ರಾಕಿಂಗ್ ಸ್ಟಾರ್ ಯಶ್ ತಮ್ಮ (Rocking Star Yash CDP Release) ಪ್ರೀತಿಯ ಅಭಿಮಾನಿಗಳಿಗೆ ಈ ವರ್ಷ ತುಂಬಾ ಬೇಸರ ಮೂಡಿಸಿದ್ದಾರೆ. ಅಣ್ಣನ ಜನ್ಮ ದಿನವನ್ನ ಹಾಗೆ ಮಾಡ್ಬೇಕು ಹೀಗೆ ಮಾಡ್ಬೇಕು ಅಂತಲೇ ಫ್ಯಾನ್ಸ್ಅಂ ದುಕೊಂಡಿದ್ದರು. ಆದರೆ ರಾಕಿಂಗ್ (Yash Birthday Celebration) ಸ್ಟಾರ್ ಯಶ್ ಪತ್ರ ಬರೆಯೋ ಮೂಲಕ ಎಲ್ಲರಿಗೂ ತಮ್ಮ ಅಲಭ್ಯದ ಬಗ್ಗೆ ತಿಳಿಸಿ ಬಿಟ್ಟಿದ್ದಾರೆ. ಶೀಘ್ರದಲ್ಲಿಯೇ (Rocking Star Yash Fans) ಸಿಗೋಣ ಅಂತಲೂ ಹೇಳಿದ್ದಾರೆ. ಆದರೂ ಅಭಿಮಾನ ಅನ್ನೋದು ಕಡಿಮೆ ಆಗೋದಿಲ್ಲ ಅಲ್ವೇ? ಹಾಗಾಗಿಯೇ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ ಜನ್ಮ ದಿನಕ್ಕೆ ಒಂದು ಕಾಮನ್ ಡಿಪಿ (Yash Common DP) ಮಾಡಿದ್ದಾರೆ. ಅದು ನಿಜಕ್ಕೂ ರಾಕಿಂಗ್ ಆಗಿಯೇ ಇದೆ. ಅದರ ಸುತ್ತ ಇನ್ನೊಂದಿಷ್ಟು ಮಾಹಿತಿ ಇಲ್ಲಿದೆ.
ರಾಕಿಂಗ್ ಸ್ಟಾರ್ ಯಶ್ ರಾಕಿಂಗ್ ಕಾಮನ್ ಡಿಪಿ!
ರಾಕಿಂಗ್ ಸ್ಟಾರ್ ಜನ್ಮ ದಿನಕ್ಕೆ ಫ್ಯಾನ್ಸ್ ಕಾಮನ್ ಡಿಪಿ ಮಾಡಿದ್ದಾರೆ. ಇದು ಸೂಪರ್ ಆಗಿಯೇ ಇದೆ. ಟೈಟಾನಿಕ್ ಚಿತ್ರದಲ್ಲಿದ್ದ ಆ ದೊಡ್ಡ ಹಡಗು ರೀತಿಯ ಇಲ್ಲಿ ಒಂದು ಹಡಗು ಇದೆ. ಇದುವೇ ಈ ಕಾಮನ್ ಡಿಪಿಯ ಮೊದಲ ಆಕರ್ಷಣೆ ಆಗಿದೆ.
ರಾಕಿಂಗ್ ಸ್ಟಾರ್ ಯಶ್ ಈಗ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಹಾಲಿವುಡ್ ರೇಂಜ್ಗೆ ಸಿನಿಮಾ ಮಾಡ್ಬೇಕು ಅಂತಲೇ ಯೋಚನೆ ಮಾಡುತ್ತಿದ್ದಾರೆ. ಅದರ ಹಿನ್ನೆಲೆಯಲ್ಲಿಯೇ ತಯಾರಿನೂ ನಡೆದಂತೆ ಇದೆ.
ರಾಕಿಂಗ್ ಸ್ಟಾರ್ ಯಶ್ ಕಾಮನ್ ಡಿಪಿಯಲ್ಲಿ ಇನ್ನು ಏನಿದೆ?
ಯಶ್ ಕಾಮನ್ ಡಿಪಿಯಲ್ಲಿ ಹಡಗು ಇರೋದು ಒಂದು ವಿಶೇಷವೇ ಆಗಿದೆ. ಇದೇ ಹಡಗಿನ ಮೇಲೆ ಬಾಸ್ ಅಂತಲೇ ಬರೆಯಲಾಗಿದೆ. ಹಾಗೇನೆ ಈ ಹಡಗು ತೀರಕ್ಕೆ ಬರುತ್ತಿದ್ದಂತೇನೆ ಕೆಲವು ಕೈ ಮಾಡಿ ಕೂಗುತ್ತಿದ್ದಂತೆ ಚಿತ್ರಿಸಲಾಗಿದೆ. ಇನ್ನು ಕೆಲವ್ರು ಬರ್ಚಿ ಹಿಡಿದು ವಾರ್ ಮಾಡೋಕೆ ಸನ್ನದ್ದರಾದಂತೆನೂ ಕಾಣುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಕಾಮನ್ ಡಿಪಿ ಈಗ ಹೆಚ್ಚು ಗಮನ ಸೆಳೆಯುತ್ತಿದೆ. ಹಾಗೇನೆ ಎಲ್ಲರಲ್ಲೂ ಅಷ್ಟೇ ಕುತೂಹಲ ಕೂಡ ಮೂಡಿಸುತ್ತಿದೆ.
ರಾಕಿಂಗ್ ಸ್ಟಾರ್ "ಸ್ಪೂರ್ತಿಯ ಸ್ಟಾರ್" ಎಂಬ ಬಣ್ಣನೆ
ರಾಕಿಂಗ್ ಸ್ಟಾರ್ ಯಶ್ ಒಂದು ರೀತಿ ಎಲ್ಲರಿಗೂ ಸ್ಪೂರ್ತಿನೇ ಆಗಿದ್ದಾರೆ. ನ್ಯಾಷನಲ್ ಸ್ಟಾರ್ ಆಗೋದು ಅಂದ್ರೆ ಸುಮ್ನೆನೂ ಅಲ್ಲ. ಅದು ರಾತ್ರೋರಾತ್ರಿ ಬಂದು ಬಿಡೋ ನೇಮ್-ಫೇಮ್ ಕೂಡ ಅಲ್ಲ. ಹಾಗಿರೋವಾಗ ದೊಡ್ಡಮಟ್ಟದಲ್ಲಿಯೇ ಯೋಚನೆ ಮಾಡೋ ಯಶ್, ಈಗ ತಮ್ಮ ಅಭಿಮಾನಿಗಳಿಗೆ ಸ್ಪೂರ್ತಿಯ ಸ್ಟಾರ್ ಆಗಿದ್ದಾರೆ.
ಅಭಿಮಾನಿಗಳಿಗೆ ಬೇಸರ ಮೂಡಿಸಿದ ರಾಕಿಂಗ್ ಸ್ಟಾರ್ ಯಶ್
ರಾಕಿ ಭಾಯ್ ಯಶ್ ಈ ವರ್ಷ ತಮ್ಮ ಅಭಿಮಾನಿಗಳಿಗೆ ಬೇಸರ ಮೂಡಿಸಿದ್ದಾರೆ. ಈ ಸಲ ನಾನು ನಿಮ್ಮನ್ನ ಭೇಟಿ ಆಗಲು ಸಾಧ್ಯವಿಲ್ಲ. ಅತಿ ಶೀಘ್ರದಲ್ಲಿಯೇ ನಿಮ್ಮ ಮುಂದೆ ಬರುತ್ತೇನೆ. ಕಾಯ್ತಾಯಿರಿ ಅಂತಲೇ ಹೇಳಿದ್ದಾರೆ.
ಅಲ್ಲಿಗೆ ರಾಕಿಂಗ್ ಸ್ಟಾರ್ ಯಶ್ ತಮ್ಮ ಅಭಿಮಾನಿಗಳಿಗೆ ಈ ವರ್ಷ ಸಿಗೋದಿಲ್ಲ. ತಮ್ಮ ಮುಂದಿನ ಪ್ರೋಜೆಕ್ಟ್ಗಾಗಿಯೇ ಈಗ ಆ ಕೆಲಸದಲ್ಲಿಯೇ ನಿರತರಾಗಿದ್ದಾರೆ.
ರಾಕಿ ಭಾಯ್ ಮುಂದಿನ ಪ್ರೋಜೆಕ್ಟ್ ಯಾವುದು?
ರಾಕಿಂಗ್ ಸ್ಟಾರ್ ಯಶ್ ಮುಂದಿನ ಪ್ರೋಜೆಕ್ಟ್ ಬಗ್ಗೆ ಭಾರೀ ಕುತೂಹಲ ಇದೆ. ಜನವರಿ-08 ರಂದು ಈ ಚಿತ್ರದ ಬಗ್ಗೆ ಅನೌನ್ಸ್ಮೆಂಟ್ ಆಗುತ್ತದೆ ಎಂಬ ನಿರೀಕ್ಷೆಯಲ್ಲಿಯೇ ಎಲ್ಲರೂ ಇದ್ದರು. ಆದರೆ ಈಗಿನ ಬೆಳವಣಿಗೆ ಆ ಎಲ್ಲ ನಂಬಿಕೆಯನ್ನ ಸುಳ್ಳು ಮಾಡಿ ಬಿಟ್ಟಿದೆ.
ಇದನ್ನೂ ಓದಿ: Rocking Star Yash: 400 ಕೋಟಿಯಲ್ಲಿ ರೆಡಿಯಾಗುತ್ತಾ ಯಶ್ ಮುಂದಿನ ಸಿನಿಮಾ?
ಕೆವಿಎನ್ ಪ್ರೋಡಕ್ಷನ್ ಹೌಸ್ ಜೊತೆಗೇನೆ ಯಶ್ ಮುಂದಿನ ಸಿನಿಮಾ ಮಾಡ್ತಾರೆ ಅನ್ನೋ ಸುದ್ದಿ ಬಲವಾಗಿಯೆ ಕೇಳಿ ಬರುತ್ತಿದೆ. ಜನವರಿ-8 ಅಲ್ಲದೇ ಇದ್ರೂ ಜನವರಿ-15 ರಂದು ಈ ಸಿನಿಮಾ ಬಗೆಗಿನ ಮಾಹಿತಿ ಹೊರ ಬೀಳುತ್ತದೆ ಅನ್ನೋ ಸುದ್ದಿನೂ ಇದೆ. ಯಾವುದಕ್ಕೂ ವೇಟ್ ಮಾಡೋಣ ಅಲ್ವೇ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ