Kannada Actor Abhijit: ಸಾಹಸ ಸಿಂಹ ಮೆಚ್ಚಿದ ಕಲಾವಿದನಿಗೆ ಶಿವಣ್ಣನಿಂದ ಹೊಸ ಬೆಳಕು! ಅಭಿಜಿತ್ ಈಗ ಫುಲ್ ಬ್ಯುಸಿ

ಸಾಹಸ ಸಿಂಹ ವಿಷ್ಣುವರ್ಧನ್ ಮೆಚ್ಚಿದ ನಟ ಅಭಿಜಿತ್ ಮತ್ತೆ ಅಭಿನಯಿಸಲು ಆರಂಭಿಸಿದ್ದಾರೆ. 7 ರಿಂದ 8 ವರ್ಷ ಗ್ಯಾಪ್ ಬಳಿಕ ಸೀರಿಯಲ್ ಮತ್ತು ರಿಯಾಲಿಟಿ ಶೋ ಅಂತಲೇ ಈಗ ಬ್ಯುಸಿ ಆಗಿದ್ದಾರೆ.

ಕನ್ನಡದ ಹಿರಿಯ ನಟ ಅಭಿಜಿತ್ ಹೊಸ ಅಧ್ಯಾಯ

ಕನ್ನಡದ ಹಿರಿಯ ನಟ ಅಭಿಜಿತ್ ಹೊಸ ಅಧ್ಯಾಯ

  • Share this:
ಕನ್ನಡದ ನಾಯಕ ನಟ ಅಭಿಜಿತ್ (Actor Abhijith) ಎಲ್ಲಿ ಹೋದ್ರು. ಹೀಗೊಂದು ಪ್ರಶ್ನೆ ಕೇಳೋರಿಗೆ ಸ್ವತಃ ಅಭಿಜಿತ್ ಉತ್ತರ ಕೊಟ್ಟಿದ್ದಾರೆ. ಗ್ಯಾಪ್ ಆದರೇನೂ ನಾನು ಕಲಾವಿದ ಅನ್ನೋ ಅರ್ಥದಲ್ಲಿಯೇ ಮತ್ತೆ ಬ್ಯುಸಿಯಾಗಿದ್ದಾರೆ. ಒಂದಷ್ಟು ವೈಯುಕ್ತಿಕ ಕೆಲಸ, ಇನ್ನೊಂದಿಷ್ಟು ಪ್ರೋಜೆಕ್ಟ್ (Project), ರಿಯಾಲಿಟಿ ಶೋದಲ್ಲಿ (Reality Show) ಕಾಣಿಸಿಕೊಳ್ಳುವ ಅವಕಾಶ, ಮಗಳ ಮದುವೆ ಖುಷಿ, ಪುಟ್ಟ ಪರದೆ ಮೇಲೆ ಮಿಂಚೋ ಅವಕಾಶ. ಹಿಂಗೆ ತಮ್ಮ ಎಂದಿನ ಶೈಲಿಯಲ್ಲಿ ಉತ್ಸಾಹದ ಮಾತಿನಲ್ಲಿಯೇ ಮಾತನಾಡಿದ್ದಾರೆ. ನಮ್ಮ ಜೊತೆಗೆ ಮಾತನಾಡೋವಾಗ ಅವರಲ್ಲಿ ನೋವಿನ ಛಾಯೆ ಇರಲೇ ಇಲ್ಲ. ಎಲ್ಲವನ್ನೂ ನಿಭಾಯಿಸುತ್ತೇನೆ ಅನ್ನೋ ವಿಶ್ವಾಸ ತುಳುಕುತ್ತಿತ್ತು.

ಹೌದು, ಸಾಹಸ ಸಿಂಹ ವಿಷ್ಣುವರ್ಧನ್ ಅವರ ನೆಚ್ಚಿನ ಕಲಾವಿದ ಅಭಿಜಿತ್ ಮತ್ತೆ ಆ್ಯಕ್ಟಿವ್ ಆಗಿದ್ದಾರೆ. ಹೆಚ್ಚು ಕಡಿಮೆ 7 ರಿಂದ 8 ವರ್ಷ ಸಿನಿಮಾಗಳಿಂದ ದೂರವೇ ಇದ್ದರು. ಅದಕ್ಕೆ ಅದರದ್ದೇ ಆದ ಕಾರಣಗಳೂ ಇವೆ ಬಿಡಿ. ಆ ಮಾತು ಬೇರೆ. ಆದರೆ ಅಭಿಜಿತ್ ವಾಪಸ್ ಬಂದಿದ್ದಾರೆ ಅಲ್ವೇ. ಅವರನ್ನ ಗೌರವಿಸೋ, ಪ್ರೀತಿಸೋ ಅಭಿಮಾನಿ ಬಳಗ ಇನ್ನೂ ಇದೆ. ಆಗಾಗ ಇವರ ಸಿನಿಮಾಗಳು ಟಿವಿಯಲ್ಲಿ ಬಂದಾಗ ನೆನಪಿಸಿಕೊಳ್ಳದೇ ಇರ್ತಾರಾ. ನೋ ವೇ, ಚಾನ್ಸೇ ಇಲ್ಲ ಬಿಡಿ. ಅಂತಹ ಈ ನಾಯಕ ನಟ ಪುಟ್ಟ ಪರದೆ ಮೇಲೂ ಮಿಂಚುತ್ತಿದ್ದಾರೆ. ರಿಯಾಲಿಟಿ ಶೋದಲ್ಲೂ ಪತ್ನಿ ಜೊತೆಗೆ ಹೊಳೆಯುತ್ತಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವಣ್ಣ ಕೊಟ್ಟ ಹೊಸ ಬೆಳಕು ಇಡೀ ಜೀವನಕ್ಕೆ ಸಾಕು ಎಂದ ಅಭಿಜಿತ್
ಕಲಾವಿದರ ಬದುಕಿನಲ್ಲಿ ವ್ಯತ್ಯಾಸಗಳು ಸಹಜ. ಬಣ್ಣದ ಲೋಕದಲ್ಲಿ ಏನೇನೋ ಆಗುತ್ತದೆ. ಸೆಕೆಂಡ್ ಚಾನ್ಸ್ ಇಲ್ಲಿ ಸಿಗೋದು ಕಡಿಮೇನೆ. ಆದರೆ ಅಭಿಜಿತ್ ಈ ವಿಷಯದಲ್ಲಿ ಲಕ್ಕಿ ಇದ್ದಾರೆ. ಸೆಕೆಂಡ್ ಚಾನ್ಸ್ ಸಿಕ್ಕಾಗಿದೆ. ರಿಯಾಲಿಟಿ ಶೋದಲ್ಲೂ ಕಾಣಿಸಿಕೊಂಡು ತಮ್ಮ ಅಭಿಮಾನಿಗಳನ್ನ ಈಗ ಮತ್ತೆ ರಂಜಿಸುತ್ತಿದ್ದಾರೆ.

ಇಂತಹ ಈ ಕಲಾವಿದನಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಭರವಸೆಯ ಬೆಳಕೊಂದನ್ನ ಕೊಟ್ಟಿದ್ದಾರೆ. ತಮ್ಮ ಮುಂದಿನ ಸಿನಿಮಾದಲ್ಲಿ ಅಭಿಜಿತ್ ಕಂಡಿತಾ ಇರಬೇಕು. ಇರ್ತಾರೆ ಅಂತಲೇ ಹೇಳಿದ್ದಾರೆ. ಆ ಒಂದು ಮಾತು ಅಭಿಜಿತ್ ಜೀವನದಲ್ಲಿ ಮತ್ತಷ್ಟು ಇನ್ನಷ್ಟು ಅನ್ನೋಮಟ್ಟಿಗೆ ಉತ್ಸಾಹ ತುಂಬಿದೆ. ಅಷ್ಟೇ ಅಲ್ಲ, ಅಭಿಜಿತ್ ಇದು ತಮ್ಮ ಜೀವನದ ಅತೀ ಮಹತ್ವದ ಮಾತು ಮಹತ್ವದ ಘಟನೆ ಅಂತಲೇ ಹೇಳಿಕೊಂಡಿದ್ದಾರೆ.

Kannada Senior Actor Abhijith New Projects
ಹಿರಿಯ ನಟ ಅಭಿಜಿತ್ ಸಿನಿಮಾಗಳಲ್ಲಿಈಗ ಮತ್ತೆ ಬ್ಯುಸಿ


7 ರಿಂದ 8 ವರ್ಷ ಗ್ಯಾಪ್-ಈಗ ಮತ್ತೆ ನಿಧಾನಕ್ಕೆ ನಾನು ಬ್ಯುಸಿ
ಅಭಿಜಿತ್ ತುಂಬಾ ಓಪನ್ ಹಾರ್ಟೆಡ್ ಕಲಾವಿದರು ಅಂದ್ರೆ ತಪ್ಪಿಲ್ಲ ಅನಿಸುತ್ತದೆ. ಯಾಕೆಂದ್ರೆ, ಕಷ್ಟ ಇದ್ದರೂ ಅಷ್ಟೆ. ಸುಃಖ ಇದ್ದರೂ ಅಷ್ಟೆ. ಆತ್ಮೀಯರ ಮುಂದೆ ಓಪನ್ ಆಗಿಯೇ ಮಾತನಾಡುತ್ತಾರೆ. ಅದರಂತೆ ಅಭಿಜಿತ್ ಅವರೇ ಹೇಳೋ ಹಾಗೆ, ಅವರು ಸಿನಿಮಾರಂಗದಿಂದ 7 ರಿಂದ 8 ವರ್ಷ ದೂರವೇ ಇದ್ದರು. ಆದರೆ ಈಗ ಮತ್ತೆ ವಾಪಸ್ ಬಂದಿದ್ದಾರೆ. ನಿಧಾನಕ್ಕೆ ನಾನು ಬ್ಯುಸಿ ಅಂತಲೂ ಹೇಳಿಕೊಂಡಿದ್ದಾರೆ.

ಮರ್ಡರ್ ಮಿಸ್ಟರಿ ಕಥೆಗೆ ಅಭಿಜಿತ್ ನಾಯಕ-ನಿರ್ದೇಶಕ-ನಿರ್ಮಾಪಕ
ಅಭಿಜಿತ್ ಸಿನಿಮಾ ಪ್ರೀತಿಗೆ ಎಲ್ಲರೂ ಮನಸೋಲಲೇ ಬೇಕು. ಇವರ ಸಿನಿಮಾ ನಿರ್ಮಾಣದ ಕನಸಗಳು ಕಡಿಮೆ ಆಗಿಯೇ ಇಲ್ಲ. ಈಗಲೂ ತಮ್ಮದೇ ಬ್ಯಾನರ್​ ನಲ್ಲಿ ಇನ್ನೂ ಒಂದು ಸಿನಿಮಾ ಮಾಡೋಕೆ ರೆಡಿ ಆಗುತ್ತಿದ್ದಾರೆ. ಈಗಾಗಲೇ ಚಿತ್ರದ ಸ್ಕ್ರಿಪ್ಟಿಂಗ್ ಕೆಲಸ ಆಗಿದೆ. ಈಗ ಡೈಲಾಗ್ ಹಂತಕ್ಕೂ ಬಂದಿದೆ. ಅದೆಲ್ಲವೂ ಆದ್ಮೇಲೆ ಈ ಚಿತ್ರದಲ್ಲಿ ಇವರೇ ಲೀಡ್ ಆಗಿ ಆಕ್ಟ್ ಮಾಡ್ತಾರೆ. ಇತರ ಕಲಾವಿದರಿಗೂ ಅವಕಾಶ ಮಾಡಿಕೊಡ್ತಿದ್ದಾರೆ.

ಕಿರುತೆರೆಯ ಸತ್ಯ ಸೀರಿಯಲ್​ನಲ್ಲಿ ಲಕ್ಷ್ಮಣನಾದ ಅಭಿಜಿತ್
ಕಿರುತೆರೆಯಲ್ಲೂ ಆಕ್ಟೀವ್ ಆಗಿರೋ ನಟ ಅಭಿಜಿತ್, ಸತ್ಯ ಅನ್ನೋ ಸೀರಿಯಲ್ ಮಾಡುತ್ತಿದ್ದಾರೆ. ಹಿರಿಯ ನಟ ಶ್ರೀನಿವಾಸಮೂರ್ತಿ ಸಹೋದರನ ಪಾತ್ರದಲ್ಲಿಯೇ ಅಭಿಜಿತ್ ಅಭಿನಯಿಸಿದ್ದು, ರಾಮನಾಗಿ ಶ್ರೀನಿವಾಸಮೂರ್ತಿಗಳು ಇದ್ದರೇ, ಲಕ್ಷ್ಮಣನಾಗಿ ಅಭಿಜಿತ್ ಪ್ರೇಕ್ಷಕರ ದಿಲ್ ಗೆಲ್ಲುತ್ತಿದ್ದಾರೆ.

ಹೀಗೆ ತಮ್ಮ ಈಗೀನ ಅಪ್​ಡೇಟ್ಸ್ ಮತ್ತು ಸಿನಿಮಾಗಳ ಒಟ್ಟು ಮಾಹಿತಿಯನ್ನ ಅಭಿಜಿತ್ ಕೊಟ್ಟಿದ್ದಾರೆ. ಮಗಳ ಮದುವೆ ಖುಷಿಯಲ್ಲೂ ಎಲ್ಲ ತಯಾರಿ ಮಾಡಿಕೊಳ್ಳುವ ನಿಟ್ಟಿನಲ್ಲಿಯೇ ಪ್ಲಾನಿಂಗ್ ಮಾಡ್ತಿದ್ದಾರೆ. ಸೀರಿಯಲ್, ರಿಯಾಲಿಟಿ ಶೋ ಅಂತಲೂ ಬ್ಯುಸಿಯಾಗಿದ್ದಾರೆ.
First published: