• Home
  • »
  • News
  • »
  • entertainment
  • »
  • Rocking Star Yash: 400 ಕೋಟಿಯಲ್ಲಿ ರೆಡಿಯಾಗುತ್ತಾ ಯಶ್ ಮುಂದಿನ ಸಿನಿಮಾ?

Rocking Star Yash: 400 ಕೋಟಿಯಲ್ಲಿ ರೆಡಿಯಾಗುತ್ತಾ ಯಶ್ ಮುಂದಿನ ಸಿನಿಮಾ?

ರಾಕಿಂಗ್ ಸ್ಟಾರ್​ ಯಶ್​

ರಾಕಿಂಗ್ ಸ್ಟಾರ್​ ಯಶ್​

ಕೆಜಿಎಫ್ ಕಿಂಗ್ ರಾಕಿ ಭಾಯ್ ಮುಂದಿನ ಚಿತ್ರಕ್ಕೆ ಪಕ್ಕದ ತಮಿಳು ಇಂಡಸ್ಟ್ರೀಯಿಂದಲೇ ಡೈರೆಕ್ಟರ್ ಬರ್ತಾರೆ ಅನ್ನೋ ಮಾಹಿತಿ ಇದೆ. ಆದರೆ ಯಾರೂ ಅನ್ನೋದು ಮಾತ್ರ ಇನ್ನೂ ರಿವೀಲ್ ಆಗಿಲ್ಲ. ಹಾಗೇನೆ ಈ ನಿರ್ದೇಶಕರ ಇತರ ಮಾಹಿತಿನೂ ಎಲ್ಲೂ ಹೊರ ಬಿದ್ದಿಲ್ಲ ಅಷ್ಟೆ.

  • News18 Kannada
  • Last Updated :
  • Bangalore [Bangalore], India
  • Share this:

ರಾಕಿಂಗ್ ಸ್ಟಾರ್ (Rocking Star Yash Cinema) ಯಶ್ ಮುಂದಿನ ಸಿನಿಮಾ ಯಾವುದು? ಈ ಒಂದು ಪ್ರಶ್ನೆ ದಿನೇ ದಿನೇ ಕುತೂಹಲ (Yash Next Film Updates) ಕೆರಳಿಸುತ್ತಿದೆ. ಯಶ್ ಜನ್ಮ ದಿನ ಹತ್ತಿರ ಬಂದಂತೆ ಅಭಿಮಾನಿಗಳಲ್ಲಿ ಈ ಒಂದು ಕ್ವಶ್ಚನ್ ಕಾಡುತ್ತಲೇ ಇದೆ. ಸಿನಿಪ್ರೇಮಿಗಳಲ್ಲೂ ಒಂದು ಕುತೂಹಲ ಇದೆ. ಈ ಹಿನ್ನೆಲೆಯಲ್ಲಿ ಈ ವರ್ಷದ ಯಶ್ (Yash Birthday Special) ಜನ್ಮ ದಿನ ಮಹತ್ವ ಪಡೆದಿದೆ. ಈ ವರ್ಷ ಯಶ್ ಹೊಸ ಸಿನಿಮಾ ಅನೌನ್ಸ್ ಆಗುತ್ತದೆ ಅನ್ನೋ ನಿರೀಕ್ಷೆನೂ ಇದೆ. ಅಭಿಮಾನಿಗಳೂ (Rocking Star Yash Film Updates) ಅದನ್ನೆ ನಿರೀಕ್ಷೆ ಮಾಡುತ್ತಿದ್ದಾರೆ. ಯಶ್ ಮುಂದಿನ ಸಿನಿಮಾ ಹೇಗಿರುತ್ತದೆ ಅನ್ನೋ ಅಭಿಮಾನಿಗಳಿಗೆ ಇಲ್ಲೊಂದಿಷ್ಟು ಇಂಟ್ರಸ್ಟಿಂಗ್ ವಿಷಯ ಇದೆ ಓದಿ.


ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಬಜೆಟ್ ಎಷ್ಟು?
ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವಾಗ ಅನ್ನೋ ಪ್ರಶ್ನೆ ಇದೆ. ಅದಕ್ಕೆ ಜನವರಿ-08 ರಂದು ಉತ್ತರ ಸಿಗುತ್ತದೆ ಅನ್ನೋ ನಿರೀಕ್ಷೆ ಜಾಸ್ತಿನೇ ಇದೆ. ಇದರ ಬೆನ್ನಲ್ಲಿಯೇ ಈಗ ಯಶ್ ಅಭಿನಯದ ಮುಂದಿನ ಸಿನಿಮಾದ ಬಜೆಟ್ ಎಷ್ಟು ಅನ್ನೋ ಕುತೂಹಲ ಕೂಡ ಮೂಡಿದೆ.


Kannada Rocking Star Yash Next Movie Updates Story
ಸೈನ್ಸ್ ಫಿಕ್ಷನ್ ಥ್ರಿಲರ್ ಚಿತ್ರದಲ್ಲಿ ರಾಕಿ ಭಾಯ್?


ಯಶ್ ಮುಂದಿನ ಸಿನಿಮಾ ಬಜೆಟ್ 400 ಕೋಟಿನಾ?
ಈ ಹಿನ್ನೆಲೆಯಲ್ಲಿ ಒಂದಷ್ಟು ಮಾಹಿತಿ ಹುಡುಕ್ತಾ ಹೋದ್ರೆ, ಅಲ್ಲ 400 ಕೋಟಿ ಬಜೆಟ್​ನ ಚಿತ್ರಣ ತೆಗೆದುಕೊಳ್ಳುತ್ತದೆ. ಯಶ್ ಅಭಿನಯದ ಮುಂದಿನ ಚಿತ್ರ ದೊಡ್ಡಮಟ್ಟದಲ್ಲಿಯೇ ಇರುತ್ತದೆ. ಅದನ್ನ 400 ಕೋಟಿ ಬಜೆಟ್​ನಲ್ಲಿಯೇ ತಯಾರಿಸಲಾಗುತ್ತದೆ ಅನ್ನೋ ಮಾಹಿತಿ ಈಗ ಕೇಳಿ ಬರುತ್ತಿದೆ.


ಕೆಜಿಎಫ್ ಚಿತ್ರ ಆದ್ಮೇಲೆ ರಾಕಿಂಗ್ ಸ್ಟಾರ್ ಯಶ್ ಇಮೇಜ್ ಜೇಂಚ್ ಆಗಿದೆ. ಮಾರುಕಟ್ಟೆ ವಿಸ್ತಾರ ಆಗಿದೆ. ಕೆಜಿಎಫ್ ಚಿತ್ರ ಬಂದ್ಮೇಲೆ ಯಶ್ ಚಿತ್ರಗಳ ಆಯ್ಕೆ ಮತ್ತು ಮೇಕಿಂಗ್ ಎಲ್ಲವೂ ಬಲಾಗುತ್ತಿದೆ. ಅದರ ಅವಶ್ಯಕತೆನೂ ಇದೆ ಬಿಡಿ.
ರಾಕಿ ಭಾಯ್ 400 ಕೋಟಿ ಬಜೆಟ್ ಚಿತ್ರ ಹೇಗಿರುತ್ತದೆ?
ರಾಕಿಂಗ್ ಸ್ಟಾರ್ ಯಶ್ 400 ಕೋಟಿ ಬಜೆಟ್ ಚಿತ್ರ ಹೇಗಿರುತ್ತದೆ. ಇದನ್ನ ಯಾರು ಡೈರೆಕ್ಟ್ ಮಾಡ್ತಿದ್ದಾರೆ. ಇಷ್ಟು ಕೋಟಿ ಬಜೆಟ್​ನ ಚಿತ್ರದಲ್ಲಿ ಅಂತಹದ್ದೇನು ಇರುತ್ತದೆ. ಈ ಎಲ್ಲ ಪ್ರಶ್ನೆಗೆ ಉತ್ತರ ರೂಪದಲ್ಲಿ ಒಂದು ಮಾಹಿತಿನೂ ಇದೆ. ಅದೇನೂ ಅನ್ನೋದು ಇಲ್ಲಿದೆ ನೋಡಿ.


ಸೈನ್ಸ್ ಫಿಕ್ಷನ್ ಥ್ರಿಲರ್ ಚಿತ್ರದಲ್ಲಿ ರಾಕಿ ಭಾಯ್?
ರಾಕಿಂಗ್ ಸ್ಟಾರ್ ಯಶ್ ಎಲ್ಲರಿಗೂ ಗೊತ್ತಿರೋ ಹಾಗೆ ಒಬ್ಬ ಮಾಸ್ ಹೀರೋ, ಅದಕ್ಕೂ ಹೆಚ್ಚಾಗಿ ನ್ಯಾಷನಲ್ ಸ್ಟಾರ್ ಕೂಡ ಹೌದು. ಈ ಸೂಪರ್ ಸ್ಟಾರ್ ಇಮೇಜಿಗೆ ತಕ್ಕನಾದ ಸಿನಿಮಾನೇ ರೆಡಿ ಆಗಬೇಕು. ಮಾರ್ಕೆಟ್ ಹೇಗಿರುತ್ತದೆಯೋ ಹಾಗೇನೆ ಚಿತ್ರಗಳು ತಯಾರ್ ಆಗಬೇಕು. ಆಗಲೇ, ಎಲ್ಲವೂ ಸರಿ ಹೋಗುತ್ತದೆ.


ಅದೇ ರೀತಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮುಂದಿನ ಚಿತ್ರದ ಕಂಟೆಂಟ್ ಜಬರ್​​ದಸ್ತ್ ಆಗಿಯೇ ಇರುತ್ತದೆ. ಈ ಹಿನ್ನೆಲೆಯಲ್ಲಿಯೇ ಸದ್ಯಕ್ಕೆ ಕೇಳಿ ಬರ್ತಿರೋ ವಿಷಯವೇನೆಂದ್ರೆ, ಯಶ್ ಮುಂದಿನ ಚಿತ್ರದ ವಿಷಯ ಸೈನ್ಸ್ ಫಿಕ್ಷನ್ ಥ್ರಿಲ್ಲರ್ ಆಗಿರುತ್ತದೆ. ಇಲ್ವೇ ಆ್ಯಕ್ಷನ್ ಡ್ರಾಮಾ ಕಂಟೆಂಟ್ ಹೊಂದಿರುತ್ತದೆ ಅನ್ನೋ ಮಾಹಿತಿನೇ ಇದೆ.


ಕೆಜಿಎಫ್ ರಾಕಿ ಭಾಯ್ ಚಿತ್ರದ ಡೈರೆಕ್ಟರ್ ಯಾರು?
ರಾಕಿಂಗ್ ಸ್ಟಾರ್ ಯಶ್ ಮುಂದಿನ ಚಿತ್ರ ಡೈರೆಕ್ಟರ್ ಯಾರು? ಈ ಒಂದು ಪ್ರಶ್ನೆಗೆ ಮಫ್ತಿ ಡೈರೆಕ್ಟರ್ ನರ್ತನ್ ಹೆಸರೇ ಇಲ್ಲಿವರೆಗೂ ಕೇಳಿ ಬರುತ್ತಿತ್ತು. ಆದರೆ ಈಗ ಆ ಜಾಗಕ್ಕೆ ಬೇರೆ ಹೆಸರು ಕೇಳಿ ಬರುತ್ತಿದೆ.


ಕೆಜಿಎಫ್ ಕಿಂಗ್ ರಾಕಿ ಭಾಯ್ ಮುಂದಿನ ಚಿತ್ರಕ್ಕೆ ಪಕ್ಕದ ತಮಿಳು ಇಂಡಸ್ಟ್ರೀಯಿಂದಲೇ ಡೈರೆಕ್ಟರ್ ಬರ್ತಾರೆ ಅನ್ನೋ ಮಾಹಿತಿ ಇದೆ. ಆದರೆ ಯಾರೂ ಅನ್ನೋದು ಮಾತ್ರ ಇನ್ನೂ ರಿವೀಲ್ ಆಗಿಲ್ಲ. ಹಾಗೇನೆ ಈ ನಿರ್ದೇಶಕರ ಇತರ ಮಾಹಿತಿನೂ ಎಲ್ಲೂ ಹೊರ ಬಿದ್ದಿಲ್ಲ ಅಷ್ಟೆ.


Kannada Rocking Star Yash Next Movie Updates Story
ರಾಕಿ ಭಾಯ್ 400 ಕೋಟಿ ಬಜೆಟ್ ಚಿತ್ರ ಹೇಗಿರುತ್ತದೆ?


ರಾಕಿಂಗ್ ಸ್ಟಾರ್ ಯಶ್ ಮುಂದಿನ ಚಿತ್ರದ ನಿರ್ಮಾಪಕರು ಯಾರು?
ರಾಕಿಂಗ್ ಸ್ಟಾರ್ ಯಶ್ ಮುಂದಿನ ಚಿತ್ರವನ್ನ ಕೆವಿಎನ್ ಪ್ರೋಡಕ್ಷನ್ ಹೌಸ್ ನಿರ್ಮಿಸುತ್ತಿದೆ. ಯಶ್ ಕೂಡ ಈ ಒಂದು ಸಂಸ್ಥೆಗೆ ಚಿತ್ರ ಮಾಡ್ತಾರೆ ಅನ್ನೋ ಮಾಹಿತಿ ಕೂಡ ಹರಿದಾಡುತ್ತಲೇ ಇದೆ. ಇದರ ಹೊರತಾಗಿ ಈ ಸಿನಿಮಾದ ಬಗೆಗಿನ ಅಧಿಕೃತ ಮಾಹಿತಿ ಯಾವಾಗ ಹೊರ ಬೀಳುತ್ತದೆ ಅನ್ನೋ ಕುತೂಹಲ ಕೂಡ ಇದೆ.


ಇದನ್ನೂ ಓದಿ: Bigg Boss Kannada-Roopesh Shetty: ರೂಪೇಶ್ ಶೆಟ್ಟಿ ಸಿನಿಮಾ ರಿಲೀಸ್​ಗೆ ರೆಡಿ! ಯಾವಾಗ?  


ಜನವರಿ-08 ಇಲ್ಲವೇ ಜನವರಿ-15ಕ್ಕೆ ಅಧಿಕೃತ ಮಾಹಿತಿ ಪ್ರಕಟ!
ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಬಗ್ಗೆ ಸಾಕಷ್ಟು ವಿಷಯ ಹರಿದಾಡುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಅಧಿಕೃತ ಮಾಹಿತಿ ಯಾವಾಗ ಅನ್ನೋ ಕ್ವಶ್ಚನ್ ಕೂಡ ಇದೆ. ಆ ಲೆಕ್ಕದಂತೆ ಜನವರಿ-08 ಇಲ್ಲವೇ ಜನವರಿ-15 ರಂದು ಚಿತ್ರದ ಮಾಹಿತಿ ಹೊರ ಬೀಳಲಿದೆ. ಯಾವುದಕ್ಕೂ ವೇಟ್ ಮಾಡಿ, ಅಪ್​ಡೇಟ್ಸ್ ಕೊಡ್ತಾ ಇರುತ್ತೇವೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು