೆ ಶಿವರಾಂ. ಒಬ್ಬೊಬ್ಬರಾಗಿಯೇ ಸಿನಿ ರಂಗದ ಕಲಾವಿದರು ಬಂದು ಅಂತಿಮ ದರ್ಶನ ಪಡೆಯುತ್ತಿದ್ದು, ನಟಿ ಸುಧಾರಾಣಿ, ಟಿ. ಎನ್. ಸೀತಾರಾಮ್ , ಪ್ರಮೋದ್ ಮುತಾಲಿಕ್, ಭಾರತಿ ವಿಷ್ಟುವರ್ಧನ್, ನಟ ರಾಮಕೃಷ್ಣ ಸೇರಿದಂತೆ ಗಣ್ಯಾತಿ ಗಣ್ಯರು ಆಗಮಿಸಿ ದರ್ಶನ ಪಡೆದಿದ್ದಾರೆ.

ಇದನ್ನು ಓದಿ : 3 ದಿಗ್ಗಜರನ್ನು ಒಟ್ಟುಗೂಡಿಸಿದ್ದ ಶಿವರಾಮ್​​: ಅಣ್ಣಾವ್ರು ಅಂದ್ರೆ ಇವ್ರಿಗೆ ಪಂಚ ಪ್ರಾಣ..!

ಇತ್ತೀಚೆಗೆ ಖಾಸಗಿ ವಾಹಿನಿಯ ‘ಸತ್ಯ’ ಧಾರಾವಾಹಿಯಲ್ಲಿ ಸ್ವಾಮೀಜಿಗಳ ಪಾತ್ರದ ಮೂಲಕ ಕನ್ನಡಿಗರನ್ನು ರಂಜಿಸುತ್ತಿದ್ದರು. ಶಿವರಾಮ್ ಅಂಕಲ್ ಕಳ್ಕೊಂಡು‌ ದೊಡ್ಡ ನಷ್ಟ ಆಗಿದೆ. ಬಹಳ ಒಳ್ಳೆ ವ್ಯಕ್ತಿ ಅವರು.  ಚಿತ್ರರಂಗದಲ್ಲಿಯೇ ಹಲವು ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ರು, ಆಧ್ಯಾತ್ಮಿಕ ಇರಬಹುದು ನಟನೆ ಇರಬಹುದು ಎಲ್ಲಾದರಲ್ಲೂ ತೊಡಗಿಸಿಕೊಂಡಿದ್ರು. ಈಗ ಅನಿಸ್ತಾ ಇದೆ ಅವರು ಹೇಳಿರೋದನ್ನೆಲ್ಲ ದಾಖಲೆ ತರ ಇಟ್ಕೋಬೇಕಿತ್ತು ಅಂತದೇವರು ಅವರ ಆತ್ಮಕ್ಕೆ ಶಾಂತಿ ಕೊಡಲಿ ಎಂದು ನಟಿ ಸುಧಾರಾಣಿ ಸಂತಾಪ ಸೂಚಿಸಿದ್ದಾರೆ.

ಇನ್ನು ಅಂತಿಮ ದರ್ಶನ ಪಡೆದು ಮಾತನಾಡಿದ ನಟಿ ತಾರಾ ಇವತ್ತು ಮತ್ತೊಮ್ಮೆ ಚಿತ್ರರಂಗದ ಕೊಂಡಿಯಾಗಿದ್ದ ಹಿರಿಯರನ್ನ ಕಳೆದುಕೊಂಡಿದ್ದೇವೆ. ಮಾಹಿತಿಯ ಭಂಡಾರವಾಗಿದ್ದ ಶಿವರಾಮ್ ಅವರನ್ನ ಕಳೆದುಕೊಂಡಿದ್ದೇವೆ. ಚಿತ್ರರಂಗದಲ್ಲಿ ನಿರಂತರ ಸಾವು ಬಹಳ ನೋವು ತರ್ತಾ ಇದೆ ಎಂದು ಬೇಸರ ವ್ಯಕ್ತಪಡಿಸಿದ್ದರು.

ಇದನ್ನು ಓದಿ : ದೊಡ್ಮನೆ ಕುಟುಂಬಕ್ಕೆ ಗುರುಸ್ವಾಮಿಗಳಾಗಿದ್ದ ಶಿವರಾಂ :ಅಯ್ಯಪ್ಪ ದೇವರ ಮೇಲಿತ್ತು ಅಪಾರ ಭಕ್ತಿ

ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀರಾಮ ಸೇನೆಯ ಅಧ್ಯಕ್ಷ  ಪ್ರಮೋದ್ ಮುತಾಲಿಕ್ ಪ್ರಸಿದ್ದ ನಟರಾದ ಶಿವರಾಮ್ ನಿಧನ ನೋವು ತಂದಿದೆ. ಶ್ರೀ ರಾಮ ಸೇನೆ ಸಂಘಟನೆಯಿಂದ ಶ್ರದ್ದಾಂಜಲಿ ಅರ್ಪಣೆ ಮಾಡಲು ಬಂದಿದ್ದೇವೆ ಎಂದರು.
Published by:Vasudeva M
First published: