Rajinikanth: ರಜಿನಿಕಾಂತ್​ಗೆ ಕನ್ನಡದ ಮೇಲೆ ಪ್ರೀತಿ ಇಲ್ಲ: ಹಿಂಗ್ಯಾಕ್​ ಅಂದ್ರು ಮುಖ್ಯಮಂತ್ರಿ ಚಂದ್ರು?

ಕರ್ನಾಟಕದ ಹಿತದ ಪ್ರಶ್ನೆ ಬಂದಾಗ ತಮ್ಮ ಸಿನಿಮಾಗಳ ಲಾಭವನ್ನು ಗಮನದಲ್ಲಿಟ್ಟುಕೊಂಡು ನೆರೆ ರಾಜ್ಯಗಳ ನಡೆಯನ್ನು ಖಂಡಿಸಲು, ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕುವ ಬಗ್ಗೆ ಹಿರಿಯ ನಟ ಮುಖ್ಯಮಂತ್ರಿ ಚಂದ್ರು(Mukhyamantri Chandru) ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಚಂದ್ರು

ಮುಖ್ಯಮಂತ್ರಿ ಚಂದ್ರು

  • Share this:
ನಾಡು, ನುಡಿ ವಿಚಾರಕ್ಕೆ ಬಂದರೆ ಕನ್ನಡಿಗರು ಎಲ್ಲಿ ಏನು ಮಾಡಲು ಸದಾ ಸಿದ್ದ. ಸಿನಿಮಾ ನಟ, ನಟಿಯರು(Hero-Heroin's) ಭಾಷೆ ಬಗ್ಗೆ ಪ್ರೀತಿ ತೋರದೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಅದಕ್ಕೆ ಉತ್ತಮ ಉದಾಹರಣೆ(Example) ಅಂದರೆ, ಇತ್ತೀಚೆಗೆ ರಶ್ಮಿಕಾ ಮಂದಣ್ಣ(Rashmika Mandanna) ಕನ್ನಡ ಭಾಷೆಯನ್ನು ನೆಗ್ಲೆಟ್​ ಮಾಡಿ ಟ್ರೋಲ್​(Troll)ಗೆ ಗುರಿಯಾಗಿದ್ದರು. ಇವರೊಬ್ಬರೇ ಅಲ್ಲ. ಕರ್ನಾಟಕದ ಹಿತದ ಪ್ರಶ್ನೆ ಬಂದಾಗ ತಮ್ಮ ಸಿನಿಮಾಗಳ ಲಾಭವನ್ನು ಗಮನದಲ್ಲಿಟ್ಟುಕೊಂಡು ನೆರೆ ರಾಜ್ಯಗಳ ನಡೆಯನ್ನು ಖಂಡಿಸಲು, ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕುವ ಬಗ್ಗೆ ಹಿರಿಯ ನಟ ಮುಖ್ಯಮಂತ್ರಿ ಚಂದ್ರು(Mukhyamantri Chandru) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮಿಳು ಸೂಪರ್​ ಸ್ಟಾರ್​ ರಜನಿಕಾಂತ್(Rajinikanth) ಅವರನ್ನು ಉದಾಹರಣೆಯಾಗಿ ನೀಡಿ ಮುಖ್ಯಮಂತ್ರಿ ಚಂದ್ರು ಮಾತನಾಡಿದ್ದಾರೆ.  ‘ಕರ್ನಾಟಕದಲ್ಲಿ ಹುಟ್ಟಿ ಬೇರೆ ರಾಜ್ಯದಲ್ಲಿ ನೆಲೆ ಕಂಡುಕೊಂಡವರು ಆ ರಾಜ್ಯದ, ಭಾಷೆಯ ಪರವಾಗಿಯೇ ನಿಲ್ಲುತ್ತಾರೆ. ರಜನೀಕಾಂತ್ ಅವರು ತಮಿಳುನಾಡಿನಲ್ಲಿ ಪ್ರೀತಿ ಗಳಿಸಿಕೊಂಡಿದ್ದಾರೆ. ಅವರ ಆ ಭಾಷೆಯ ಪರವಾಗಿ ತೀರ್ಮಾನ ತೆಗೆದುಕೊಂಡು ಅಲ್ಲಿಯೇ ನೆಲೆಸಿದ್ದಾರೆ. ಆ ಭಾಷೆಯ ಪರವಾಗಿ ಹೋರಾಟ ಮಾಡುತ್ತಾರೆ. ನಮ್ಮ ಭಾಷೆಯನ್ನು ಲೆಕ್ಕಕ್ಕೇ ಇಟ್ಟಿಲ್ಲ’ ಎಂದು ಮುಖ್ಯಮಂತ್ರಿ ಚಂದ್ರ ಹೇಳಿದ್ದಾರೆ. 

ಕನ್ನಡ ಕಡೆಗಣಿಸುವವರ ವಿರುದ್ಧ ಗುಡುಗಿದ ಮುಖ್ಯಮಂತ್ರಿ ಚಂದ್ರು!

ಕನ್ನಡ ಕಡೆಗಣಿಸುವವರ ವಿರುದ್ಧ ಮುಖ್ಯಮಂತ್ರಿ ಚಂದ್ರು ಗುಡುಗಿದ್ದಾರೆ. ರಜನಿಕಾಂತ್​ ಅವರನ್ನು ಉದಾಹರಣೆ ಇಟ್ಟುಕೊಂಡು ಮಾತನಾಡಿದ್ದಾರೆ. ಇನ್ನೂ ಕೆಲವರು ಇಲ್ಲಿಯೇ ಹುಟ್ಟಿ, ಇಲ್ಲಿಯೇ ಬೆಳೆದು, ಇಲ್ಲೇ ಹೆಸರು ಮಾಡಿ, ಇಲ್ಲಿನ ಜನರಿಂದ ಹಣ, ಆಸ್ತಿ ಸಂಪಾದಿಸಿ ಕರ್ನಾಟಕ ರಾಜ್ಯಕ್ಕೆ ಸಮಸ್ಯೆ ಬಂದಾಗ ಅದರ ವಿರುದ್ಧ ನಿಲ್ಲಬೇಕು. ರಾಜ್ಯದ ಸಮಸ್ಯೆಗೆ ಆದ್ಯತೆ ನೀಡಬೇಕು ಎಂದು ಅವರು ಹೇಳಿದ್ದಾರೆ. ‘ಭಾರತ ಒಕ್ಕೂಟ ರಾಷ್ಟ್ರ, ಯಾವುದೇ ಭಾಷೆಯನ್ನು ದ್ವೇಷ ಮಾಡುವಂತಿಲ್ಲ. ಯಾವುದೇ ಸಂಸ್ಕೃತಿಯನ್ನು ವಿರೋಧ ಮಾಡುವಂತಿಲ್ಲ. ಆದರೆ ರಾಜ್ಯಗಳ ವಿಂಗಡಣೆ ಆಗಿರುವುದು ಭಾಷೆಯ ಆಧಾರದ ಮೇಲೆ. ಹಾಗಿದ್ದಾಗ ನಮ್ಮ ಮಾತೃಭಾಷೆ, ಆಡಳಿತ ಭಾಷೆ ಯಾವುದಾಗಿರುತ್ತದೆಯೋ ಅದಕ್ಕೆ ಗೌರವ ಕೊಡಬೇಕಾದುದ್ದು ಆದ್ಯ ಕರ್ತವ್ಯ. ಅಂಥಹವರ ವಿರುದ್ಧ ಜನ ದಂಗೆ ಎದ್ದರೆ ನಾವೇನೂ ಮಾಡುವುದಕ್ಕಾಗುವುದಿಲ್ಲ ಎಂದಿದ್ದಾರೆ.

ಇದನ್ನು ಓದಿ : ಆಸ್ಕರ್​ ವಿಜೇತ ಮೊದಲ ಕಪ್ಪುವರ್ಣೀಯ ನಟ ಸಿಡ್ನಿ ಪೊಯ್ಟಿಯರ್‌ ವಿಧಿವಶ

ಸೆಲೆಬ್ರಿಟಿಗಳಿಗೆ ಸಲಹೆ ನೀಡಿದ ಮುಖ್ಯಮಂತ್ರಿ ಚಂದ್ರು!‘ನಾವು ಸೆಲೆಬ್ರಿಟಿಗಳು ಜನರಿಗೆ ನಮ್ಮ ಬಗ್ಗೆ ಆಸಕ್ತಿ ಇದೆ. ರಾಜ್‌ ಕುಮಾರ್ ಅವರಂತೆ ಮಾದರಿ ವ್ಯಕ್ತಿ ಆಗಲು ಸಾಧ್ಯ ಆಗದೇ ಇದ್ದರೂ ಪರವಾಗಿಲ್ಲ. ನಾನೊಬ್ಬ ಆದರ್ಶ ವ್ಯಕ್ತಿ ಎಂದು ಜನರಿಗೆ ತೋರಿಸಿ, ನಿಮ್ಮ ನಡುವಳಿಕೆಯನ್ನು ಎಲ್ಲರೂ ಇಷ್ಟ ಪಡುವಂತೆ ಮಾಡಿಕೊಳ್ಳಿ. ನಿಮ್ಮ ಎಲ್ಲ ವ್ಯವಹಾರವನ್ನೂ ಪಾರದರ್ಶಕವನ್ನಾಗಿಡಲು ಸಾಧ್ಯವಿಲ್ಲ. ಆದರೆ ಎಲ್ಲವನ್ನೂ ಬಹಿರಂಗಗೊಳಿಸಬೇಡಿ. ನಿಮ್ಮ ಉದ್ಧಟತನ, ದುರಹಂಕಾರಗಳನ್ನು ನಾಲ್ಕು ಗೋಡೆಯ ಮಧ್ಯೆ ಪ್ರದರ್ಶಿಸಿಕೊಳ್ಳಿ, ಸಾರ್ವಜನಿಕವಾಗಿ ಬೇಡ’ ಎಂದು  ಸೆಲೆಬ್ರಿಟಿಗಳಿಗೆ ಸಲಹೆ ನೀಡಿದ್ದಾರೆ.

ಇದನ್ನು ಓದಿ : ಧನುಷ್ ಅವರ ಉಡುಪುಗಳ ವೆಚ್ಚ ನೋಡಿ, ತೆಲುಗು ನಿರ್ಮಾಪಕರಿಗೆ ಅಚ್ಚರಿಯೋ ಅಚ್ಚರಿ!

ಸ್ಯಾಂಡಲ್​ವುಡ್​ ನಾಯಕತ್ವದ ಬಗ್ಗೆಯೂ ಹೇಳಿಕೆ!
ಚಿತ್ರರಂಗದಲ್ಲಿ ನಾಯಕತ್ವದ ಕೊರತೆಯ ಬಗ್ಗೆಯೂ ಮುಖ್ಯಮಂತ್ರಿ ಚಂದ್ರು ಮನಬಿಚ್ಚಿ ಮಾತನಾಡಿದ್ದಾರೆ. ‘ಆಗ ಡಾ.ರಾಜ್​ಕುಮಾರ್​ ಅವರು ಇದ್ದರು, ಅವರ ಮಾತು ನಮಗೆಲ್ಲ ವೇದವಾಕ್ಯವಾಗಿತ್ತು. ಆದರೆ ಈಗ ಅಂಥಹವರು ಇಲ್ಲ ಎಂದು ಅವರು ಹೇಳಿದ್ದಾರೆ. ಚಿತ್ರರಂಗದಲ್ಲಿ ಎಲ್ಲರೂ ಒಟ್ಟಾಗಿ ಇರಬೇಕು. ಯಾರೇ ಬಂದರೂ ಒಗ್ಗಟ್ಟಾಗಿಯೇ ಇರಬೇಕು’ ಎಂದು ಅವರು ಹೇಳಿದ್ದಾರೆ .

Published by:Vasudeva M
First published: