ಸೂಪರ್ ಹಿಟ್ 'ಖೈದಿ' ರಿಮೇಕ್​ನಲ್ಲಿ ಸ್ಯಾಂಡಲ್​ವುಡ್​ ಸ್ಟಾರ್ ನಟ..!​

ರನ್ನ, ಮುಕುಂದ ಮುರಾರಿಯಂತಹ ರಿಮೇಕ್ ಸಿನಿಮಾಗಳಿಗೆ ಯಶಸ್ವಿಯಾಗಿ ನಿರ್ದೇಶನ ಮಾಡಿರುವ ನಂದ ಕಿಶೋರ್ ಸದ್ಯ ಪೊಗರು ಚಿತ್ರದ ಬ್ಯುಸಿಯಲ್ಲಿದ್ದಾರೆ. ಇದರ ಬಳಿಕ ಖೈದಿಯನ್ನು ಕೈಗೆತ್ತಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

Khaidi

Khaidi

 • Share this:
  ಕಾಲಿವುಡ್​ನ ಸೂಪರ್ ಡೂಪರ್ ಹಿಟ್ ಸಿನಿಮಾ 'ಖೈದಿ' ಕನ್ನಡಕ್ಕೆ ರಿಮೇಕ್ ಆಗಲಿದೆಯಾ? ಇಂತಹದೊಂದು ಪ್ರಶ್ನೆ ಗಾಂಧಿನಗರದಲ್ಲಿ ಕಳೆದ ಕೆಲ ದಿನಗಳಿಂದ ಹರಿದಾಡುತ್ತಿದೆ. ಈ ಕುತೂಹಕಾರಿ ಪ್ರಶ್ನೆಗೆ ಸದ್ಯ ಸಿಗುತ್ತಿರುವ ಉತ್ತರ ಹೌದು. ತಮಿಳಿನ 'ಖೈದಿ'ಯನ್ನು ಕನ್ನಡಕ್ಕೆ ತರುವ ತೆರೆಮರೆ ಪ್ರಯತ್ನಗಳು ಪ್ರಾರಂಭವಾಗಿದೆಯಂತೆ.

  ತಮಿಳು ನಿರ್ದೇಶಕ ಲೊಕೇಶ್ ಕನಕರಾಜ್​ ಭಾವನಾತ್ಮಕ ಕಥೆಯನ್ನು ಆ್ಯಕ್ಷನ್ ಥ್ರಿಲ್ಲರ್ ರೂಪದಲ್ಲಿ ಪ್ರೇಕ್ಷಕರ ಮುಂದಿಟ್ಟಿದ್ದರು. ಈ ಮೂಲಕ ಸಿನಿಪ್ರಿಯರಿಗೆ ಅಸಲಿ ರೌಸದೌತಣ ನೀಡಿದ್ದರು. ಇದೀಗ ಇದೇ ಕಥೆಯನ್ನು ಕನ್ನಡದಲ್ಲೂ ರಿಮೇಕ್ ಮಾಡಲು ನಿರ್ಮಾಪಕರೊಬ್ಬರು ರೆಡಿಯಾಗಿ ನಿಂತಿದ್ದಾರೆ. ಕನ್ನಡ ರಿಮೇಕ್​ನಲ್ಲಿ ಯಾರು ನಟಿಸುತ್ತಾರೆಂಬ ಕುತೂಹಲ ಸಹವಾಗಿಯೇ ಪ್ರೇಕ್ಷಕರಲ್ಲಿದೆ. ಇದಕ್ಕೂ  ಗಾಂಧಿನಗರದಿಂದಲೇ ಒಂದು ಸಿದ್ಧ ಉತ್ತರ ಸಿಕ್ಕಿದೆ.

  ಅವರೆಂದರೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್. ಹೌದು, ಖೈದಿ ರಿಮೇಕ್​ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ನಾಯಕ ಎಂದು ಹೇಳಲಾಗುತ್ತಿದೆ. ಈ ಚಿತ್ರದ ಪಾತ್ರಕ್ಕೆ ಶಿವಣ್ಣ ತುಂಬಾನೇ ಹೊಂದಿಕೆಯಾಗುತ್ತಾರೆ. ಹಾಗಾಗಿ ಚಿತ್ರತಂಡ ಹ್ಯಾಟ್ರಿಕ್ ಹೀರೋವನ್ನು ಖೈದಿಯಾಗಿ ತೋರಿಸಲು ಉತ್ಸುಕರಾಗಿದ್ದಾರೆ.

  ಶಿವರಾಜ್ ಕುಮಾರ್ 14 ವರ್ಷಗಳ ಹಿಂದೆಯೇ ರಿಮೇಕ್ ಚಿತ್ರಗಳಿಗೆ ಗುಡ್ ಬೈ ಹೇಳಿದ್ದರು. ಆದರೆ ಮಲಯಾಳಂನ ಒಪ್ಪಂ ಸಿನಿಮಾವನ್ನು ನೋಡಿದ್ದ ಶಿವಣ್ಣ ಮತ್ತೆ ರಿಮೇಕ್ ಮಾಡಲು ಸಮ್ಮತಿಸಿದ್ದರು. ಅದರಂತೆ ಕವಚ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಕುರುಡನಾಗಿ ಕಾಣಿಸಿಕೊಂಡಿದ್ದರು.

  ಇದನ್ನೂ ಓದಿ: ಬೆಂಗ್ಳೂರ್ ಬಾಯ್ಸ್​​ನಲ್ಲಿ ಮಾಜಿ ಸಚಿವರ ಮಗ ಸೇರಿ ನಾಲ್ವರು ಗೆಳೆಯರ ಕಥೆ

  ಇದೀಗ ಮತ್ತೊಮ್ಮೆ ಶಿವರಾಜ್ ಕುಮಾರ್ ಮುಂದೆ ಖೈದಿ ಸಿನಿಮಾ ರಿಮೇಕ್ ಆಫರ್ ಬಂದಿದೆಯಂತೆ. ಇದಕ್ಕೆ ಒಪ್ಪಿದ್ದಾರಾ ಎಂಬ ಪ್ರಶ್ನೆಗೆ ಮಾತ್ರ ಉತ್ತರ ಸಿಕ್ಕಿಲ್ಲ. ಹಾಗೆಯೇ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುವವರು ನಂದ ಕಿಶೋರ್ ಎಂದು ಹೇಳಲಾಗಿದೆ.

  ಈಗಾಗಲೇ ರನ್ನ, ಮುಕುಂದ ಮುರಾರಿಯಂತಹ ರಿಮೇಕ್ ಸಿನಿಮಾಗಳಿಗೆ ಯಶಸ್ವಿಯಾಗಿ ನಿರ್ದೇಶನ ಮಾಡಿರುವ ನಂದ ಕಿಶೋರ್ ಸದ್ಯ ಪೊಗರು ಚಿತ್ರದ ಬ್ಯುಸಿಯಲ್ಲಿದ್ದಾರೆ. ಇದರ ಬಳಿಕ ಖೈದಿಯನ್ನು ಕೈಗೆತ್ತಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಶಿವಣ್ಣ ಕೂಡ ಓಕೆ ಅನ್ನಲಿದ್ದಾರೆ ಎನ್ನಲಾಗುತ್ತಿದೆ.
  First published: